ಬಿಡುಗಡೆ ಮುನ್ನವೆ ಡೀಲರ್‌ಶಿಪ್ ತಲುಪಿದ MG M9 ಲಿಮೋಸಿನ್ ಕಾರು: ಎಲ್ಲವೂ ಬಹಿರಂಗ!

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ 2025 ರಲ್ಲಿ ಎಂಜಿ ಮೋಟಾರ್ ತನ್ನ ಬಹುನಿರೀಕ್ಷಿತ ಎಂ9 ಲಿಮೋಸಿನ್ ಕಾರನ್ನು ಪ್ರದರ್ಶಿಸಿತ್ತು. ಈ ಕಾರು ಭಾರತದಲ್ಲಿ ಇದೀಗ ಮಾರಾಟವಾಗಲು ಸಜ್ಜಾಗಿದೆ. ಇತ್ತೀಚೆಗಷ್ಟೆ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಎಂ9 ಎಲೆಕ್ಟ್ರಿಕ್ ಲಿಮೋಸಿನ್ ಕಾರಿನ ಬುಕಿಂಗ್ ಅನ್ನು ರೂ. 51,000 ಟೋಕನ್ ಮೊತ್ತದೊಂದಿಗೆ ಅಧಿಕೃತವಾಗಿ ಪ್ರಾರಂಭಿಸಿತ್ತು. ಅಷ್ಟರಲ್ಲಾಗಲೆ ಕಾರು ಡೀಲರ್‌ಶಿಪ್‌ಗಳನ್ನು ತಲುಪುತ್ತಿರುವುದು ಹಲವರನ್ನು ಅಚ್ಚರಿಗೊಳಿಸಿದೆ. ಎಂಜಿ ಎಂ 9 ಲಿಮೋಸಿನ್ ಇತ್ತೀಚಿನ ವೀಡಿಯೊದಲ್ಲಿ ಡೀಲರ್ ಶಿಪ್‌ಗೆ ಆಗಮಿಸುತ್ತಿರುವುದು ಕಂಡುಬಂದಿದೆ.

ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ರಸ್ತೆಯ ಬದಿಯಲ್ಲಿ ನಿಲ್ಲಿಸಿರುವ ಕಪ್ಪು ಬಣ್ಣದ ಐಷಾರಾಮಿ ಎಂಪಿವಿಯ ದೃಶ್ಯಗಳು ಕಾಣಿಸಿಕೊಂಡಿವೆ. ಇದು ಶೋರೂಂಗೆ ಸಾಗಿಸಲಾದ ಟ್ರಕ್ ನಿಂದ ಹೊರಬಂದಿರುವಂತೆ ಕಾಣುತ್ತದೆ. ಯಾರೋ ಇಡೀ ವಾಹನದ ವೀಡಿಯೊವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಾರಿನ ಬಿಡುಗಡೆ ಮುನ್ನವೇ ರಸ್ತೆಯಲ್ಲಿ ಕಾಣಿಸಿಕೊಂಡು ಹಲವರನ್ನು ಅಚ್ಚರಿಗೊಳಿಸಿದೆ.

mg-m9-limousine-arrives-at-dealerships-ahead-of-launch

ಈ ಅಲ್ಟ್ರಾ-ಐಷಾರಾಮಿ ಎಲೆಕ್ಟ್ರಿಕ್ ಲಿಮೋಸಿನ್ ಕಾರನ್ನು ಕಂಪನಿಯ ಪ್ರೀಮಿಯಂ ಚಾನೆಲ್ ಎಂಜಿ ಸೆಲೆಕ್ಟ್ ಮೂಲಕ ಮಾರಾಟ ಮಾಡಲಾಗುವುದು. ಎಂಜಿ ಎಂ9 ಕಾರಿನ ಅಧಿಕೃತ ಬುಕಿಂಗ್ ಈಗ ರೂ.51,000 ಟೋಕನ್ ಮೊತ್ತಕ್ಕೆ ನಡೆಯುತ್ತಿದೆ. ಜೂನ್ 2025 ಕ್ಕೆ ಕಾರು ಬಿಡುಗಡೆಯಾಗಲಿದೆ. ಆದರೆ ಅದಕ್ಕೂ ಮುನ್ನವೇ ಭಾರತದಲ್ಲಿ ಭಾರೀ ಸದ್ದು ಮಾಡುತ್ತಿದೆ.

ವಿಶೇಷತೆಗಳು: ಎಂಜಿ ಎಂ9 ನ ಗಮನಾರ್ಹ 90 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. 11 ಕಿಲೋವ್ಯಾಟ್ ಚಾರ್ಜರ್ ಬಳಸುವ ಮೂಲಕ 8.5 ಗಂಟೆಗಳಲ್ಲಿ ಬ್ಯಾಟರಿಯನ್ನು ಶೇಕಡಾ 5 ರಿಂದ ಶೇ100 ರಷ್ಟು ಸಂಪೂರ್ಣವಾಗಿ ರೀಚಾರ್ಜ್ ಮಾಡಬಹುದು ಎಂದು ಎಂಜಿ ಹೇಳಿದೆ.

mg-m9-limousine-arrives-at-dealerships-ahead-of-launch

ಇದು ಡಿಸಿ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯಗಳನ್ನು ಹೊಂದಿದೆ. ಇದರಲ್ಲಿ ಬ್ಯಾಟರಿಯನ್ನು ಕೇವಲ 30 ನಿಮಿಷಗಳಲ್ಲಿ ಶೇಕಡಾ 30 ರಿಂದ 80 ರಷ್ಟು ಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ. ಇದರ ಎಲೆಕ್ಟ್ರಿಕ್ ಮೋಟಾರು 241 ಬಿಹೆಚ್ ಪವರ್ ಹಾಗೂ 350 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂ9 ಇವಿ ಗರಿಷ್ಠ 180 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಎಂಜಿ ಎಂ 9 ಎಲೆಕ್ಟ್ರಿಕ್ ಎಂಪಿವಿಯ ಒಳಾಂಗಣವನ್ನು ಐಷಾರಾಮಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಮುಂದಿನ ಸಾಲಿನಲ್ಲಿ ಸುವ್ಯವಸ್ಥಿತ ಡ್ಯಾಶ್ಬೋರ್ಡ್ ಇದೆ. ಇದು ಇನ್ಫೋಟೈನ್ಮೆಂಟ್ ಮತ್ತು ಚಾಲನಾ ಮಾಹಿತಿಗೆ ಮೀಸಲಾಗಿರುವ ಎರಡು ವಿಭಿನ್ನ ಸ್ಕ್ರೀನ್‌ಗಳನ್ನು ಒಳಗೊಂಡಿದೆ. ಎರಡನೇ ಸಾಲಿನಲ್ಲಿ ಒಟ್ಟೋಮನ್ ಸೀಟುಗಳಿದ್ದು, ಇವು ತಂಪಾಗಿಸುವಿಕೆ ಮತ್ತು ಮಸಾಜ್ ಆಯ್ಕೆಗಳು, 3 - ಝೋನ್ ಕ್ಲೈಮೆಟ್ ಕಂಟ್ರೋಲ್ ಸಿಸ್ಟಮ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹೊಂದಿವೆ.

ಎರಡೂ ಮುಂಭಾಗದ ಆಸನಗಳು ವೆಂಟಿಲೇಟೆಡ್ ಮತ್ತು ಎಲೆಕ್ಟ್ರಾನಿಕ್ ಹೊಂದಾಣಿಕೆ ಸಾಮರ್ಥ್ಯಗಳನ್ನು ಹೊಂದಿವೆ. ಹಾಗೆಯೇ ಎಂಜಿ ಮೋಟಾರ್ ಡ್ಯುಯಲ್ - ಪ್ಯಾನ್ ಸನ್ ರೂಫ್ ಅನ್ನು ಅಳವಡಿಸಿದೆ. ಒಟ್ಟಾರೆ ಭಾರೀ ಬೇಡಿಕೆಯಿರುವ ಈ ಶ್ರೀಮಂತರ ಕಾರಿನ ಬೆಲಯ ವಿಷಯಕ್ಕೆ ಬಂದರೆ ಅಂದಾಜು 60 ರಿಂದ 70 ಲಕ್ಷ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, May 10, 2025, 5:00 [IST]
English summary
Mg m9 limousine arrives at dealerships ahead of launch
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+