Maruti: ಡಾಕ್ಟರ್, ಎಂಜಿನಿಯರ್‌ಗಳ ಫೇವರೆಟ್ ಕಾರಿಗೆ ಫುಲ್ ಡಿಮ್ಯಾಂಡ್: ಅಗ್ಗದ ಕಾರಿಗೆ ಮುಗಿಬಿದ್ದ ಜನ!

ಭಾರತದಲ್ಲಿ ಮಾರುತಿ ವ್ಯಾಗನ್‌ಆರ್ (Maruti WagonR) ಕಾರಿಗೆ ತುಂಬಾ ಬೇಡಿಕೆ ಇದೆ. ಇದು ಮಧ್ಯಮ ವರ್ಗದ ಹಾಗೂ ಡಾಕ್ಟರ್, ಎಂಜಿನಿಯರ್‌ಗಳ ಫೇವರೆಟ್ ಕಾರಾಗಿದೆ. ಪ್ರತಿ ವರ್ಷ ಸಾವಿರಾರು ಅಲ್ಲ, ಲಕ್ಷಾಂತರ ವಾಹನಗಳು ಮಾರಾಟವಾಗುತ್ತವೆ. ಇತ್ತೀಚೆಗೆ ಅತಿ ಹೆಚ್ಚು ಮಾರಾಟ ಕಾಣುವ ಟಾಟಾ ಪಂಚ್ ಅನ್ನು ಕೂಡ ಮಾರುತಿ ಸುಜುಕಿ ವ್ಯಾಗನ್ಆರ್ ಹಿಂದಿಕ್ಕಿದೆ. 2025ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2022, 2023 ಮತ್ತು 2024ರ ಆರ್ಥಿಕ ವರ್ಷದಲ್ಲಿ ಅಗ್ರಸ್ಥಾನದಲ್ಲಿದ್ದ ಮಾರುತಿ ಸುಜುಕಿ ವ್ಯಾಗನ್ಆರ್ ಹ್ಯಾಚ್ ಬ್ಯಾಕ್ ಸತತ ನಾಲ್ಕನೇ ವರ್ಷವು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಆಟೋ ಉದ್ಯಮದ ಅಂಕಿಅಂಶಗಳ ಪ್ರಕಾರ, ವ್ಯಾಗನ್ ಆರ್ 2025 ರ ಆರ್ಥಿಕ ವರ್ಷದಲ್ಲಿ 1,98,451 ಯುನಿಟ್ ಕಾರುಗಳು ಮಾರಾಟವಾಗಿವೆ. ಮಾರುತಿ ಸುಜುಕಿ ವ್ಯಾಗನ್ ಆರ್ ಕಾರನ್ನು 1999 ರಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು. ಅಂದಿನಿಂದ ಇಂದಿನವರೆಗೆ ದೇಶದಲ್ಲಿ ಒಟ್ಟು 32,00,000 ಕ್ಕೂ ಹೆಚ್ಚು ಯುನಿಟ್ ಕಾರುಗಳು ಮಾರಾಟವಾಗಿವೆ.

maruti-suzuki-wagonr-2024-25-financial-year-sales-report

ಕಳೆದ ನಾಲ್ಕು ವರ್ಷಗಳ ಮಾರಾಟ ವಿವರ: ಮಾರುತಿ ಸುಜುಕಿ ವ್ಯಾಗನ್ಆರ್ ಆರ್ಥಿಕ ವರ್ಷ 2025 ರಲ್ಲಿ 1,98,451 ಯುನಿಟ್ ಕಾರುಗಳು, ಆರ್ಥಿಕ ವರ್ಷ 2024 ರಲ್ಲಿ 2,00,177 ಯುನಿಟ್ ಕಾರುಗಳು, ಆರ್ಥಿಕ ವರ್ಷ 2023 ರಲ್ಲಿ 2,12,340 ಯುನಿಟ್ ಕಾರುಗಳು ಹಾಗೂ 2022 ರಲ್ಲಿ 1,88,837 ಯುನಿಟ್ ಕಾರುಗಳು ಮಾರಾಟವಾಗಿವೆ.

ಇನ್ನು ಕಳೆದ ವರ್ಷ (2024 ಕ್ಯಾಲೆಂಡರ್ ವರ್ಷ) ಟಾಟಾ ಪಂಚ್ 2,02,031 ಯುನಿಟ್ ಕಾರುಗಳ ಮಾರಾಟದೊಂದಿಗೆ ದೇಶದಲ್ಲಿ ಹೆಚ್ಚು ಮಾರಾಟವಾದ ಕಾರಾಗಿ ಗುರ್ತಿಸಿಕೊಂಡಿದೆ. ಒಟ್ಟಾರೆ ಇತ್ತೀಚಿನ ವರ್ಷಗಳಲ್ಲಿ ಈ ಎರಡೂ ಕಾರುಗಳಿಗೆ ಭಾರೀ ಪೈಪೋಟಿ ವ್ಯಕ್ತವಾಗಿದೆ. ಜನರು ಮುಗಿಬಿದ್ದು ಈ ಕಾರುಗಳನ್ನು ಖರೀದಿ ಮಾಡುತ್ತಿದ್ದಾರೆ. ಹೊಸ ಮಾರುತಿ ವ್ಯಾಗನ್‌ಆರ್ ಹಾಗೂ ಟಾಟಾ ಪಂಚ್ ವಿಶೇಷತೆಗಳನ್ನು ಇಲ್ಲಿ ನೋಡೋಣ.

maruti-suzuki-wagonr-2024-25-financial-year-sales-report

ಮಾರುತಿ ಸುಜುಕಿ ಪ್ರಸ್ತುತ ಬೆಲೆಯು ಬೇಸ್‌ ವೇರಿಯೆಂಟ್‌ಗೆ 5,64,500 ರೂ.ಗಳಿಂದ ಪ್ರಾರಂಭವಾಗಿ 7,47,500 ರೂ.ಗಳವರೆಗೆ (ಎಕ್ಸ್ ಶೋರೂಂ) ಇದೆ. ಇತ್ತ ಟಾಟಾ ಪಂಚ್‌ನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.6,19,990 ರಿಂದ ರೂ.10,31,990 (ಎಕ್ಸ್‌ ಶೋರೂಂ) ಗಳಾಗಿದೆ. ಈ ಮೈಕ್ರೊ ಎಸ್‌ಯುವಿ ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳೊಂದಿಗೆ ಲಭ್ಯವಿದೆ.

ಎಂಜಿನ್: 1.0-ಲೀಟರ್ (67 ಪಿಎಸ್ ಮತ್ತು 89 ಎನ್ಎಂ) ಮತ್ತು 1.2-ಲೀಟರ್ (90 ಪಿಎಸ್ ಮತ್ತು 113 ಎನ್ಎಂ) ಎಂಬ ಎರಡು ಕೆ-ಸೀರಿಸ್, ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ ಎಂಜಿನ್‌ಗಳೊಂದಿಗೆ ವ್ಯಾಗನ್ಆರ್ ಬರುತ್ತದೆ. 5-ಸ್ಪೀಡ್ ಎಂಟಿ ಮತ್ತು 5-ಸ್ಪೀಡ್ ಎಎಂಟಿ ಆಯ್ಕೆಯಲ್ಲಿ ಸಿಗಲಿದೆ. 1.0-ಲೀಟರ್ ಘಟಕವು 5-ಸ್ಪೀಡ್ ಎಂಟಿಯೊಂದಿಗೆ ಸಿಎನ್‌ಜಿ ಆಯ್ಕೆಯನ್ನು ಹೊಂದಿದೆ.

maruti-suzuki-wagonr-2024-25-financial-year-sales-report

ಟಾಟಾ ಪಂಚ್ 1.2-ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ (88 ಪಿಎಸ್ ಮತ್ತು 115 ಎನ್ಎಂ) ನೊಂದಿಗೆ 5-ಸ್ಪೀಡ್ ಎಂಟಿ ಮತ್ತು 5-ಸ್ಪೀಡ್ ಎಎಂಟಿ ಆಯ್ಕೆಗಳೊಂದಿಗೆ ಬರುತ್ತದೆ. 5-ಸ್ಪೀಡ್ ಎಂಟಿಯೊಂದಿಗೆ ಸಿಎನ್‌ಜಿ ಆಯ್ಕೆ (73 ಪಿಎಸ್ ಮತ್ತು 103 ಎನ್ಎಂ) ಸಹ ಇದೆ. ಪಂಚ್ ಸಿಎನ್‌ಜಿ ಟ್ವಿನ್ ಸಿಎನ್‌ಜಿ ಟ್ಯಾಂಕ್‌ಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, April 2, 2025, 10:18 [IST]
English summary
Maruti suzuki wagonr 2024 25 financial year sales report
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+