Mahindra: ನಂ.1 ಆಗಲು ಸಿದ್ದತೆ.. ಮಹೀಂದ್ರಾ ವಿಷನ್ ಎಕ್ಸ್ & ವಿಷನ್ ಎಸ್ ಕಾನ್ಸೆಪ್ಟ್ ಕಾರುಗಳು ಅನಾವರಣ.. ಹೇಗಿವೆ?
ಮಹೀಂದ್ರಾ & ಮಹೀಂದ್ರಾ (Mahindra & Mahindra) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯ ಕಾರು ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ಮುಂದಾಗಿದೆ. ಈ ಮೂಲಕ ನಂ.1 ಕಂಪನಿಯಾಗಲು ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳುತ್ತಿದೆ. ಮುಂಬೈನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ವಿಷನ್ ಎಕ್ಸ್, ವಿಷನ್ ಎಸ್, ವಿಷನ್ ಟಿ ಹಾಗೂ ವಿಷನ್ ಎಸ್‌ಎಕ್ಸ್‌ಟಿ ಹೆಸರಿನ 4 ಕಾನ್ಸೆಪ್ಟ್ ಕಾರುಗಳನ್ನು ಅನಾವರಣ ಮಾಡಿದೆ.
ಇವೆಲ್ಲ ಎಸ್‌ಯುವಿಗಳಾಗಿವೆ. ಈ ಕಾರುಗಳನ್ನು ಭವಿಷ್ಯದ ದೃಷ್ಟಿಯಿಂದ ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ. ನಾವಿಲ್ಲಿ ವಿಶೇಷವಾಗಿ ವಿಷನ್ ಎಕ್ಸ್ (Vision X) ಮತ್ತು ವಿಷನ್ ಎಸ್ (Vision S) ಮಾಡೆಲ್‌ಗಳ ವಿನ್ಯಾಸ ಹಾಗೂ ನಿರೀಕ್ಷಿತ ವೈಶಿಷ್ಟ್ಯಗಳ ಕುರಿತ ಎಲ್ಲ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಮಹೀಂದ್ರಾ ವಿಷನ್ ಎಕ್ಸ್ (Mahindra Vision X):
ಈ ಎಸ್‌ಯುವಿಯು ವಿನೂತನವಾದ ಎನ್‌ಯು ಐಕ್ಯೂ (NU IQ) ಪ್ಲಾಟ್‌ಫಾರ್ಮ್ ಆಧರಿಸಿದೆ. ಹೊರಭಾಗದಲ್ಲಿ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಫ್ರಂಟ್ (ಮುಂಭಾಗ) ಉತ್ತಮವಾಗಿರುವ ಸ್ಪ್ಲಿಟ್ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಬೃಹದಾಕಾರದ ಗ್ರಿಲ್, ಕ್ಲಾಮ್‌ಶೆಲ್ ಬಾನೆಟ್ ಹಾಗೂ ಮಹೀಂದ್ರಾದ ಟ್ವಿನ್ ಪೀಕ್ಸ್ ಲೋಗೋವನ್ನು ಪಡೆದಿದೆ.
ಇದು ಸೈಡ್-ಪ್ರೊಫೈಲ್‌ನಲ್ಲಿ ಫ್ಲಶ್ ಡೋರ್ ಹ್ಯಾಂಡಲ್‌ಗಳು,ರೂಫ್ ರೈಲ್‌ಗಳು, ಥೀಕ್ ಸಿ ಪಿಲ್ಲರ್‌ಗಳು, ಸ್ಕ್ವೇರ್ಡ್-ಆಫ್ ವೀಲ್ ಆರ್ಚ್‌ಗಳು, ಮಸ್ಕ್ಯುಲರ್ ಬಾಡಿ ಕ್ಲಾಡಿಂಗ್ ಪೇಂಟೆಡ್ ಗ್ಲಾಸ್ ಬ್ಲ್ಯಾಕ್ ಮತ್ತು ಡ್ಯುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ರೇರ್ (ಹಿಂಭಾಗ) ಸ್ಪೋರ್ಟಿ ಸ್ಪ್ಲಿಟ್ ರೂಫ್ ಸ್ಪಾಯ್ಲರ್ ಮತ್ತು ಎಲ್ಇಡಿ ಸಿಗ್ನೇಚರ್ ಟೈಲ್ ಲೈಟ್‍ನ್ನು ಹೊಂದಿದೆ.

ನೂತನ ವಿಷನ್ ಎಕ್ಸ್ ಒಳಾಂಗಣವು ತುಂಬಾ ಅದ್ಬುತವಾಗಿದೆ. ಫ್ಯೂಚರಿಸ್ಟಿಕ್ ಡ್ಯಾಶ್‌ಬೋರ್ಡ್ ಹೊಂದಿದೆ. 'ಬಿಇ 6' ಎಲೆಕ್ಟ್ರಿಕ್ ಕಾರಿನಂತೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ & ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಡುಯಲ್ ಸ್ಕ್ರೀನ್ ಸೆಟಪ್‌ಗಳು, ಡಬಲ್ ಡಿ-ಕಟ್ ಸ್ಟೀರಿಂಗ್ ಹಾಗೂ ಟ್ವಿನ್ ಕಪ್ ಹೋಲ್ಡರ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹೊಸ ವಿಷನ್ ಎಕ್ಸ್ ಕಾನ್ಸೆಪ್ಟ್ ಕಾರು, ಇಂಧನ ಚಾಲಿತ ಕಾರಾಗಿರಲಿದೆ ಎಂದು ಅಂದಾಜಿಸಲಾಗಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಹೊಂದಿರಬಹುದು ಎನ್ನಲಾಗಿದೆ. 5 ಆಸನಗಳನ್ನು ಪಡೆದಿರುವ ಸಾಧ್ಯತೆಯಿದ್ದು, ಟಾಟಾ ನೆಕ್ಸಾನ್ ಹಾಗೂ ಕಿಯಾ ಸೋನೆಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಮಹೀಂದ್ರಾ ವಿಷನ್ ಎಸ್ (Mahindra Vision S):
ಇದು ಮೇಲ್ನೋಟಕ್ಕೆ ಆಫ್-ರೋಡ್ ಎಸ್‌ಯುವಿ ಎಂದು ಗೊತ್ತಾಗುತ್ತಿದೆ. ಎನ್‌ಯು ಐಕ್ಯೂ (NU IQ) ಪ್ಲಾಟ್‌ಫಾರ್ಮ್‌ನ್ನೇ ಆಧರಿಸಿದೆ. ಹೊರಭಾಗದಲ್ಲಿ ಬಾಕ್ಸಿ ವಿನ್ಯಾಸ ಹೊಂದಿದೆ. 'ಎಲ್' ಆಕಾರಕ್ಕೆ ಹೋಲಿಕೆಯಾಗಬಲ್ಲ ಎಲ್ಇಡಿ ಹೆಡ್‌ಲೈಟ್‌ಗಳು, 6-ಸ್ಲಾಟ್ ಗ್ರಿಲ್, ಫ್ಲಾಟ್ ಕ್ಲಾಮ್‌ಶೆಲ್ ಬಾನೆಟ್ ಸೈಡ್ ಸ್ಟೋರೇಜ್ ಬಾಕ್ಸ್, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, ಟೂ-ಟೋನ್ ಅಲಾಯ್ ವೀಲ್‌ಗಳನ್ನು ಹೊಂದಿದೆ.
ಈ ಕಾರು 2,665 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ. 644 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ. ದೊಡ್ಡ ಗಾತ್ರದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ ಪನೋರಮಿಕ್ ಸನ್‌ರೂಫ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ನಿರೀಕ್ಷೆಯಿದೆ. ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್ & ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಪವರ್‌ಟ್ರೇನ್‌ಗಳಿಗೂ ಹೊಂದಾಣಿಕೆಯಾಗಬಲ್ಲದು.
ಒಟ್ಟಾರೆಯಾಗಿ, ಮಹೀಂದ್ರಾ ವಿಷನ್ ಎಕ್ಸ್ ಹಾಗೂ ವಿಷನ್ ಎಸ್ ಕಾನ್ಸೆಪ್ಟ್ ಕಾರುಗಳು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿವೆ. ಎಲ್ಲವು ಅಂದುಕೊಂಡಂತೆ ನಡೆದರೆ, ಇವೆರೆಡು ಎಸ್‌ಯುವಿಗಳು 2027ರಲ್ಲಿ ಮಾರಾಟಕ್ಕೆ ಬರುವ ಸಾಧ್ಯತೆಯಿದೆ. ಎಲ್ಲ ವರ್ಗದ ಗ್ರಾಹಕರಿಗೂ ಕೈಗೆಟುಕುವ ಬೆಲೆಯಲ್ಲಿ ದೊರೆಯಬಹುದು ಎಂದು ನುರಿತವರು ಹೇಳುತ್ತಿದ್ದಾರೆ.


Click it and Unblock the Notifications








