ಮೊನ್ನೆಯಷ್ಟೆ ಹೊಸ ಕಾರು ಬಿಡುಗಡೆ: 1ರೂ. ಇಂಧನ ಖರ್ಚಿಲ್ಲದೆ ನಿತ್ಯ 449 ಕಿ.ಮೀ ಓಡಿಸಬಹದು!
ಮೊನ್ನೆಯಷ್ಟೆ (ಮೇ 21) ಚೀನಾ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾಗಿರುವ ಎಂಜಿ ಮೋಟಾರ್ ತನ್ನ ಆಕರ್ಷಕ ವಿಂಡ್ಸರ್ ಎಕ್ಸ್‌ಕ್ಲೂಸಿವ್ ಪ್ರೊ ವೇರಿಯೆಂಟ್ ಅನ್ನು ಬಿಡುಗಡೆ ಮಾಡಿದೆ. ಈ ಕಾರು ಫ್ಯೂಚರಿಸ್ಟಿಕ್ ಏರೋಗ್ಲೈಡ್ ವಿನ್ಯಾಸವನ್ನು ಹೊಂದಿದ್ದು, ಅದರ ಗ್ಲೋಬಲ್ ಸ್ಮಾರ್ಟ್ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣಗೊಂಡಿದೆ. ಪ್ರೀಮಿಯಂ ಇಂಟೀರಿಯರ್, ವಿಮಾನದಂತಹ ಸೌಕರ್ಯ, ಆಕರ್ಷಕ ಫೀಚರ್ಸ್ ಜೊತೆಗೆ ದೊಡ್ಡ ಬ್ಯಾಟರಿಯನ್ನು ಇದರಲ್ಲಿ ಪರಿಚಯಿಸಲಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 449 ಕಿ.ಮೀ ಓಡಿಸಬಹುದು ಎಂದು ಕಂಪನಿ ಹೇಳಿದೆ.
ಕಾರಿನಲ್ಲಿ ಒಂಬತ್ತು ಸ್ಪೀಕರ್‌ಗಳೊಂದಿಗೆ ಅಳವಡಿಸಲಾದ 15.6 ಇಂಚಿನ ಗ್ರ್ಯಾಂಡ್‌ವ್ಯೂ ಡಿಸ್ಪ್ಲೇ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ನೀಡುತ್ತದೆ. 80 ಕ್ಕೂ ಹೆಚ್ಚು ಕನೆಕ್ಟೆಡ್ ಫೀಚರ್ಸ್, 100 ಕ್ಕೂ ಹೆಚ್ಚು AI - ಆಧಾರಿತ ವಾಯಿಸ್ ಕಮಾಂಡ್‌ಗಳು ಮತ್ತು ಮನರಂಜನಾ ವೈಶಿಷ್ಟ್ಯಗಳೊಂದಿಗೆ i-SMART # ನಿಂದ ನಡೆಸಲ್ಪಡುವ ಇದರ ತಲ್ಲೀನಗೊಳಿಸುವ ತಂತ್ರಜ್ಞಾನವು, ಒಂಬತ್ತು ಸ್ಪೀಕರ್‌ಗಳೊಂದಿಗೆ ಅಳವಡಿಸಲಾದ ಸೆಂಟ್ರಲ್ ಕನ್ಸೋಲ್‌ನಲ್ಲಿ ಬೃಹತ್ 15.6" GRANDVIEW ಟಚ್ ಡಿಸ್ಪ್ಲೇಯನ್ನು ಹೊಂದಿದೆ.

ಇಂಟೀರಿಯರ್‌ನಲ್ಲಿ ಡ್ಯುಯಲ್ - ಟೋನ್ ಐವರಿ ಮತ್ತು ಕಪ್ಪು ಒಳಾಂಗಣಗಳು ಕಾರಿನ ಪ್ರೀಮಿಯಂ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಜೊತೆಗೆ ಒರಗಬಹುದಾದ (135 ಡಿಗ್ರಿಗಳವರೆಗೆ) ಏರೋ ಲೌಂಜ್ ಸೀಟುಗಳು ಪ್ರತಿ ಪ್ರಯಾಣವನ್ನು ಪ್ರೀಮಿಯಂ ಅನುಭವವನ್ನಾಗಿ ಮಾಡುತ್ತದೆ. ಕಾರು ಪರ್ಲ್ ವೈಟ್, ಸ್ಟಾರಿ ಬ್ಲ್ಯಾಕ್ ಮತ್ತು ಟರ್ಕೋಯಿಸ್ ಗ್ರೀನ್ ಎಂಬ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ಡಿಸೈನ್ ವಿಷಯಕ್ಕೆ ಬಂದರೆ ಎಂಜಿ ವಿಂಡ್ಸರ್ ಎಕ್ಸ್‌ಕ್ಲೂಸಿವ್ ಪ್ರೊ ಫ್ಯೂಚರಿಸ್ಟಿಕ್ ಏರೋಗ್ಲೈಡ್ ವಿನ್ಯಾಸವನ್ನು ಹೊಂದಿದ್ದು, ಅದರ ಗ್ಲೋಬಲ್ ಸ್ಮಾರ್ಟ್ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣಗೊಂಡಿದೆ. 18 ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್‌ಗಳೊಂದಿಗೆ ಕಾರು ಚಾಲನೆಯಲ್ಲಿದ್ದಾಗ ಸ್ಪೋರ್ಟಿಯಾಗಿ ಕಾಣುತ್ತದೆ.

ಹೊಸ ಎಂಜಿ ವಿಂಡ್ಸರ್ ಎಕ್ಸ್‌ಕ್ಲೂಸಿವ್ ಪ್ರೊ ವೇರಿಯೆಂಟ್ ದೊಡ್ಡ 52.9 kWh ನ ಬ್ಯಾಟರಿ ಪ್ಯಾಕ್ ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 449 ಕಿ.ಮೀ ಹಿಂದಿರುಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಗ್ರಾಹಕರು ಈ ಕಾರನ್ನು ತಮ್ಮ ಹತ್ತಿರದ MG ಡೀಲರ್‌ಶಿಪ್‌ನಲ್ಲಿ ರೂ. 11,000 ಪಾವತಿಸುವ ಮೂಲಕ ಬುಕ್ ಮಾಡಬಹುದು.
ಎಂಜಿ ವಿಂಡ್ಸರ್ ಎಕ್ಸ್‌ಕ್ಲೂಸಿವ್ ಪ್ರೊ ವೇರಿಯೆಂಟ್ ಈ ಹಿಂದಿನ ತನ್ನ ಹಳೆಯ ಮಾದರಿಗಿಂತ ಎಲ್ಲಾ ವಿಷಯಗಳಲ್ಲಿಯೂ ಆಕರ್ಷಕವಾಗಿದೆ. ಹಾಗೆಯೇ ಅಪ್‌ಡೇಟ್ ಕೂಡ ಆಗಿರುವುದರಿಂದ ರೂ. 17,24,800 (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಹೊಸ ವೇರಿಯೆಂಟ್ ಡೆಲಿವರಿಗಳು ಜೂನ್ ಮೊದಲ ವಾರದಲ್ಲಿ ಪ್ರಾರಂಭವಾಗುತ್ತವೆ ಎಂದು ಕಂಪನಿ ತಿಳಿಸಿದೆ.

ಬಿಡುಗಡೆಯ ಕುರಿತು ಮಾತನಾಡಿದ ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾದ ಮಾರಾಟ ಮುಖ್ಯಸ್ಥ ರಾಕೇಶ್ ಸೇನ್, ಪ್ರೀಮಿಯಂ ಸೌಕರ್ಯ ಮತ್ತು ಅನುಕೂಲತೆಯ ಜೊತೆಗೆ ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ನೀಡುತ್ತಿದ್ದೇವೆ. ಈ ಕಾರು ಮುಂಬರುವ ದಿನಗಳಲ್ಲಿ ಗ್ರಾಹಕರಿಂದ ಇನ್ನೂ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುವ ವಿಶ್ವಾಸವಿದೆ ಎಂದು ಮುಖ್ಯಸ್ಥ ರಾಕೇಶ್ ಸೇನ್ ಹೇಳಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








