ಹೊಸ ಕಾರು ಖರೀದಿಸುತ್ತಿದ್ದೀರಾ? ಕಳಪೆ ಗುಣಮಟ್ಟದ ಈ 5 ವಾಹನಗಳ ತಂಟೆಗೆ ಹೋಗಬೇಡಿ!

ಕಾರಿನಲ್ಲಿ ಪ್ರಯಾಣಿಸುವಾಗ ಅನೀರೀಕ್ಷಿತ ಅಪಘಾತಗಳಿಂದ ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕಾದರೆ ಉತ್ತಮ ನಿರ್ಮಾಣ ಗುಣಮಟ್ಟವನ್ನು ಹೊಂದಿರುವ ಕಾರನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಇತ್ತೀಚಿನ 'GNCAP' (ಗ್ಲೋಬಲ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ) ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳ ಪ್ರಕಾರ, ಭಾರತದಲ್ಲಿ ಹಲವಾರು ಜನಪ್ರಿಯ ಮಾದರಿಗಳು ಕಳಪೆ ಪ್ರದರ್ಶನ ನೀಡಿವೆ. ವಿಶೇಷವಾಗಿ ಮಕ್ಕಳನ್ನು ರಕ್ಷಿಸುವಲ್ಲಿ ಇವು ತೀರಾ ಕಳೆಪೆ ಪ್ರದರ್ಶನ ನೀಡಿವೆ. ಕುಟುಂಬದ ಸುರಕ್ಷತೆಯು ನಿಮ್ಮ ಆದ್ಯತೆಯಾಗಿದ್ದರೆ ಕಡಿಮೆ GNCAP ಸುರಕ್ಷತಾ ರೇಟಿಂಗ್‌ ಹೊಂದಿರುವ ಕಾರುಗಳ ಬಗ್ಗೆ ನಿಮಗೆ ತಿಳಿದಿರಲಿ.

1. ಮಾರುತಿ ಸುಜುಕಿ ಆಲ್ಟೊ K10

ಮಾರುತಿ ಸುಜುಕಿ ಆಲ್ಟೊ K10 ಭಾರತದಲ್ಲಿ ಅತ್ಯಂತ ಕೈಗೆಟುಕುವ ಸಣ್ಣ ಹ್ಯಾಚ್‌ಬ್ಯಾಕ್ ಆಗಿದ್ದು, ನಿರ್ಮಾಣ ಗುಣಮಟ್ಟದಲ್ಲಿ ಹಿಂದುಳಿದಿದೆ. ಕೈಗೆಟುಕುವ ಬೆಲೆಯಲ್ಲಿದ್ದರೂ, ಇದು ವಯಸ್ಕರಿಗೆ ತುಸು ರಕ್ಷಣೆಯನ್ನು ಮಾತ್ರ ನೀಡುತ್ತದೆ. ಆದರೆ ಮಕ್ಕಳಿಗೆ ವಾಸ್ತವಿಕವಾಗಿ ಯಾವುದೇ ರಕ್ಷಣೆಯನ್ನು ನೀಡುವುದಿಲ್ಲ, ಇದು ಚಿಕ್ಕ ಮಕ್ಕಳಿರುವ ಕುಟುಂಬಗಳಿಗೆ ಅಪಾಯಕಾರಿ ಆಯ್ಕೆಯಾಗಿದೆ.

poor-gncap-safety-rated-cars-in-india

ಮಾರುತಿ ಸುಜುಕಿ ಆಲ್ಟೊ K10 ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ಕೇವಲ 2 ಅಂಕಗಳನ್ನು ಪಡೆದಿದ್ದು, ಮಕ್ಕಳ ರಕ್ಷಣೆ ವಿಷಯಕ್ಕೆ ಬಂದರೆ 0 ಅಂಕಗಳನ್ನು ಪಡೆದಿದೆ. ಈ ಕಾರು ಡ್ಯುಯಲ್ ಏರ್ ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದೆ. ಇವುಗಳ ಹೊರತಾಗಿಯೂ, ಕಳಪೆ ಸುರಕ್ಷತಾ ರೇಟಿಂಗ್‌ ಪಡೆದಿದೆ.

2. ಸಿಟ್ರನ್ e-C3

ಸಿಟ್ರನ್ e-C3 ಕಾರು ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ವಯಸ್ಕರ ರಕ್ಷಣೆಯಲ್ಲಿ ಆತಂಕಕಾರಿಯಾಗಿ 0 ಮತ್ತು ಮಕ್ಕಳ ರಕ್ಷಣೆಯಲ್ಲಿ 1 ಅಂಕವನ್ನು ಗಳಿಸಿಸಿದೆ. ಎಲ್ಲಾ ಆಸನಗಳಿಗೆ ಮೂರು-ಪಾಯಿಂಟ್ ಸೀಟ್‌ಬೆಲ್ಟ್‌ಗಳ ಕೊರತೆ ಮತ್ತು ಮುಂಭಾಗದ ಏರ್‌ಬ್ಯಾಗ್ ನಿಷ್ಕ್ರಿಯಗೊಳಿಸುವ ಸ್ವಿಚ್ ಇಲ್ಲದಿರುವುದು ಸುರಕ್ಷತೆಯನ್ನು ಮತ್ತಷ್ಟು ದುರ್ಬಲಗೊಳಿಸಿದೆ ಎಂದು ವರದಿಗಳು ಹೇಳಿವೆ.

poor-gncap-safety-rated-cars-in-india

3. ಮಾರುತಿ ಸುಜುಕಿ ಇಗ್ನಿಸ್

ಮಾರುತಿ ಸುಜುಕಿ ಇಗ್ನಿಸ್, ಅದರ ಸೊಗಸಾದ ವಿನ್ಯಾಸದ ಹೊರತಾಗಿಯೂ, ಪ್ರಯಾಣಿಕರಿಗೆ ರಕ್ಷಣೆಯನ್ನು ಒದಗಿಸುವಲ್ಲಿ ವಿಫಲವಾಗಿದೆ. ಡ್ಯುಯಲ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಇದರಲ್ಲಿ ನೀಡಲಾಗಿದೆ. ಆದರೂ ಸರಿಯಾದ ಮಕ್ಕಳ ಆಸನ ಸಂಯಮ ವ್ಯವಸ್ಥೆಗಳನ್ನು ಈ ಕಾರು ಹೊಂದಿಲ್ಲ. ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 1 ಅಂಕ ಹಾಗೂ ಮಕ್ಕಳ ರಕ್ಷಣೆಯನ್ನು 0 ಅಂಕಗಳನ್ನು ಗಳಿಸಿದೆ.

4. ಹುಂಡೈ ಗ್ರ್ಯಾಂಡ್ ಐ10 ನಿಯೋಸ್

ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ಭಾರತದ ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದ್ದು, ಅತಿ ಹೆಚ್ಚು ಮಾರಾಟ ಕಾಣುವ ಸಣ್ಣ ಕಾರುಗಲ್ಲಿ ಇದು ಒಂದಾಗಿದೆ. ಆದರೆ ಸುರಕ್ಷತೆ ವಿಷಯದಲ್ಲಿ ಈ ಕಾರು ಕೂಡ ಹಿಂದುಳಿದಿದೆ, ಮುಂಭಾಗದಲ್ಲಿ ಕಳಪೆ ಗುಣಮಟ್ಟವನ್ನು ಹೊಂದಿದೆ, ಸುರಕ್ಷತೆ ಪ್ರಜ್ಞೆಯ ಖರೀದಿದಾರರಿಗೆ ಇದು ಸರಿಯಾದ ಆಯ್ಕೆಯಲ್ಲ ಎಂದು ವರದಿಗಳು ಹೇಳಿವೆ.

poor-gncap-safety-rated-cars-in-india

ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 2 ಅಂಕಗಳು ಹಾಗೂ ಮಕ್ಕಳ ರಕ್ಷಣೆಯಲ್ಲಿ 2 ಅಂಗಳನ್ನು ಪಡೆದಿದೆ. ಡ್ಯುಯಲ್ ಏರ್ ಬ್ಯಾಗ್ ಗಳನ್ನು ಹೊಂದಿದೆ. ಹಲವು ಸೌಕರ್ಯಗಳ ಹೊರತಾಗಿಯೂ, ಕಾರು ಪ್ರಯಾಣಿಕರ ರಕ್ಷಣೆಯಲ್ಲಿ ಹಿಂದುಳಿದಿದೆ, ಇದು ಸುರಕ್ಷತೆ - ಪ್ರಜ್ಞೆಯುಳ್ಳ ಖರೀದಿದಾರರಿಗೆ ಕಳವಳಕಾರಿಯಾಗಿದೆ.

5. ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮಿನಿ SUV ಆಗಿ ಮಾರಾಟ ಕಾಣುವ ಜನಪ್ರಿಯ ಕಾರಾಗಿದೆ. ಈ ಕಾರು ಚಾಲಕನ ಎದೆ ಮತ್ತು ಮೊಣಕಾಲಿನ ರಕ್ಷಣೆಯಲ್ಲಿ ಕಳಪೆ ಗುಣಮಟ್ಟವನ್ನು ತೋರಿಸಿದೆ. ವಯಸ್ಕರ ರಕ್ಷಣೆಯಲ್ಲಿ ಕೇವಲ ಒಂದು ಅಂಕ ಮತ್ತು ಮಕ್ಕಳ ರಕ್ಷಣೆಯಲ್ಲಿ ಶೂನ್ಯ ಅಂಕಗಳನ್ನು ಗಳಿಸಿದೆ. ಡ್ಯುಯಲ್ ಏರ್ ಬ್ಯಾಗ್ ಗಳು, ಇಬಿಡಿಯೊಂದಿಗೆ ಎಬಿಎಸ್ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಗಳನ್ನು ಹೊಂದಿದೆ.

Article Published On: Friday, July 11, 2025, 14:54 [IST]
English summary
Poor gncap safety rated cars in india
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+