ನಿನ್ನೆಯಷ್ಟೆ ಬಿಡುಗಡೆಯಾದ ಮಹೀಂದ್ರಾ 7-ಸೀಟರ್ SUV ವಿಶೇಷತೆಗಳು: ವಿಮಾದಂತಹ ಸೌಕರ್ಯ!

ಬಹುನಿರೀಕ್ಷಿತ ಮಹೀಂದ್ರಾ XEV 9S ಭಾರತದಲ್ಲಿ ನಿನ್ನೆಯಷ್ಟೆ (27 ನವೆಂಬರ್) ಬಿಡುಗಡೆಯಾಗಿದ್ದು, ಇದರ ಆರಂಭಿಕ ಬೆಲೆ ರೂ. 19.95 ಲಕ್ಷ (ಎಕ್ಸ್-ಶೋರೂಂ) ವಿದೆ. ಕಂಪನಿಯ ಪ್ರಕಾರ ಇದು ಭಾರತದ ಮೊದಲ ಅಧಿಕೃತ ಎಲೆಕ್ಟ್ರಿಕ್ 7-ಸೀಟರ್ SUV ಆಗಿದ್ದು, ಬುಕಿಂಗ್ ಜನವರಿ 14, 2026 ರಿಂದ ಪ್ರಾರಂಭವಾಗಲಿದೆ. ವಿತರಣೆಯು ಜನವರಿ 23, 2026 ರಿಂದ ಪ್ರಾರಂಭವಾಗಲಿದೆ. ವಿಸ್ತಾರವಾದ ಕ್ಯಾಬಿನ್, ಮೂರು-ಸಾಲಿನ ವಿನ್ಯಾಸ ಹಾಗೂ ನಿಶ್ಯಬ್ಧ ಡ್ರೈವ್ ಅನುಭವ ನೀಡುವ XEV 9S ಪ್ರಯಾಣಿಕರಿಗೆ ವಿಮಾನದಲ್ಲಿ ಪ್ರಯಾಣಿಸಿಂದತಹ ಅನುಭವ ನೀಡುತ್ತದೆ ಎಂದು ಕಂಪನಿ ಹೇಳಿದೆ.

ಮಹೀಂದ್ರಾ XEV 9S ವಿಶೇಷತೆಗಳು

ಮಹೀಂದ್ರಾ XEV 9S ಎಲೆಕ್ಟ್ರಿಕ್ ಎಸ್‌ಯುವಿನಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, Secure360 Pro - ಹೊಸ ಲೈವ್ ಸಂವಹನ ವೈಶಿಷ್ಟ್ಯದೊಂದಿಗೆ ಲೈವ್ ವೀಕ್ಷಣೆ ಮತ್ತು ರೆಕಾರ್ಡಿಂಗ್ ಸೇರಿದಂತೆ 140ಕ್ಕೂ ಹೆಚ್ಚು ಫೀಚರ್ಸ್‌ನೊಂದಿಗೆ ಡಿಜಿಟಲ್ ಕೀ, NFC, ಚಾರ್ಜ್ ಶೆಡ್ಯೂಲರ್ ನೀಡಲಾಗಿದೆ. ಇವಿಷ್ಟೆ ಅಲ್ಲದೆ 7 ಏರ್‌ಬ್ಯಾಗ್‌ಗಳು, 5 ರಾಡಾರ್‌ಗಳು ಮತ್ತು 1 ವಿಷನ್ ಕ್ಯಾಮೆರಾದೊಂದಿಗೆ L2+ ADAS, ಡ್ರೈವರ್ ಅರೆನಿದ್ರಾವಸ್ಥೆ ಪತ್ತೆ DOMS (ಐಡೆಂಟಿಟಿ)ಯಂತಹ ಆಧುನಿಕ ಸೇಫ್ಟಿ ಫೀಚರ್ಸ್ ಇವೆ.

mahindra-xev-9s-electric-7-seater-suv-top-things

ಮಹೀಂದ್ರಾದ INGLO ಪ್ಲಾಟ್‌ಫಾರ್ಮ್ ನಲ್ಲಿ ನಿರ್ಮಾಣವಾಗಿರುವ XEV 9S, 527 ಲೀಟರ್ ವರೆಗಿನ ಬೂಟ್ ಸ್ಪೇಸ್, 150 ಲೀಟರ್‌ನ ಅತ್ಯುತ್ತಮ ಫ್ರಂಕ್ ಸ್ಪೇಸ್ ಸೇರಿದಂತೆ 4076 ಲೀಟರ್‌ನ ಅತಿದೊಡ್ಡ ಕ್ಯಾಬಿನ್ ಸ್ಪೇಸ್ (ಮುಂಭಾಗ ಮತ್ತು ಎರಡನೇ ಸಾಲಿಗೆ) ಒಳಗೊಂಡಿದೆ. ಹಾಗೆಯೇ ಈ ಕಾರಿನಲ್ಲಿ 3ನೇ ​​ಸಾಲಿನಲ್ಲಿ 50:50 ಸ್ಪ್ಲಿಟ್ ಸೀಟುಗಳನ್ನು ಒದಗಿಸಲಾಗಿದೆ.

ಈ ಕಾರು ತುಂಬಾ ಪವರ್‌ಫುಲ್ ಆಗಿದ್ದು, 210 kW ಪವರ್ ಹಾಗೂ 380 Nm ಟಾರ್ಕ್ ಹೊರಹಾಕುತ್ತದೆ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀ ಓಡಬಲ್ಲದು. ಇದರ ವರ್ಗದಲ್ಲಿಯೇ ವೇಗವಾದ 7-ಆಸನಗಳ SUV (7.0 ಸೆಕೆಂಡುಗಳಲ್ಲಿ 0-100 ಕಿಮೀ/ಗಂ) ಆಗಿದೆ. ಇದರ ಟಾಪ್ ಸ್ಪೀಡ್ 202 ಕಿ.ಮೀ ಇದೆ. ಜೀವಮಾನದ ವಾರೆಂಟಿಯೊಂದಿಗೆ ಸುಧಾರಿತ LFP ಬ್ಯಾಟರಿಯನ್ನು ಒದಗಿಸಿರುವುದು ಎಲ್ಲಕ್ಕಿಂತ ಪ್ರಮುಖ ಹೈಲೆಟ್ ಆಗಿದೆ.

mahindra-xev-9s-electric-7-seater-suv-top-things

ಕಾರಿನ ಉದ್ದಳತೆ ವಿಷಯಕ್ಕೆ ಬಂದರೆ 205 mm (222 mm ಬ್ಯಾಟರಿ ಗ್ರೌಂಡ್ ಕ್ಲಿಯರೆನ್ಸ್)ನ ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಸುಧಾರಿತ ಪ್ರಯಾಣ ಅನುಭವಕ್ಕಾಗಿ ಮುಂಭಾಗದಲ್ಲಿ i-ಲಿಂಕ್ ಮತ್ತು ಹಿಂಭಾಗದಲ್ಲಿ 5-ಲಿಂಕ್ ಇಂಡಿಪೆಂಡೆಂಟ್ ಸಸ್ಪೆನ್ಷನ್ ನೀಡಲಾಗಿದೆ. ಜೊತೆಗೆ ಅತ್ಯಾಧುನಿಕ IEB ಯೊಂದಿಗೆ ಬ್ರೇಕ್ ಬೈ ವೈರ್, VGR ನೊಂದಿಗೆ ಹೈ ಪವರ್ ಸ್ಟೀರಿಂಗ್ ನೀಡಲಾಗಿದೆ.

ಫೀಚರ್ಸ್ ವಿಷಯಕ್ಕೆ ಬಂದರೆ, VisionX - AR HUD, ಐಡೆಂಟಿಟಿ - ಡ್ರೈವರ್ ಮತ್ತು ಪ್ಯಾಸಿಂಜರ್ ಮೇಲ್ವಿಚಾರಣಾ ವ್ಯವಸ್ಥೆ, ಆಟೋಪಾರ್ಕ್ ಅಸಿಸ್ಟ್, ಡಾಲ್ಬಿ ಅಟ್ಮಾಸ್‌ನೊಂದಿಗೆ 16 ಸ್ಪೀಕರ್ ಹರ್ಮನ್ ಕಾರ್ಡನ್ ಆಡಿಯೋ, ಮೂರು 31.24 ಸೆಂ.ಮೀ ಸ್ಕ್ರೀನ್‌ಗಳು, 5G ಸಂಪರ್ಕ, ಆಂಬಿಯೆಂಟ್ ಲೈಟ್‌ಗಳನ್ನು ಒದಗಿಸಲಾಗಿದೆ.

mahindra-xev-9s-electric-7-seater-suv-top-things

ಡ್ರೈವ್ ಮೋಡ್‌ಗಳು (ಡೀಫಾಲ್ಟ್, ರೇಂಜ್, ರೇಸ್, ಡೈಲಿ), 6-ವೇ ಪವರ್ಡ್ ಮೆಮೊರಿ ಸೀಟ್, ಕ್ಯಾಪ್‌ಟಚ್ ಸ್ಟೀರಿಂಗ್ ಸ್ವಿಚ್‌ಗಳು, ಲೈವ್‌ಯುವರ್‌ಮೂಡ್, ಸ್ಮಾರ್ಟ್ ಕ್ಲೈಮೆಟ್ ಕಂಟ್ರೋಲ್, ಬಿಗ್ ಆನ್ ಇನ್ಫೊಟೈನ್ಮೆಂಟ್ ಹೊಂದಿದೆ. ಒಟ್ಟಾರೆ ಈ ಫೀಚರ್ಸ್ ಕಾರನ್ನು ಸದ್ಯದ ಅತ್ಯಾಧುನಿಕ ಎಲೆಕ್ಟ್ರಿಕ್ 7-ಸೀಟರ್ SUV ಆಗಿ ಮಾಡಿದೆ.

ಎರಡನೇ ಸಾಲು ಐಷಾರಾಮಿಯಾಗಿದ್ದು, 2ನೇ ಸಾಲಿನ ಕಿಟಕಿಗಳಿಗೆ ಸನ್‌ಶೇಡ್, ಅಕೌಸ್ಟಿಕ್ "ಲ್ಯಾಮಿನೇಟೆಡ್" ಗ್ಲಾಸ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪವರ್ಡ್ ಬಾಸ್ ಮೋಡ್, ವೆಂಟಿಲೇಟೆಡ್ 2 ನೇ ಸಾಲಿನ ಸೀಟ್‌ಗಳು, ರಿಕ್ಲೈನ್ ​​ಮತ್ತು ಸ್ಲೈಡಿಂಗ್ ಹೊಂದಾಣಿಕೆ, 3 ಮೋಡ್‌ಗಳೊಂದಿಗೆ ಲೈವ್ ಯುವರ್‌ಮೂಡ್ ನಂತಹ ಆಧುನಿಕ ಫೀಚರ್ಸ್ ನೀಡಲಾಗಿದೆ.

More from DriveSpark

Article Published On: Friday, November 28, 2025, 10:20 [IST]
English summary
Mahindra xev 9s electric 7 seater suv top things
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+