ಬಡವರ ಬಂಡಿ: ಮಾರುತಿ ಓಮ್ನಿ ಉತ್ತರಾಧಿಕಾರಿಯಾದ ಇಕೋ ವ್ಯಾನ್‌ ಹೊಸ ಮೈಲಿಗಲ್ಲು

ಜನಪ್ರಿಯ ಮತ್ತು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಇಕೋ ವ್ಯಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ಮಾರಾಟ ಮಾಡುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ 2010ರಲ್ಲಿ ಬಿಡುಗಡೆಯಾದ ಈ ಮಾರುತಿ ಸುಜುಕಿ ಇಕೋ (Maruti Suzuki Eeco) ವ್ಯಾನ್ 15 ವರ್ಷಗಳನ್ನು ಪೂರೈಸಿದೆ. 1.2 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ, ಇದು ಮಧ್ಯಮ ವರ್ಗದ ಕುಟುಂಬಗಳಿಗೆ ಪ್ರಾಯೋಗಿಕ ಆಯ್ಕೆಯಾಗಿ ಮಾರಾಟದಲ್ಲಿ ಮುನ್ನುಗುತ್ತಿದೆ. ಈ ವ್ಯ್ತಾನ್ ತನ್ನ ವಿಭಾಗದಲ್ಲಿ ಪ್ರಭಾವಶಾಲಿ 90 ಪ್ರತಿಶತ ಪಾಲನ್ನು ಹೊಂದಿದೆ.

ಜನಪ್ರಿಯ ಓಮ್ನಿ (Omni) ಬದಲಾಗಿ ಈ ಇಕೋ ವ್ಯಾನ್ ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಮಾರುತಿ ಸುಜುಕಿ ಇಕೋದ ಪ್ರಮುಖ ಸಾಮರ್ಥ್ಯವೆಂದರೆ ಅದರ ವೈವಿಧ್ಯತೆಯಾಗಿದೆ.. ಈ ಇಕೋ ವ್ಯಾನ್ 5-ಸೀಟುಗಳು, 7-ಸೀಟುಗಳು, ಕಾರ್ಗೋ, ಟೂರ್ ಮತ್ತು ಆಂಬ್ಯುಲೆನ್ಸ್ ಕಾನ್ಫಿಗರೇಶನ್‌ಗಳನ್ನು ಒಳಗೊಂಡಂತೆ 13 ವಿಭಿನ್ನ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ.

Maruti Suzuki Eeco

ಮಾರುತಿ ಸುಜುಕಿ ಇಕೋ ವ್ಯಾನ್ ಹೆಚ್ಚಿನ ಮೈಲೇಜ್ ನೊಂದಿಗೆ ಮತ್ತು ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಬರುತ್ತದೆ. ಇದು ಹೊಸ ಎಂಜಿನ್ ನೊಂದಿಗೆ ಸುಧಾರಿತ ಒಳಾಂಗಣ ಮತ್ತು ವರ್ಧಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ. ಮಾರುತಿ ಇಕೋ ವ್ಯಾನ್ ನಲ್ಲಿ 1.2-ಲೀಟರ್ ಸುಧಾರಿತ ಕೆ-ಸೀರಿಸ್ ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಅದು ಹೆಚ್ಚು ಶಕ್ತಿಶಾಲಿ ಮತ್ತು ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ.

ಈ ಎಂಜಿನ್ 6,000rpm ನಲ್ಲಿ 80.76 ಬಿಹೆಚ್‍ಪಿ ಪವರ್ ಮತ್ತು 3,000rpm ನಲ್ಲಿ 104.4 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇಕೋವ್ಯಾನ್ ಫ್ಯಾಕ್ಟರಿ ಅಳವಡಿಸಲಾಗಿರುವ ಸಿಎನ್‌ಜಿ ಕಿಟ್‌ನೊಂದಿಗೆ ಲಭ್ಯವಿದೆ. ಸಿಎನ್‌ಜಿ ಮೋಡ್‌ನಲ್ಲಿ, ಈ ಎಂಜಿನ್ 6000rpm ನಲ್ಲಿ 71.65 ಬಿಹೆಚ್‍ಪಿ ಪವರ್ ಮತ್ತು 3,000rpm ನಲ್ಲಿ 95 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Maruti Suzuki Eeco

ಇದರೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಮೂಲಕ ಮುಂಭಾಗದ ಚಕ್ರಗಳಿಗೆ ಪವರ್ ರವಾನೆಯಾಗುತ್ತದೆ. ಮಾರುತಿ ಸುಜುಕಿ ಇಕೋ ವ್ಯಾನ್ ಮಾದರಿಯ ಟೂರ್ ರೂಪಾಂತರವು ARAI ಪ್ರಮಾಣೀಕೃತ ಪೆಟ್ರೋಲ್‌ನೊಂದಿಗೆ 20.20 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಸಿಎನ್‌ಜಿ ಮಾದರಿಯು 27.05 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಪ್ಯಾಸೆಂಜರ್ ರೂಪಾಂತರವು ಪೆಟ್ರೋಲ್ ಮತ್ತು ಸಿಎನ್‌ಜಿ ಯೊಂದಿಗೆ ಅನುಕ್ರಮವಾಗಿ 19.7 ಕಿ,ಮೀ ಮತ್ತು 26.78 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಆಯಾಮಗಳ ವಿಷಯದಲ್ಲಿ, ಹೊಸ ಮಾರುತಿ ಇಕೋ 3675 ಎಂಎಂ ಉದ್ದ, 1825 ಎಂಎಂ ಎತ್ತರ ಮತ್ತು 1475 ಎಂಎಂ ಅಗಲವನ್ನು ಹೊಂದಿದೆ. ಇದರೊಂದಿಗೆ 2350 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಇನ್ನು ಆಂಬ್ಯುಲೆನ್ಸ್ ರೂಪಾಂತರದ ಎತ್ತರವು 1930 ಎಂಂಗೆ ಹೆಚ್ಚಿಸಲಾಗಿದೆ. ಈ ಇಕೋ ವ್ಯಾನ್ ನಲ್ಲಿ ಕ್ಯಾಬಿನ್ ಏರ್-ಫಿಲ್ಟರ್ ಮತ್ತು ಬ್ಯಾಟರಿ ಸೇವರ್ ಕಾರ್ಯದೊಂದಿಗೆ ಡೋಮ್ ಲ್ಯಾಂಪ್‌ನೊಂದಿಗೆ ಬರುತ್ತದೆ.

Maruti Suzuki Eeco

ವ್ಯಾನ್ ಕಾರಿನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಹೊಸ ಸ್ಟೀರಿಂಗ್ ವೀಲ್, ಎಸಿ ಮತ್ತು ಹೀಟರ್‌ಗಾಗಿ ರೋಟರಿ ಕಂಟ್ರೋಲ್ ಗಳನ್ನು ಹೊಂದಿದೆ. ಸುರಕ್ಷತೆ ಮತ್ತು ಭದ್ರತೆಗಾಗಿ, 2022ರ ಮಾರುತಿ ಇಕೋ ಎಂಜಿನ್ ಇಮೊಬಿಲೈಜರ್, ಇಲೆಮೊಟೈಡ್ ಹಝರ್ಡ್ ಸ್ವಿಚ್, ಡ್ಯುಯಲ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಸ್ಲೈಡಿಂಗ್ ಡೋರುಗಳು ಮತ್ತು ವಿಂಡೋಗಳನ್ನು ಚೈಲ್ಡ್ ಲಾಕ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಇತರವುಗಳನ್ನು ಪಡೆಯುತ್ತದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, January 14, 2025, 14:32 [IST]
English summary
Maruti suzuki eeco celebrates 15 years in india with 12 lakh sales details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+