ಭಾರತದಲ್ಲಿ ದುಬಾರಿ ಚಿನಾ ಕಾರಿಗೆ ಫುಲ್ ಡಿಮ್ಯಾಂಡ್: ಶ್ರೀಮಂತರು ಮುಗಿಬಿದ್ದು ಖರೀದಿ!
ಎಂಜಿ ಮೋಟಾರ್ ಕಂಪನಿಯು ಐಷಾರಾಮಿ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಭಾರತದ ಎರಡನೇ ಅತಿದೊಡ್ಡ ಬ್ರಾಂಡ್ ಆಗಿ ಬೆಳೆದಿದೆ. MG ಸೈಬರ್‌ಸ್ಟರ್ ಮತ್ತು MG M9 ಪ್ರೆಸಿಡೆನ್ಶಿಯಲ್ ಲಿಮೋಸಿನ್ ಕಾರುಗಳ ಸಂಯೋಜಿತ ಯಶಸ್ಸಿನಿಂದ ಇದು ಪ್ರಭಾವಶಾಲಿ ಮೈಲಿಗಲ್ಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಎರಡೂ ಮಾಡಲ್‌ಗಳು ಅಸಾಧಾರಣ ಮಾರುಕಟ್ಟೆ ಪ್ರತಿಕ್ರಿಯೆ ಮತ್ತು ಬಲವಾದ ಬೇಡಿಕೆಯನ್ನು ಪಡೆಯುತ್ತಲೇ ಇವೆ. ಇವು 3 ರಿಂದ 4 ತಿಂಗಳ ಕಾಯುವ ಅವಧಿಯನ್ನು ಹೊಂದಿವೆ. ಈ ಬೇಡಿಕೆಯ ಆಧಾರದ ಮೇಲೆ ಈಗ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರ್ ಎಂದು MG ಸೈಬರ್‌ಸ್ಟರ್ ಅನ್ನು ಘೋಷಿಸಲಾಗಿದೆ.
ಜುಲೈ 2025 ರಲ್ಲಿ ಬಿಡುಗಡೆಯಾದಾಗಿನಿಂದ, ಐಷಾರಾಮಿ ಶೋರೂಂ ಆಗಿರುವ ಎಂಜಿ ಸೆಲೆಕ್ಟ್ ಮೂಲಕ 256 ಯುನಿಟ್ ಕಾರುಗಳನ್ನು (ಕೇವಲ ಎರಡು ತಿಂಗಳಲ್ಲಿ) ಮಾರಾಟ ಮಾಡಲಾಗಿದೆ. ಬುಕಿಂಗ್‌ಗಳು ಹರಿದುಬರುತಿದ್ದು, ಗ್ರಾಹಕರು ಈ ಕಾರಿನ ಖರೀದಿಗೆ ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ. ಇತರ ಇವಿ ಸ್ಪೋರ್ಟ್ಸ್ ಕಾರುಗಳಿಗೆ ಹೋಲಿಸಿದರೆ ಭಾರತದಲ್ಲಿ ಇದು ಕೈಗೆಟುಕುವ ಎಲೆಕ್ಟ್ರಿಕ್ ಸೂಪರ್ ಸ್ಪೋರ್ಟ್ ಕಾರು ಕೂಡ ಹೌದು.

ಈ ಕುರಿತು ಪ್ರತಿಕ್ರಿಯಿಸಿದ ಎಂಜಿ ಸೆಲೆಕ್ಟ್‌ನ ಮಧ್ಯಂತರ ಮುಖ್ಯಸ್ಥ ಮಿಲಿಂದ್ ಶಾ, "ಭಾರತದ ಐಷಾರಾಮಿ EV ವಿಭಾಗದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿರುವುದು ನಮ್ಮ ಮಾಡಲ್‌ಗಳು ಪಡೆದ ಅದ್ಭುತ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ. MG ಸೈಬರ್‌ಸ್ಟರ್ ಮತ್ತು MG M9 ಪ್ರೆಸಿಡೆನ್ಶಿಯಲ್ ಲಿಮೋಸಿನ್ ಎರಡೂ ನಿಜವಾಗಿಯೂ ವಿಶೇಷವಾದದ್ದನ್ನು ಬಯಸುವ ವಿವೇಚನಾಶೀಲ ಗ್ರಾಹಕರನ್ನು ಸೆಳೆಯುತ್ತಿವೆ. ಎಂಜಿ ಸೆಲೆಕ್ಟ್‌ನಲ್ಲಿ ಈ ವಿಶೇಷ ಮಾಲೀಕತ್ವದ ಅನುಭವವನ್ನು ರಚಿಸಲು ನಾವು ಹೆಮ್ಮೆಪಡುತ್ತೇವೆ" ಎಂದರು.
ಐಕಾನಿಕ್ MGB ರೋಡ್‌ಸ್ಟರ್‌ನ ಪರಂಪರೆಯಲ್ಲಿ ಬೇರೂರಿರುವ MG ಸೈಬರ್‌ಸ್ಟರ್ ಪವರ್ ಮತ್ತು ಪರ್ಫಾಮೆನ್ಸ್ ನಿಂದ ತುಂಬಿದ ಫ್ಯೂಚರಿಸ್ಟಿಕ್ ರೋಡ್‌ಸ್ಟರ್ ಆಗಿದ್ದು, ಓಪನ್-ಟಾಪ್ ಉಲ್ಲಾಸವನ್ನು ಬಯಸುವ ಸ್ಪೋರ್ಟ್ಸ್ ಕಾರು ಉತ್ಸಾಹಿಗಳಿಗಾಗಿ ರಚಿಸಲಾಗಿದೆ. ಇದರ ಡಿಸೈನ್, ಎಲೆಕ್ಟ್ರಿಕ್ ಕತ್ತರಿ ಬಾಗಿಲುಗಳು, ಸಾಫ್ಟ್ - ಟಾಪ್ ರೂಫ್ ಮತ್ತು ಪ್ರಭಾವಶಾಲಿ ಡ್ರ್ಯಾಗ್ ಗುಣಾಂಕವು ಕ್ಲಾಸಿಕ್ ಶೈಲಿಯನ್ನು ಆಧುನಿಕ ನಾವೀನ್ಯತೆಯೊಂದಿಗೆ ಒಂದುಗೂಡಿಸುತ್ತದೆ.

ಹೊಸ ಎಂಜಿ ಸೈಬರ್‌ಸ್ಟರ್ ಕಾರಿನಲ್ಲಿ ಡ್ಯುಯಲ್ - ಮೋಟಾರ್ ಆಲ್ - ವೀಲ್ - ಡ್ರೈವ್ ಸೆಟಪ್ ನೀಡಲಾಗಿದ್ದು, ಇದರ ಮೋಟಾರ್ 510 PS ಪವರ್ ಮತ್ತು 725 Nm ಟಾರ್ಕ್ ಅನ್ನು ನೀಡುತ್ತದೆ. ಸೈಬರ್‌ಸ್ಟರ್ ಕೇವಲ 3.2 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ಡ್ರೈವ್ ನಿಜವಾಗಿಯೂ ಇವಿ ಕಾರಿನಲ್ಲಿ ಇಷ್ಟೊಂದು ಪವರ್ ಇದೆಯೇ ಎಂದೆನಿಸುತ್ತದೆ.
ತೀಕ್ಷ್ಣವಾದ DRL ಗಳು, ಸಕ್ರಿಯ ಏರೋ ಘಟಕಗಳನ್ನು ಹೊಂದಿರುವ ಕ್ಯಾಂಬ್ಯಾಕ್ ಹಿಂಭಾಗ ಮತ್ತು ಬ್ರೆಂಬೊ 4- ಪಿಸ್ಟನ್ ಮುಂಭಾಗದ ಬ್ರೇಕ್ ಕ್ಯಾಲಿಪರ್‌ಗಳಂತಹ ಸಿಗ್ನೇಚರ್ ವಿನ್ಯಾಸ ಅಂಶಗಳು ಕಾರಿಗೆ ಸ್ಪೋರ್ಟಿ ಲುಕ್ ನೀಡುತ್ತವೆ. ಪಿರೆಲ್ಲಿ P-ಝೀರೋ ಟೈರ್‌ಗಳೊಂದಿಗೆ ಜೋಡಿಸಲಾದ ಇದರ 20- ಇಂಚಿನ ಸ್ಟಾಗರ್ಡ್ ಅಲಾಯ್ ವೀಲ್‌ಗಳು ಉತ್ತಮ ಹಿಡಿತ ಮತ್ತು ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತವೆ.

JSW MG ಮೋಟಾರ್ ಇಂಡಿಯಾ ದೇಶಾದ್ಯಂತದ ಪ್ರಮುಖ ನಗರಗಳಲ್ಲಿ 14 MG SELECT ಅನುಭವ ಕೇಂದ್ರಗಳನ್ನು ಉದ್ಘಾಟಿಸಿದೆ. ಈ ಅನುಭವ ಕೇಂದ್ರಗಳು ಭಾರತದಲ್ಲಿ ಕಾರು ಖರೀದಿದಾರರಿಗೆ ಸಂವೇದನಾಶೀಲ ಅನುಭವಗಳು, ವೈಯಕ್ತಿಕಗೊಳಿಸಿದ ಸೇವೆಗಳು, ಹೊಸ ಯುಗದ ಐಷಾರಾಮಿ, ನಾವೀನ್ಯತೆ ಮತ್ತು ಸುಸ್ಥಿರತೆಯೊಂದಿಗೆ ಸಂಯೋಜಿಸಲ್ಪಟ್ಟ ಐಕಾನಿಕ್ ಕಾರು ಶ್ರೇಣಿಯನ್ನು ನೀಡುತ್ತವೆ ಎಂದು ಎಂಜಿ ಮೋಟಾರ್ ಹೇಳಿದೆ.
ಎರಡು ತಿಂಗಳ ಹಿಂದೆ ಬಿಡುಗಡೆಯಾದ ಎಂಜಿ ಸೈಬರ್‌ಸ್ಟರ್, ತ್ವರಿತವಾಗಿ ಭಾರತದ ಅತಿ ಹೆಚ್ಚು ಮಾರಾಟವಾಗುವ ಸ್ಪೋರ್ಟ್ಸ್ ಕಾರಾಗಿ ಮಾರ್ಪಟ್ಟಿತು, ಪ್ರೀಮಿಯಂ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಮಾರುಕಟ್ಟೆಯಲ್ಲಿ ತನ್ನ ಆಕರ್ಷಣೆಯನ್ನು ಎತ್ತಿ ತೋರಿಸಿದೆ. ಈ ವೇಗವನ್ನು ಹೀಗೆಯೇ ಮುಂದುವರಿಸುತ್ತಾ 2026 ರ ವೇಳೆಗೆ ನಂ.1 ಆಗುವ ಗುರಿ ಹೊಂದಿರುವುದಾಗಿ ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ತಿಳಿಸಿದೆ.


Click it and Unblock the Notifications








