ಸತತ 3ನೇ ತಿಂಗಳು ಟಾಟಾ ಕಾರನ್ನು ಹಿಂದಿಕ್ಕಿದ ಎಂಜಿ ಕಾರು: ವಿಮಾನದಂತೆ ಸೌಕರ್ಯ. ಕಡಿಮೆ ಬೆಲೆ

ದೇಶಿಯ ಮಾರುಕಟ್ಟೆಯಲ್ಲಿ ಗ್ಲೋಸ್ಟರ್, ಹೆಕ್ಟರ್ ಪ್ಲಸ್, ಕಾಮೆಟ್ ಇವಿ ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ. ಈ ನಡುವೆ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡ ಎಂಜಿ ತನ್ನ ಎಲೆಕ್ಟ್ರಿಕ್ ಕಾರುಗಳ ಸರಣಿಯನ್ನು ವಿಸ್ತರಿಸಿದೆ. ಇದರ ಭಾಗವಾಗಿ ಎಂಜಿ ಕಂಪನಿಯು ವಿಂಡ್ಸರ್ ಇವಿ ಮಾದರಿಯನ್ನು ಬಿಡುಗಡೆಗೊಳಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿರುಗಾಳಿಯನ್ನು ಎಬ್ಬಿಸಿತು. ಈ ಹೊಸ ಎಲೆಕ್ಟ್ರಿಕ್ ಕಾರಿನ ಕಳೆದ ತಿಂಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದ್ದಾರೆ. 2024ರ ಡಿಸೆಂಬರ್ ತಿಂಗಳಿನಲ್ಲಿ ಎಂಜಿ ವಿಂಡ್ಸರ್ ಇವಿಯ 3785 ಯುನಿಟ್ ಮಾರಾಟದೊಂದಿಗೆ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರ್ ಆಗಿದೆ.

ಮಾರಾಟದಲ್ಲಿ ಎಂಜಿ ವಿಂಡ್ಸರ್ ಇವಿ (MG Windsor EV) ಮಾದರಿಯು ಟಾಟಾ ನೆಕ್ಸಾನ್ ಇವಿಯನ್ನು ಹಿಂದಿಕ್ಕಿ ಸತತವಾಗಿ ನಂ.1 ಎಲೆಕ್ಟ್ರಿಕ್ ಕಾರ್ ಪಟ್ಟವನ್ನು ಮುಂದುವರೆಸಿದೆ. ಎರಡೂ ತಿಂಗಳ ಹಿಂದೆ ಟಾಟಾ ನೆಕ್ಸಾನ್ ಭಾರತದಲ್ಲಿ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರ್ ಆಗಿತ್ತು. ಆದರೆ ಈ ನೆಕ್ಸಾನ್ ಇವಿಯನ್ನು ಹಿಂದಿಕ್ಕಿ ಎಂಜಿ ವಿಂಡ್ಸರ್ ಇವಿ ಹೊಸ ದಾಖಲೆಯನ್ನು ಬರೆದಿದೆ. ಎಂಜಿ ಕಾರುಗಳ ಮಾರಾಟದಲ್ಲಿ ವಿಂಡ್ಸರ್ ಇವಿ ಮೊದಲ ಸ್ಥಾನದಲ್ಲಿದೆ.

MG Windsor

24 ಗಂಟೆಗಳ ಒಳಗೆ ವಿಂಡ್ಸರ್ 15,176 ಬುಕಿಂಗ್‌ಗಳನ್ನು ಗಳಿಸಿದ ಭಾರತದ ಮೊದಲ ಪ್ರಯಾಣಿಕ ಎಲೆಕ್ಟ್ರಿಕ್ ವಾಹನವಾಗಿದೆ. ವಿಶೇಷವಾಗಿ ಜೆಎಸ್‌ಡಬ್ಲ್ಯೂ (JSW) ಹಾಗೂ ಎಂಜಿ ಮೋಟಾರ್ ಪಾಲುದಾರಿಕೆಯಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಕಾರು ಇದಾಗಿದೆ. ಈ ಬಹುಬೇಡಿಕೆಯ ಎಂಜಿ ವಿಂಡ್ಸರ್ ಇವಿ ಕಾರಿನ ಬಗ್ಗೆ ಹೇಳುವುದಾರೆ, ಇದು ಟರ್ಕೋಯಿಸ್ ಗ್ರೀನ್, ಪರ್ಲ್ ವೈಟ್, ಕ್ಲೇ ಬೀಜ್ ಹಾಗೂ ಸ್ಟಾರ್‌ಬರ್ಸ್ಟ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ.

ಈ ಎಂಜಿ ವಿಂಡ್ಸರ್ ಇವಿ ಕಾರಿನಲ್ಲಿ ಇಕೋ, ಇಕೋ ಪ್ಲಸ್, ನಾರ್ಮಲ್ ಹಾಗೂ ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್‌ಗಳನ್ನು ಪಡೆದಿವೆ. ಹೊಸ ವಿಂಡ್ಸರ್ ಎಲೆಕ್ಟ್ರಿಕ್ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ಸಲುವಾಗಿ 6-ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಆದರೆ ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಫೀಚರ್ಸ್ ಹೊಂದಿಲ್ಲ.

MG Windsor

ಎಂಜಿ ವಿಂಡ್ಸರ್ ಇವಿ ಹೊರಭಾಗದಲ್ಲಿ ಅತ್ಯಾಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಈ ಎಂಜಿ ವಿಂಡ್ಸರ್ ಇವಿ ಕಾರು ಸ್ಪ್ಲಿಟ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಎಲ್ಇಡಿ ಲೈಟ್ ಬಾರ್‌ಗಳನ್ನು ಹೊಂದಿವೆ. ಇದರೊಂದಿಗೆ ಎಲ್-ಆಕಾರಕ್ಕೆ ಹೋಲಿಕೆಯಾಗುವ ಎಲ್ಇಡಿ ಟೈಲ್‌ಲೈಟ್‌ಗಳು, ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, 18-ಇಂಚಿನ ಅಲಾಯ್ ವೀಲ್‌ಗಳು ಮತ್ತು 215/55 ಆರ್18 ಟೈಯರ್‌ಗಳನ್ನು ಒಳಗೊಂಡಿವೆ.

ಇನ್ನು ಎಂಜಿ ವಿಂಡ್ಸರ್ ಇವಿ ಕಾರಿನಲ್ಲಿ 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಬಿಯೆಂಟ್ ಲೈಟಿಂಗ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಅನ್ನು ಹೊಂದಿದೆ. ಇದರೊಂದಿಗೆ ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಪೋರ್ಟ್, ಕೀಲೆಸ್ ಎಂಟ್ರಿ ಮತ್ತು ಪುಶ್-ಬಟನ್ ಸ್ಟಾರ್ಟ್ ಸೇರಿದಂತೆ ವಿವಿಧ ಫೀಚರ್ಸ್ ಗಳನ್ನು ಹೊಂದಿವೆ.

MG Windsor

ಎಂಜಿ ಮೋಟಾರ್ ಕಂಪನಿಯು ಇದೀಗ ವಿಂಡ್ಸರ್ ಇವಿ ಕಾರಿನ ವಿತರಣೆಯನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಒಂದೇ ಬಾರೀ ಎಂಜಿ 101 ಕಾರುಗಳನ್ನು ಡೆಲಿವರಿ ನೀಡಿದೆ. ಈ ಹೊಸ ಕ್ರಾಸ್ಒವರ್ ಯುಟಿಲಿಟಿ ವಾಹನವನ್ನು, ಬೆಂಗಳೂರಿನ ಎಂಜಿ ಜುಬಿಲಂಟ್ ಮೂಲಕ ವಿತರಿಸಿದೆ. ಬುಕ್ಕಿಂಗ್ ಪ್ರಾರಂಭವಾಗಿ ಮೊದಲ ದಿನವೇ 15,176 ಬುಕ್ಕಿಂಗ್ ಗಳನ್ನು ಪಡೆದು ಮೈಲುಗಲ್ಲು ಸಾಧಿಸಿತು, ಎಂಜಿ ವಿಂಡ್ಸರ್ ರೂ 9.99 ಲಕ್ಷದ ಆರಂಭಿಕ ಬೆಲೆಯೊಂದಿಗೆ ಬಾಸ್ (Baas) ಬ್ಯಾಟರಿ ಬಾಡಿಗೆ ಯೋಜನೆಯೊಂದಿಗೆ ಪರಿಚಯಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, January 3, 2025, 13:42 [IST]
English summary
Mg windsor became indias best selling ev in 2024 december details
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+