ಕನ್ನಡಿಗರ ನೆಚ್ಚಿನ ಬಂಡಿಗಳಿವು.. ಸ್ವಿಫ್ಟ್, ಪಂಚ್ & ವ್ಯಾಗನ್ಆರ್ ಕಂಡ್ರೆ ಮುಗಿಬಿದ್ದು ಖರೀದಿಸುವರು, ಕಾರಣವೇನು?

ಕರ್ನಾಟಕದ ನಗರ ಅಥವಾ ಗ್ರಾಮೀಣ ಭಾಗದ ಜನರಿಗೆ ನಿಮಿಷ್ಟದ ಕಾರು ಯಾವುದೆಂದು ಪ್ರಶ್ನಿಸಿದರೆ ತಕ್ಷಣ ಬರುವ ನೇರ ಉತ್ತರವೇ ಮಾರುತಿ ಸುಜುಕಿ ಸ್ವಿಫ್ಟ್, ಟಾಟಾ ಪಂಚ್, ಮಾರುತಿ ಸುಜುಕಿ ವ್ಯಾಗನ್ಆರ್ ಎಂದು. ಅಷ್ಟರ ಮಟ್ಟಿಗೆ ಜನಜನಿತವಾಗಿ ಬಿಟ್ಟಿವೆ. ಇವುಗಳನ್ನು ಮಧ್ಯಮ ಹಾಗೂ ಶ್ರೀಮಂತ ವರ್ಗದ ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿವೆ. ಬನ್ನಿ, ಈ ಕಾರುಗಳನ್ನು ಕನ್ನಡಿಗರೇಕೆ ಮೆಚ್ಚಿಕೊಂಡಿದ್ದಾರೆ ಎಂಬುದರ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

ಬಜೆಟ್ ಬೆಲೆ:

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದ್ದು, ಕರ್ನಾಟಕದಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಈ ಕಾರನ್ನು ನಗರ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ, ಗ್ರಾಮೀಣ ಭಾಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಅಗ್ಗದ ದರದಲ್ಲೂ ಲಭ್ಯವಿದೆ. ರೂ.6.49 ಲಕ್ಷದಿಂದ ರೂ.9.64 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ.

Maruti Swift Tata Punch Maruti WagonR Why Kannadigas Like Here The Reason

ಟಾಟಾ ಪಂಚ್ (Tata Punch) ಪುಟ್ಟ ಗಾತ್ರದ ಮೈಕ್ರೋ ಎಸ್‌ಯುವಿಯಾಗಿದೆ. ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ, ಬೆಂಗಳೂರು ಸೇರಿದಂತೆ ದೊಡ್ಡ ಪಟ್ಟಣಗಳ ಗ್ರಾಹಕರು ಮುಗುಬಿದ್ದು ಖರೀದಿ ಮಾಡುತ್ತಿದ್ದಾರೆ. ಅದರಲ್ಲೂ ಟೆಕ್ಕಿಗಳ ಮೊದಲ ಆಯ್ಕೆಯ ಕಾರಾಗಿದೆ. ಬಜೆಟ್ ಬೆಲೆಯಲ್ಲಿಯೂ ದೊರೆಯಲಿದ್ದು, ರೂ.6.20 ಲಕ್ಷದಿಂದ ರೂ.10.32 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಪ್ರಖ್ಯಾತ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಗಿದೆ. ಈ ಕಾರನ್ನು ಎಲ್ಲ ವರ್ಗದ ಜನರು ಮೆಚ್ಚಿಕೊಂಡಿದ್ದಾರೆ. ಆದರೂ ದೊಡ್ಡ ಸಂಖ್ಯೆಯಲ್ಲಿ ಡಾಕ್ಟರ್‌ಗಳು ಕೊಂಡುಕೊಳ್ಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ರೂ.5.79 ಲಕ್ಷದಿಂದ ರೂ.7.62 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

Maruti Swift Tata Punch Maruti WagonR Why Kannadigas Like Here The Reason

ಕಾರ್ಯಕ್ಷಮತೆಯಲ್ಲೂ ಸಾಟಿಯಿಲ್ಲ:

ಇವೆಲ್ಲ ಕಾರುಗಳು ಕೊಂಚ ಮಟ್ಟಿಗೆ ಬಲಿಷ್ಠವಾದ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿವೆ. ಮಾರುತಿ ಸ್ವಿಫ್ಟ್ 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. ಯಾವ ಬೈಕ್‌ಗೂ ಕಡಿಮೆಯಿಲ್ಲದ ರೀತಿಯಲ್ಲಿ 24.80 ರಿಂದ 32.85 ಕಿ.ಮೀ ವರೆಗೆ ಮೈಲೇಜ್ ನೀಡಬಲ್ಲದು.

ಟಾಟಾ ಪಂಚ್ 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ ಆಯ್ಕೆಯನ್ನು ಒಳಗೊಂಡಿದೆ. 18.8 ರಿಂದ 26.99 ಕಿ.ಮೀ ವರೆಗೆ ಮೈಲೇಜ್ ಕೊಡಬಲ್ಲದು. ಮಾರುತಿ ವ್ಯಾಗನ್ಆರ್ 1.2-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 23 ರಿಂದ 34 ಕಿ.ಮೀ ವರೆಗೆ ಮೈಲೇಜ್ ನೀಡಬಲ್ಲದು. ಹೀಗಾಗಿ ದೂರದ ಊರುಗಳಿಗೆ ಪ್ರಯಾಣಿಸುವಾಗ ಇಂಧನ ವೆಚ್ಚವು ಕಡಿಮೆಯಾಗುತ್ತದೆ.

Maruti Swift Tata Punch Maruti WagonR Why Kannadigas Like Here The Reason

ಪಾರ್ಕಿಂಗ್ ಮಾಡುವುದು ಬಲುಸುಲಭ - ಹಳ್ಳಿ & ಪಟ್ಟಣ ರಸ್ತೆಗೂ ಸೈ:

ಮಾರುತಿ ಸುಜುಕಿ ಸ್ವಿಫ್ಟ್, ಟಾಟಾ ಪಂಚ್ ಹಾಗೂ ಮಾರುತಿ ಸುಜುಕಿ ವ್ಯಾಗನ್ಆರ್ ಕಾರುಗಳು ಗಾತ್ರದಲ್ಲಿ ಚಿಕ್ಕದಾಗಿವೆ. ಮೈಸೂರು, ತುಮಕೂರು, ಮಂಗಳೂರಿನಂತಹ ನಗರದಲ್ಲಿ ಮನೆ ಮುಂದೆ ಸಣ್ಣದಾದ ಜಾಗವಿರುತ್ತದೆ. ಅಲ್ಲಿಯೂ ಬೇಕಾದಕರೂ ಸುಲಭವಾಗಿ ಪಾರ್ಕಿಂಗ್ ಮಾಡಬಹುದು. ಕರ್ನಾಟಕದಲ್ಲಿ ನಗರಗಳಂತೆ ಬಹುಪಾಲು ಹಳ್ಳಿಗಳಿದ್ದು, ಈ ಮೂರು ಕಾರುಗಳನ್ನು ಲೀಲಾಜಾಲವಾಗಿ ಓಡಿಸಬಹುದು.

ಒಟ್ಟಾರೆಯಾಗಿ, ಇವೆಲ್ಲ ಕಾರುಗಳು ನೋಡುವುದಕ್ಕೆ ಕೊಂಚ ಮಟ್ಟಿಗೆ ಪ್ರೀಮಿಯಂ ವಿನ್ಯಾಸವನ್ನು ಹೊಂದಿವೆ. ಜೊತೆಗೆ 5 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಯರು ಆರಾಮದಾಯಕವಾಗಿ ಸಂಚಾರ ಮಾಡಬಹುದು. ಕೆಲವೊಮ್ಮೆ ಗ್ರಾಮೀಣ ಭಾಗದಲ್ಲಿ 6ಕ್ಕಿಂತ ಹೆಚ್ಚು ಮಂದಿ ಓಡಾಡುವುದನ್ನು ಸಹ ನೋಡಬಹುದು. ಆದರೂ ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸಬಲ್ಲವು. ಇಂತಹ ಹಲವು ಕಾರಣಗಳಿಂದ ಸ್ವಿಫ್ಟ್, ಪಂಚ್ ಹಾಗೂ ವ್ಯಾಗನ್ಆರ್ ಕಾರುಗಳನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

Article Published On: Wednesday, July 30, 2025, 11:31 [IST]
English summary
Maruti swift tata punch maruti wagonr why kannadigas like here the reason
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+