ಧರ್ಮಸ್ಥಳಕ್ಕೆ ಮಹೀಂದ್ರಾ ಕಂಪನಿಯಿಂದ ಹೊಸ ಎಲೆಕ್ಟ್ರಿಕ್ ಕಾರು ಕೊಡುಗೆ.. ಯಾವುದು, ವಿಶೇಷತೆಗಳೇನು?

ಮಹೀಂದ್ರಾ & ಮಹೀಂದ್ರಾ (Mahindra & Mahindra) ಹೊಚ್ಚ ಹೊಸ 'ಬಿಇ 6ಇ' ಎಲೆಕ್ಟ್ರಿಕ್ ಎಸ್‌ಯುವಿಯನ್ನು ಧರ್ಮಸ್ಥಳಕ್ಕೆ ಕೊಡುಗೆ ನೀಡಿದೆ. ಭಾನುವಾರ ಕಂಪನಿಯ ತಯಾರಿಕಾ ವಿಭಾಗದ ಮುಖ್ಯಸ್ಥ ವಿನಯ್ ಖಾನೋಲ್ಕರ್ (Vinay Khanolkar), ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ (Dr.D.Veerendra Heggade) ಅವರಿಗೆ ನೂತನ ಕಾರಿನ ಕೀಯನ್ನು ಹಸ್ತಾಂತರ ಮಾಡಿದರು. 'ಇದು ಮಹೀಂದ್ರಾ ಕಂಪನಿಯು ಕ್ಷೇತ್ರಕ್ಕೆ ಅರ್ಪಿಸಿರುವ 3ನೇ ಕಾರಾಗಿದೆ. ಗ್ರಾಮೀಣಾಭಿವೃದ್ಧಿ ಯೋಜನಾ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗುವುದು' ಎಂದು ಧರ್ಮಾಧಿಕಾರಿಗಳು ಹೇಳಿದ್ದಾರೆ.

ಮಹೀಂದ್ರಾ ಬಿಇ 6ಇ (Mahindra BE 6e) ವಿಶೇಷತೆಗಳೇನು:

ಈ ಎಲೆಕ್ಟ್ರಿಕ್ ಎಸ್‌ಯುವಿಯು ರೂ.19.40 ಲಕ್ಷದಿಂದ ರೂ.27.65 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಹೊರಭಾಗದಲ್ಲಿ ಉತ್ತಮವಾಗಿರುವ ವಿನ್ಯಾಸವನ್ನು ಹೊಂದಿದೆ. ತುಂಬಾ ಅಚ್ಚುಕಟ್ಟಾದ ಹೆಡ್‌ಲ್ಯಾಂಪ್‌ಗಳು, 'ಜೆ' ಆಕಾರಕ್ಕೆ ಹೋಲಿಕೆಯಾಗಬಲ್ಲ ಡಿಆರ್‌ಎಲ್‌ಗಳು, 20-ಇಂಚಿರುವ ವೀಲ್‌ಗಳು, ಫ್ಲಶ್-ಡೋರ್ ಹ್ಯಾಂಡಲ್‌ಗಳು ಹಾಗೂ ಟೈಲ್ ಲ್ಯಾಂಪ್‌ಗಳನ್ನು ಪಡೆದಿದೆ.

Mahindra Donates New BE 6e Electric Suv To Dharmasthala Details

ಇದು ಟ್ಯಾಂಗೋ ರೆಡ್, ಡಸರ್ಟ್ ಮಿಸ್ಟ್, ಡಸರ್ಟ್ ಮಿಸ್ಟ್ ಸ್ಯಾಟಿನ್, ಎವರೆಸ್ಟ್ ವೈಟ್, ಎವರೆಸ್ಟ್ ವೈಟ್ ಸ್ಯಾಟಿನ್, ಫೈರ್‌ಸ್ಟಾರ್ಮ್ ಆರೆಂಜ್, ಡೀಪ್ ಫಾರೆಸ್ಟ್, ಸ್ಟೆಲ್ತ್ ಬ್ಲ್ಯಾಕ್ ಹಾಗೂ ನಾಪೋಲಿ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 4,371 ಎಂಎಂ ಉದ್ದ, 1,907 ಎಂಎಂ ಅಗಲ ಹಾಗೂ 1,627 ಎಂಎಂ ಎತ್ತರವು ಇದೆ. 207 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,775 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

ನೂತನ 'ಬಿಇ 6ಇ' ಕಾರು ಎರಡು ಬಲಿಷ್ಠವಾದ ಪವರ್‌ಟ್ರೇನ್ ಆಯ್ಕೆ ಹೊಂದಿದೆ. ಇದರ 59 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿರುವ ಮಾಡೆಲ್, ಸಂಪೂರ್ಣ ಚಾರ್ಜ್‌ನಲ್ಲಿ 556 ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿ ಬಳಸಿರುವ ಎಲೆಕ್ಟ್ರಿಕ್ ಮೋಟಾರ್, 230 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 380 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.

ಮತ್ತೊಂದು 79 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿರುವ ಮಾಡೆಲ್, ಭರ್ತಿ ಚಾರ್ಜ್‌ನಲ್ಲಿ 682 ರೇಂಜ್ (ಮೈಲೇಜ್) ಕೊಡುತ್ತದೆ. ಈ ಕಾರಿನಲ್ಲಿರುವ ಎಲೆಕ್ಟ್ರಿಕ್ ಮೋಟಾರ್, 285 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 380 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ.

ಇದರಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ತೆರಳುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ ಬೃಹತ್ ಗಾತ್ರದ 455 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಈ ಕಾರಿನ ಕ್ಯಾಬಿನ್ ವಿನ್ಯಾಸವು ಹೊಸತಾಗಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ & ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಡುಯಲ್ ಸ್ಕ್ರೀನ್ ಸೆಟಪ್, ಟೂ-ಸ್ಪೋಕ್ ಸ್ಟೀರಿಂಗ್ ವೀಲ್, ಮ್ಯಾಗ್ನೆಟಿಕ್ ಕೀ ಫಾಬ್‌ಗಳು, ವೆಂಟಿಲೇಟೆಡ್ ಸೀಟ್‌ಗಳು, ವೈರ್‌ಲೆಸ್ ಚಾರ್ಜರ್‌ಗಳು ಮತ್ತು 16-ಸ್ಪೀಕರ್ ಹರ್ಮನ್ ಮ್ಯೂಸಿಕ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. 202 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 6.7 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಇದು ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 7-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೆಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಲೆವೆಲ್ 2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

More from DriveSpark

Article Published On: Monday, August 4, 2025, 15:14 [IST]
English summary
Mahindra donates new be 6e electric suv to dharmasthala details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+