33 ಕಿ.ಮೀ ಮೈಲೇಜ್.. 5-ಸೀಟರ್, 4.26 ಲಕ್ಷ... ಆದರೂ ಈ ಪ್ರಮುಖ ಕಾರಿನ ಸೇಲ್ಸ್ ಮೂರಂಕಿಗೆ ಕುಸಿತ.. ಯಾಕೆ?
ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿ ಗುರುತಿಸಿಕೊಂಡಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ಸದ್ಯ, ಮಾರುತಿ ಕಂಪನಿಯು ಈ ಏಪ್ರಿಲ್ ತಿಂಗಳ ಎಲ್ಲ ಕಾರುಗಳ ಮಾರಾಟದ ಅಂಕಿಅಂಶಗಳ ವರದಿ ಪ್ರಕಟಿಸಿದ್ದು, ಅದೇಕೋ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವ ಇದೇ 'ಎಸ್-ಪ್ರೆಸ್ಸೊ' ಮಾರಾಟವು ದಿಢೀರನೆ ಕುಸಿತ ಕಂಡಿದ್ದು, ಮೂರಂಕಿಗೆ ಇಳಿಮುಖವಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಕಳೆದ ತಿಂಗಳು (ಏಪ್ರಿಲ್-2025) ಮಾರುತಿ ಸುಜುಕಿಯು ಬರೋಬ್ಬರಿ 726 ಯುನಿಟ್ 'ಎಸ್-ಪ್ರೆಸ್ಸೊ' ಹ್ಯಾಚ್‌ಬ್ಯಾಕ್‌ಗಳನ್ನು ಮಾರಾಟಗೊಳಿಸಿದೆ. 2024ರ ಇದೇ ಅವಧಿಯಲ್ಲಿ 2476 ಯುನಿಟ್‌ಗಳನ್ನು ಮಾರಾಟ ಮಾರಾಟಗೊಳಿಸಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ (YoY) ಶೇಕಡ 70.68% ಇಳಿಕೆಯಾಗಿದೆ.

ಈ ವರ್ಷದ ಮೊದಲ ಮೂರು ತಿಂಗಳಲ್ಲೂ 'ಮಾರುತಿ ಸುಜುಕಿ ಎಸ್-ಪ್ರೆಸ್ಸೊ' ಕಾರಿನ ಮಾರಾಟ ಸಂಖ್ಯೆ ಅಷ್ಟು ಉತ್ತಮವಾಗಿರಲಿಲ್ಲ. ಅಲ್ಲಿಯೂ ಹಲವು ಏರಿಳಿತಗಳನ್ನು ಕಾಣಲಾಗಿತ್ತು. ಮಾರ್ಚ್‌ನಲ್ಲಿ 1,788 ಯುನಿಟ್, ಫೆಬ್ರವರಿಯಲ್ಲಿ 1,685 ಯುನಿಟ್ ಹಾಗೂ ಜನವನರಿಯಲ್ಲಿ 2,895 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.
ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮಾರಾಟ ಸಂಖ್ಯೆ ಇಳಿಕೆಯಾಗಲು ನಾನಾ ಕಾರಣಗಳಿವೆ. ಇದು ನೋಡಲು ಚಿಕ್ಕದಾಗಿದ್ದು, ವೈಶಿಷ್ಟ್ಯದಲ್ಲೂ ಹಲವಾರು ಕೊರತೆಗಳನ್ನು ಹೊಂದಿದೆ. ಜೊತೆಗೆ ಈ ಕಾರಿನ ಬೆಲೆಗೆ ಗ್ರಾಹಕರು, ಇತರೆ ಕಂಪನಿಗಳ ಎಸ್‌ಯುವಿಯನ್ನು ಖರೀದಿ ಮಾಡಲು ಮನಸ್ಸು ಮಾಡುತ್ತಿದ್ದಾರೆ. ಹೀಗಾಗಿ 'ಎಸ್-ಪ್ರೆಸ್ಸೊ' ಹ್ಯಾಚ್‌ಬ್ಯಾಕ್ ಮಾರಾಟ ಸಂಖ್ಯೆ ಕುಸಿತವಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಹೊಸ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ವಿಶೇಷತೆಗಳೇನು..
ಈ ಕಾರು ಕನಿಷ್ಠ ರೂ.4.26 ಲಕ್ಷ ಮತ್ತು ರೂ.6.12 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಇದು ಹೊರಭಾಗದಲ್ಲಿ ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಹೊಂದಿದ್ದು, ನೋಡುಗರನ್ನು ಸೆಳೆಯುತ್ತದೆ. ಸಾಲಿಡ್ ಸಿಜಲ್ ಆರೆಂಜ್, ಸಾಲಿಡ್ ಫೈರ್ ರೆಡ್, ಮೆಟಾಲಿಕ್ ಗ್ರಾನೈಟ್ ಗ್ರೇ, ಮೆಟಾಲಿಕ್ ಸಿಲ್ಕಿ ಸಿಲ್ವರ್, ಪರ್ಲ್ ಸ್ಟಾರ್ರಿ ಬ್ಲೂ ಮತ್ತು ಬ್ಲೂಯಿಶ್ ಬ್ಲ್ಯಾಕ್ ಎಂಬ ಬಣ್ಣಗಳನ್ನು ಪಡೆದಿದೆ.
ನೂತನ ಹ್ಯಾಚ್‌ಬ್ಯಾಕ್ ಬೆಲೆಗೆ ತಕ್ಕಂತೆ ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. 1-ಲೀ. ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 24 ರಿಂದ 33 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 ಆಸನಗಳಿವೆ. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 270 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಹೊಸ ಮಾರುತಿ ಎಸ್-ಪ್ರೆಸ್ಸೊ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಕೀಲೆಸ್ ಎಂಟ್ರಿಯಂತಹ ವಿವಿಧ ವೈಶಿಷ್ಟ್ಯಗಳಿವೆ. ಸುರಕ್ಷತೆಯ ದೃಷ್ಟಿಯಿಂದ ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications