Maruti Suzuki: ಬಡವರ ಪಾಲಿಗೆ ಬಂಗಾರವಾಗಲಿದೆ ಮಾರುತಿ ಹೊಸ ಹೈಬ್ರಿಡ್ ಕಾರು: ಟೆಸ್ಟಿಂಗ್ ಜೋರು!

ಮಾರುತಿ ಸುಜುಕಿ (Maruti Suzuki) ಕಾರುಗಳು ಭಾರತದಲ್ಲಿ ಮೊದಲಿನಿಂದಲು ಮಧ್ಯಮ ವರ್ಗದ ಫೇವರೆಟ್ ಕಾರುಗಳಾಗಿವೆ. ಅಗ್ಗದ ಬೆಲೆಗೆ ಆಕರ್ಷಕ ಫೀಚರ್ಸ್, ಅತ್ಯುತ್ತಮ ಮೈಲೇಜ್ ಸೇರಿದಂತೆ ಉತ್ತಮ ಡಿಸೈನ್ ಹೊಂದಿರುವ ಕಾರುಗಳನ್ನು ನೀಡುವ ಮೂಲಕ ಭಾರತೀಯರ ಮನಗೆದ್ದಿದೆ. ಇದೀಗ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಹೈಬ್ರಿಡ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಇವುಗಳ ಬೆಲೆ ಕೂಡ ದುಬಾರಿಯಾಗಿದೆ. ಈ ಹೈಬ್ರಿಡ್ ಕಾರುಗಳನ್ನು ಕೈಗೆಟುಕುವ ದರದಲ್ಲಿ ನೀಡಲು ಮಾರುತಿ ಸುಜುಕಿ ಕೆಲಸ ಮಾಡುತ್ತಿದೆ. ಇತ್ತೀಚೆಗೆ 'ಹೈಬ್ರಿಡ್' ಬ್ಯಾಡ್ಜ್ ಧರಿಸಿದ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಟೆಸ್ಟಿಂಗ್ ಕಾರು ಗುರುಗ್ರಾಮದಲ್ಲಿ ಕಾಣಿಸಿಕೊಂಡಿದೆ.

ಈ ಪರೀಕ್ಷಾ ಮಾದರಿಯು ಯಾವುದೇ ಮರೆಮಾಚುವಿಕೆ ಅಥವಾ ಟೆಸ್ಟಿಂಗ್ ಉಪಕರಣಗಳನ್ನು ಹೊಂದಿರಲಿಲ್ಲ, ಇದು ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ ಎಂಬುದನ್ನು ಸೂಚಿಸುತ್ತದೆ. ವಿನ್ಯಾಸ ಬದಲಾವಣೆಗಳು ಎಲ್ಲೂ ಕಾಣದಿದ್ದರೂ ಟೈಲ್ ಗೇಟ್ ಮೇಲೆ ಮಾತ್ರ 'ಹೈಬ್ರಿಡ್' ಬ್ಯಾಡ್ಜ್ ಅನ್ನು ಹೊಂದಿದೆ. ಉಳಿದಂತೆ ಯಾವುದೇ ಹೆಚ್ಚವರಿ ಡಿಸೈನ್ ಬದಲಾವಣೆ ಕಾಣಿಸಿಲ್ಲ.

maruti-suzuki-fronx-hybrid-spotted-while-testing-launch-soon

ಮಾರುತಿಯ ಮೊದಲ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್ ಝಡ್ 12 ಇ ಎಂಜಿನ್ ಅನ್ನು ಆಧರಿಸಿದೆ ಎಂದು ವರದಿಗಳು ತಿಳಿಸಿವೆ. ಇದರಲ್ಲಿ ಪೆಟ್ರೋಲ್ ಎಂಜಿನ್ ಜನರೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ವರದಿಗಳ ಪ್ರಕಾರ, ಮಾರುತಿ ಸುಜುಕಿ ತನ್ನ ಸಮೂಹ-ಮಾರುಕಟ್ಟೆ ಉತ್ಪನ್ನಗಳಿಗಾಗಿ ಸ್ಟ್ರಾಂಗ್ ಹೈಬ್ರಿಡ್ ಪವರ್ ಟ್ರೇನ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಹೊಸ ಪವರ್ ಟ್ರೇನ್ ಫ್ರಾಂಕ್ಸ್ ಫೇಸ್ ಲಿಫ್ಟ್ ಮೂಲಕ ಪಾದಾರ್ಪಣೆ ಮಾಡಬಹುದು.

ಈ ಕಾರಿನ ಪರೀಕ್ಷೆಗಳು ಜೋರಾಗಿ ನಡೆಯುತ್ತಿದ್ದು, ಮಾರುತಿಯ ಕೈಗೆಟುಕುವ ಹೈಬ್ರಿಡ್ ಕಾರುಗಳು ಶೀಘ್ರದಲ್ಲೇ ಬಿಡುಗಡೆಯಾಗುವುದು ಖಚಿತವಾಗಿದೆ. ವಾಹನ ತಯಾರಕರು ಕಾಂಪ್ಯಾಕ್ಟ್ ಕಾರುಗಳಿಗಾಗಿ ಆಂತರಿಕ ಹೈಬ್ರಿಡ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಫ್ರಾಂಕ್ಸ್ ಹೈಬ್ರಿಡ್ ಫೇಸ್ ಲಿಫ್ಟ್ ಆವೃತ್ತಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

maruti-suzuki-fronx-hybrid-spotted-while-testing-launch-soon

ಇದು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಅನಾವರಣವಾಗಬಹುದು. ಮಾರುತಿ ಸುಜುಕಿ ಹೊಸ ಹೈಬ್ರಿಡ್ ಸಿಸ್ಟಮ್‌ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಮುಂಬರುವ ದಿನಗಳಲ್ಲಿ ಮಾರುತಿಯಿಂದ ಅಧಿಕೃತ ಮಾಹಿತಿ ಹೊರಬರಬಹುದು. ಒಂದು ವೇಳೆ ಎಲ್ಲವು ಅಂದುಕೊಂಡಂತಾದರೆ ನಮಗಿರುವ ವರದಿಗಳ ಪ್ರಕಾರ, ಫ್ರಾಂಕ್ಸ್ ಹೈಬ್ರಿಡ್ 2026 ರಲ್ಲಿ ಮಾರಾಟವಾಗಬಹುದು.

ಪ್ರಸ್ತುತ ಮಾರಾಟದಲ್ಲಿರುವ ಮಾರುತಿ ಸುಜುಕಿ ಫ್ರಾಂಕ್ಸ್ ಕಾರು, ರೂ.7.51 ಲಕ್ಷದಿಂದ ರೂ.13.04 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಹೆಡ್ಸ್-ಅಪ್ ಡಿಸ್‌ಪ್ಲೇಯಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಹಿಲ್-ಹೋಲ್ಡ್ ಅಸಿಸ್ಟ್ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಈ ಮೂಲಕ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ.

ಈ ಕಾರು 1-ಲೀಟರ್ ಟರ್ಬೊ ಪೆಟ್ರೋಲ್, 1.2-ಲೀಟರ್ ಡುಯಲ್ಜೆಟ್ ಪೆಟ್ರೋಲ್ ಮತ್ತು 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಆಟೋಮೆಟಿಕ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 20.1 ರಿಂದ 28.51 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: Team BHP
Link: https://www.team-bhp.com/news/scoop-maruti-suzuki-fronx-hybrid-spotted-testing

Article Published On: Wednesday, January 29, 2025, 14:36 [IST]
English summary
Maruti suzuki fronx hybrid spotted while testing launch soon
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+