7-ಸೀಟರ್: ಇನ್ನೋವಾಗೆ ಸವಾಲೆಸೆಯಬಲ್ಲ ಈ ಪ್ರಮುಖ Mahindra Suv ಭಾರೀ ಸಂಖ್ಯೆಯಲ್ಲಿ ಸೇಲ್ ಆಯ್ತಾ.. ಇಲ್ವಾ?
ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ವಿಶ್ವಾಸಾರ್ಹ ಫ್ಯಾಮಿಲಿ ಎಸ್‍ಯುವಿಯಾಗಿದೆ. ಇದು ಅತ್ಯಾಧುನಿಕ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ನಾ ಮಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದರ ಹೊರತಾಗಿಯೂ ಈ ಜುಲೈನಲ್ಲಿ 'ಎಕ್ಸ್‌ಯುವಿ700' ಕಾರಿನ ಮಾರಾಟ ಒಂದಷ್ಟು ಮಟ್ಟಿಗೆ ಕುಸಿತವಾಗಿದೆ. ಒಟ್ಟು 7,054 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 7,769 ಯುನಿಟ್‌ಗಳನ್ನು ಮಾರಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -9% ಇಳಿಕೆಯಾಗಿದೆ.
ಈ ವರ್ಷದ ಫೆಬ್ರವರಿಯಿಂದ ಜೂನ್ ಅವಧಿಯಲ್ಲಿಯೂ 'ಮಹೀಂದ್ರಾ ಎಕ್ಸ್‌ಯುವಿ700' ಎಸ್‍ಯುವಿ ಮಾರಾಟದಲ್ಲಿ ಹಲವು ಏರಿಳಿತಗಳನ್ನು ಕಾಣಲಾಗಿದೆ. ಒಟ್ಟು 33,763 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಈ ಅಂಕಿ ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಪ್ರತಿ ತಿಂಗಳು ಸರಾಸರಿ 6,752 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

ಮಹೀಂದ್ರಾ ಎಕ್ಸ್‌ಯುವಿ700 ವಿಶೇಷತೆಗಳೇನು:
ಈ ಎಸ್‍ಯುವಿಯು ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕನಿಷ್ಠ ರೂ.14.49 ಲಕ್ಷ ಹಾಗೂ ಗರಿಷ್ಠ ರೂ.25.14 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಹಾಗೂ ಎಎಕ್ಸ್7ಎಲ್ ಒಳಗೊಂಡಂತೆ ಹಲವು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.
ಇದು ಹೊರಭಾಗದಲ್ಲಿ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಪಡೆದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಫಾಗ್ ಲ್ಯಾಂಪ್‌ಗಳು, ಕಾರ್ನರಿಂಗ್ ಲ್ಯಾಂಪ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ ಡೈಮಂಡ್ ಕಟ್ ಅಲಾಯ್ ವೀಲ್‌ಗಳನ್ನು ಪಡೆದಿದೆ. ಎವರೆಸ್ಟ್ ವೈಟ್, ಮಿಡ್‌ನೈಟ್ ಬ್ಲ್ಯಾಕ್, ಡ್ಯಾಜ್ಲಿಂಗ್ ಸಿಲ್ವರ್, ರೆಡ್ ರೇಜ್, ಎಲೆಕ್ಟ್ರಿಕ್ ಬ್ಲೂ, ಮ್ಯಾಟ್ ಬ್ಲೇಜ್ ರೆಡ್, ಬರ್ನ್ಟ್ ಸಿಯೆನ್ನಾ, ಡೀಪ್ ಫಾರೆಸ್ಟ್, ನೇಪಲ್ಸ್ ಬ್ಲ್ಯಾಕ್, ಸ್ಟೆಲ್ತ್ ಬ್ಲ್ಯಾಕ್ ಹಾಗೂ ವ್ಯಾಲೇರಿಯನ್ ಸಿಲ್ವರ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ನೂತನ ಎಕ್ಸ್‌ಯುವಿ700 ಎಸ್‍ಯುವಿಯು 4695 ಎಂಎಂ ಉದ್ದ, 1890 ಎಂಎಂ ಅಗಲ ಮತ್ತು 1755 ಎಂಎಂ ಎತ್ತರವು ಇದೆ. 200 ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2750 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. ಈ ಕಾರು 6/ 7 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 240 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.
ಮಹೀಂದ್ರಾ ಎಕ್ಸ್‌ಯುವಿ700 ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. ಇದರ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 200 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 380 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

ಮತ್ತೊಂದು 2.2-ಲೀಟರ್ ಡಿಸೇಲ್ ಎಂಜಿನ್, 185 PS ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 450 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಈ ಕಾರು ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್/ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 17 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 60 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ.
ಈ ಕಾರಿನ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. 10.25-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 6-ವೇ ಪವರ್ಡ್ ಡ್ರೈವರ್ ಸೀಟ್, 12 ಸ್ಪೀಕರ್, ಪನೋರಮಿಕ್ ಸನ್‌ರೂಫ್, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್ ಮತ್ತು ಅಲೆಕ್ಸಾ ಕನೆಕ್ಟಿವಿಟಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ನೂತನ ಎಕ್ಸ್‌ಯುವಿ700 ಎಸ್‍ಯುವಿಯು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 7 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಇದಕ್ಕೆ ಹ್ಯುಂಡೈ ಅಲ್ಕಾಜರ್, ಟೊಯೊಟಾ ಇನ್ನೋವಾ ಹಾಗೂ ಟಾಟಾ ಸಫಾರಿ ಕಾರುಗಳು ಎದುರಾಳಿಯಾಗಿವೆ.


Click it and Unblock the Notifications








