ಬೆಂಗಳೂರಿನಲ್ಲಿ ಒಂದೇ ದಿನ 8 ಕಾರುಗಳ ಡೆಲಿವರಿ: ಫುಲ್ ಡಿಮ್ಯಾಂಡ್! ಯಾವುದೀ ಕಾರು?

ಬೆಂಗಳೂರು ಸೆಂಟ್ರಲ್‌ನಲ್ಲಿರುವ JSW MG ಮೋಟಾರ್‌ನ ಐಷಾರಾಮಿ ಶೋರೂಂ ಆಗಿರುವ ಎಂಜಿ ಸೆಲೆಕ್ಟ್ (MG SELECT) ನಲ್ಲಿ, ಹೊಸ ಎಲೆಕ್ಟ್ರಿಕ್ ಸ್ಪೋರ್ಟ್ ಕಾರಾಗಿರುವ 'ಎಂಜಿ ಸೈಬರ್‌ಸ್ಟರ್‌'ನ ಎಂಟು ಯೂನಿಟ್‌ಗಳನ್ನು ಗ್ರಾಹಕರಿಗೆ ಡೆಲಿವರಿ ನೀಡಿರುವುದಾಗಿ ಕಂಪನಿ ತಿಳಿಸಿದೆ. ಎಂಜಿ ಸೈಬರ್‌ಸ್ಟರ್‌ (MG Cyberster) ನ ಕೀಲಿಗಳನ್ನು JSW MG ಮೋಟಾರ್ ಇಂಡಿಯಾದ ನಿರ್ದೇಶಕ ಪಾರ್ಥ್ ಜಿಂದಾಲ್ ಹಸ್ತಾಂತರಿಸಿದರು. ಈ ಕಾರನ್ನು ಇತ್ತೀಚೆಗಷ್ಟೆ ಕಂಪನಿಯು ಭಾರತದಲ್ಲಿ ಬಿಡುಗಡೆ ಮಾಡಿತ್ತು, ದೇಶಾದ್ಯಂತ ಉತ್ತಮ ಬೇಡಿಕೆ ವ್ಯಕ್ತವಾಗಿದ್ದು, ಇದೀಗ ಒಟ್ಟಿಗೆ ಎಂಟು ಕಾರುಗಳನ್ನು ಬೆಂಗಳೂರಿನಲ್ಲಿ ಡೆಲಿವರಿ ನೀಡಿರುವುದು ವಿಶೇಷ.

ಹೊಸದಾಗಿ ತೆರೆಯಲಾದ ಬೆಂಗಳೂರು ಐಕಾನಿಕ್ ಆಟೋಮೊಬೈಲ್ಸ್ ಎಕ್ಸ್‌ಪೀರಿಯೆನ್ಸ್ ಸೆಂಟರ್‌ನಲ್ಲಿ ಎಂಜಿ ಸೈಬರ್‌ಸ್ಟರ್ ಮತ್ತು MG M9 ಪ್ರೆಸಿಡೆನ್ಶಿಯಲ್ ಲಿಮೋಸಿನ್ ಎರಡನ್ನೂ ಪ್ರದರ್ಶಿಸಲಾಗುತ್ತಿದೆ. ಆಸಕ್ತ ಗ್ರಾಹಕರು ಖರೀದಿಸುವ ಮುನ್ನ ಈ ಎಕ್ಸ್‌ಪೀರಿಯೆನ್ಸ್ ಸೆಂಟರ್‌ನಲ್ಲಿ ಕಾರುಗಳನ್ನು ನೇರವಾಗಿ ನೋಡಿ ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹದು.

mg-motor-delivered-8-cyberster-cars-to-his-customers-in-bangaluru

ಎಂಜಿ ಸೈಬರ್‌ಸ್ಟರ್ ವಿಶೇಷತೆಗಳು

ಎರಡು ಆಸನಗಳ ಕನ್ವರ್ಟಿಬಲ್ ಸ್ಪೋರ್ಟ್ ಸೆಡಾನ್ ಕಾರಾಗಿ ರಚಿಸಲಾದ ಎಂಜಿ ಸೈಬರ್‌ಸ್ಟರ್, ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಶಾಲವಾದ ಕ್ಯಾಬಿನ್, ಕತ್ತರಿ ಬಾಗಿಲುಗಳು ಮತ್ತು ಸಿಗ್ನೇಚರ್ LED ಲೈಟಿಂಗ್‌ನಂತಹ ಐಕಾನಿಕ್ ವಿನ್ಯಾಸವನ್ನು ಹೊಂದಿದೆ. 77 kWh ಬ್ಯಾಟರಿಯಿಂದ ನಡೆಸಲ್ಪಡುವ ಇದು, ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 580 ಕಿ.ಮೀ ರೇಂಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ಎಂಜಿ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸ್ಪೋರ್ಟ್ ಕಾರಿನ ಬೆಲೆಯು, ರೂ. 74.99 ಲಕ್ಷ (ಎಕ್ಸ್ - ಶೋರೂಂ) ಇದೆ. ಫ್ಲೇರ್ ರೆಡ್, ನ್ಯೂಕ್ಲಿಯರ್ ಯೆಲ್ಲೋ, ಆಂಡಿಸ್ ಗ್ರೇ ಹಾಗೂ ಮಾಡ್ರನ್ ಬೀಜ್ ಎಂಬ 4 ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಜೊತೆಗೆ 4,535 ಎಂಎಂ ಉದ್ದ, 1,913 ಎಂಎಂ ಅಗಲ ಹಾಗೂ 1,329 ಎಂಎಂ ಎತ್ತರವಿದೆ.

mg-motor-delivered-8-cyberster-cars-to-his-customers-in-bangaluru

ಇದರ ಪವರ್‌ಫುಲ್ ಎಲೆಕ್ಟ್ರಿಕ್ ಮೋಟಾರ್ 510 ಬಿಹೆಚ್ ಪವರ್ ಮತ್ತು 725 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ಕೇವಲ 3.2 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 200 ಕಿ.ಮೀ ಟಾಪ್ ಸ್ಪೀಡ್‌ ಹೊಂದಿದೆ. ಸುರಕ್ಷತೆಗಾಗಿ 4-ಏರ್‌ಬ್ಯಾಗ್‌ಗಳು, ಇಎಸ್‌ಸಿ, ಟಿಪಿಎಂಎಸ್, ಲೆವೆಲ್ 2 ADAS ಹಾಗು 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವು ರಕ್ಷಣಾತ್ಮಕ ಫೀಚರ್ಸ್ ಹೊಂದಿದೆ.

ಈ ಕಾರಿನಲ್ಲಿ ಡುಯಲ್ - ಝೋನ್ ಕ್ಲೇಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 8 ಸ್ಪೀಕರ್ ಆಡಿಯೊ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, ಫ್ಲಾಟ್ ಬಾಟಮ್ ಸ್ಟೀರಿಂಗ್ ವೀಲ್ ಹಾಗೂ ವೈರ್‌ಲೆಸ್ ಚಾರ್ಜಿಂಗ್, 3-ಸ್ಕ್ರೀನ್‌ ಸೆಟಪ್ ನೊಂದಿಗೆ 10.25 ಇಂಚಿನ ಡಿಜಿಟಲ್ ಡ್ರೈವರ್ ಸ್ಕ್ರೀನ್, 7-ಇಂಚಿನ ಆಕ್ಸಿಲರಿ ಸ್ಕ್ರೀನ್ ಹಾಗೂ 7 - ಇಂಚಿನ ವರ್ಟಿಕಲ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ನ್ನು ನೀಡಲಾಗಿದೆ.

mg-motor-delivered-8-cyberster-cars-to-his-customers-in-bangaluru

ಇದರ ಡಿಸೈನ್ ವಿಷಯಕ್ಕೆ ಬಂದರೆ ಹೊರಭಾಗದಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಬ್ಲಾಂಕ್ಡ್ ಆಫ್ ಗ್ರಿಲ್, ಬಟರ್‌ಫ್ಲೈ ಡೋರ್‌ಗಳು, ವಿಡ್ತ್ ಡಿಫ್ಯೂಸರ್, ಎಲ್‌ಇಡಿ ಲೈಟ್ ಬಾರ್, ಎಲ್‌ಇಡಿ ಟರ್ನ್ ಇಂಡಿಕೇರ್, ಕನ್ವರ್ಟಿಬಲ್ ಸಾಫ್ಟ್ - ಟಾಪ್ ಹಾಗೂ ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಹೊಂದಿದೆ. ಒಟ್ಟಾರೆ ಈ ಕಾರು ತನ್ನ ಐಕಾನಿಕ್ ವಿನ್ಯಾಸದೊಂದಿಗೆ ರಸ್ತೆಯಲ್ಲಿ ಎಲ್ಲರ ಗಮನ ಸೆಳೆಯುತ್ತದೆ.

ಗ್ರಾಹಕರಿಗೆ ಡೆಲಿವರಿ ನೀಡಿ ಮಾತನಾಡಿದ ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾದ ನಿರ್ದೇಶಕ ಪಾರ್ಥ್ ಜಿಂದಾಲ್, ಎಲೆಕ್ಟ್ರಿಕ್ ರೋಡ್‌ಸ್ಟರ್, ತಂತ್ರಜ್ಞಾನ-ಬುದ್ಧಿವಂತ, ಕಾರ್ಯಕ್ಷಮತೆ-ಚಾಲಿತ ಪೀಳಿಗೆಗಾಗಿ ಈ ಕಾರನ್ನು ರೂಪಿಸಲಾಗಿದೆ. ಇಂದು, ಬೆಂಗಳೂರಿನ ಉತ್ಸಾಹಭರಿತ ಐಷಾರಾಮಿ ಸ್ಪೋರ್ಟ್ಸ್ ಕಾರು ಉತ್ಸಾಹಿಗಳಿಗೆ ಎಂಟು ಎಂಜಿ ಸೈಬರ್‌ಸ್ಟರ್‌ಗಳನ್ನು ತಲುಪಿಸುವುದು ರೋಮಾಂಚಕಾರಿ ಪ್ರಯಾಣದ ಆರಂಭವನ್ನು ಸೂಚಿಸುವ ಹೆಮ್ಮೆಯ ಕ್ಷಣವಾಗಿದೆ ಎಂದರು.

More from DriveSpark

Article Published On: Thursday, August 21, 2025, 16:59 [IST]
English summary
Mg motor delivered 8 cyberster cars to his customers in bangaluru
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+