ಮಾರಾಟದಲ್ಲಿ ನಂ.1 ಎಲೆಕ್ಟ್ರಿಕ್ ವಾಣಿಜ್ಯ ವಾಹನ ತಯಾರಕ: ಧೂಳೆಬ್ಬಿಸಿದ ದೇಶೀಯ ಬ್ರಾಂಡ್!

ಭಾರತದ ಪ್ರಮುಖ ವಾಣಿಜ್ಯ ಎಲೆಕ್ಟ್ರಿಕ್ ವಾಹನ (EV) ತಯಾರಕರಾದ ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿ ಲಿಮಿಟೆಡ್ (MLMML), ಆರ್ಥಿಕ ವರ್ಷ 2025 ರಲ್ಲಿ ತನ್ನ ಮಾರುಕಟ್ಟೆ ಪ್ರಾಬಲ್ಯವನ್ನು ತೋರಿಸಿದೆ. ತನ್ನ ಪ್ರಮುಖ ಬ್ರ್ಯಾಂಡ್‌ಗಳಾದ ಟ್ರಿಯೊ ಮತ್ತು ಜೋರ್ ಗ್ರ್ಯಾಂಡ್‌ನೊಂದಿಗೆ, ತನ್ನ ಜೋರನ್ನು ಹೆಚ್ಚಿಸಿದೆ. ಈ ವಿಭಾಗದಲ್ಲಿ ಗಮನಾರ್ಹವಾದ 24.2% EV ಕೊಡುಗೆ ನೀಡಿದೆ. ಇದು ಆರ್ಥಿಕ ವರ್ಷ 2024 ರಲ್ಲಿ 16.9% EV ಏರಿಕೆಯಿಂದ ಗಣನೀಯ ಹೆಚ್ಚಳವನ್ನು ತೋರಿಸಿದೆ. ತೀವ್ರ ಸ್ಪರ್ಧೆಯ ಹೊರತಾಗಿಯೂ, L5 ವಿಭಾಗದಲ್ಲಿ ಮಹೀಂದ್ರಾ ಮಾರುಕಟ್ಟೆ ಪಾಲು ಪ್ರಭಾವಶಾಲಿ 37.3% ರಷ್ಟಿದೆ.

2 ಲಕ್ಷಕ್ಕೂ ಹೆಚ್ಚು ವಾಣಿಜ್ಯ EV ವಾಹನಗಳನ್ನು ಮಾರಾಟ ಮಾಡಿದ ಮೊದಲನೆಯ ಕಂಪನಿಯಾಗಿ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿದೆ. ಭಾರತದ ನಂ.1 ಎಲೆಕ್ಟ್ರಿಕ್ ಆಟೋ ಆದ ಟ್ರಿಯೊದ 1 ಲಕ್ಷಕ್ಕೂ ಹೆಚ್ಚು ಯೂನಿಟ್‌ಗಳನ್ನು ಮಾರಾಟ ಮಾಡಿದೆ. 2025 ರಲ್ಲಿ, ಮಹೀಂದ್ರಾ ಲೋಹದ ಬಾಡಿ ಹೊಂದಿರುವ ಟ್ರಿಯೊ ಮತ್ತು ಅದರ ಮೊದಲ 4W ಎಲೆಕ್ಟ್ರಿಕ್ ವಾಣಿಜ್ಯ SCV, ಮಹೀಂದ್ರಾ ZEO ಅನ್ನು ಬಿಡುಗಡೆ ಮಾಡುವ ಮೂಲಕ ತನ್ನ ಉತ್ಪನ್ನ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಿತು.

mahindra-is-india-s-no-1-electric-commercial-vehicle-manufacturer-in-fy25

ಮಹೀಂದ್ರಾ ಅಂಗಸಂಸ್ಥೆಯಾದ ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿ ಲಿಮಿಟೆಡ್ (MLMML), ಭಾರತದ ನಂ.1 ಎಲೆಕ್ಟ್ರಿಕ್ ಸಣ್ಣ ವಾಣಿಜ್ಯ ವಾಹನ ತಯಾರಕ ಕಂಪನಿಯಾಗಿದೆ. ಮಹೀಂದ್ರಾ ZEO, ತನ್ನ e-3W ಸ್ಟೇಬಲ್‌ಮೇಟ್‌ಗಳ ಹೆಜ್ಜೆಗಳನ್ನು ಅನುಸರಿಸಿ, ತನ್ನ 4W ಕಾರ್ಗೋ ವಿದ್ಯುದ್ದೀಕರಣ ಪ್ರಯಾಣವನ್ನು ಪ್ರಾರಂಭಿಸಿದೆ.

ಒದಗಿಸಲಾದ ಎಲ್ಲಾ ಡೇಟಾ ವಾಹನ್ ಪೋರ್ಟಲ್‌ನಿಂದ ಪಡೆದಿರುವುದಾಗಿ ಕಂಪನಿ ಹೇಳಿದೆ. ಕಂಪನಿಯು ಟ್ರಿಯೊ ಶ್ರೇಣಿ, ಜೋರ್ ಗ್ರ್ಯಾಂಡ್ ಮತ್ತು ಇ-ಆಲ್ಫಾದಂತಹ ಪ್ರಶಸ್ತಿ ವಿಜೇತ EV ಗಳನ್ನು ತಯಾರಿಸುತ್ತದೆ. MLMML ಎಲೆಕ್ಟ್ರಿಕ್, ಪೆಟ್ರೋಲ್, CNG, ಡೀಸೆಲ್ ಲಾಸ್ಟ್ ಮೈಲ್ ಮೊಬಿಲಿಟಿ ಮೂರು ಮತ್ತು ನಾಲ್ಕು ಚಕ್ರಗಳ ಪ್ರಯಾಣಿಕ ಮತ್ತು ಸರಕು ವಾಹನಗಳ ವಿಶಾಲ ಪೋರ್ಟ್‌ಫೋಲಿಯೊವನ್ನು ಹೊಂದಿದೆ.

ZEO 4W SCV ಸೇರಿದಂತೆ EV ಪೋರ್ಟ್‌ಫೋಲಿಯೊವು ಶಕ್ತಿಶಾಲಿಯಾಗಿದ್ದು, ಇಂಧನ-ಸಮರ್ಥ ಆಲ್ಫಾ ಮತ್ತು ಜೀಟೊ ಶ್ರೇಣಿಯ ವಾಹನಗಳಿಂದ ಪೂರಕವಾಗಿದೆ. 1945 ರಲ್ಲಿ ಸ್ಥಾಪನೆಯಾದ ಮಹೀಂದ್ರಾ ಗ್ರೂಪ್, 100 ಕ್ಕೂ ಹೆಚ್ಚು ದೇಶಗಳಲ್ಲಿ 26,0000 ಉದ್ಯೋಗಿಗಳನ್ನು ಹೊಂದಿರುವ ಅತಿದೊಡ್ಡ ಮತ್ತು ಅತ್ಯಂತ ಮೆಚ್ಚುಗೆ ಪಡೆದ ಬಹುರಾಷ್ಟ್ರೀಯ ಕಂಪನಿಗಳ ಒಕ್ಕೂಟಗಳಲ್ಲಿ ಒಂದಾಗಿದೆ.

ಇದು ಭಾರತದಲ್ಲಿ ಕೃಷಿ ಉಪಕರಣಗಳು, ಯುಟಿಲಿಟಿ ವಾಹನಗಳು, ಮಾಹಿತಿ ತಂತ್ರಜ್ಞಾನ ಮತ್ತು ಹಣಕಾಸು ಸೇವೆಗಳಲ್ಲಿ ಉತ್ತಮ ಸ್ಥಾನವನ್ನು ಹೊಂದಿದೆ. ಪರಿಮಾಣದ ಪ್ರಕಾರ ವಿಶ್ವದ ಅತಿದೊಡ್ಡ ಟ್ರಾಕ್ಟರ್ ಕಂಪನಿಯಾಗಿದ್ದು, ಇದು ನವೀಕರಿಸಬಹುದಾದ ಇಂಧನ, ಕೃಷಿ, ಲಾಜಿಸ್ಟಿಕ್ಸ್, ಆತಿಥ್ಯ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಬಲವಾದ ಉಪಸ್ಥಿತಿಯನ್ನು ಹೊಂದಿದೆ.

ಮಹೀಂದ್ರಾ ಗ್ರೂಪ್ ಜಾಗತಿಕವಾಗಿ ESG ಅನ್ನು ಮುನ್ನಡೆಸುವ, ಗ್ರಾಮೀಣ ಸಮೃದ್ಧಿಯನ್ನು ಸಕ್ರಿಯಗೊಳಿಸುವ ಮತ್ತು ನಗರ ಜೀವನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ.

ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾ ಗ್ರಾಮ್, ಯೂಟ್ಯೂಬ್ ಪೇಜ್‌ ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, April 2, 2025, 18:18 [IST]
English summary
Mahindra is india s no 1 electric commercial vehicle manufacturer in fy25
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+