ಒಂದು ಪೈಸೆ ಖರ್ಚಿಲ್ಲ... ಈ ಕಾರಿನಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಹೋಗಬಹುದು: ಖರೀದಿಸಲು ಮುಗಿಬಿದ್ದ ಜನ!

ಎಂಜಿ ವಿಂಡ್ಸರ್ ಇವಿ (MG Windsor EV) ಸೆಪ್ಟೆಂಬರ್ 2024 ರಲ್ಲಿ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಬರೋಬ್ಬರಿ 27,000 ಮಾರಾಟದ ಗಡಿಯನ್ನು ದಾಟಿದೆ. ಆರಂಭದಲ್ಲಿ ಸಣ್ಣ 38 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬಿಡುಗಡೆಯಾದ ಈ ಕಾರು, ಗ್ರಾಹಕರಿಂದ ಭಾರೀ ಬೇಡಿಕೆ ವ್ಯಕ್ತವಾದ ನಂತರ ಮೇ 2025 ರಲ್ಲಿ ವಿಂಡ್ಸರ್ ಪ್ರೊ ಎಂಬ 52.9 ಕಿಲೋವ್ಯಾಟ್‌ನ ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಬಿಡುಗಡೆ ಮಾಡಲಾಯಿತು. ನಿರಂತರ ಬೇಡಿಕೆಯು ಸದ್ಯ ಎಂಜಿ ವಿಂಡ್ಸರ್ ಅನ್ನು ಭಾರತದ ಅತ್ಯುತ್ತಮ ಎಲೆಕ್ಟ್ರಿಕ್ ಕಾರಾಗಿ ಮಾಡಿದೆ.

ಈ ಕಾರಿಗೆ ಸದ್ಯ ಭಾರತದಲ್ಲಿ ಯಾವ ಮಟ್ಟಿಗೆ ಬೇಡಿಕೆ ಇದೆ ಎಂದರೆ, ಮೇ 2025 ರಲ್ಲಿ ದೊಡ್ಡ ಬ್ಯಾಟರಿ ಪ್ಯಾಕ್‌ನ ಹೊಸ ವೇರಿಯೆಂಟ್ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 8,000 ಬುಕಿಂಗ್‌ಗಳು ಹರಿದುಬಂದಿವೆ ಎಂದು ಕಾರು ತಯಾರಕರು ಹೇಳಿದ್ದಾರೆ. ಅಷ್ಟರ ಮಟ್ಟಿಗೆ ಈ ಕಾರಿನಲ್ಲಿ ಏನಿದೆ? ಬನ್ನಿ ತಿಳಿಯೋಣ.

mg-motor-sold-27000-windsor-evs-in-india

ಡಿಸೈನ್ ವಿಷಯಕ್ಕೆ ಬಂದರೆ ಎಂಜಿ ವಿಂಡ್ಸರ್ ಏರೋಗ್ಲೈಡ್ ವಿನ್ಯಾಸವನ್ನು ಹೊಂದಿದ್ದು, 18 ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್‌ಗಳೊಂದಿಗೆ ಕಾರು ಚಾಲನೆಯಲ್ಲಿದ್ದಾಗ ಪ್ರೀಮಿಯಂ ಆಗಿ ಕಾಣುತ್ತದೆ. ಮೇ 21 ರಂದು ಬಿಡುಗಡೆಯಾದ ವಿಂಡ್ಸರ್ ಎಕ್ಸ್‌ಕ್ಲೂಸಿವ್ ಪ್ರೊ ವೇರಿಯೆಂಟ್ ಪ್ರೀಮಿಯಂ ಇಂಟೀರಿಯರ್, ವಿಮಾನದಂತಹ ಸೌಕರ್ಯ, ಆಕರ್ಷಕ ಫೀಚರ್ಸ್ ಜೊತೆಗೆ ದೊಡ್ಡ ಬ್ಯಾಟರಿಯೊಂದಿಗೆ ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 449 ಕಿ.ಮೀ ಓಡಿಸಬಹುದು.

ಸಿಂಗಲ್ ಚಾರ್ಜ್‌ನಲ್ಲಿ 449 ಕಿ.ಮೀ ರೇಂಜ್ ನೀಡುವುದರಿಂದ ಚಿಂತೆಯಿಲ್ಲದೆ ದೂರದ ಪ್ರಯಾಣಗಳನ್ನು ಮಾಡಬಹುದು. ಉದಾಹರಣೆಗೆ ಬೆಂಗಳೂರಿನಿಂದ ಚೆನ್ನೈ ಹೋಗಬಹುದು. ಎಂಜಿ ವಿಂಡ್ಸರ್ ಪರ್ಫಾಮೆನ್ಸ್‌ನಲ್ಲೂ ಉತ್ತಮವಾಗಿದ್ದು, ಚಾಲಕರಿಗೆ ಸ್ಪೋರ್ಟಿ ಅನುಭವ ನೀಡುತ್ತದೆ. 136 ಬಿಹೆಚ್ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಾರಿನ ಒಳಭಾಗದಲ್ಲಿ ಬಿಸಿನೆಸ್ ಕ್ಲಾಸ್ ಕಂಫರ್ಟ್ ನೀಡಲಾಗಿದ್ದು, 135 ಡಿಗ್ರಿಗಳವರೆಗೆ ಇರುವ 'ಏರೋ ಲಾಂಜ್' ಪ್ರೀಮಿಯಂ ಸೀಟುಗಳನ್ನು ನೀಡಲಾಗಿದೆ.

mg-motor-sold-27000-windsor-evs-in-india

ಹೊಸ ವಿಂಡ್ಸರ್ ಅಪ್‌ಡೇಟ್ ಕೂಡ ಆಗಿರುವುದರಿಂದ ರೂ. 17,24,800 (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಎಂಜಿ ವಿಂಡ್ಸರ್ ಎಕ್ಸ್‌ಕ್ಲೂಸಿವ್ ಪ್ರೊ ವೇರಿಯೆಂಟ್ ಈ ಹಿಂದಿನ ತನ್ನ ಹಳೆಯ ಮಾದರಿಗಿಂತ ಎಲ್ಲಾ ವಿಷಯಗಳಲ್ಲಿಯೂ ಆಕರ್ಷಕವಾಗಿದೆ. ಗ್ರಾಹಕರು ಈ ಕಾರನ್ನು ತಮ್ಮ ಹತ್ತಿರದ MG ಡೀಲರ್‌ಶಿಪ್‌ನಲ್ಲಿ ರೂ. 11,000 ಪಾವತಿಸುವ ಮೂಲಕ ಬುಕ್ ಮಾಡಬಹುದು.

ಕಾರು ಪರ್ಲ್ ವೈಟ್, ಸ್ಟಾರಿ ಬ್ಲ್ಯಾಕ್ ಮತ್ತು ಟರ್ಕೋಯಿಸ್ ಗ್ರೀನ್ ಎಂಬ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಒರಗಬಹುದಾದ (135 ಡಿಗ್ರಿಗಳವರೆಗೆ) ಏರೋ ಲೌಂಜ್ ಸೀಟುಗಳು ಪ್ರತಿ ಪ್ರಯಾಣವನ್ನು ಪ್ರೀಮಿಯಂ ಅನುಭವವನ್ನಾಗಿ ಮಾಡುತ್ತದೆ. ಇಂಟೀರಿಯರ್‌ನಲ್ಲಿ ಡ್ಯುಯಲ್ - ಟೋನ್ ಐವರಿ ಮತ್ತು ಬ್ಲಾಕ್ ಇಂಟೀರಿಯರ್ ಕಾರಿನ ಪ್ರೀಮಿಯಂ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

mg-motor-sold-27000-windsor-evs-in-india

ಕಾರಿನಲ್ಲಿ 80 ಕ್ಕೂ ಹೆಚ್ಚು ಕನೆಕ್ಟೆಡ್ ಫೀಚರ್ಸ್, 100 ಕ್ಕೂ ಹೆಚ್ಚು AI - ಆಧಾರಿತ ವಾಯಿಸ್ ಕಮಾಂಡ್‌ಗಳು ಮತ್ತು ಮನರಂಜನಾ ವೈಶಿಷ್ಟ್ಯಗಳೊಂದಿಗೆ i-SMART # ನಿಂದ ನಡೆಸಲ್ಪಡುತ್ತದೆ. ಕಾರಿನಲ್ಲಿ ಒಂಬತ್ತು ಸ್ಪೀಕರ್‌ಗಳೊಂದಿಗೆ ಅಳವಡಿಸಲಾದ 15.6 ಇಂಚಿನ ಗ್ರ್ಯಾಂಡ್‌ವ್ಯೂ ಡಿಸ್ಪ್ಲೇ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, June 12, 2025, 10:20 [IST]
English summary
Mg motor sold 27000 windsor evs in india
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+