ಜಿಂದಾಲ್ - ಎಂಜಿ ದೋಸ್ತಿ: ವಿಮಾನದಂತಿರುವ ಹೊಸ ಸೈಬರ್‌ಸ್ಟರ್ ಕಾರು ಬಿಡುಗಡೆ.. ಬೆಲೆ ಎಷ್ಟು, ವಿಶೇಷತೆಗಳೇನು?
ಭಾರತದಲ್ಲಿ ಜಿಂದಾಲ್ & ಎಂಜಿ ಮೋಟಾರ್ಸ್ ವ್ಯಾಪಾರ ಪಾಲುದಾರಿಕೆ ಹೊಂದಿವೆ. ಅದರಡಿ ದೇಶೀಯ ಮಾರುಕಟ್ಟೆಯಲ್ಲಿ ಎಂಜಿ ಕಂಪನಿಯು ವಿವಿಧ ಹೊಚ್ಚ ಹೊಸ ಕಾರುಗಳನ್ನು ಮಾರಾಟಕ್ಕೆ ತರುತ್ತಿದೆ. ನವದೆಹಲಿಯಲ್ಲಿಂದು ನಡೆದ ಅದ್ದೂರಿ ಸಮಾರಂಭದಲ್ಲಿ ನೂತನ 'ಸೈಬರ್‌ಸ್ಟರ್' ಹೆಸರಿನ ಕಾರನ್ನು ಬಿಡುಗಡೆಗೊಳಿಸಲಾಗಿದೆ. ಇದೊಂದು ಎಲೆಕ್ಟ್ರಿಕ್ ಸ್ಪೋರ್ಟ್ಸ್ ಸೆಡಾನ್ ಆಗಿದ್ದು, ಆಕರ್ಷಕ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅದಕ್ಕೆ ತಕ್ಕಂತೆ ದುಬಾರಿ ಬೆಲೆಯನ್ನೇ ಹೊಂದಿದೆ. ಬನ್ನಿ, ಆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಎಂಜಿ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸೆಡಾನ್ (MG Cyberster Electric Sedan), ರೂ.74.99 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಈ ಬೆಲೆಯೂ ಹೊಸ ಬುಕ್ಕಿಂಗ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಪ್ರಿ - ಬುಕ್ಕಿಂಗ್ ಮಾಡಿದವರಿಗೆ ರೂ.72.49 ಲಕ್ಷ (ಎಕ್ಸ್-ಶೋರೂಂ) ದರದಲ್ಲಿ ಖರೀದಿಗೆ ಲಭ್ಯವಾಗಲಿದೆ.

ನೂತನ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸೆಡಾನ್, ಹೊರಭಾಗದಲ್ಲಿ ನೋಡುಗರ ಕಣ್ಣುಕ್ಕುವಂತಹ ವಿನ್ಯಾಸವನ್ನು ಹೊಂದಿದೆ. ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಬ್ಲಾಂಕ್ಡ್ ಆಫ್ ಗ್ರಿಲ್, ಬಟರ್‌ಫ್ಲೈ ಡೋರ್‌ಗಳು, ವಿಡ್ತ್ ಡಿಫ್ಯೂಸರ್, ಎಲ್‌ಇಡಿ ಲೈಟ್ ಬಾರ್, ಟರ್ನ್ ಇಂಡಿಕೇಟರ್ಸ್, ಕನ್ವರ್ಟಿಬಲ್ ಸಾಫ್ಟ್-ಟಾಪ್ ಹಾಗೂ ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಪಡೆದಿದೆ.
ಈ ಕಾರು ಕೆಲವೇ 2 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಓಡಾಟ ನಡೆಸಬಹುದು. ಫ್ಲೇರ್ ರೆಡ್, ನ್ಯೂಕ್ಲಿಯರ್ ಯೆಲ್ಲೋ, ಆಂಡಿಸ್ ಗ್ರೇ ಹಾಗೂ ಮಾಡ್ರನ್ ಬೀಜ್ ಎಂಬ 4 ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಜೊತೆಗೆ 4,535 ಎಂಎಂ ಉದ್ದ, 1,913 ಎಂಎಂ ಅಗಲ ಹಾಗೂ 1,329 ಎಂಎಂ ಎತ್ತರವು ಇದೆ.
ಹೊಸ ಎಂಜಿ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸೆಡಾನ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 77 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 580 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ವಿಶೇಷವಾಗಿ ಎಡಬ್ಲ್ಯೂಡಿ (ಆಲ್ - ವೀಲ್ ಡೈವ್) ಟೆಕ್ನಾಲಜಿಯನ್ನು ಪಡೆದಿದೆ .
ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 510 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 725 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ಕೇವಲ 3.2 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಜೊತೆಗೆ 200 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.
ನೂತನ ಸೈಬರ್‌ಸ್ಟರ್‌ನ ಕ್ಯಾಬಿನ್ ವಿನ್ಯಾಸವು ತುಂಬಾ ಅಚ್ಚುಕಟ್ಟಾಗಿದೆ. ಇದು 3-ಸ್ಕ್ರೀನ್ ಸೆಟಪ್‌ನ್ನು ಹೊಂದಿದೆ. 10.25-ಇಂಚಿರುವ ಡಿಜಿಟಲ್ ಡ್ರೈವರ್ ಸ್ಕ್ರೀನ್, 7-ಇಂಚಿರುವ ಆಕ್ಸಿಲರಿ ಸ್ಕ್ರೀನ್ ಹಾಗೂ 7-ಇಂಚಿರುವ ವರ್ಟಿಕಲ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ನ್ನು ಪಡೆದಿದೆ. ಹಾಗೆಯೇ ಡುಯಲ್ - ಝೋನ್ ಕ್ಲೇಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 8 ಸ್ಪೀಕರ್ ಆಡಿಯೊ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, ಫ್ಲಾಟ್ ಬಾಟಮ್ ಸ್ಟೀರಿಂಗ್ ವೀಲ್ ಹಾಗೂ ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ಕಾರು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ 4 - ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ - ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಲೆವೆಲ್ 2 ಎಡಿಎಎಸ್ (ಅಡ್ವಾನ್ಸ್ಡ್ - ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗು 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications