ಟೊಯೊಟಾ ಫಾರ್ಚೂನರ್‌ಗೆ ಸೆಡ್ಡು ಹೊಡೆಯಲು ಸಜ್ಜಾದ ಹೊಸ ಎಂಜಿ ಎಸ್‍ಯುವಿ ಅನಾವರಣ

ಜನಪ್ರಿಯ ವಾಹನ ತಯಾರಕ ಕಂಪನಿಯಾದ JSW ಎಂಜಿ ಮೋಟಾರ್ (MG Motor) ತನ್ನ ಹೊಸ ಫುಲ್ ಸೈಜ್ ಎಸ್‍ಯುವಿಯಾದ ಮೆಜೆಸ್ಟರ್ ಮಾದರಿಯನ್ನು ಅನಾವರಣಗೊಳಿಸಿದೆ. ಇದು ಗ್ಲೋಸ್ಟರ್‌ನ ನವೀಕರಿಸಿದ ಹೆಚ್ಚು ಪ್ರೀಮಿಯಂ ರೂಪಾಂತರವಾಗಿದೆ. ಈ ಹೊಸ ಎಂಜಿ ಮೆಜೆಸ್ಟರ್ ಎಸ್‍ಯುವಿಯು ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗಲು ರೆಡಿಯಾಗಿದೆ. ಈ ಎಂಜಿ ಎಂಜಿ ಎಸ್‍ಯುವಿಯು ವಿನ್ಯಾಸವು ಜಾಗತಿಕವಾಗಿ ಮಾರಾಟವಾದ Maxus D90 ನಿಂದ ಹೆಚ್ಚು ಪ್ರೇರಿತವಾಗಿದೆ ಮತ್ತು ಈ ಎಲೆಕ್ಟ್ರಿಕ್ ಎಸ್‍ಯುವಿಯ ಒಳಭಾಗದಲ್ಲಿ ಹೊಸ ವಿನ್ಯಾಸವನ್ನು ಹೊಂದಿದೆ.

ಹೊಸ ಎಂಜಿ ಮೆಜೆಸ್ಟರ್ (MG Majestor) ಎಸ್‍ಯುವಿಯು ಬಿಡುಗಡೆ ದಿನಾಂಕ ಮತ್ತು ವಿವರಗಳು ಇನ್ನೂ ಬಹಿರಂಗವಾಗದಿದ್ದರೂ, ಈ 7-ಸೀಟರ್ ಎಸ್‍ಯುವಿಯ ಕೆಲವು ಪ್ರಮುಖ ಮಾಹಿತಿಗಳು ಬಹಿರಂಗವಾಗಿವೆ. ಈ ಹೊಸ ಎಂಜಿ ಮೆಜೆಸ್ಟರ್ ಎಸ್‍ಯುವಿಗೆ ಖಂಡಿತವಾಗಿಯೂ ಗ್ಲೋಸ್ಟರ್‌ಗಿಂತ ಪ್ರೀಮಿಯಂ ಬೆಲೆಯಾಗಿರುತ್ತದೆ. ಎಂಜಿ ಗ್ಲೋಸ್ಟರ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.39.57 ಲಕ್ಷದಿಂದ ರೂ 44.03 ಲಕ್ಷವಾಗಿದೆ.

MG Majestor

ಈ ಹೊಸ ಎಂಜಿ ಮೆಜೆಸ್ಟರ್ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟೊಯೊಟಾ ಫಾರ್ಚುನರ್, ಸ್ಕೋಡಾ ಕೊಡಿಯಾಕ್, ಜೀಪ್ ಮೆರಿಡಿಯನ್ ಮತ್ತು ನಿಸ್ಸಾನ್ ಎಕ್ಸ್-ಟ್ರಯಲ್‌ನಂತಹ ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ. ಹೊಸ ಎಂಜಿ ಮೆಜೆಸ್ಟರ್ ಎಸ್‍ಯುವಿ ವಿನ್ಯಾಸವು ಎಂಜಿಯ Maxus D90 ಎಸ್‍ಯುವಿ ಮುಂಭಾಗದ ಫಾಸಿಕವು ಸಮತಲ ಸ್ಲ್ಯಾಟ್‌ಗಳು ಮತ್ತು ಸ್ಪ್ಲಿಟ್ ಸೆಟಪ್‌ನೊಂದಿಗೆ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.

ಇದರೊಂದಿಗೆ ಸ್ಲಿಮ್ LED DRL ಗಳು ಮತ್ತು ಗ್ರಿಲ್‌ನ ಮಧ್ಯದಲ್ಲಿ ದೊಡ್ಡ MG ಲೋಗೋವನ್ನು ಒಳಗೊಂಡಂತೆ ಬೃಹತ್ ಬ್ಲ್ಯಾಕ್ ಗ್ರಿಲ್‌ನೊಂದಿಗೆ ಅಗ್ರೇಸಿವ್ ಲುಕ್ ಅನ್ನು ಕಾಣುತ್ತದೆ. ಇನ್ನು ಈ ಹೊಸ ಎಂಜಿ ಎಸ್‍ಯುವಿಯಲ್ಲಿ ಮುಂಭಾಗದಲ್ಲಿ ಉದ್ದಕ್ಕೂ ಚಲಿಸುವ ಬ್ಲ್ಯಾಕ್ ಕ್ಲಾಡಿಂಗ್ ಮತ್ತು ಸ್ಲಿವರ್ ಬ್ಯಾಷ್ ಪ್ಲೇಟ್ ಅನ್ನು ಹೊಂದಿದೆ.

MG Majestor

ಇನ್ನು ಈ ಎಸ್‍ಯುವಿಯ ಸೈಡ್ ಪ್ರೊಫೈಲ್‌ ಬಗ್ಗೆ ಹೇಳಿದರೆ, ಈ ಎಸ್‍ಯುವಿ ಡೈಮಂಡ್-ಕಟ್, ಐದು-ಸ್ಪೋಕ್, 19-ಇಂಚಿನ ಅಲಾಯ್ ವ್ಹೀಲ್ ಗಳೊಂದಿಗೆ ವಿಂಗ್ ಮಿರರ್‌ಗಳು ಮತ್ತು ಡೋರ್ ಹ್ಯಾಂಡಲ್‌ಗಳು ಮತ್ತು ರನ್ನಿಂಗ್ ಬೋರ್ಡ್‌ನಲ್ಲಿ ಕ್ರೋಮ್ ಫಿನಿಶ್‌ನಲ್ಲಿ ಬ್ಲ್ಯಾಕ್ ಬಣ್ಣವನ್ನು ಪಡೆಯುತ್ತದೆ. ಹಿಂಭಾಗದ ಪ್ರೊಫೈಲ್ ಡ್ಯುಯಲ್ ಎಕ್ಸಾಸ್ಟ್ ಪೈಪ್‌ಗಳು ಮತ್ತು ಸ್ಪೋರ್ಟಿ ಸ್ಕಿಡ್ ಪ್ಲೇಟ್ ಅನ್ನು ಒಳಗೊಂಡಿರುವ ಗ್ಲೋಸ್ಟರ್ ಅನ್ನು ಹೋಲುತ್ತದೆ.

ಇನ್ನು ಕನೆಕ್ಟಿವಿಟಿ ಟೈಲ್‌ಲ್ಯಾಂಪ್‌ಗಳು ಇದಕ್ಕೆ ವಿಶಿಷ್ಟವಾದ ಲುಕ್ ಅನ್ನು ನೀಡುತ್ತವೆ. ಈ ಹೊಸ ಎಂಜಿ ಮೆಜೆಸ್ಟರ್ ಎಸ್‍ಯುವಿ ಯಲ್ಲಿ ಗ್ಲೋಸ್ಟರ್‌ನ ಅದೇ 2.0 ಲೀಟರ್, 4-ಸಿಲಿಂಡರ್ ಟ್ವಿನ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 216 bhp ಪವರ್ ಮತ್ತು 479Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

MG Majestor

ಇನ್ನು ಈ ಎಸ್‍ಯುವಿಯ ಒಳಭಾಗದಲ್ಲಿ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಎಲ್ಲಾ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ವೈಶಿಷ್ಟ್ಯಗಳೊಂದಿಗೆ ಬ್ಲ್ಯಾಕ್ ಕ್ಯಾಬಿನ್ ಥೀಮ್ ಅನ್ನು ಹೊಂದಿರುವ ಸಾಧ್ಯತೆಯಿದೆ. ಗ್ಲೋಸ್ಟರ್‌ನಂತೆಯೇ, ಈ ಎಸ್‍ಯುವಿಯಲ್ಲಿ 12-ಸ್ಪೀಕರ್ ಆಡಿಯೊ ಸಿಸ್ಟಮ್, ಮೂರು ಝೋನ್ ಕ್ಲೈಮೆಂಟ್ ಕಂಟ್ರೋಲ್, ಮಸಾಜ್ ಫಂಕ್ಷನ್ ಮತ್ತು ಪವರ್ ಹೊಂದಾಣಿಕೆಯೊಂದಿಗೆ ಹಿಟೆಡ್ ಮತ್ತು ವೆಂಟಿಲೆಟೆಡ್ ಡ್ರೈವರ್ ಸೀಟ್, ಪನರೊಮಿಕ್ ಸನ್‌ರೂಫ್ ಮತ್ತು ಲೆವೆಲ್ 2 ADAS ಅನ್ನು ಹೊಂದಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, January 18, 2025, 16:20 [IST]
English summary
Mg majestor suv revealed at auto expo 2025 details
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+