ಸೋತು ಸುಣ್ಣವಾದ ಕಾರಿಗೆ ಮತ್ತೆ ಕೈ ಹಿಡಿದ ಭಾರತೀಯ ಗ್ರಾಹಕರು.. ಮಾರಾಟ ಸಂಖ್ಯೆ ದಿಢೀರ್ ಹೆಚ್ಚಳ!
ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಜನಪ್ರಿಯ ಆಫ್-ರೊಡ್ ಎಸ್‌ಯುವಿಯಾಗಿದೆ. ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ದೊರೆಯುತ್ತದೆ. ಆದರೂ ಕಳೆದ ಒಂದು ವರ್ಷದಿಂದ ಈ ಕಾರಿನ ಮಾರಾಟದಲ್ಲಿ ಹಾವು - ಏಣಿ ಆಟ ಮುಂದುವರಿದಿದೆ. ಸದ್ಯ, ಡಿಸೆಂಬರ್‌ನಲ್ಲಿ 'ಜಿಮ್ನಿ' ಮಾರಾಟ ಚೇತರಿಸಿಕೊಂಡಿದ್ದು, ವರ್ಷಾಂತ್ಯವಾದರೂ ನೀರಿಕ್ಷೆಗೂ ಮೀರಿದ ಪ್ರಗತಿಯನ್ನು ಸಾಧಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಕಳೆದ ತಿಂಗಳು (ಡಿಸೆಂಬರ್ - 2024) ಮಾರುತಿ ಸುಜುಕಿ ಇಂಡಿಯಾ, 1,100 ಯುನಿಟ್ 'ಜಿಮ್ನಿ' ಎಸ್‌ಯುವಿಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದೆ. 2023ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 730 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 51% ಬೆಳವಣಿಗೆಯನ್ನು ಕಂಡಿದೆ.

ನವೆಂಬರ್‌ನಲ್ಲಿ 988 ಯುನಿಟ್, ಅಕ್ಟೋಬರ್‌ನಲ್ಲಿ 1,211 ಯುನಿಟ್, ಸೆಪ್ಟೆಂಬರ್‌ನಲ್ಲಿ 599 ಯುನಿಟ್, ಆಗಸ್ಟ್‌ನಲ್ಲಿ 592 ಯುನಿಟ್ ಮತ್ತು ಜುಲೈನಲ್ಲಿ 2,429 ಮಾರುತಿ ಸುಜುಕಿ ಜಿಮ್ನಿ ಎಸ್‌ಯುವಿಗಳು ಮಾರಾಟವಾಗಿದ್ದವು. ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹೊಚ್ಚ ಹೊಸ 'ಜಿಮ್ನಿ' ಕಾರು, ರೂ.12.74 ಲಕ್ಷದಿಂದ ರೂ.14.95 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಒಳಗೊಂಡಿದೆ.
ಈ ಮಾರುತಿ ಜಿಮ್ನಿ (5-ಡೋರ್) ಎಸ್‌ಯುವಿ ಹೊರ ಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಪಡೆದಿದೆ. ಜಿಟಾ (Zeta) ಮತ್ತು ಆಲ್ಪಾ (Alpha) ಎಂಬ ಎರಡು ರೂಪಾಂತರಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಜೊತೆಗೆ ಸಿಜ್ಲಿಂಗ್ ರೆಡ್, ಕೈನೆಟಿಕ್ ಯೆಲ್ಲೋ, ಗ್ರಾನೈಟ್ ಗ್ರೇ, ನೆಕ್ಸಾ ಬ್ಲೂ ಹಾಗೂ ಪರ್ಲ್ ಆರ್ಕ್ಟಿಕ್ ವೈಟ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳನ್ನು ಹೊಂದಿದೆ.

ನೂತನ ಜಿಮ್ನಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 105 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 134 ಎನ್ಎಂ (ನ್ಯೂಟನ್ ಮೀಟರ್) ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 4ಡಬ್ಲ್ಯೂಡಿ (ಫೋರ್ ವೀಲ್ ಡ್ರೈವ್) ಟೆಕ್ನಾಲಜಿಯನ್ನು ತನ್ನದಾಗಿಸಿಕೊಂಡಿದೆ. 16 ರಿಂದ 17 ಕೆಎಂಪಿಎಲ್‌ವರೆಗೂ ಮೈಲೇಜ್ ಕೊಡುತ್ತದೆ.
ಈ ಕಾರಿನಲ್ಲಿ 4 ಮಂದಿ ಸುಲಭವಾಗಿ ಓಡಾಟ ನಡೆಸಬಹುದು. ವಾರಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು 211 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. 9-ಇಂಚಿನ ಟಚ್‌ಸ್ಕ್ರೀನ್ ಜೊತೆಗೆ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 4-ಸ್ಪೀಕರ್‌ಗಳು, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್ ಹಾಗೂ ಆಟೋ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ ಮಾರುತಿ ಜಿಮ್ನಿ ಎಸ್‌ಯುವಿ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಸೈಡ್ ಇಂಪ್ಯಾಕ್ಟ್ ಡೋರ್ ಬಿಮ್ಸ್, 3-ಪಾಯಿಂಟ್ ಎಮರ್ಜೆನ್ಸಿ ಲಾಕಿಂಗ್ ರಿಟ್ರಾಕ್ಟರ್ ಸೀಟ್‌ಬೆಲ್ಟ್‌ಗಳು ಮತ್ತು ರೇರ್ ವ್ಯೂ ಕ್ಯಾಮೆರಾ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನು, ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಕಾರಿಗೆ ಮಹೀಂದ್ರಾ ಥಾರ್ ರಾಕ್ಸ್ ಹಾಗೂ ಫೋರ್ಸ್ ಗೂರ್ಖಾ ಎಸ್‌ಯುವಿಗಳು ಕೂಡ ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ. ಪ್ರಸ್ತುತ ಜಿಮ್ನಿ ಮಾರಾಟ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಈ ಜನವರಿ ತಿಂಗಳಲ್ಲಿ ಮತ್ತಷ್ಟು ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಳ್ಳುವ ನಿರೀಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications