Maruti: ಮಾರುತಿ ಹೈಬ್ರಿಡ್ ಕಾರು ಪರೀಕ್ಷೆ ಜೋರು: 35 ಕಿ.ಮೀ ಮೈಲೇಜ್... ಶೀಘ್ರದಲ್ಲೆ ಬಿಡುಗಡೆ
ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) 2026 ರಲ್ಲಿ ಪ್ರಮುಖ ಅಪ್‌ಗ್ರೇಡ್‌ಗೆ ಸಜ್ಜಾಗಿದ್ದು, ಲೆವೆಲ್ 2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು ಸ್ಟ್ರಾಂಗ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಬಿಡುಗಡೆಯಾಗಲಿದೆ. ಈ ಫೇಸ್‌ಲಿಫ್ಟ್ ಕಾಂಪ್ಯಾಕ್ಟ್ ಕಾರು, ತನ್ನ SUV ವಿಭಾಗದಲ್ಲಿ ಸುರಕ್ಷತೆ ಮತ್ತು ಇಂಧನ ದಕ್ಷತೆಯತ್ತ ಬ್ರ್ಯಾಂಡ್‌ನ ಮುನ್ನಡೆಯನ್ನು ಸೂಚಿಸುತ್ತದೆ. ಟಾಟಾ ಮತ್ತು ಹುಂಡೈನಂತಹ ಮುಂಬರುವ ಮಾಡಲ್‌ಗಳಿಗೆ ಪೈಪೋಟಿ ನೀಡಲು ಮಾರುತಿ ಸುಜುಕಿ ಈ ಕಾರನ್ನು ಸಜ್ಜುಗೊಳಿಸುತ್ತಿದೆ. ಹೊಸ ಮುಂಬರಲಿರುವ ಫೇಸ್‌ಲಿಫ್ಟ್ ಫ್ರಾಂಕ್ಸ್ ಎಸ್‌ಯುವಿ ಕುರಿತ ಹೆಚ್ಚಿನ ವಿವರಗಳು ಇಲ್ಲಿವೆ.
ಫ್ರಾಂಕ್ಸ್ 2026 ಮುಖ್ಯಾಂಶಗಳು
ಹೈಬ್ರಿಡ್ ಎಂಜಿನ್: ಸುಜುಕಿ ಮೋಟಾರ್ ಕಾರ್ಪೊರೇಷನ್ ಈಗಾಗಲೇ ಮುಂದಿನ ತಲೆಮಾರಿನ 48 ವಿ ಸೂಪರ್ ಎನೆ-ಚಾರ್ಜ್ (ಎಸ್ಇಸಿ) ಹೈಬ್ರಿಡ್ ಸಿಸ್ಟಮ್‌ನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದೆ. ಇದನ್ನು ವಿಶೇಷವಾಗಿ ಹಗುರವಾದ ಮತ್ತು ಕೈಗೆಟುಕುವ ವಾಹನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಟೊಯೊಟಾದ ಅಟ್ಕಿನ್ಸನ್ ಸೈಕಲ್ ಪವರ್ ಟ್ರೇನ್ ಗಿಂತ ಹೆಚ್ಚು ಪರಿಣಾಮಕಾರಿ ಮತ್ತು ಕೈಗೆಟುಕುತ್ತದೆ ಎಂದು ಹೇಳಲಾಗುತ್ತದೆ.

ಅಲ್ಲದೆ ಫ್ರಾಂಕ್ಸ್ ಕಂಪನಿಯ ಆಂತರಿಕವಾಗಿ ಅಭಿವೃದ್ಧಿಪಡಿಸಿದ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್ ಒಳಗೊಂಡಿರುವ ಮೊದಲ ಮಾರುತಿ ಕಾರಾಗಲಿದೆ. ಇದು ಪರಿಚಿತ 1.2 - ಲೀಟರ್ ಝಡ್- 12 -ಇ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಸ್ಟ್ರಾಂಗ್ ಹೈಬ್ರಿಡ್ ಪವರ್ ಟ್ರೇನ್ ಮಿಡ್ ಲೈಫ್ ಫೇಸ್ ಲಿಫ್ಟ್ ನವೀಕರಣದೊಂದಿಗೆ ಬಿಡುಗಡೆಯಾಗಲಿದೆ.
ಈ ಹೈಬ್ರಿಡ್ ತಂತ್ರಜ್ಞಾನದ ಪ್ರಮುಖ ಪ್ರಯೋಜನವೆಂದರೆ ಸುಧಾರಿತ ಮೈಲೇಜ್ ಆಗಿದ್ದು, ಸುಮಾರು 30 - 35 ಕಿ.ಮೀ ಮೈಲೇಜ್ ನಿರೀಕ್ಷಿಸಬಹುದು. ಮಾರುತಿ ಸುಜುಕಿ ಫ್ರಾಂಕ್ಸ್ ಬಿಡುಗಡೆ ನಂತರ, ಅದೇ ಪವರ್ ಟ್ರೇನ್ ಅನ್ನು ಹೊಸ ಬಲೆನೊ (2026), ಸ್ವಿಫ್ಟ್ (2027) ಮತ್ತು ಬ್ರೆಝಾ (2029) ನಲ್ಲೂ ನೀಡಲಾಗುವುದು ಎಂದು ವರದಿಯಾಗಿದೆ.

ADAS ಲೆವೆಲ್ 2: ಫೇಸ್‌ಲಿಫ್ಟ್ ಲೇನ್-ಕೀಪ್ ಅಸಿಸ್ಟ್, ಅಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಟ್ರಾಫಿಕ್ ಸೈನ್ ರೆಕಗ್ನಿಷನ್ ಸೇರಿದಂತೆ ವೈಶಿಷ್ಟ್ಯಪೂರ್ಣ ADAS ಅನ್ನು ಫ್ರಾಂಕ್ಸ್‌ನಲ್ಲಿ ತರುತ್ತದೆ. ಭಾರತದಲ್ಲಿ ಇಂತಹ ಮುಂದುವರಿದ ಸುರಕ್ಷತಾ ಸೂಟ್ ಅನ್ನು ನೀಡುವ ಮೊದಲ ಸಬ್ - 4 ಮೀ ಎಸ್‌ಯುವಿ ಇದಾಗಿರಲಿದೆ ಎಂದು ಹೇಳಲಾಗುತ್ತಿದೆ.
ಸುರಕ್ಷತೆ ಮತ್ತು ವೈಶಿಷ್ಟ್ಯಗಳು: ಆರು ಏರ್‌ಬ್ಯಾಗ್‌ಗಳು, ಇಎಸ್‌ಪಿ, ಹಿಲ್ ಹೋಲ್ಡ್, 360 - ಡಿಗ್ರಿ ಕ್ಯಾಮೆರಾ ಮತ್ತು ಅಪ್‌ಗ್ರೇಡ್ ಮಾಡಿದ ಕನೆಕ್ಟೆಡ್-ಕಾರ್ ತಂತ್ರಜ್ಞಾನವನ್ನು ನಿರೀಕ್ಷಿಸಲಾಗಿದೆ. ಇಂಟೀರಿಯರ್‌ನಲ್ಲಿ ಹೊಸ ವಸ್ತುಗಳು ಮತ್ತು ಎಲೆಕ್ಟ್ರಿಕ್ ಸನ್‌ರೂಫ್, ರಿಫ್ರೆಶ್ ಮಾಡಿದ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಹೆಚ್ಚಿನ ಪ್ರೀಮಿಯಂ ಫಿನಿಶ್‌ಗಳಂತಹ ವೈಶಿಷ್ಟ್ಯಗಳ ಅಪ್‌ಗ್ರೇಡ್‌ಗಳನ್ನು ಪಡೆಯುತ್ತಿದೆ.

ವಿನ್ಯಾಸ ನವೀಕರಣಗಳು: ಪರಿಷ್ಕೃತ ಗ್ರಿಲ್, ಬಂಪರ್‌ಗಳು ಮತ್ತು ಹೊಸ ಅಲಾಯ್ ವೀಲ್‌ಗಳನ್ನು ಮುಂಬರುವ ಫ್ರಾಂಕ್ಸ್‌ನಲ್ಲಿ ನೋಡಲಿದ್ದೇವೆ. ಜೊತೆಗೆ ಹೆಚ್ಚು ಪ್ರೀಮಿಯಂ ಭಾವನೆಗಾಗಿ ವಿನ್ಯಾಸಗೊಳಿಸಲಾದ ನವೀಕರಿಸಿದ ಕ್ಯಾಬಿನ್ ಸಹ ಹೊಂದಿರಲಿದೆ. ಒಟ್ಟಾರೆ ಪ್ರಸ್ತುತ ಮಾರಾಟದಲ್ಲಿರುವ ಫ್ರಾಂಕ್ಸ್‌ಗಿಂತ ಹೆಚ್ಚು ಆಕರ್ಷಕ ಪ್ರೀಮಿಯಂ ಲುಕ್ ಪಡೆಯಲಿದೆ.
ಬಿಡುಗಡೆ ಮತ್ತು ಬೆಲೆ: ಫ್ರಾಂಕ್ಸ್ ಹೈಬ್ರಿಡ್ 2026 ಮಧ್ಯದಲ್ಲಿ ಬಿಡುಗಡೆಯಾಗಲಿದೆ, ಬೆಲೆಗಳು ಪ್ರಸ್ತುತ ಪೆಟ್ರೋಲ್ ಮತ್ತು ಸಿಎನ್‌ಜಿ ಮಾಡಲ್‌ಗಳಿಗಿಂತ ಸ್ವಲ್ಪ ಹೆಚ್ಚಿರುವ ನಿರೀಕ್ಷೆಯಿದೆ, ಇದರ ಆರಂಭಿಕ ಬೆಲೆಯು ರೂ. 11 ಲಕ್ಷದೊಳಗೆ (ಎಕ್ಸ್-ಶೋರೂಮ್) ಇರುತ್ತದೆ. ನಿಖರವಾದ ವಿವರಗಳನ್ನು ಬಿಡುಗಡೆ ಸಮಯದಲ್ಲಿ ಬಹಿರಂಗಪಡಿಸಲಾಗುವುದು.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಮಾರುತಿ ಸುಜುಕಿ ಫ್ರಾಂಕ್ಸ್ ಬಿಡುಗಡೆ ನಂತರ ಇದು ಭಾರತದ ಸುರಕ್ಷಿತ ಮತ್ತು ಅತ್ಯಂತ ಇಂಧನ - ಸಮರ್ಥ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಒಂದಾಗಿ ಗುರ್ತಿಸಿಕೊಳ್ಳಲಿದೆ. ಹೈಬ್ರಿಡ್ ಪವರ್ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಸಬ್ - 4 ಮೀ. ವಿಭಾಗದಲ್ಲಿ ತೀವ್ರ ಪೈಪೋಟಿ ನೀಡಲಿದೆ.


Click it and Unblock the Notifications








