Maruti: ಮಾರುತಿ ಕಾರಿಗೆ ಫುಲ್ ಡಿಮ್ಯಾಂಡ್: 28.51 ಕಿ.ಮೀ ಮೈಲೇಜ್: ಜನ ಮುಗಿಬಿದ್ದು ಖರೀದಿ!
ಮಾರುತಿ ಸುಜುಕಿ ತನ್ನ ಅತ್ಯಾಕರ್ಷಕ ಫ್ರಾಂಕ್ಸ್ (Maruti Fronx) ಕಾರನ್ನು ಬಿಡುಗಡೆ ಮಾಡಿದಾಗಿನಿಂದ ತನ್ನ ವಿಭಾಗದಲ್ಲಿಯೇ ಅತ್ಯುತ್ತಮ ಮಾರಾಟ ಕಾಣುವ ಕಾರಾಗಿ ಗುರ್ತಿಸಿಕೊಂಡಿದೆ. ಪ್ರತಿ ತಿಂಗಳು ಏರಿಕೆ ಕಾಣುತ್ತಾ ಗ್ರಾಹಕರ ಆದ್ಯತೆಯ ಎಸ್‌ಯುವಿಯಾಗಿ ಮಿಂಚುತ್ತಿದೆ. ಕಳೆದ ತಿಂಗಳಿನಲ್ಲೂ ದಾಖಲೆಯ ಕಾರುಗಳು ಮಾರಾಟವಾಗಿದ್ದು, ಜುಲೈ 2025 ರಲ್ಲಿ ಫ್ರಾಂಕ್ಸ್ ಎರಡನೇ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ SUV ಆಗಿ ಜನಪ್ರಿಯತೆ ಪಡೆದಿದೆ. ಜುಲೈನಲ್ಲಿನ ಈ ಏರಿಕೆಯು NEXA ಸಾಲಿನಲ್ಲಿ ಮತ್ತು ವಿಭಾಗದಲ್ಲಿನ ಎಲ್ಲಾ ಕಾಂಪ್ಯಾಕ್ಟ್ SUV ಗಳಲ್ಲಿ ಮಾರುತಿಯ ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿ ಉಳಿದಿದೆ.
ಜುಲೈ 2025 ರಲ್ಲಿ, ಮಾರುತಿ ಸುಜುಕಿ ಫ್ರಾಂಕ್ಸ್ ಭಾರತದಲ್ಲಿ 12,872 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಈ ಅಂಕಿ ಅಂಶವು ಜುಲೈ 2024 ರಲ್ಲಿ ಮಾರಾಟವಾದ 10,925 ಯುನಿಟ್ ಕಾರುಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ 18% ಮಾರಾಟ ಬೆಳವಣಿಗೆಯನ್ನು ಸೂಚಿಸುತ್ತದೆ. ಇನ್ನು ಜೂನ್ 2025 ರಲ್ಲಿ 9,815 ಯುನಿಟ್ ಕಾರುಗಳು ಮಾರಾಟವಾಗಿದ್ದು, ತಿಂಗಳಿನಿಂದ ತಿಂಗಳಿಗೆ ಶೇ31 ರಷ್ಟು ಹೆಚ್ಚಾಗಿದೆ.

ಈ ಮಟ್ಟದ ಬೇಡಿಕೆಗೆ ಕಾರಣಗಳು
ಪ್ರಮುಖ ಕಾರಣಗಳೆಂದರೆ ಇದರ ಅಗ್ಗದ ಬೆಲೆ, ಆಕರ್ಷಕ ಡಿಸೈನ್, ಆಧುನಿಕ ಫೀಚರ್ಸ್‌ನಿಂದಾಗಿ ಕಾರು ಗ್ರಾಹಕರಲ್ಲಿ ತುಂಬಾ ಜನಪ್ರಿಯತೆ ಗಳಿಸಿದೆ. ಮಾರುತಿ ಸುಜುಕಿ ಫ್ರಾಂಕ್ಸ್ ಬೆಲೆಯು ರೂ. 7.58 ಲಕ್ಷದಿಂದ (ಎಕ್ಸ್ ಶೋರೂಂ) ಆರಂಭವಾಗಿ ರೂ. 13.06 ಲಕ್ಷ (ಎಕ್ಸ್ ಶೋರೂಂ) ವರೆಗೆ ಇದೆ. ಸಿಗ್ಮಾ, ಡೆಲ್ಟಾ, ಡೆಲ್ಟಾ+, ಡೆಲ್ಟಾ+ (O), ಜೀಟಾ, ಆಲ್ಫಾ ವೇರಿಯೆಂಟ್‌ಗಲ್ಲಿ ಲಭ್ಯವಿದೆ. ಹಾಗೆಯೇ ಪೆಟ್ರೋಲ್, ಟರ್ಬೊ-ಪೆಟ್ರೋಲ್ ಮತ್ತು CNG ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿದೆ.
ಈ ಕಾರು 3 ಪವರ್‌ಫುಲ್ ಪವರ್‌ಟ್ರೇನ್ ಆಯ್ಕೆಗಳನ್ನು ಒಳಗೊಂಡಿದೆ. 1-ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್, 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1.2-ಲೀಟರ್ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಆಟೋಮೆಟಿಕ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ.

ಮೈಲೇಜ್ ವಿಷಯಕ್ಕೆ ಬಂದರೆ ಪೆಟ್ರೋಲ್ ಮ್ಯಾನುವಲ್ - 21.79 ಕಿ.ಮೀ, ಟರ್ಬೊ ಪೆಟ್ರೋಲ್ ಮ್ಯಾನುವಲ್ - 21.5 ಕಿ.ಮೀ, ಟರ್ಬೊ ಪೆಟ್ರೋಲ್ ಆಟೋಮ್ಯಾಟಿಕ್ - 20.01 ಕಿ.ಮೀ, AMT (1.2L) - 22.89 ಕಿ.ಮೀ ಹಾಗೂ CNG - ಬರೋಬ್ಬರಿ 28.51 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.
ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು ಸ್ಟ್ಯಾಂಡರ್ಡ್ (ಜುಲೈ 2025 ರಿಂದ ಎಲ್ಲಾ ವೇರಿಯೆಂಟ್‌ಗಳಲ್ಲಿ ಲಭ್ಯ), ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ಸ್, ಹಿಲ್ ಹೋಲ್ಡ್, ISOFIX, ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್, ಟ್ರಾಕ್ಷನ್ ಕಂಟ್ರೋಲ್ ಮತ್ತು 360 - ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಫೀಚರ್ಸ್ ವಿಷಯದಲ್ಲೂ ಉತ್ತಮವಾಗಿದ್ದು, 9-ಇಂಚಿನ ತೇಲುವ ಟಚ್‌ಸ್ಕ್ರೀನ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 6 ಸ್ಪೀಕರ್‌ಗಳು, ವಾಯಿಸ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ಆಟೋ ಕ್ಲೈಮೆಟ್ ಕಂಟ್ರೋಲ್, ಹಿಂಭಾಗದ AC ವೆಂಟ್‌ಗಳು, ವೈರ್‌ಲೆಸ್ ಚಾರ್ಜಿಂಗ್, ಪುಶ್ - ಬಟನ್ ಸ್ಟಾರ್ಟ್, ಕೀಲೆಸ್ ಎಂಟ್ರಿಯಂತಹ ಫೀಚರ್ಸ್ ಇವೆ.
ಡಿಸೈನ್ ವಿಷಯದಲ್ಲೂ ಎದ್ದು ಕಾಣುವ ಈ ಕಾರು, LED ಹೆಡ್‌ಲ್ಯಾಂಪ್‌ಗಳು ಮತ್ತು DRLಗಳು, 16 - ಇಂಚಿನ ಅಲಾಯ್ ವೀಲ್‌ಗಳು (ಟಾಪ್ ವೇರಿಯೆಂಟ್‌ಗಳು), ಡ್ಯುಯಲ್ - ಟೋನ್ ಬಾಹ್ಯ ಬಣ್ಣಗಳನ್ನು ಪಡೆದುಕೊಂಡಿದೆ. ಲಗ್ಗೇಜ್ ಸಾಗಿಸಲು ವಿಶಾಲವಾದ 308L ಬೂಟ್, 2450mm ವೀಲ್‌ಬೇಸ್‌ನೊಂದಿಗೆ ಐದು ಮಂದಿ ಆರಾಮವಾಗಿ ಪ್ರಯಾಣಿಸಲು 5-ಆಸನಗಳ ಸಂರಚನೆ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಕಳೆದ ಆರು ತಿಂಗಳುಗಳಲ್ಲಿ, ಫ್ರಾಂಕ್ಸ್ ಸ್ಥಿರವಾದ ಮಾರಾಟವನ್ನು ದಾಖಲಿಸಿದರೆ, ಇದರಲ್ಲಿ ಫೆಬ್ರವರಿ 2025 ರಲ್ಲಿ ಗರಿಷ್ಠ 21,461 ಯುನಿಟ್ ಕಾರುಗಳು ಮತ್ತು ಜೂನ್ 2025 ರಲ್ಲಿ ಕನಿಷ್ಠ 9,815 ಯುನಿಟ್ ಕಾರುಗಳು ಮಾರಾಟವಾಗಿವೆ. ಮಾರುತಿ ಫ್ರಾಂಕ್ಸ್‌ನ ಸ್ಥಿರ ಮಾರಾಟದ ಕಾರ್ಯಕ್ಷಮತೆಯು ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಅದರ ಬಲವಾದ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ.


Click it and Unblock the Notifications