Maruti: 26.32 ಕಿ.ಮೀ ಮೈಲೇಜ್... ಬೆಸ್ಟ್ 6-ಸೀಟರ್ ಕಾರು, ಆದ್ರೆ ಯಾರೂ ಖರೀದಿಸುತ್ತಿಲ್ಲ!
ಮಾರುತಿ ಸುಜುಕಿ MPV ಗಳ ಒಟ್ಟಾರೆ ಮಾರುಕಟ್ಟೆಯು ಒತ್ತಡವನ್ನು ಕಂಡಿದ್ದು, ಪ್ರಮುಖ ಕಾರೊಂದು ತೀರಾ ಕುಸಿತವನ್ನು ಕಂಡು ಇಳಿಮುಖ ಪ್ರವೃತ್ತಿಯನ್ನು ಮುಂದುವರೆಸಿದೆ. ಇದು ಮಾರುತಿ ಸುಜುಕಿ ಕಂಪನಿಯ ಜನಪ್ರಿಯ 6 ಸೀಟರ್ ಪ್ರೀಮಿಯಂ ಎಂಪಿವಿಯಾಗಿದ್ದರು, ಇತ್ತೀಚಿನ ಅಪ್‌ಡೇಟ್‌ಗಳ ಕೊರತೆ ಮತ್ತು ಅದರ ಬೆಲೆಗೆ ತಕ್ಕ ಮೌಲ್ಯದ ಕೊರತೆಯು ಮಾರಾಟದ ಕುಸಿತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಮಾರಾಟದಲ್ಲಿನ ಈ ನಿರಂತರ ಕುಸಿತವು ಮಾರುಕಟ್ಟೆಯಲ್ಲಿ ಕಾರಿನ ಭವಿಷ್ಯದ ಬಗ್ಗೆ ಕಳವಳವನ್ನು ಹೆಚ್ಚಿಸಿದೆ. ಅಷ್ಟಕ್ಕೂ ಈ ಕಾರು ಯಾವುದು ಬನ್ನಿ ತಿಳಿಯೋಣ.
6-ಸೀಟರ್ ಎಂಪಿವಿಯಾದ ಮಾರುತಿ ಸುಜುಕಿ ಎಕ್ಸ್‌ಎಲ್ 6 (Maruti Suzuki XL 6) ಖರೀದಿದಾರರನ್ನು ಆಕರ್ಷಿಸಲು ಹೆಣಗಾಡುತ್ತಿದೆ. ಮಾರುತಿ ಸುಜುಕಿ XL 6, ತನ್ನ ವಿಶಿಷ್ಟ ವಿನ್ಯಾಸದೊಂದಿಗೆ, ಯುವ ಖರೀದಿದಾರರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಮಾರುತಿಯ ಮತ್ತೊಂದು 7-ಸೀಟರ್ ಫ್ಯಾಮಿಲಿ ಕಾರಾಗಿರುವ ಎರ್ಟಿಗಾದಂತೆ ಉತ್ತಮ ಯಶಸ್ಸನ್ನು ಕಾಣುವಲ್ಲಿ ಹಿಂದುಳಿದಿದೆ.

ಮಾರಾಟದಲ್ಲಿ ಕುಸಿತ
ಜೂನ್ 2025 ರಲ್ಲಿ ಮಾರುತಿ ಸುಜುಕಿ XL6 ಮಾರಾಟ ತೀವ್ರವಾಗಿ ಕುಸಿದಿದ್ದು, ಕೇವಲ 2,011 ಯುನಿಟ್ ಕಾರುಗಳು ಮಾತ್ರ ಮಾರಾಟವಾಗಿವೆ. ಇದು ತಿಂಗಳಿನಿಂದ ತಿಂಗಳು ಮತ್ತು ವರ್ಷದಿಂದ ವರ್ಷಕ್ಕೆ ಗಮನಾರ್ಹ ಕುಸಿತವನ್ನು ಸೂಚಿಸುತ್ತದೆ. ಜೂನ್ 2024 ರಲ್ಲಿ 3,323 ಯುನಿಟ್‌ಗಳು ಮಾರಾಟವಾಗಿದ್ದಕ್ಕೆ ಹೋಲಿಸಿದರೆ ಇದು ಶೇ39 ರಷ್ಟು ಕುಸಿತವನ್ನು ತೋರಿಸುತ್ತದೆ.
ಮಾರುತಿ XL6 ಗೆ ಕುಸಿತವು ಇಳಿಮುಖ ಪ್ರವೃತ್ತಿಯನ್ನು ಮುಂದುವರೆಸಿದೆ, ಇನ್ನು ಮೇ 2025 ರಲ್ಲಿ 3,507 ಯುನಿಟ್ ಕಾರುಗಳು ಮತ್ತು ಏಪ್ರಿಲ್ 2025 ರಲ್ಲಿ 4,140 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿತ್ತು. ಆದರೆ ಎರ್ಟಿಗಾ ವಿಷಯಕ್ಕೆ ಬಂದರೆ, ಜೂನ್ 2025 ರಲ್ಲಿ ಬರೋಬ್ಬರಿ 14,151 ಯುನಿಟ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ವಿಭಾಗದ ನಾಯಕನಾಗಿ ಉಳಿದಿದೆ.

ಮಾರುತಿ ಸುಜುಕಿ ಎಕ್ಸ್‌ಎಲ್ 6 ಕುಸಿತಕ್ಕೆ ಹಲವಾರು ಅಂಶಗಳನ್ನು ಉಲ್ಲೇಖಿಸಲಾಗಿದೆ. ಇತ್ತೀಚಿನ ನವೀಕರಣಗಳ ಕೊರತೆ ಮತ್ತು ಬೆಲೆಗೆ ತಕ್ಕ ಮೌಲ್ಯದ ಕೊರತೆಯು XL6 ಅನ್ನು ಹಿಂದುಳಿಯುವಂತೆ ಮಾಡಿದೆ. ಈ ಮಾಡಲ್ ತನ್ನನ್ನು ತಾನು ಪ್ರತ್ಯೇಕಿಸಿಕೊಳ್ಳಲು ಮತ್ತು ಅದರ ವ್ಯಾಪಕ ಯಶಸ್ಸನ್ನು ಲಾಭ ಮಾಡಿಕೊಳ್ಳಲು ಹೆಣಗಾಡುತ್ತಿರುವುದಂತು ಸತ್ಯ.
ಮಾರುತಿ XL6 ವಿಶೇಷತೆಗಳು
XL6 ಅನ್ನು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ (CNG ಆಯ್ಕೆಯಲ್ಲೂ ಲಭ್ಯ) ನೀಡಲಾಗುತ್ತದೆ. ಇದು ರೂ. 11.83 ಲಕ್ಷದಿಂದ ರೂ. 14.99 ಲಕ್ಷದವರೆಗೆ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದೆ. ಕೇವಲ 6-ಸೀಟರ್ ಆಸನ ಸಂರಚನೆಯಲ್ಲಿ ಖರೀದಿಗೆ ಲಭ್ಯವಿದೆ. ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿದೆ.

ಹಾಗೆಯೇ ಸಿಎನ್‌ಜಿ ಆಯ್ಕೆಯಲ್ಲೂ ಸಿಗಲಿದ್ದು, ಇದು ಕೇವಲ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಮಾತ್ರ ಹೊಂದಿದೆ. ಮೈಲೇಜ್ ವಿಷಯಕ್ಕೆ ಬಂದರೆ CNG - ಮ್ಯಾನುವಲ್‌ನಲ್ಲಿ 26.32 ಕಿ.ಮೀ ಹಾಗೂ ಪೆಟ್ರೋಲ್ - ಮ್ಯಾನುವಲ್‌ನಲ್ಲಿ 20.97 ಕಿ.ಮೀ. ಹಾಗೂ ಪೆಟ್ರೋಲ್ - ಆಟೋಮ್ಯಾಟಿಕ್‌ನಲ್ಲಿ 20.27 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಮಾರುತಿ ಸುಜುಕಿ ಕಂಪನಿಯು XL6 ಕಾರನ್ನು NCAP (ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮ) ಮೂಲಕ ಸೇಫ್ಟಿ ರೇಟಿಂಗ್ ಕೂಡ ಪಡೆದುಕೊಂಡಿದೆ. ಈ ಸುರಕ್ಷತಾ ಪರೀಕ್ಷೆಯಲ್ಲಿ ಎಕ್ಸ್‌ಎಲ್ -6 ಕಾರು 3 ಸ್ಟಾರ್‌ಗಳ ಎನ್‌ಸಿಎಪಿ ರೇಟಿಂಗ್ ಪಡೆದುಕೊಂಡಿದೆ. ಈ ಕಾರು 4 ಏರ್ ಬ್ಯಾಗ್‌ಗಳೊಂದಿಗೆ ಬರುತ್ತದೆ.


Click it and Unblock the Notifications