MG Motor: ಭಾರತದಲ್ಲಿ ಅಗ್ಗದ ಚೀನಾ ಕಾರಿಗೆ ಮುಗಿಬಿದ್ದ ಜನ: 15 ಸಾವಿರ ವಾಹನಗಳು ಉಡೀಸ್!

ಪ್ರಮುಖ ವಾಹನ ತಯಾರಕ ಹಾಗೂ ಚೀನಾ ಮೂಲದ ಎಂಜಿ ಮೋಟಾರ್‌ (MG Motor) ತನ್ನ ಇತ್ತೀಚಿನ ಎಲೆಕ್ಟ್ರಿಕ್ ಕಾರಾಗಿರುವ ಎಂಜಿ ವಿಂಡ್ಸರ್‌ (MG Windsor EV) ನ 15,000 ಯುನಿಟ್‌ ಕಾರುಗಳ ಉತ್ಪಾದನಾ ಮೈಲಿಗಲ್ಲನ್ನು ದಾಟಿದೆ ಎಂದು JSW MG ಮೋಟಾರ್ ಇಂಡಿಯಾ ಘೋಷಿಸಿದೆ. ಬಿಡುಗಡೆಯಾದಾಗಿನಿಂದ ಸತತ ನಾಲ್ಕು ತಿಂಗಳುಗಳಲ್ಲಿ (ಅಕ್ಟೋಬರ್ 2024 ರಿಂದ ಜನವರಿ 2025) ಅತಿ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರಾಗಿ ಹೊರಹೊಮ್ಮಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರು ವಿಭಾಗದ ಒಟ್ಟಾರೆ ಬೆಳವಣಿಗೆಗೆ ಕೊಡುಗೆ ನೀಡಿದೆ ಎಂದು ಕಂಪನಿ ಹೇಳಿದೆ.

ಕಾರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನಾವು ಗುಜರಾತ್‌ನ ಹ್ಯಾಲೋಲ್‌ನಲ್ಲಿರುವ ವಾಹನ ಉತ್ಪಾದನಾ ಸೌಲಭ್ಯದ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದೇವೆ. ಹೆಚ್ಚುವರಿಯಾಗಿ, ಈ ವರ್ಷದ ಮೊದಲಾರ್ಧದಲ್ಲಿ ಪರಿಚಯಿಸಲಿರುವ MG ಸೆಲೆಕ್ಟ್ ಅಡಿಯಲ್ಲಿ ಹೊಸ ಉತ್ಪನ್ನಗಳಿಗೆ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ನಾವು ಕೆಲವು ಸೌಲಭ್ಯ ಮಾರ್ಪಾಡುಗಳನ್ನು ಕೈಗೊಳ್ಳುತ್ತಿದ್ದೇವೆ. ಆದ್ದರಿಂದ, ಫೆಬ್ರವರಿ ತಿಂಗಳಲ್ಲಿ ಉತ್ಪಾದನೆ ನಿಧಾನವಾಗಲಿದೆ, ಇದು ನಮ್ಮ ಮಾರಾಟದ ಮೇಲೆ ತಾತ್ಕಾಲಿಕವಾಗಿ ಪರಿಣಾಮ ಬೀರಬಹುದು.

mg-windsor-crossed-15000-production-milestone-in-india

ಉಳಿದಂತೆ ಎಂಜಿ ವಿಂಡ್ಸರ್ 15,000-ಯುನಿಟ್ ಉತ್ಪಾದನಾ ಮೈಲಿಗಲ್ಲನ್ನು ದಾಟಲು ನಮಗೆ ಸಹಾಯ ಮಾಡಿದ ಗ್ರಾಹಕರಿಗೆ ಕೃತಜ್ಞರಾಗಿದ್ದೇವೆ. ಕಾರಿನ ಒಟ್ಟಾರೆ ಬೆಲೆ, ಪ್ಯಾಕೇಜಿಂಗ್‌ ಮತ್ತು ಐಷಾರಾಮಿ ವ್ಯಾಪಾರ-ವರ್ಗದ ಅನುಭವವು ಖರೀದಿದಾರರ ಮನಗೆದ್ದಿದೆ. ಹಾಗೆಯೇ BaaS, ಬೈಬ್ಯಾಕ್ ಪ್ರೋಗ್ರಾಂನಂತಹ ಸ್ಮಾರ್ಟ್ ಉಪಕ್ರಮಗಳು ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸಿವೆ ಎಂದು JSW MG ಮೋಟಾರ್ ಇಂಡಿಯಾದ ಉಪ ವ್ಯವಸ್ಥಾಪಕ ನಿರ್ದೇಶಕ ಬಿಜು ಬಾಲೇಂದ್ರನ್ ಹೇಳಿದರು.

ಎಂಜಿ ವಿಂಡ್ಸರ್‌ ವಿಶೇಷತೆಗಳು: ಹೊಸ MG ವಿಂಡ್ಸರ್ ಇವಿ ಬೆಲೆಯು ಭಾರತದಲ್ಲಿ ರೂ.13.99 ಲಕ್ಷದಿಂದ ಆರಂಭವಾಗಿ ರೂ.15.99 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಒಳಗೊಂಡಿದೆ. ಎಕ್ಸೈಟ್, ಎಕ್ಸ್‌ಕ್ಲೂಸಿವ್ ಮತ್ತು ಎಸೆನ್ಸ್ ಎಂಬ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಸಬಹುದಾಗಿದ್ದು, ಸ್ಟಾರ್‌ಬರ್ಸ್ಟ್ ಬ್ಲಾಕ್, ಪರ್ಲ್ ವೈಟ್, ಕ್ಲೇ ಬೀಜ್ ಹಾಗೂ ಟರ್ಕೋಯಿಸ್ ಗ್ರೀನ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯನ್ನು ಹೊಂದಿದೆ.

mg-windsor-crossed-15000-production-milestone-in-india

ಫೀಚರ್ಸ್: ಏರೋ ಲೌಂಜ್ ಆಸನಗಳು ಅವುಗಳ 135° ರಿಕ್ಲೈನ್ ​​ಸಾಮರ್ಥ್ಯದೊಂದಿಗೆ ಬರುತ್ತವೆ. MG-Jio ಇನ್ನೋವೇಟಿವ್ ಕನೆಕ್ಟಿವಿಟಿ ಪ್ಲಾಟ್‌ಫಾರ್ಮ್ (ICP) ನೊಂದಿಗೆ ಸ್ಮಾರ್ಟ್ ಸಂಪರ್ಕ ಮತ್ತು ಇನ್ - ಕಾರ್ ತಂತ್ರಜ್ಞಾನವನ್ನು ಹೊಂದಿದೆ. ಹೋಮ್ - ಟು - ಕಾರ್ ಕಾರ್ಯನಿರ್ವಹಣೆ ಮತ್ತು 100 ಕ್ಕೂ ಹೆಚ್ಚು AI- ವಾಯಿಸ್ ಕಮಾಂಡ್‌ಗಳಂತಹ ಸುಧಾರಿತ ವೈಶಿಷ್ಟ್ಯಗಳನ್ನು ನೀಡಲಾಗಿದೆ.

15.6-ಇಂಚಿನ ಗ್ರ್ಯಾಂಡ್‌ವ್ಯೂ ಟಚ್ ಡಿಸ್‌ಪ್ಲೇ, ರಿಯಲ್ ಟೈಮ್ ನ್ಯಾವಿಗೇಷನ್, ಆಟೋಮೆಟಿಕ್ ಕ್ಲೈಮೆಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಪೋರ್ಟ್, ಕೀಲೆಸ್ ಎಂಟ್ರಿ ಮತ್ತು ಪುಶ್-ಬಟನ್ ಸ್ಟಾರ್ಟ್ ಜೊತೆಗೆ ರಿಮೋಟ್ ವೆಹಿಕಲ್ ಕಂಟ್ರೋಲ್ ಮತ್ತು ಸುರಕ್ಷತಾ ಎಚ್ಚರಿಕೆಗಳು ಸೇರಿದಂತೆ 80 ಕ್ಕೂ ಹೆಚ್ಚು ಸಂಪರ್ಕಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

mg-windsor-crossed-15000-production-milestone-in-india

ಹೆಚ್ಚಿನ ಲಗೇಜ್ ಸಾಗಿಸಲು 604 ಲೀ. ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ಹೊಸ ಎಂಜಿ ವಿಂಡ್ಸರ್ ಇವಿ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸಲು 6 - ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360 ಡಿಗ್ರಿ ಕ್ಯಾಮೆರಾದಂತಹ ಹಲವು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಕಾರು 38 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಇದರಲ್ಲಿ ಸಿಂಗಲ್-ಎಲೆಕ್ಟ್ರಿಕ್ ಮೋಟಾರ್ ಉಪಯೋಗ ಮಾಡಲಾಗಿದ್ದು, 134 ಬಿಹೆಚ್‍ಪಿ ಪವರ್ ಹಾಗೂ 200 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಂಪೂರ್ಣ ಚಾರ್ಜ್‌ನಲ್ಲಿ 331 ಕಿಲೋಮೀಟರ್ ರೇಂಜ್ ನೀಡುತ್ತದೆ.

More from DriveSpark

Article Published On: Wednesday, February 19, 2025, 15:55 [IST]
English summary
Mg windsor crossed 15000 production milestone in india
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+