ಯಾರೂ ಖರೀದಿಸದ ಕಾರಿಗೆ ದಿಢೀರ್ ಹೆಚ್ಚಾಯ್ತು ಡಿಮ್ಯಾಂಡ್: ಮಾರಾಟದಲ್ಲಿ ಏರಿಕೆ... ಏನಾಗಿದೆ?

ಎಂಜಿ ಮೋಟಾರ್‌ ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ತನ್ನ ಕಾರುಗಳನ್ನು ಗ್ರಾಹಕರಿಗೆ ಹತ್ತಿರ ಮಾಡಲು ಪರದಾಡುತ್ತಿದೆ. ಕಂಪನಿಯ ಎಲೆಕ್ಟ್ರಿಕ್ ಕಾರುಗಳು ಒಂದಷ್ಟು ಮಟ್ಟಿಗೆ ಗ್ರಾಹಕರನ್ನು ಸೆಳೆಯುತ್ತಿವೆಯಾದರೂ, ಇಂಧನ ಚಾಲಿತ ವಾಹನಗಳಿಗೆ ಖ್ಯಾರೆ ಎನ್ನುತ್ತಿಲ್ಲ. ಕಂಪನಿಯ ಪ್ರಮುಖ ಕಾರೊಂದು ಎಲ್ಲಾ ಐಷಾರಾಮಿ ಫೀಚರ್ಸ್, ಉತ್ತಮ ಪರ್ಫಾಮೆನ್ಸ್, ಆಕರ್ಷಕ ಡಿಸೈನ್, ಅತ್ಯಾಧುನಿಕ ಫೀಚರ್ಸ್ ಒಳಗೊಂಡಿದ್ದರು ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ವಿಫಲವಾಗುತ್ತಿದೆ. ಬಿಡುಗಡೆಯಾದಾಗಿನಿಂದ ಕಾರಿನ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಕುಸಿತವಾಗುತ್ತಲೇ ಇತ್ತು. ಆದರೆ ಇದೀಗ ಕಳೆದ ಏಪ್ರಿಲ್ ತಿಂಗಳಲ್ಲಿ ಮಾರಾಟದಲ್ಲಿ ಹೆಚ್ಚಳವಾಗಿದೆ. ಅಷ್ಟಕ್ಕೂ ಈ ಕಾರು ಯಾವುದು?

'ಎಂಜಿ ಹೆಕ್ಟರ್' ಎಸ್‌ಯುವಿ ಏಪ್ರಿಲ್ 2025 ರಲ್ಲಿ ಒಟ್ಟು 977 ಯುನಿಟ್‌ ಕಾರುಗಳು ಮಾರಾಟವಾಗಿವೆ. ಕಳೆದ ತಿಂಗಳು (ಮಾರ್ಚ್ 2025) ಕೇವಲ 547 ಯುನಿಟ್‌ ಕಾರುಗಳು ಮಾರಾಟವಾಗಿದ್ದವು. ತಿಂಗಳಿನಿಂದ ತಿಂಗಳಿಗೆ (MOM) ಆಧಾರದ ಮೇಲೆ MG ಹೆಕ್ಟರ್ ಶೇ78.6 ರಷ್ಟು ಬೆಳವಣಿಗೆಯನ್ನು ಕಂಡಿದ್ದು, ಕಳೆದ 12 ತಿಂಗಳುಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 7,571 ಯುನಿಟ್‌ ವಾಹನಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ.

mg-hector-suv-sales-report-2025-april

ಭರ್ಜರಿ ಕಾರಿದು: ಈ ಎಸ್‌ಯುವಿ ಐಷಾರಾಮಿ ಫೀಚರ್ಸ್ ಹೊಂದಿದ್ದು, 14 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಫುಲ್-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸನ್‌ರೂಫ್, 360 - ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಪ್ರಯಾಣಿಕರ ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಒಳಗೊಂಡಿದೆ. ಈ ಎಸ್‌ಯುವಿ ಆರಂಭಿಕ ಬೆಲೆಯು ರೂ.14 ಲಕ್ಷದಿಂದ ಟಾಪ್ ವೇರಿಯೆಂಟ್‌ಗೆ ರೂ.22.89 ಲಕ್ಷ (ಎಕ್ಸ್-ಶೋರೂಂ) ವಿದೆ.

mg-hector-suv-sales-report-2025-april

ಹೊಸ ಎಂಜಿ ಹೆಕ್ಟರ್ ಎಂಜಿನ್ ವಿಷಯಕ್ಕೆ ಬಂದರೆ ಈ ಕಾರು 1.5 - ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.0 - ಲೀಟರ್ ಡಿಸೇಲ್ ಎಂಜಿನ್‌ ಆಯ್ಕೆಗಳನ್ನು ಹೊಂದಿದೆ. 6-ಸ್ಪೀಡ್ ಮ್ಯಾನುವಲ್/ ಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಇಷ್ಟೆಲ್ಲಾ ಇದ್ದರೂ ಕಾರು ಗ್ರಾಹಕರನ್ನು ಸೆಳೆಯುವಲ್ಲಿ ಅಷ್ಟೇನೂ ಯಶಸ್ವಿಯಾಗಿಲ್ಲ.

ನಿಜಕ್ಕೆ ಈ ಕಾರಿಗೆ ಭಾರತದಲ್ಲಿ ಬೇಡಿಕೆ ಕುಸಿದಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ ಅಂದರೆ ಏಪ್ರಿಲ್ 2024 ರಲ್ಲಿ 1,813 ಯುನಿಟ್ ವಾಹನಗಳು ಮಾರಾಟವಾಗಿದ್ದವು, ಆದರೆ ಈ ವರ್ಷ ಏಪ್ರಿಲ್ 2025 ರಲ್ಲಿ ಎಂಜಿ ಹೆಕ್ಟರ್‌ನ ಒಟ್ಟು ಮಾರಾಟದ ಅಂಕಿ ಅಂಶವು ಕೇವಲ 977 ಯುನಿಟ್‌ಗಳಾಗಿದೆ. ಮಾಸಿಕ ಆಧಾರದ ಮೇಲೆ ಮಾತ್ರ ಈ ಕಾರು ಶೇ78.6 ಬೆಳವಣಿಗೆಯನ್ನು ಕಂಡಿದೆ.

mg-hector-suv-sales-report-2025-april

ಕಳೆದ ಆರು ತಿಂಗಳ ಮಾರಾಟವನ್ನು ನೋಡುವುದಾದ್ರೆ, ನವೆಂಬರ್ 2024 ರಲ್ಲಿ 1,106 ಕಾರುಗಳು, ಡಿಸೆಂಬರ್ 2024 ರಲ್ಲಿ 1,373 ಕಾರುಗಳು, ಜನವರಿ 2025 ರಲ್ಲಿ 449 ಕಾರುಗಳು, ಫೆಬ್ರವರಿ 2025 ರಲ್ಲಿ 515 ಕಾರುಗಳು, ಮಾರ್ಚ್ 2025 ರಲ್ಲಿ 547 ಕಾರುಗಳು, ಏಪ್ರಿಲ್ 2025 ರಲ್ಲಿ 977 ಕಾರುಗಳು ಮಾರಾಟವಾಗಿವೆ.

ಕಾರಿನ ಮಾರಾಟ ಕುಸಿತಕ್ಕೆ ಮುಖ್ಯ ಕಾರಣವೆಂದರೆ ಅದರ ಬೆಲೆ, ಭಾರತದಲ್ಲಿ ಗ್ರಾಹಕರು ಐಷಾರಾಮಿ ಫೀಚರ್ಸ್ ಹಾಗೂ ನಿರ್ಮಾಣ ಗುಣಮಟ್ಟಕ್ಕಿಂತ ಮುಖ್ಯವಾಗಿ ಅವುಗಳ ಬೆಲೆಯನ್ನು ಪರಿಗಣಿಸುತ್ತಾರೆ. ಇದಕ್ಕೆ ಉದಾಹರಣೆಯೆಂದರೆ ಮಾರುತಿ ಕಾರುಗಳು. ಎಂಜಿ ಮೋಟಾರ್ ಕೂಡ ಹೆಕ್ಟರ್ ಕಾರಿನ ಬೆಲೆ ಇಳಿಕೆ ಮಾಡಿದಲ್ಲಿ ಮಾರಾಟದಲ್ಲಿ ಏರಿಕೆ ಕಾಣುವ ಸಾಧ್ಯತೆ ಇದೆ.

More from DriveSpark

Article Published On: Friday, May 23, 2025, 13:15 [IST]
English summary
Mg hector suv sales report 2025 april
Read more on mg motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+