7 ಲಕ್ಷ.. ಲಕ್ಸುರಿ ಫೀಚರ್ಸ್, ಎಂಜಿ ಕಾಮೆಟ್ ಇವಿ ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದ್ರೆ ತಪ್ಪದೇ ಈ ಸ್ಟೋರಿ ಓದಿ!

ಭಾರತದ ಕಾರು ಮಾರುಕಟ್ಟೆಯಲ್ಲಿ ಎಂಜಿ ಮೋಟಾರ್ (MG Motor), ವಿಂಡ್ಸರ್ ಇವಿ (Windsor EV) ಮಾರಾಟದೊಂದಿಗೆ ಹೊಸದೊಂದು ಅಲೆಯನ್ನು ಸೃಷ್ಟಿಸುತ್ತಿದೆ. ಈ ಕಾರು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ದೊಡ್ಡ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಕಂಪನಿ ಮಾರಲ್ಪಡುವ ಎಲೆಕ್ಟ್ರಿಕ್ ಕಾರುಗಳಲ್ಲಿ ವಿಂಡ್ಸರ್ ಇವಿ ಮಾತ್ರವಲ್ಲದೆ, ಕಾಮೆಟ್ ಇವಿ (Comet EV) ಕೂಡ ಸ್ಥಾನ ಪಡೆದಿದೆ. ಸದ್ಯ ಎಂಜಿ ಮೋಟಾರ್ ಇದೇ 'ಕಾಮೆಟ್' ಎಲೆಕ್ಟ್ರಿಕ್ ಕಾರಿನ ಬೆಲೆಯನ್ನು ರೂ.19,000 ವರೆಗೆ ಏರಿಕೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ದೇಶೀಯ ಮಾರುಕಟ್ಟೆಯಲ್ಲಿ ಎಂಜಿ ಕಾಮೆಟ್ ಇವಿ (MG Comet EV) ಎಕ್ಸಿಕ್ಯೂಟಿವ್, ಎಕ್ಸೈಟ್, ಎಕ್ಸ್‌ಕ್ಲೂಸಿವ್ ಹಾಗೂ 100-ಇಯರ್ ಎಡಿಷನ್ ಎಂಬ 4 ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಇದರ ಆರಂಭಿಕ-ಶ್ರೇಣಿ ರೂಪಾಂತರ (ಎಂಟ್ರಿ-ಲೆವೆಲ್ ವೇರಿಯೆಂಟ್) ಎಂದೇ ಹೆಸರುವಾಸಿಯಾಗಿರುವ 'ಎಕ್ಸಿಕ್ಯೂಟಿವ್' ದರವನ್ನು ಯಾವುದೇ ರೀತಿಯಲ್ಲಿಯೂ ಅಧಿಕಗೊಳಿಸಲಾಗಿಲ್ಲ

MG Comet EV Price Hike Upto Rs 19 000 Details

ಎಂಜಿ ಕಾಮೆಟ್ ಇವಿಯ ಗರಿಷ್ಠ-ಶ್ರೇಣಿ ರೂಪಾಂತರ (ಟಾಪ್-ಎಂಡ್ ವೇರಿಯೆಂಟ್) 100-ಇಯರ್ ಎಡಿಷನ್ ಹಾಗೂ ಫಾಸ್ಟ್ ಚಾರ್ಜರ್‌ನೊಂದಿಗೆ ಲಭ್ಯವಿರುವ ಎಕ್ಸ್‌ಕ್ಲೂಸಿವ್ ರೂಪಾಂತರದ ಬೆಲೆಗಳು, ತಲಾ ರೂ.19,000 ವರೆಗೆ ಹೆಚ್ಚಳಗೊಂಡಿದೆ. ಅದೇ ರೀತಿಯಲ್ಲಿ ಫಾಸ್ಟ್ ಚಾರ್ಜರ್‌ ಆಯ್ಕೆಯಿಲ್ಲದ ಎಕ್ಸ್‌ಕ್ಲೂಸಿವ್ ರೂಪಾಂತರದ ದರ ರೂ.14,000 ವರೆಗೆ ಏರಿಕೆಯಾಗಿದೆ.

ಸಾಮಾನ್ಯ ಎಕ್ಸೈಟ್ ರೂಪಾಂತರದ (ವೇರಿಯೆಂಟ್) ಬೆಲೆ ರೂ.12,000 ಹಾಗೂ ಫಾಸ್ಟ್ ಚಾರ್ಜರ್‌ನೊಂದಿಗೆ ಸಿಗುವ ಇದೇ ಎಕ್ಸೈಟ್ ರೂಪಾಂತರದ ದರ ರೂ.17,000 ವರೆಗೆ ಅಧಿಕಗೊಂಡಿದೆ. ಬೆಲೆ ಏರಿಕೆಯಾದ ಹಿನ್ನೆಲೆ, ನೂತನ ಎಂಜಿ ಕಾಮೆಟ್ ಇವಿ ಕನಿಷ್ಠ ರೂ.7 ಲಕ್ಷ ಮತ್ತು ಗರಿಷ್ಠ ರೂ.9.84 ಲಕ್ಷ ಎಕ್ಸ್-ಶೋರೂಂ ದರವನ್ನು ಒಳಗೊಂಡಿದೆ.

MG Comet EV Price Hike Upto Rs 19 000 Details

ಈ ಕಾರು 17.3 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರ್, 42 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 110 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ ಭರ್ತಿ ಚಾರ್ಜ್‌ನಲ್ಲಿ 230 ಕಿಲೋಮೀಟರ್‌ಗೂ ರೇಂಜ್ (ಮೈಲೇಜ್) ನೀಡುತ್ತದೆ.

ನೂತನ ಎಂಜಿ ಕಾಮೆಟ್ ಇವಿ, 2-ಡೋರ್ ಆಯ್ಕೆಯನ್ನು ಹೊಂದಿದೆ. ಜೊತೆಗೆ 4 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಈ ಕಾರಿನ ಬ್ಯಾಟರಿ ಪ್ಯಾಕ್, 3.3 ಕೆಡಬ್ಲ್ಯೂ ಚಾರ್ಜ‌ರ್‌ನ್ನು ಉಪಯೋಗ ಮಾಡಿದಾಗ 0 ರಿಂದ 100% ಚಾರ್ಜ್ ಆಗಲು 7 ಗಂಟೆ ತೆಗೆದುಕೊಳ್ಳುತ್ತದೆ.

MG Comet EV Price Hike Upto Rs 19 000 Details

ಹೊಸ ಕಾಮೆಟ್ ಇವಿ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿನ ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಹಾಗೂ ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, January 30, 2025, 17:08 [IST]
English summary
Mg comet ev price hike upto rs 19000 details
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+