Maruti Suzuki: ಜಿಎಸ್‌ಟಿ ಕಡಿತ.. ಮಾರುತಿಯಿಂದ ದರ ಪರಿಷ್ಕರಣೆ, 3.50 ಲಕ್ಷ ರೂಪಾಯಿಗೆ ಹೊಸ ಕಾರು.. ಯಾವುದಕ್ಕೆ ಎಷ್ಟು?

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki India Limited), ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಕೇಂದ್ರ ಸರ್ಕಾರವು ಹೊಸ ಕಾರುಗಳ ಖರೀದಿ ಮೇಲಿನ ಜಿಎಸ್‌ಟಿ (GST) ಪರಿಷ್ಕರಿಸಿದೆ. ಅದರ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವುದಕ್ಕೆ ಕಂಪನಿಯು ಮುಂದಾಗಿದೆ. ಎಲ್ಲ ಕಾರುಗಳ ಬೆಲೆಯನ್ನು ದೊಡ್ಡ ಮಟ್ಟದಲ್ಲಿ ಇಳಿಸಿದೆ. ನೂತನ ದರಗಳು ಸೆಪ್ಟೆಂಬರ್ 22ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ.

ಮಾರುತಿ ಸುಜುಕಿಯು ಕಾರುಗಳ ಬೆಲೆಯನ್ನು ರೂ.46,400 ರಿಂದ ರೂ.1.29 ಲಕ್ಷವರೆಗೆ ಇಳಿಸಿದೆ. ಕಂಪನಿಯ ಎಸ್-ಪ್ರೆಸ್ಸೊ, ಆಲ್ಟೊ ಕೆ10, ಸೆಲೆರಿಯೊ, ವ್ಯಾಗನ್ಆರ್, ಇಗ್ನಿಸ್, ಸ್ವಿಫ್ಟ್, ಬಲೆನೊ, ಟೂರ್ ಎಸ್, ಡಿಜೈರ್, ಫ್ರಾಂಕ್ಸ್, ಬ್ರೆಝಾ, ಗ್ರ್ಯಾಂಡ್ ವಿಟಾರಾ, ಜಿಮ್ನಿ, ಎರ್ಟಿಗಾ, ಎಕ್ಸ್‌ಎಲ್6, ಇನ್ವಿಕ್ಟೊ ಹಾಗೂ ಇಕೋ ಮಾಡೆಲ್‌ಗಳ ದರವು ಕಡಿಮೆಯಾಗಿದೆ.

Maruti Suzuki Price Cuts Up To Rs 1 29 Lakh Alto K10 Celerio WagonR Swift Dzire Brezza To Eeco

ಅರೆನಾ ಡೀಲರ್‌ಶಿಪ್‌ನಲ್ಲಿ ಮಾರಾಟಗೊಳ್ಳುವ ಕಾರುಗಳ ಹೊಸ ದರ ಪಟ್ಟಿ (ಎಕ್ಸ್-ಶೋರೂಂ):

ಎಸ್-ಪ್ರೆಸ್ಸೊ - ರೂ.3.50 ಲಕ್ಷ ಆರಂಭಿಕ ಬೆಲೆ (ರೂ.1.29 ಲಕ್ಷ ಇಳಿಕೆ)
ಆಲ್ಟೊ ಕೆ10 - ರೂ.3.70 ಲಕ್ಷ (ರೂ.1.07 ಲಕ್ಷ ಕಡಿಮೆ)
ಸೆಲೆರಿಯೊ - ರೂ.4.70 ಲಕ್ಷ (ರೂ.94,100 ಇಳಿಕೆ)
ವ್ಯಾಗನ್ಆರ್ - ರೂ.4.99 ಲಕ್ಷ (ರೂ.79,600 ಕಡಿಮೆ)
ಸ್ವಿಫ್ಟ್ - ರೂ.5.79 ಲಕ್ಷ (ರೂ.84,600 ಇಳಿಕೆ)
ಡಿಜೈರ್ - ರೂ.6.25 ಲಕ್ಷ (ರೂ.87,700 ಕಡಿಮೆ)
ಬ್ರೆಝಾ - ರೂ.8.26 ಲಕ್ಷ (ರೂ.112,700 ಇಳಿಕೆ)
ಎರ್ಟಿಗಾ - ರೂ.8.80 ಲಕ್ಷ (ರೂ.46,400 ಕಡಿಮೆ)
ಇಕೋ - ರೂ.5.18 ಲಕ್ಷ (ರೂ.68,000 ಇಳಿಕೆ)

ನೆಕ್ಸಾ ಡೀಲರ್‌ಶಿಪ್‌ನಲ್ಲಿ ಮಾರಾಟಗೊಳ್ಳುವ ಕಾರುಗಳ ನೂತನ ದರ ಪಟ್ಟಿ (ಎಕ್ಸ್-ಶೋರೂಂ):

ಇಗ್ನಿಸ್ - ರೂ.5,35 ಲಕ್ಷ ಆರಂಭಿಕ ಬೆಲೆ (ರೂ.71,300 ಕಡಿಮೆ)
ಬಲೆನೊ - ರೂ.5.99 ಲಕ್ಷ (ರೂ.86,100 ಇಳಿಕೆ)
ಫ್ರಾಂಕ್ಸ್ - ರೂ.6.85 ಲಕ್ಷ (ರೂ.1.12 ಲಕ್ಷ ಕಡಿಮೆ)
ಗ್ರ್ಯಾಂಡ್ ವಿಟಾರಾ - ರೂ.10.76 ಲಕ್ಷ (ರೂ.1.7 ಲಕ್ಷ ಇಳಿಕೆ)
ಜಿಮ್ನಿ - ರೂ.12.31 ಲಕ್ಷ (ರೂ.51,900 ಕಡಿಮೆ)
ಎಕ್ಸ್‌ಎಲ್6 - ರೂ.11.52 ಲಕ್ಷ (ರೂ.52,000 ಇಳಿಕೆ)
ಇನ್ವಿಕ್ಟೊ - ರೂ.24.97 ಲಕ್ಷ (ರೂ.61,700 ಕಡಿಮೆ)

Maruti Suzuki Price Cuts Up To Rs 1 29 Lakh Alto K10 Celerio WagonR Swift Dzire Brezza To Eeco

ಈ ಬಗ್ಗೆ ಮಾರುತಿ ಸುಜುಕಿ ಇಂಡಿಯಾದ ಮಾರ್ಕೆಟಿಂಗ್ & ಸೇಲ್ಸ್ ವಿಭಾಗದ ಹಿರಿಯ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. 'ಪ್ರತಿ 1,000ಕ್ಕೆ 34 ಜನರು ಮಾತ್ರ ಕಾರುಗಳನ್ನು ಹೊಂದಿದ್ದಾರೆ. ಇದು ದ್ವಿಚಕ್ರ ವಾಹನ ಸವಾರರು ಕಾರುಗಳ ಮಾಲೀಕರಾಗಲು ಪರ್ವ ಕಾಲ' ಎಂದು ಹೇಳಿದ್ದಾರೆ.

ಸೆ.3ರಂದು ನಡೆದ ಸರಕು ಮತ್ತು ಸೇವಾ ತೆರಿಗೆ (GST) ಸಮಿತಿ ಸಭೆ ಬಳಿಕ, ಕೇಂದ್ರ ಸರ್ಕಾರವು 1200-ಸಿಸಿ ವರೆಗಿನ ಪೆಟ್ರೋಲ್, ಸಿಎನ್‌ಜಿ ಮತ್ತು 1500 ಸಿಸಿ ವರೆಗಿನ ಡೀಸೆಲ್ ಎಂಜಿನ್‌ನ್ನು ಪಡೆದಿರುವ ಕಾರುಗಳ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಶೇಕಡ 28% ರಿಂದ 18%ಗೆ ಇಳಿಸಿದೆ. ಅದೇ ರೀತಿಯಲ್ಲಿ ಐಷಾರಾಮಿ ಸೆಡಾನ್‌ಗಳು, ಎಸ್‌ಯುವಿಗಳು ಹಾಗೂ ಎಂಪಿವಿಗಳಿಗೆ ಯಾವುದೇ ಸೆಸ್ ಇಲ್ಲದೆ ಶೇಕಡ 40% ಜಿಎಸ್‌ಟಿ ವಿಧಿಸಲು ನಿರ್ಧಾರ ಮಾಡಿತ್ತು.

Maruti Suzuki Price Cuts Up To Rs 1 29 Lakh Alto K10 Celerio WagonR Swift Dzire Brezza To Eeco

ಇತ್ತೀಚೆಗೆ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಬಿಡುಗಡೆಯಾಗಿದೆ:

ಈ ಮಿಡ್-ಸೈಜ್ ಎಸ್‌ಯುವಿಯು ರೂ.10.50 ಲಕ್ಷದಿಂದ ರೂ.19.99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1.5-ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್, 1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಹಾಗೂ 1.5-ಲೀಟರ್ ಸಿಎನ್‌ಜಿ ಎಂಜಿನ್‌ ಆಯ್ಕೆಯನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಮತ್ತು ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಪಡೆದಿದೆ. 19 ರಿಂದ 28.65 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

ಇದು 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. 10-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

Article Published On: Friday, September 19, 2025, 8:30 [IST]
English summary
Maruti suzuki price cuts up to rs 1 29 lakh alto k10 celerio wagonr swift dzire brezza to eeco
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+