ಭಾರತೀಯರಿಗೆ ಮೋಸವಾಗುತ್ತಿದೆಯೇ? ಇಲ್ಲಿ ಕಳಪೆ ಗುಣಮಟ್ಟ: ಜಪಾನ್‌ಗೆ ಮಾತ್ರ ಸುರಕ್ಷಿತ ಕಾರು!

ಭಾರತದಲ್ಲಿ ಮಾರುತಿ ಸುಜುಕಿ (Maruti Suzuki) ಕಾರುಗಳಿಗೆ ತುಂಬಾ ಬೇಡಿಕೆಯಿದ್ದು, ಮಾರಾಟದಲ್ಲಿ ನಂ.1 ಕಂಪನಿಯಾಗಿ ಮುಂದುವರಿಯುತ್ತಿದೆ. ಈ ಮಟ್ಟದ ಬೇಡಿಕೆಗೆ ಪ್ರಮುಖ ಕಾರಣವೆಂದರೆ ಅಗ್ಗದ ಬೆಲೆ, ಅತ್ಯುತ್ತಮ ಮೈಲೇಜ್ ಹಾಗೂ ದೇಶಾದ್ಯಂತ ಕಂಪನಿ ನೀಡುತ್ತಿರುವ ಮಾರಾಟದ ನಂತರದ ಸೇವೆಯು ಗ್ರಾಹಕರನ್ನು ಕಟ್ಟಿಹಾಕಿದೆ. ಭರ್ಜರಿ ಲಾಭ ತಂದುಕೊಡುತ್ತಿರುವ ಭಾರತವು ಕಂಪನಿಗೆ ಅಮೂಲ್ಯ ಮಾರುಕಟ್ಟೆಯಾಗಿದೆ. ಆದರೆ ಭಾರತದಲ್ಲಿ ಮಾರುತಿ ಸುಜುಕಿ ಕಂಪನಿಗಿರುವ ಒಂದೇ ಒಂದು ಹಿನ್ನಡೆಯೆಂದರೆ ಸುರಕ್ಷತೆ, ಮಾರುತಿ ಕಾರುಗಳು ಸುರಕ್ಷತೆ ವಿಚಾರದಲ್ಲಿ ಹಿಂದುಳಿದವೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಡಿಜೈರ್ ಬಿಟ್ಟರೆ ಕಂಪನಿಯ ಇನ್ಯಾವುದೇ ಕಾರು ಸುರಕ್ಷತೆಯಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್‌ ಗಳಿಸಿಲ್ಲ.

ಹಾಗೆಯೇ ಮಾರತಿ ಬ್ರೆಝಾ ಕೂಡ 4-ಸ್ಟಾರ್ ಸೇಫ್ಟಿ ರೇಟಿಂಗ್ ಗಳಿಸಿದ ಮಾರುತಿಯ ಮೊದಲ ಕಾರಾಗಿದೆ. ಉಳಿದಂತೆ ಸುರಕ್ಷತೆಯಲ್ಲಿ ಇನ್ಯಾವುದೇ ಕಾರು ಕೂಡ ಉತ್ತಮ ಗುಣಮಟ್ಟವನ್ನು ಹೊಂದಿಲ್ಲ. ಆದರೆ ಭಾರತದಲ್ಲಿ ನಮಗೆ ಸಿಗುವ ಕಳಪೆ ಗುಣಮಟ್ಟದ ಬಹುತೇಕ ಮಾರುತಿ ಕಾರುಗಳು ಜಪಾನ್‌ನಲ್ಲಿ ಕನಿಷ್ಠ 4-ಸ್ಟಾರ್ ಸೇಫ್ಟಿ ರೇಟಿಂಗ್ ಗಳಿಸುತ್ತವೆ. ಕಾರಣ ಗೊತ್ತಾ?

maruti-suzuki-indian-specs-and-japan-spec-models-comparison

ಇದೇ ಸುಜುಕಿ ಕಂಪನಿ ಭಾರತದಲ್ಲಿ ಮಾರಾಟವಾಗುವ ಅದೇ ಕಾರುಗಳನ್ನು ಜಪಾನ್‌ನಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದೆ. ಉದಾಹರಣೆಗೆ ಜಪಾನ್‌ನಲ್ಲಿ, ಸುಜುಕಿ ಫ್ರಾಂಕ್ಸ್ ಬೆಲೆ 2,541,000 ಯೆನ್(ಅಂದಾಜು 14.25 ಲಕ್ಷ ರೂ.) ಮತ್ತು 2,739,000 ಯೆನ್ (ಅಂದಾಜು 15.36 ಲಕ್ಷ ರೂ.) ನಡುವೆ ಇದೆ. ಅದೇ ಭಾರತದಲ್ಲಿ ಬೇಸ್‌ ವೇರಿಯೆಂಟ್ 7.52 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ, ಟಾಪ್ ವೇರಿಯೆಂಟ್ ಬೆಲೆಯು ರೂ.9.38 (ಎಕ್ಸ್‌ ಶೋರೂಂ)ಲಕ್ಷಗಳಾಗಿದೆ.

ಮಾರುತಿ ಫ್ರಾಂಕ್ಸ್ ಸುರಕ್ಷತಾ ಪರೀಕ್ಷೆಯನ್ನು ಇನ್ನೂ ಭಾರತದಲ್ಲಿ ನಡೆಸಿಲ್ಲ, ಆದರೆ ಜಪಾನ್‌ನಲ್ಲಿ ಇದೇ ಕಾರು 4-ಸ್ಟಾರ್ ಸೇಫ್ಟಿ ರೇಟಿಂಗ್ ಗಳಿಸಿದೆ. ಇನ್ನೂ ಉತ್ತಮ ಉದಾಹರಣೆ ಹೇಳುವುದಾದರೆ, ಭಾರತದ ಹಳೆಯ ಜೆನ್ ಮಾರುತಿ ಸ್ವಿಫ್ಟ್ ಕೇವಲ 1-ಸ್ಟಾರ್ ಸೇಫ್ಟಿ ರೇಟಿಂಗ್ ಗಳಿಸಿತ್ತು, ಇದೇ ಸುಜುಕಿ ಸ್ವಿಫ್ಟ್ ಜಪಾನ್‌ನಲ್ಲಿ 4-ಸ್ಟಾರ್ ಸೇಫ್ಟಿ ರೇಟಿಂಗ್ ಗಳಿಸಿದೆ. ಹೆಚ್ಚಿನ ಗುಣಮಟ್ಟವಿರುವುದರಿಂದಲೂ ಜಪಾನ್‌ ಮಾಡೆಲ್ ಬೆಲೆ ಹೆಚ್ಚಾಗುತ್ತದೆ.

maruti-suzuki-indian-specs-and-japan-spec-models-comparison

ಹೆಚ್ಚಿನ ಬೆಲೆಗೆ ಇನ್ನೂ ಪ್ರಮುಖ ಕಾರಣಗಳು

ವಿಭಿನ್ನ ಪವರ್ ಟ್ರೇನ್ ಆಯ್ಕೆಗಳು: ಜಪಾನ್‌ನಲ್ಲಿ, ಫ್ರಾಂಕ್ಸ್ 1.5-ಲೀಟರ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದೆ, ಇದು ಕೂಡ ಹೆಚ್ಚಿನ ಬೆಲೆಗೆ ಕಾರಣವಾಗಿದೆ. ಮತ್ತೊಂದೆಡೆ, ಭಾರತೀಯ ಮಾದರಿಯು 1.2-ಲೀಟರ್ NA ಪೆಟ್ರೋಲ್ ಎಂಜಿನ್ ಮತ್ತು 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದೆ, ಇದು ಸಾಮಾನ್ಯವಾಗಿ ಕಡಿಮೆ ವೆಚ್ಚದಾಯಕವಾಗಿದೆ.

ಸುಧಾರಿತ ವೈಶಿಷ್ಟ್ಯಗಳು: ಜಪಾನಿನ ವೇರಿಯೆಂಟ್ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹೀಟೆಡ್ ಸೀಟ್‌ಗಳು ಮತ್ತು ಆಲ್‌ಗ್ರಿಪ್ ಎಡಬ್ಲ್ಯುಡಿ ತಂತ್ರಜ್ಞಾನ ಸೇರಿದಂತೆ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಫೀಚರ್ಸ್ ಜಪಾನಿನ ಫ್ರಾಂಕ್ಸ್ ಹೆಚ್ಚಿನ ಬೆಲೆಗೆ ಕಾರಣವಾಗುತ್ತದೆ. ಭಾರತೀಯ ಫ್ರಾಂಕ್ಸ್‌ನಲ್ಲಿ ಬಹುತೇಕ ಈ ಫೀಚರ್ಸ್ ಕಾಣುವುದಿಲ್ಲ.

maruti-suzuki-indian-specs-and-japan-spec-models-comparison

ಆಮದು ಮತ್ತು ಉತ್ಪಾದನಾ ವೆಚ್ಚಗಳು: ಫ್ರಾಂಕ್ಸ್ ಕಾರು ಭಾರತದಲ್ಲಿ ಉತ್ಪಾದನೆಯಾಗುವುದರಿಂದ ಇಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ. ಹಾಗೆಯೇ ಇದೇ ಕಾರನ್ನು ಜಪಾನ್ ಮಾರುಕಟ್ಟೆಗಾಗಿ ಭಾರತದಲ್ಲಿ ನಿರ್ಮಾಣ ಮಾಡಿ ಅಲ್ಲಿಗೆ ರಫ್ತು ಮಾಡುವುದರಿಂದ ಜಪಾನ್‌ ಆಮದು ಸುಂಕ, ಲಾಜಿಸ್ಟಿಕ್ಸ್, ತೆರಿಗೆಗಳು ಮತ್ತು ವ್ಯಾಪಾರ ಮಾಡುವ ಒಟ್ಟಾರೆ ವೆಚ್ಚದಂತಹ ಅಂಶಗಳಿಂದ ಬೆಲೆ ಹೆಚ್ಚಾಗುತ್ತದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, June 10, 2025, 12:26 [IST]
English summary
Maruti suzuki indian specs and japan spec models comparison
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+