Mahindra: ಸೇನೆಗೆ ಪವರ್‌ಫುಲ್ ವಾಹನಗಳ ನೀಡಲು ಮಹೀಂದ್ರಾ ಸಜ್ಜು: ಜನಪ್ರಿಯ ಕಾರು ಟ್ರಕ್ ಆಗಲಿದೆ!
ದೇಶದ ಜನಪ್ರಿಯ ಎಸ್‌ಯುವಿ ತಯಾರಕ ಕಂಪನಿಯೊಂದಿಗೆ ಭಾರತೀಯ ಸೇನೆ ಒಪ್ಪಂದ ಮಾಡಿಕೊಂಡಿದೆ. ಪವರ್‌ಫುಲ್ ಪಿಕಪ್‌ಗಳ ದೊಡ್ಡ ಆರ್ಡರ್ ಅನ್ನು ಮಹೀಂದ್ರಾ (Mahindra) ಗೆ ನೀಡಿದೆ. ಹೌದು ದೇಶಿಯ ಬ್ರಾಂಡ್ ಆಗಿರುವ ಮಹೀಂದ್ರಾ ಜೊತೆಗೆ ಇತ್ತೀಚೆಗೆ ಭಾರತೀಯ ಸಶಸ್ತ್ರ ಪಡೆ ರೂ. 2,700 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ. ಕಂಪನಿಯ ಜನಪ್ರಿಯ ಮಾಡಲ್ ಆಗಿರುವ ಸ್ಕಾರ್ಪಿಯೋ ಪಿಕ್-ಅಪ್ ಈಗ ಭಾರತೀಯ ಸಶಸ್ತ್ರ ಪಡೆಗೆ ಸೇರಲಿದೆ. ಇದರೊಂದಿಗೆ, ಕಂಪನಿಯು ಈಗ 4,000 ಕ್ಕೂ ಹೆಚ್ಚು ಸ್ಕಾರ್ಪಿಯೋ ಪಿಕ್-ಅಪ್‌ಗಳು, ಸ್ಕಾರ್ಪಿಯೋ ಕ್ಲಾಸಿಕ್, ಸ್ಕಾರ್ಪಿಯೋ-ಎನ್ ಮತ್ತು ಬೊಲೆರೊ ಪಿಕ್-ಅಪ್ 4WD ಗಳನ್ನು ಸೇನೆಗೆ ಪೂರೈಸಲಿದೆ.
ಸ್ಕಾರ್ಪಿಯೋ-ಎನ್ ಮಹೀಂದ್ರಾದ ಆಕರ್ಷಕ ಎಸ್‌ಯುವಿ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಇದೇ ಕಾರನ್ನು ಪಿಕಪ್ ಟ್ರಕ್ ವಿನ್ಯಾಸದಲ್ಲಿ ಪರಿಚಯಿಸಲು ಕಂಪನಿ ನೋಡುತ್ತಿದೆ. ಕಂಪನಿಯು 2023 ರಲ್ಲಿ ಪರಿಕಲ್ಪನೆಯ ಮಾದರಿಯನ್ನು ಪ್ರದರ್ಶಿಸಿತ್ತು. ಹಾಗೆಯೇ ಇದೇ ವರ್ಷದ ಆರಂಭದಲ್ಲಿ, ಮುಂಬರುವ ಸ್ಕಾರ್ಪಿಯೋ-ಎನ್ ಪಿಕ್-ಅಪ್ ಟೆಸ್ಟಿಂಗ್ ಮಾಡುವಾಗ ಹಲವು ಬಾರಿ ಕಾಣಿಸಿಕೊಂಡಿದೆ.

ಇದೀಗ ಬಿಡುಗಡೆ ಬಳಿಕ ಪವರ್‌ಫುಲ್ ಕಾರು ಭಾರತೀಯ ಸೇನೆಗೆ ಸೇರಲಿದೆ ಎನ್ನಲಾಗಿದೆ. ಹೊಸ ಸ್ಕಾರ್ಪಿಯೋ-ಎನ್ ಪಿಕ್-ಅಪ್ ಟ್ರಕ್ LED ಹೆಡ್‌ಲ್ಯಾಂಪ್‌ಗಳು, ಪ್ರೊಜೆಕ್ಟರ್ ಸೆಟಪ್ ಮತ್ತು ಹೊಸ ಗ್ರಿಲ್, ಟ್ವಿನ್‌ಸ್ಪೀಕ್ ಲೋಗೋ ಒಳಗೊಂಡಿದೆ. ಮಸ್ಕುಲರ್ ಫ್ಲಾಟ್ ಬಾನೆಟ್ ಮತ್ತು C-ಆಕಾರದ LED ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು ಸಹ ಇವೆ.
ಸಿಂಗಲ್-ಕ್ಯಾಬ್ ಮಾದರಿಯಲ್ಲಿ, ಸ್ಕಾರ್ಪಿಯೋ N ಅಲಾಯ್ ವೀಲ್‌ಗಳನ್ನು ಹೊಂದಿರಲಿದೆ, ಆದರೆ ಡ್ಯುಯಲ್-ಕ್ಯಾಬ್ ಮಾದರಿಯು ಉಕ್ಕಿನ ವೀಲ್‌ಗಳ ಸೆಟ್‌ನೊಂದಿಗೆ ಬರಲಿದೆ. ಎರಡೂ ಪಿಕ್-ಅಪ್ ಟ್ರಕ್‌ಗಳು ರೋಲ್‌ಓವರ್ ಸಂದರ್ಭದಲ್ಲಿ ಬಾಡಿ ಶೆಲ್ ಅನ್ನು ರಕ್ಷಿಸಲು ಟ್ರಕ್‌ನ ಎತ್ತರಕ್ಕಿಂತ ಹೆಚ್ಚಿನ ರೋಲ್ ಬಾರ್ ಅನ್ನು ಒಳಗೊಂಡಿರುತ್ತವೆ ಎಂದು ಹೇಳಲಾಗಿದೆ.
ಮಹೀಂದ್ರಾ ಸ್ಕೋಪಿಯೊ-ಎನ್ ಪಿಕ್-ಅಪ್ ಎಂಜಿನ್ ವಿಷಯಕ್ಕೆ ಬಂದರೆ ಹೊಸ ಪಿಕ್-ಅಪ್ ಟ್ರಕ್ 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಇರುತ್ತದೆ ಎಂದು ಹೇಳಲಾಗಿದೆ. ಸ್ಟ್ಯಾಂಡರ್ಡ್ ಆಗಿ, 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಜೊತೆಗೆ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ವಾಹನಗಳನ್ನು ಸಹ ನೀಡಲಾಗುವುದು.
ಮಹೀಂದ್ರಾ ಸ್ಕಾರ್ಪಿಯೋ N ಪಿಕ್-ಅಪ್ ಟ್ರೈಲರ್ ಸ್ವೇ ಕಂಟ್ರೋಲ್, ಆಲ್-ರೌಂಡ್ ಏರ್‌ಬ್ಯಾಗ್ ಸುರಕ್ಷತೆ, ಲೆವೆಲ್ 2 ADAS, 5G ಸಂಪರ್ಕ, ಚಾಲಕ ಆಯಾಸ ಪತ್ತೆ ಮತ್ತು 4Xplore ಫೋರ್-ವೀಲ್ ಡ್ರೈವ್ ಸಿಸ್ಟಮ್‌ನೊಂದಿಗೆ ಬರುವ ಸಾಧ್ಯತೆಯಿದೆ. ಇದು ಸಾಕಷ್ಟು ಸುರಕ್ಷತಾ ಸಾಧನಗಳೊಂದಿಗೆ ಭರ್ಜರಿ ಪವರ್ ಹೊರಹಾಕುವ ಎಂಜಿನ್ ಹೊಂದಿರಲಿದೆ.
ಮತ್ತೊಂದೆಡೆ, ಮಹೀಂದ್ರಾ ಸ್ಕಾರ್ಪಿಯೋ ಎನ್ ಪಿಕ್ - ಅಪ್ ನ ಒಳಭಾಗವು ಈಗಾಗಲೇ ಲಭ್ಯವಿರುವ ಸ್ಕಾರ್ಪಿಯೋ ಎನ್ ನಲ್ಲಿ ಇರುವಂತೆಯೇ ಇರಲಿದೆ. ಸಾಮಾನ್ಯ ಸ್ಕಾರ್ಪಿಯೋ-ಎನ್‌ನಲ್ಲಿ ಸಾಫ್ಟ್-ಟಚ್ ವಸ್ತುಗಳನ್ನು ಬಳಸಲಾಗಿದೆ. ಆದರೆ ಪಿಕ್-ಅಪ್ ಟ್ರಕ್‌ನಲ್ಲಿ ಹೆಚ್ಚಿನ ದುರುಪಯೋಗಕ್ಕೆ ಒಳಗಾಗುವ ಕಾರಣ ವಿಭಿನ್ನ ವಸ್ತುಗಳು ನೀಡಬಹುದು.
ಸ್ಟೀರಿಂಗ್ ವೀಲ್ ಮತ್ತು ಎಸಿ ಕಂಟ್ರೋಲ್‌ಗಳು ಸ್ಕಾರ್ಪಿಯೋ ಎನ್ ನಂತೆಯೇ ಇವೆ. ಫೀಚರ್ಸ್ ವಿಷಯಕ್ಕೆ ಬಂದರೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇನೊಂದಿಗೆ 8 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇದೆ. ಇದು ಸೇನೆಯ ವಾಹನವಾಗಿರುವುದರಿಂದ ಸಾಮಾನ್ಯ ಪಿಕಪ್ ಟ್ರಕ್‌ಗಳಿಗಿಂತ ಭಿನ್ನವಾಗಿ ಕಸ್ಟೈಸೇಷನ್‌ಗೆ ಒಳಗಾಗಿರುತ್ತವೆ ಎಂಬುದನ್ನು ಗಮನಿಸಬೇಕು.


Click it and Unblock the Notifications








