Maruti Suzuki: ಕಾರು ಬಂದು 20 ವರ್ಷ ಕಳೆದರು ಅದೇ ಡಿಮ್ಯಾಂಡ್... ಜನ ಮುಗಿಬಿದ್ದು ಖರೀದಿ!
ಮಾರುತಿ ಸುಜುಕಿ ತನ್ನ ಐಕಾನಿಕ್ ಸ್ಪೋರ್ಟಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ - ಸ್ವಿಫ್ಟ್‌ನ 20 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಮೇ 2005 ರಲ್ಲಿ ಮೊದಲ ಬಾರಿ ಭಾರತದಲ್ಲಿ ಪರಿಚಯಗೊಂಡ ಸ್ವಿಫ್ಟ್, ಸ್ಪೋರ್ಟಿ ಪರ್ಫಾಮೆನ್ಸ್, ಆಕರ್ಷಕ ವಿನ್ಯಾಸ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡು ಭಾರತದಲ್ಲಿ ಹೊಸ ಅಲೆ ಎಬ್ಬಿಸಿತ್ತು. ಭಾರತದ ಯುವ ಮತ್ತು ಉತ್ಸಾಹಭರಿತ ಚಾಲಕರಲ್ಲಿ ತನ್ನನ್ನು ತಾನು ನೆಚ್ಚಿನ ವಾಹನವಾಗಿ ಸ್ಥಾಪಿಸಿಕೊಂಡಿದೆ. ಬರೋಬ್ಬರಿ 20 ವರ್ಷಗಳಿಂದ ಈ ಕಾರು ಮಾರಟವಾಗುತ್ತಾ, ಇಂದಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಮುನ್ನುಗ್ಗುತ್ತಿದೆ ಎಂದು ಕಂಪನಿ ಹೇಳಿದೆ.
ಸ್ವಿಫ್ಟ್ ಬೆಳೆದುಬಂದ ಹಾದಿ
2005 ರಲ್ಲಿ ಸ್ಪೋರ್ಟಿ ಹ್ಯಾಚ್‌ಬ್ಯಾಕ್ ವಿಭಾಗಕ್ಕೆ ಹೊಸ ಆಯಾಮವನ್ನು ಪರಿಚಯಿಸುತ್ತಾ, ಸ್ವಿಫ್ಟ್ ತನ್ನ ಹೊಸ ಯುಗದ ವಿನ್ಯಾಸ ಮತ್ತು ಉನ್ನತ-ಮಟ್ಟದ ವೈಶಿಷ್ಟ್ಯಗಳೊಂದಿಗೆ ಎಂಟ್ರಿಕೊಟ್ಟಿತ್ತು. 2011 ರಲ್ಲಿ 2ನೇ ತಲೆಮಾರಿನ ಸ್ವಿಫ್ಟ್ ಅನ್ನು ಹಗುರ ಮತ್ತು ಹೆಚ್ಚು ಚುರುಕಾಗಿ ಅಭಿವೃದ್ಧಿಪಡಿಸಲಾಯಿತು. ಇದು ಸ್ಪೋರ್ಟಿ ಹ್ಯಾಚ್‌ಬ್ಯಾಕ್ ಆಗಿ ತನ್ನ ಪ್ರತಿಸ್ಪರ್ಧಿಗಳಿಗೆ ತೀವ್ರ ಪೈಪೋಟಿ ನೀಡಿತ್ತು.

ವಿಕಸನಗೊಳ್ಳುತ್ತಿರುವ ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ 2018 ರಲ್ಲಿ 3ನೇ ತಲೆಮಾರಿನ ಸ್ವಿಫ್ಟ್ ಹೈಟೆಕ್ ವೈಶಿಷ್ಟ್ಯಗಳನ್ನು ಪಡೆದುಕೊಂಡು ಬಿಡುಗಡೆಯಾಯಿತು. ಬಳಿಕ 2024 ರಲ್ಲಿ, 4ನೇ ತಲೆಮಾರಿನ ಎಪಿಕ್ ನ್ಯೂ ಸ್ವಿಫ್ಟ್ ಸ್ವಿಫ್ಟ್‌ನ ಕಲ್ಟ್ ಶೈಲಿಗೆ ಹೊಸ ಆಯಾಮವನ್ನು ಪರಿಚಯಿಸಲಾಯಿತು. ಹೊಸ ಯುಗಕ್ಕಾಗಿ ವಿನ್ಯಾಸಗೊಳಿಸಲಾದ ಹೊಸ Z-ಸರಣಿ ಎಂಜಿನ್ ಅನ್ನು ಇದರಲ್ಲಿ ಪರಿಚಯಿಸಲಾಯಿತು.
ಪ್ರಸ್ತುತ 4ನೇ ತಲೆಮಾರಿನ ಸ್ವಿಫ್ಟ್ ವಿಶೇಷತೆಗಳು
4ನೇ ತಲೆಮಾರಿನ ಸ್ವಿಫ್ಟ್, ಫ್ಯೂಚರಿಸ್ಟಿಕ್ ಮತ್ತು ಸ್ಪೋರ್ಟಿ ಹೊರಭಾಗಗಳೊಂದಿಗೆ ಎದ್ದು ಕಾಣುತ್ತದೆ. ಶೈನಿಂಗ್ ಬ್ಲಾಕ್ ಮುಂಭಾಗದ ಗ್ರಿಲ್ ಮತ್ತು ಸ್ಮೋಕಿ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಚಾಲಕ - ಆಧಾರಿತ ಕಾಕ್‌ಪಿಟ್, ಫ್ಲಾಟ್-ಬಾಟಮ್ಡ್ ಸ್ಟೀರಿಂಗ್ ವೀಲ್, ಸ್ಪೋರ್ಟಿ ಕ್ಲಸ್ಟರ್ ಡಯಲ್‌ಗಳೊಂದಿಗೆ ಆಕರ್ಷಕ ಇಂಟೀರಿಯರ್ ಹೊಂದಿದೆ.

ಸುರಕ್ಷತೆಗೆ ಸಂಬಂಧಿಸಿದಂತೆ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ+(ESP®), ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ (EBD) ಜೊತೆಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS), ಹಿಲ್ ಹೋಲ್ಡ್ ಕಂಟ್ರೋಲ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, 3-ಪಾಯಿಂಟ್ ಸೀಟ್ ಬೆಲ್ಟ್‌ಗಳು ಮತ್ತು ಸೀಟ್ ಬೆಲ್ಟ್ ರಿಮೈಂಡರ್ ಜೊತೆಗೆ 3 ವರ್ಷಗಳು ಅಥವಾ 1,00,000 ಕಿ.ಮೀ ವಾರಂಟಿ ಒಳಗೊಂಡಿದೆ.
ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿ ಲಭ್ಯವಿರುವ ಈ ಕಾರು, ರೂ.6.49 ಲಕ್ಷದಿಂದ ರೂ.9.64 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಈ ಕಾರು ಹೆಚ್ಚು ಆಕರ್ಷಕವಾದ ವಿನ್ಯಾಸದೊಂದಿಗೆ ಸಿಜ್ಲಿಂಗ್ ರೆಡ್, ನಾವೆಲ್ ಆರೆಂಜ್, ಮ್ಯಾಗ್ಮಾ ಗ್ರೇ ಹಾಗೂ ಸ್ಪ್ಲೆಂಡಿಡ್ ಸಿಲ್ವರ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ.

ಕಳೆದ ಮೇ ತಿಂಗಳಿನಲ್ಲಿ (2025) ಮಾರುತಿ ಸುಜುಕಿ ಕಂಪನಿಯು ಒಟ್ಟು 14,135 ಯುನಿಟ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ಗಳನ್ನು ಮಾರಾಟ ಮಾಡಿದೆ. ಜನಪ್ರಿಯತೆ ಕಡಿಮೆಯಾದ ಈ 'ಸ್ವಿಫ್ಟ್' ಒಂದು ಐಕಾನ್ ಕಾರಾಗಿದೆ. ಕೇವಲ ಭಾರತವೊಂದರಲ್ಲೆ ಇಲ್ಲಿಯವರೆಗೆ 3 ಮಿಲಿಯನ್ (30 ಲಕ್ಷ)ಗಿಂತಲೂ ಹೆಚ್ಚು ಮಂದಿ ಈ ಕಾರನ್ನು ಖರೀದಿಸಿದ್ದಾರೆ.
ಸ್ವಿಫ್ಟ್‌ನ ಈ ವಿಶೇಷ ಸ್ವಭಾವವು ಪ್ರತಿ ನಾಲ್ಕು ಸ್ವಿಫ್ಟ್ ಮಾಲೀಕರಲ್ಲಿ ಒಬ್ಬರು ಮತ್ತೊಂದು ಸ್ವಿಫ್ಟ್ ಖರೀದಿಸುವಂತೆ ಮಾಡಿದೆ. ಈ ವಿಶೇಷ 20 ವರ್ಷಗಳ ವಾರ್ಷಿಕೋತ್ಸವದಂದು, ಬ್ರ್ಯಾಂಡ್ ಸ್ವಿಫ್ಟ್‌ನ ಮೇಲಿನ ಅಚಲ ಪ್ರೀತಿಗಾಗಿ ನಮ್ಮ ಎಲ್ಲಾ ಗ್ರಾಹಕರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಮಾರುತಿ ಸುಜುಕಿ ಮಾರಾಟ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಹರ್ಷ ವ್ಯಕ್ತಪಡಿಸಿದ್ದಾರೆ.


Click it and Unblock the Notifications