Maruti: ಮಾರುತಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜು: ಅಗ್ಗದ ಬೆಲೆ? ಪ್ರಮುಖ ಬ್ರಾಂಡ್‌ಗಳಿಗೆ ನಡುಕ ಶುರು!
ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ, ತನ್ನ ಮೊದಲ ಎಲೆಕ್ಟ್ರಿಕ್ ವಾಹನವಾದ ಇ-ವಿಟಾರಾವನ್ನು (ಎಲೆಕ್ಟ್ರಿಕ್ ಕಾರು) ಸೆಪ್ಟೆಂಬರ್ 3, 2025 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಪ್ರದರ್ಶಿಸಲಾದ ಇ-ವಿಟಾರಾ, ಕಂಪನಿಯ ಎಲೆಕ್ಟ್ರಿಕ್ ಎಸ್‌ಯುವಿ ವಿಭಾಗಕ್ಕೆ ಎಂಟ್ರಿ ಕೊಡುತ್ತಿರುವ ಬಹುನಿರೀಕ್ಷಿತ ಎಸ್‌ಯುವಿಯಾಗಿದೆ. ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ನಿರೀಕ್ಷಿತ ಇವಿ ಉಡಾವಣೆಗಳಲ್ಲಿ ಇದು ಒಂದಾಗಿದೆ ಎಂದು ಪರಿಗಣಿಸಲಾಗಿದೆ. ಬಿಡುಗಡೆಗೂ ಮುನ್ನ ಈ ಕಾರಿನ ಪ್ರಮುಖ ಅಂಶಗಳನ್ನು ತಿಳಿಯೋಣ.
ಮಾರುತಿ ಇ-ವಿಟಾರಾ ಪ್ರಮುಖ ವಿವರಗಳು
ಮಾರುತಿ ಸುಜುಕಿ ಇ-ವಿಟಾರಾ ಎಲೆಕ್ಟ್ರಿಕ್ ಕಾರು, 48.8 kWh ಮತ್ತು 61.1 kWh ಎಂಬ ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ದೊಡ್ಡ ಬ್ಯಾಟರಿ ಪ್ಯಾಕ್ ಒಮ್ಮೆ ಚಾರ್ಜ್ ಮಾಡಿದರೆ ಅಂದಾಜು 500 ಕಿ.ಮೀ.ಗಿಂತ ಹೆಚ್ಚು ರೇಂಜ್ ನೀಡುತ್ತದೆ. DC ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರಲಿರುವ ಈ ಕಾರು, ಸುಮಾರು 45 ನಿಮಿಷಗಳಲ್ಲಿ ಶೆ80 ರಷ್ಟು ಚಾರ್ಜ್ ಆಗುತ್ತದೆ ಎಂದು ವರದಿಯಾಗಿದೆ.

ಮುಂಬರಲಿರುವ ಈ ಮಾರುತಿ ಸುಜುಕಿ ಇ-ವಿಟಾರಾ ಕಾರು, ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಡ್ಯುಯಲ್ ಸ್ಕ್ರೀನ್ ಡ್ಯಾಶ್ಬೋರ್ಡ್ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ 10.1-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಹೊಂದಿದೆ. ವೆಂಟಿಲೇಟೆಡ್ ಸೀಟುಗಳು, ಆಂಬಿಯೆಂಟ್ ಲೈಟ್, 360 - ಡಿಗ್ರಿ ಕ್ಯಾಮೆರಾ ಮತ್ತು 7 ಏರ್‌ಬ್ಯಾಗ್‌ಗಳು, ವರ್ಧಿತ ಸುರಕ್ಷತೆ ಮತ್ತು ಚಾಲಕ ಸಹಾಯಕ್ಕಾಗಿ ಲೆವೆಲ್-2 ADAS ಕಾರ್ಯನಿರ್ವಹಣೆಯಂತಹ ವೈಶಿಷ್ಟ್ಯಗಳೊಂದಿಗೆ ಬರಲಿದೆ.
ಇವಿಷ್ಟೇ ಅಲ್ಲದೆ ಇ-ವಿಟಾರಾ ಡ್ಯುಯಲ್-ಸ್ಪೋಕ್ ಸ್ಟೀರಿಂಗ್ ವೀಲ್, ಆಕರ್ಷಕ ಎಸಿ ವೆಂಟ್ ಗಳು, ಆಟೋ-ಡಿಮ್ಮಿಂಗ್ ಐಆರ್‌ವಿಎಂ, ಸೆಮಿ-ಲೆದರೇಟ್ ಸೀಟುಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ವೈರ್ ಲೆಸ್ ಫೋನ್ ಚಾರ್ಜರ್ ಸೇರಿವೆ. ಹೆಚ್ಚುವರಿ ಸೌಲಭ್ಯಗಳೆಂದರೆ ಪನೋರಮಿಕ್ ಸನ್‌ರೂಫ್, 10-ವೇ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, 360 ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾ ಹೊಂದಿದೆ.

ನಿರೀಕ್ಷಿತ ಬೆಲೆ ಶ್ರೇಣಿಯು 17 ರಿಂದ 25 ಲಕ್ಷ (ಎಕ್ಸ್-ಶೋರೂಂ) ನಡುವೆ ಇರಬಹುದಾಗಿದೆ. ಕೆಲವು ಮೂಲಗಳು ರೂ. 30 ಲಕ್ಷದವರೆಗೆ ಟಾಪ್ ವೇರಿಯೆಂಟ್‌ಗಳು ಇರಬಹುದು. ಇಗಾಗಲೇ ಆಯ್ದ ಮಾರುತಿ ಸುಜುಕಿ ಡೀಲರ್‌ಶಿಪ್‌ಗಳು ಈಗಾಗಲೇ ಎಲೆಕ್ಟ್ರಿಕ್ ಎಸ್‌ಯುವಿಗಾಗಿ ಅನಧಿಕೃತ ಮುಂಗಡ ಬುಕಿಂಗ್‌ಗಳನ್ನು ಸ್ವೀಕರಿಸುತ್ತಿವೆ ಎಂಬ ಸುದ್ದಿ ಹರಿದಾಡುತ್ತಿದೆ.
ಒಟ್ಟಾರೆ ಮಾರುತಿ ಇ-ವಿಟಾರಾ, ಭಾರತದಲ್ಲಿ ಪ್ರೀಮಿಯಂ ಎಲೆಕ್ಟ್ರಿಕ್ SUV ವಿಭಾಗವನ್ನು ಗುರಿಯಾಗಿಸಿಕೊಂಡು, ಸೌಕರ್ಯ, ತಂತ್ರಜ್ಞಾನ ಮತ್ತು ಸುರಕ್ಷತೆಯ ಮೇಲೆ ಕೇಂದ್ರೀಕರಿಸಿದ ಸಮಗ್ರ ವೈಶಿಷ್ಟ್ಯಗಳನ್ನು ನೀಡಲಿದೆ. ಬಿಡುಗಡೆಯಾದ ನಂತರ, ಇ-ವಿಟಾರಾ ಟಾಟಾ ಕರ್ವ್ ಇವಿ, ಮಹೀಂದ್ರಾ ಎಕ್ಸ್‌ಯುವಿ 400 ಮತ್ತು ಹುಂಡೈ ಕ್ರೆಟಾ ಇವಿ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಇ-ವಿಟಾರಾವನ್ನು ಗುಜರಾತ್‌ನಲ್ಲಿರುವ ಸುಜುಕಿಯ ಹೊಸ ಇವಿ ಸ್ಥಾವರದಲ್ಲಿ ಉತ್ಪಾದಿಸಲಾಗುವುದು. ಇದು ಭಾರತವನ್ನು ಎಲೆಕ್ಟ್ರಿಕ್ ವಾಹನ ಉತ್ಪಾದನೆಯ ಕೇಂದ್ರವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇ-ವಿಟಾರಾವನ್ನು ಭಾರತದಲ್ಲಿನ ಇತರ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿಗಳೊಂದಿಗೆ ಸ್ಪರ್ಧಾತ್ಮಕವಾಗಿ ಇರಿಸಲಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಮಾರುತಿ ಸುಜುಕಿ ಇ-ವಿಟಾರಾವನ್ನು ಸೆಪ್ಟೆಂಬರ್ 3, 2025 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂಬುದು ಬಹುತೇಕ ಖಚಿತವಾಗಿದೆ. ಇದು ಬ್ರ್ಯಾಂಡ್‌ನ ಮೊದಲ ಆಲ್-ಎಲೆಕ್ಟ್ರಿಕ್ ಎಸ್‌ಯುವಿ ಆಗಿರುವುದರಿಂದ ಈಗಾಗಲೇ ನಿರೀಕ್ಷೆಗಳು ಹೆಚ್ಚಾಗಿದ್ದು, ಬಿಡುಗಡೆಯ ಸಮಯದಲ್ಲಿ ಎಸ್‌ಯುವಿ ಕುರಿತ ಎಲ್ಲಾ ಮಾಹಿತಿ ಹೊರಬರಲಿದೆ. ಬಿಡುಗಡೆ ನಂತರ ಯಾವಮಟ್ಟಿಗೆ ಯಶಸ್ಸು ಕಾಣಲಿದೆ ಕಾದುನೋಡಬೇಕಿದೆ.


Click it and Unblock the Notifications