Alto: 34 Km ಮೈಲೇಜ್, 5-ಸೀಟರ್.. 3.99 ಲಕ್ಷ.. ಪುಟ್ಟ ಮಾರುತಿ ಆಲ್ಟೋ ಕಾರು ಬೆಸ್ಟ್ ಅಂತೇ ಗುರು!

ಮಾರುತಿ ಸುಜುಕಿ ಇಂಡಿಯಾ (Maruti Suzuki India), ಸಣ್ಣ ಕಾರುಗಳ ಮಾರಾಟದಿಂದಲೇ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅರೆನಾ ಡೀಲರ್‌ಶಿಪ್ ಮೂಲಕ ಕಂಪನಿ ಮಾರಾಟಗೊಳಿಸುವ 'ಆಲ್ಟೋ ಕೆ10' ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಈಗಲೂ ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಅದರಲ್ಲೂ ನಗರ ಪ್ರದೇಶದ ಗ್ರಾಹಕರ ನೆಚ್ಚಿನ ಕಾರೆಂದು ಹೆಸರುವಾಗಿದ್ದು, ಪ್ರತಿನಿತ್ಯ ಆಫೀಸ್ ಕೆಲಸ ಹೋಗುವ ನೌಕರರು ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ನಾವಿಲ್ಲಿ ಅದಕ್ಕೆ ಸಂಬಂಧಿಸಿದ ಕಾರಣವನ್ನು ಸಂಕ್ಷಿಪ್ತ ವಿವರಿಸಿದ್ದೇವೆ.

ಬೆಲೆ (Price): ನೂತನ ಮಾರುತಿ ಸುಜುಕಿ ಆಲ್ಟೋ ಕೆ10 (Maruti Suzuki Alto K10) ಹ್ಯಾಚ್‌ಬ್ಯಾಕ್ ಅತಿ ಕಡಿಮೆ ಬೆಲೆಯನ್ನು ಹೊಂದಿದೆ. ಇದು ರೂ.3.99 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಇದರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಗ್ರಾಮೀಣ ಭಾಗಕ್ಕೆ ಹೋಲಿಕೆ ಮಾಡಿದರೆ, ನಗರಗಳ ಪ್ರದೇಶದ ಜನರು ಈ ಕಾರನ್ನು ತಮ್ಮ ಆಯ್ಕೆಯ ವಾಹನವಾಗಿ ಆರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.

Maruti Suzuki Alto K10 Car King Of Cities Rs 3 99 Lakh Starting Price 34 Km Mileage 5-Seater

ರೂಪಾಂತರಗಳು & ಬಣ್ಣಗಳು (Variants & Colors): ಈ ಕಾರು ಹೊರಭಾಗದಲ್ಲಿ ಉತ್ತಮವಾಗಿರುವ ವಿನ್ಯಾಸ ಒಳಗೊಂಡಿದೆ. ಎಲ್ಎಕ್ಸ್ಐ ಮತ್ತು ವಿಎಕ್ಸ್ಐ ಸೇರಿದಂತೆ ಹಲವು ರೂಪಾಂತರಗಳೊಂದಿಗೂ (ವೇರಿಯೆಂಟ್) ಸಿಗುತ್ತದೆ. ಇದರೊಟ್ಟಿಗೆ ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್ & ಮೆಟಾಲಿಕ್ ಗ್ರಾನೈಟ್ ಗ್ರೇಯಂತಹ ಹಲವು ಬಣ್ಣಗಳ ಆಯ್ಕೆಯನ್ನು ಪಡೆದಿದೆ.

ಆಸನಗಳ ಆಯ್ಕೆ (Seating Capacity): ಹೊಸ ಮಾರುತಿ ಆಲ್ಟೋ ಕೆ10 ಹ್ಯಾಚ್‌ಬ್ಯಾಕ್, 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಸಂಚಾರ ನಡೆಸಬಹುದು. ಹೆಚ್ಚಿನ ಲಗೇಜ್ ಸಾಗಿಲು 214 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ಇದು ಸಣ್ಣ ಕಾರು ಆಗಿರುವುದರಿಂದ ಸುಲಭವಾಗಿಯೂ ಪಾರ್ಕಿಂಗ್ ಮಾಡಬಹುದು.

Maruti Suzuki Alto K10 Car King Of Cities Rs 3 99 Lakh Starting Price 34 Km Mileage 5-Seater

ಕಾರ್ಯಕ್ಷಮತೆ (Performance): ಈ ಕಾರು ಎರಡು ಪವರ್‌ಟ್ರೇನ್‌ನ್ನು ಒಳಗೊಂಡಿದೆ. ಇದರ 1-ಲೀಟರ್ ಡುಯಲ್ಜೆಟ್ ಪೆಟ್ರೋಲ್ ಎಂಜಿನ್, 67 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 89 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಮತ್ತೊಂದು 1-ಲೀಟರ್ ಸಿಎನ್‌ಜಿ ಎಂಜಿನ್, 57 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 82 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ನೂತನ ಮಾರುತಿ ಸುಜುಕಿ ಆಲ್ಟೋ ಕೆ10 ಹ್ಯಾಚ್‌ಬ್ಯಾಕ್, 5-ಸ್ಪೀಡ್ ಮ್ಯಾನುವಲ್/ 5-ಸ್ವೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 24.39 ರಿಂದ 33.85 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಜೊತೆಗೆ ಎಂಜಿನ್ ಸ್ಟಾರ್ಟ್/ಸ್ಟಾಪ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಈ ಕಾರು ಹೆಚ್ಚಿನ ಮೈಲೇಜ್ ನೀಡುವ ಹಿನ್ನೆಲೆ, ನಿರ್ವಹಣಾ ವೆಚ್ಚವು ಉಳಿಯುವುದರಿಂದ ಬಹುತೇಕರಿಗೆ ಇಷ್ಟವಾಗುತ್ತದೆ.

Maruti Suzuki Alto K10 Car King Of Cities Rs 3 99 Lakh Starting Price 34 Km Mileage 5-Seater

ವೈಶಿಷ್ಟ್ಯಗಳು (Features): ಈ ಕಾರು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಕಾರ್‌ಪ್ಲೇ ಮತ್ತು ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಒಳಗೊಂಡಿದೆ.

ಇನ್ನು, ಹೊಸ ಮಾರುತಿ ಸುಜುಕಿ ಆಲ್ಟೋ ಕೆ10 ಹ್ಯಾಚ್‌ಬ್ಯಾಕ್‌ಗೆ ರೆನಾಲ್ಟ್ ಕ್ವಿಡ್ ಹಾಗೂ ಟಾಟಾ ಟಿಯಾಗೊ ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ. ಈ ಕಾರು ಹೆಚ್ಚು ಆಕರ್ಷಕವಾಗಿದ್ದು, ಕಾರ್ಯಕ್ಷಮತೆಯೂ ಚೆನ್ನಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸಹ ಖರೀದಿ ಮಾಡುತ್ತಿದ್ದಾರೆ. ಈ ವರ್ಷ ನೂತನ ಆಲ್ಟೋ ಮಾರಾಟ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

Article Published On: Thursday, January 2, 2025, 16:09 [IST]
English summary
Maruti suzuki alto k10 car king of cities rs 3 99 lakh starting price 34 km mileage 5 seater
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+