ಮನಸೋತ ಗ್ರಾಹಕರು.. ಆನಂದ್ ಮಹೀಂದ್ರಾ ಕಂಪನಿಯ ಹೊಸ ಎಲೆಕ್ಟ್ರಿಕ್ ಕಾರುಗಳು ಭಾರೀ ಸಂಖ್ಯೆಯಲ್ಲಿ ಮಾರಾಟ!
ಮಹೀಂದ್ರಾ & ಮಹೀಂದ್ರಾ (Mahindra & Mahindra) ಪ್ರಖ್ಯಾತ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಒಂದೆರಡು ತಿಂಗಳ ಹಿಂದೆ, ವಿದೇಶಿ ಮೂಲದ ಎಲೆಕ್ಟ್ರಿಕ್ ಕಾರುಗಳಿಗೆ ಪ್ರಬಲವಾದ ಸ್ಪರ್ಧೆಯೊಡ್ಡಲು ನೂತನ ಎಕ್ಸ್ಇವಿ 9ಇ (XEV 9e) ಮತ್ತು ಬಿಇ 6 (BE 6) ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಪರಿಚಯಿಸಿತ್ತು. ಈ ಫೆಬ್ರವರಿ ತಿಂಗಳು ಇವೆರೆಡು ಕಾರುಗಳನ್ನು ದೊಡ್ಡ ಸಂಖ್ಯೆಯೂ ಕಂಪನಿಯು ಮಾರಾಟ ಮಾಡಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಕಳೆದ ತಿಂಗಳು (ಫೆಬ್ರವರಿ - 2025) ಎಕ್ಸ್ಇವಿ 9ಇ ಹಾಗೂ ಬಿಇ 6 ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ದೇಶೀಯ ಗ್ರಾಹಕರಿಂದ ನಿರೀಕ್ಷೆಯೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆ, ಒಟ್ಟಾರೆಯಾಗಿ 3,196 ಯುನಿಟ್ ಕಾರುಗಳನ್ನು ಮಾರಾಟಗೊಳಿಸುವಲ್ಲಿ ಕಂಪನಿಯು ಕೂಡ ಯಶಸ್ವಿಯಾಗಿದೆ.

ಹೋದ ತಿಂಗಳು ಇವೆರೆಡು ಎಲೆಕ್ಟ್ರಿಕ್ ಕಾರುಗಳಿಗೆ ಮಹೀಂದ್ರಾ ಕಂಪನಿಯು ಬುಕ್ಕಿಂಗ್‌ನ್ನು ತೆಗೆದುಕೊಳ್ಳುವುದನ್ನು ಶುರು ಮಾಡಿತ್ತು. ಆಗಲೂ ಖರೀದಿದಾರರು ತಾಮುಂದು - ನಾಮುಂದು ಎಂಬಂತೆ ಆರ್ಡರ್ ಮಾಡಿದ್ದರು. ಒಂದೇ ದಿನದಲ್ಲಿ ಎಕ್ಸ್ಇವಿ 9ಇ ಹಾಗೂ ಬಿಇ 6 ಎಲೆಕ್ಟ್ರಿಕ್ ಎಸ್‌ಯುವಿಗಳು ಬರೋಬ್ಬರಿ 30,179 ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದ್ದವು. ಈ ಮೂಲಕ ಹೊಸದೊಂದು ದಾಖಲೆ ನಿರ್ಮಾಣವಾಗಿತ್ತು.
ಮಹೀಂದ್ರಾ ಬಿಇ 6 (Mahindra BE 6) ವಿಶೇಷತೆಗಳೇನು: ಈ ಎಲೆಕ್ಟ್ರಿಕ್ ಎಸ್‌ಯುವಿ ಕನಿಷ್ಠ ರೂ.18.90 ಲಕ್ಷ ಹಾಗೂ ಗರಿಷ್ಠ ರೂ.26.90 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಒಳಗೊಂಡಿದೆ. ಇದು 59 ಕೆಡಬ್ಲ್ಯೂಹೆಚ್ ಮತ್ತು 79 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 535 ರಿಂದ 682 ಕಿ.ಮೀ ವರೆಗೂ ಓಡುತ್ತದೆ.
ನೂತನ ಮಹೀಂದ್ರಾ ಬಿಇ 6 ಎಲೆಕ್ಟ್ರಿಕ್ ಕಾರು ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಇದರಲ್ಲಿ 5 ಜನರು ಓಡಾಟ ನಡೆಸಬಹುದು. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡುಯಲ್-ಸ್ಕ್ರೀನ್ ಸೆಟಪ್, ಟೂ-ಸ್ಪೋಕ್ ಸ್ಟೀರಿಂಗ್ ವೀಲ್, ಮ್ಯಾಗ್ನೆಟಿಕ್ ಕೀ ಫಾಬ್‌ಗಳು, ವೆಂಟಿಲೇಟೆಡ್ ಸೀಟ್‌ಗಳು ಹಾಗೂ ವೈರ್‌ಲೆಸ್ ಚಾರ್ಜರ್‌ಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳನ್ನು ಹೊಂದಿದೆ.
ಮಹೀಂದ್ರಾ ಎಕ್ಸ್ಇವಿ 9ಇ (Mahindra XEV 9e) ಹೇಗಿದೆ: ಈ ಎಲೆಕ್ಟ್ರಿಕ್ ಕಾರು ಕನಿಷ್ಠ ರೂ.21.90 ಲಕ್ಷ ಮತ್ತು ಗರಿಷ್ಠ ರೂ.30.50 (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 59 ಕೆಡಬ್ಲ್ಯೂಹೆಚ್ ಹಾಗೂ 79 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 656 ಕಿ.ಮೀ ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ.
ಹೊಸ ಎಕ್ಸ್ಇವಿ 9ಇ ಎಸ್‌ಯುವಿಯಲ್ಲಿಯೂ 5 ಮಂದಿ ಪ್ರಯಾಣ ಮಾಡಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ & ಪ್ಯಾಸೆಂಜರ್-ಸೈಡ್ ಡಿಸ್‌ಪ್ಲೇಗಾಗಿ 12.3-ಇಂಚಿನ ಸ್ಕ್ರೀನ್ ಇದ್ದು, ಮಲ್ಟಿ-ಝೋನ್ ಆಟೋ ಎಸಿ, 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 7 ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








