MG Motor: ಭಾರತದ ಅತ್ಯಂತ ಅಗ್ಗದ ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರ್: 6 ಅದ್ಭುತ ವಿಷಯಗಳು!

ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಎಂಜಿ ಮೋಟಾರ್‌, ಹೊಸ ಸೈಬರ್ ಸ್ಟರ್ (MG Cyberster) ಎಂಬ ಹೊಸ ಕಾರನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದು ದೇಶದ ಮೊದಲ ಎಲೆಕ್ಟ್ರಿಕ್ ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರ್ ಆಗಿ ಭಾರತದಲ್ಲಿ ಬಿಡುಗಡೆಯಾಗಿದೆ. ಇದು ವಾಹನ ತಯಾರಕರ ಪ್ರೀಮಿಯಂ ಎಂಜಿ ಸೆಲೆಕ್ಟ್ ಚಾನೆಲ್ ಮೂಲಕ ಮಾರಾಟವಾಗುವ ಎರಡನೇ ಕಾರಾಗಿದೆ. ಭಾರತದಲ್ಲಿ ಬ್ರ್ಯಾಂಡ್ ನ ಪ್ರಮುಖ ಮಾದರಿಯಾಗಿ ಕಾರ್ಯನಿರ್ವಹಿಸಲಿದೆ. ಭಾರತದ ಅತ್ಯಂತ ಕೈಗೆಟುಕುವ ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರಿನ ಬಗ್ಗೆ ತಿಳಿದುಕೊಳ್ಳಬೇಕಾದ 6 ಪ್ರಮುಖ ವಿಷಯಗಳು ಇಲ್ಲಿವೆ.

ಅಗ್ಗದ ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರು: MG ಸೈಬರ್‌ಸ್ಟರ್ ಭಾರತದ ಅತ್ಯಂತ ಕೈಗೆಟುಕುವ ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರು ಎಂದು ಕಂಪನಿ ಹೇಳಿದೆ. ರೂ. 74.99 ಲಕ್ಷದ ಪರಿಚಯಾತ್ಮಕ ಎಕ್ಸ್-ಶೋರೂಂ ಬೆಲೆಯಲ್ಲಿ ಸಿಗಲಿದೆ. ಇದನ್ನು ಮೊದಲೇ ಕಾಯ್ದಿರಿಸಿದ್ದ ಖರೀದಿದಾರರಿಗೆ ರೂ. 72.49 ಲಕ್ಷದಲ್ಲಿ ನೀಡಲಾಗುತ್ತದೆ. ಇದು ದೇಶದಲ್ಲಿನ ಇತರ ಪರ್ಫಾಮೆನ್ಸ್ ಕನ್ವರ್ಟಿಬಲ್ ಕಾರುಗಳಿಗಿಂತ ಗಮನಾರ್ಹವಾಗಿ ಕಡಿಮೆ ಬೆಲೆಯಾಗಿದೆ.

mg-cyberster-electric-convertible-car-6-highlights

ಪವರ್‌ಫುಲ್ ಪರ್ಫಾಮೆನ್ಸ್: ಸೈಬರ್‌ಸ್ಟರ್ 77kWh ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಹೊಂದಿದ್ದು, ಇದು ಒಟ್ಟು 510bh ಪವರ್ ಮತ್ತು 725Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಕೇವಲ 3.2 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗವನ್ನು ತಲುಪುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 200 ಕಿ.ಮೀಗೆ ಸೀಮಿತವಾಗಿದೆ.

ಉತ್ತಮ ರೇಂಜ್: MIDC - ಪ್ರಕಾರ ಪ್ರತಿ ಚಾರ್ಜ್‌ಗೆ 580 ಕಿ.ಮೀ ರೇಂಜ್ ನೀಡುತ್ತದೆ. MG ಸೈಬರ್‌ಸ್ಟರ್ ಉನ್ನತ - ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ವಾಹನಗಳಲ್ಲಿ ಎದ್ದು ಕಾಣುತ್ತದೆ. ಆಲ್ - ವೀಲ್ - ಡ್ರೈವ್ (AWD) ವ್ಯವಸ್ಥೆಯು ಚಾಲನಾ ಉತ್ಸಾಹ ಮತ್ತು ರಸ್ತೆ ಹಿಡಿತವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿದೆ.

mg-cyberster-electric-convertible-car-6-highlights

ಆಕರ್ಷಕ ವಿನ್ಯಾಸ: ಸೈಬರ್‌ಸ್ಟರ್‌ನ ವಿನ್ಯಾಸವು ಕತ್ತರಿ ಬಾಗಿಲುಗಳು (ಈ ಬೆಲೆ ವಿಭಾಗದಲ್ಲಿ ಅಪರೂಪ), ಸಾಫ್ಟ್-ಟಾಪ್ ಕನ್ವರ್ಟಿಬಲ್ ರೂಫ್ ಮತ್ತು 20-ಇಂಚಿನ ಸ್ಟಾಗರ್ಡ್ ಅಲಾಯ್ ವೀಲ್‌ಗಳನ್ನು ಹೊಂದಿರುವ ಏರೋಡೈನಮಿಕ್ ಸಿಲೂಯೆಟ್ ಅನ್ನು ಒಳಗೊಂಡಿದೆ. ಫ್ಲೇರ್ ರೆಡ್, ನ್ಯೂಕ್ಲಿಯರ್ ಹಳದಿ, ಆಂಡಿಸ್ ಗ್ರೇ ಮತ್ತು ಮಾಡರ್ನ್ ಬೀಜ್ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.

ಪ್ರೀಮಿಯಂ ಕ್ಯಾಬಿನ್: ಒಳಾಂಗಣವು "ಫೈಟರ್ ಜೆಟ್" ಅನುಭವವನ್ನು ನೀಡುತ್ತದೆ - ಸುತ್ತುವರಿದ ಟ್ರಿಪಲ್-ಸ್ಕ್ರೀನ್ ಸೆಟಪ್ (10.25-ಇಂಚಿನ ಸೆಂಟ್ರಲ್ ಟಚ್‌ಸ್ಕ್ರೀನ್, ಎರಡು 7-ಇಂಚಿನ ಡ್ರೈವರ್ ಡಿಸ್ಪ್ಲೇಗಳು), ಪ್ರೀಮಿಯಂ ವೆಗನ್ ಲೆದರ್ ಮತ್ತು ಡೈನಾಮಿಕಾ ಸ್ಯೂಡ್ ಅಪ್ಹೋಲ್ಸ್ಟರಿ, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ರೀಜೆನ್ ಬ್ರೇಕಿಂಗ್‌ಗಾಗಿ ಪ್ಯಾಡಲ್ ಶಿಫ್ಟರ್‌ಗಳು, ಪವರ್ಡ್ ಸೀಟ್‌ಗಳು, ಬೋಸ್ ಆಡಿಯೊ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ/ಆಂಡ್ರಾಯ್ಡ್ ಆಟೋ ಮತ್ತು ಸುಧಾರಿತ ಟೆಲಿಮ್ಯಾಟಿಕ್ಸ್ ಇದೆ.

mg-cyberster-electric-convertible-car-6-highlights

ಸಮಗ್ರ ಸುರಕ್ಷತೆ ಮತ್ತು ಆಧುನಿಕ ಫೀಚರ್ಸ್: ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ನಾಲ್ಕು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), EBD ಜೊತೆಗೆ ABS, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್-2 ADAS (ಹೊಂದಾಣಿಕೆಯ ಕ್ರೂಸ್, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ಮತ್ತು ಎಮರ್ಜೆನ್ಸಿ ಬ್ರೇಕಿಂಗ್) ಸೇರಿವೆ.

ಎಂಜಿ ಸೈಬರ್ ಸ್ಟರ್ 2 ಸೀಟರ್ ಕಾರಾಗಿದೆ. ಇದು ಅತ್ಯುತ್ತಮ ರೋಡ್ ಸ್ಟರ್ ಅನುಪಾತ ಮತ್ತು 2-ಡೋರ್ ಬಾಡಿ ಡಿಸೈನ್‌ನೊಂದಿಗೆ ಸಾಫ್ಟ್-ಟಾಪ್ ಕನ್ವರ್ಟಿಬಲ್ ರೂಫ್ ಹೊಂದಿದೆ. ಇದು ಕೇವಲ 10 ಸೆಕೆಂಡುಗಳಲ್ಲಿ ಟಾಪ್ ತೆರೆಯುತ್ತದೆ ಹಾಗೆಯೇ ಮುಚ್ಚುತ್ತದೆ. ಈ ಕಾರು ಭಾರತದಲ್ಲಿ ಯಾವ ಮಟ್ಟಿಗೆ ಯಶಸ್ಸು ಕಾಣಲಿದೆ ಕಾದುನೋಡಬೇಕಿದೆ.

More from DriveSpark

Article Published On: Saturday, July 26, 2025, 14:36 [IST]
English summary
Mg cyberster electric convertible car 6 highlights
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+