ಕೊನೆಗೂ ದಕ್ಷಿಣ ಭಾರತದಲ್ಲಿ ಮೊದಲ ಡೀಲರ್‌ಶಿಪ್ ಪ್ರಾರಂಭ: ಕರ್ನಾಟಕದ ಈ ಭಾಗ ಫೇವರೆಟ್!
ದೇಶದಲ್ಲಿ ಹೊಸ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಹೆಚ್ಚಾಗುತ್ತಿವೆ. ಇವುಗಳಲ್ಲಿ ಕೆಲ ಬ್ರಾಂಡ್‌ಗಳ ವಾಹನಗಳು ಉತ್ತಮ ಜನಪ್ರಿಯತೆ ಪಡೆದಿವೆ, ಆದರೆ ದೇಶದ ಕೆಲವು ಭಾಗಗಳಲ್ಲಿ ಮಾತ್ರ ಇವುಗಳ ಡೀಲರ್‌ಶಿಪ್‌ಗಳು ಇರುವುದರಿಂದ ಇತರ ಭಾಗಗಳಲ್ಲಿ ಈ ಬ್ರಾಂಡ್‌ಗಳ ವಾಹನಗಳು ಗ್ರಾಹಕರಿಗೆ ಅಲಭ್ಯವಾಗಿವೆ. ಅಂತಹ ಬ್ರಾಂಡ್‌ಗಳಲ್ಲಿ ಮೋಂಟ್ರಾ ಎಲೆಕ್ಟ್ರಿಕ್ ಕೂಡ ಒಂದು, ಇದೀಗ ಮೋಂಟ್ರಾ ಎಲೆಕ್ಟ್ರಿಕ್‌ನ e-SCV ವಿಭಾಗವಾದ TIVOLT ಎಲೆಕ್ಟ್ರಿಕ್ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರಿನ ಯಶವಂತಪುರದಲ್ಲಿ ತನ್ನ ಮೊದಲ ಇ-SCV ಡೀಲರ್‌ಶಿಪ್ ಅನ್ನು ಉದ್ಘಾಟಿಸಿದೆ.
ಇದು ದಕ್ಷಿಣ ಭಾರತದ ಮೊದಲ e-SCV ಡೀಲರ್‌ಶಿಪ್ ಆಗಿದೆ, ಈ ಹೊಸ ಡೀಲರ್‌ಶಿಪ್ ಟಿವಿಎಸ್ ವೆಹಿಕಲ್ ಮೊಬಿಲಿಟಿ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಸುಧಾರಿತ ಪರಿಕರಗಳು ಮತ್ತು ಅತ್ಯಾಧುನಿಕ ಮೂಲಸೌಕರ್ಯಗಳೊಂದಿಗೆ ಸಜ್ಜುಗೊಂಡಿರುವ ಈ ಡೀಲರ್‌ಶಿಪ್ ಅನ್ನು ಉನ್ನತ ಸೇವೆ ಮತ್ತು ಉತ್ತಮ ಮಾಲೀಕತ್ವದ ಅನುಭವವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಯಶವಂತಪುರದ 45/4, ಕೈಗಾರಿಕಾ ಉಪನಗರ (Industrial suburb), ತುಮಕೂರು ರಸ್ತೆಯಲ್ಲಿ ಈ ಅತ್ಯಾಧುನಿಕ 3S (ಮಾರಾಟ, ಸೇವೆ, ಬಿಡಿಭಾಗಗಳು ಮತ್ತು ಚಾರ್ಜಿಂಗ್) ಸೌಲಭ್ಯವನ್ನು ಈ ಡೀಲರ್‌ಶಿಪ್‌ನಲ್ಲಿ ಒದಗಿಸಲಾಗಿದೆ. e-SCV ವಿಭಾಗದಲ್ಲಿ ಮೋಂಟ್ರಾ ಎಲೆಕ್ಟ್ರಿಕ್‌ನ ಇತ್ತೀಚಿನ ಹೊಸ ವಾಹನವಾದ EVIATOR ಈಗ ಈ ಡೀಲರ್‌ಶಿಪ್‌ನಲ್ಲಿ ಲಭ್ಯವಿದೆ.
ಹೊಸ EVIATOR ವಿಶೇಷತೆಗಳು: ಈ ವಾಹನವು ಸಿಂಗಲ್ ಚಾರ್ಜ್‌ನಲ್ಲಿ 245 ಕಿ.ಮೀ ರೇಂಜ್ ಮತ್ತು 170 ಕಿ.ಮೀ ರಿಯಲ್ - ವರ್ಲ್ಡ್ ರೇಂಜ್ ನೀಡುತ್ತದೆ. ಪವರ್‌ಫುಲ್ 80 kW ಮೋಟಾರ್ ಮತ್ತು ಪ್ರಭಾವಶಾಲಿ 300 Nm ಟಾರ್ಕ್‌ನೊಂದಿಗೆ ಇದು ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತದೆ. ಸಣ್ಣ ವಾಣಿಜ್ಯ ವಾಹನ ಕ್ಷೇತ್ರದಲ್ಲಿ ಗೇಮ್ - ಚೇಂಜರ್ ಆಗಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ಹೊಸ EVIATOR 7 ವರ್ಷ ಅಥವಾ 2.5 ಲಕ್ಷ ಕಿ.ಮೀ ವರೆಗೆ ವಿಸ್ತೃತ ವಾರಂಟಿಯೊಂದಿಗೆ ಬರುತ್ತದೆ. ಸುಧಾರಿತ ಟೆಲಿಮ್ಯಾಟಿಕ್ಸ್‌ನೊಂದಿಗೆ ಸಜ್ಜುಗೊಂಡಿರುವ ಇದು ಶೇ95 ಕ್ಕಿಂತ ಹೆಚ್ಚು ಫ್ಲೀಟ್ ಅಪ್‌ಟೈಮ್ ಅನ್ನು ಖಚಿತಪಡಿಸುತ್ತದೆ. ಫ್ಲೀಟ್ ಮಾಲೀಕರಿಗೆ ಕಾರ್ಯಾಚರಣೆಗಳು ಮತ್ತು ಲಾಭವನ್ನು ಹೆಚ್ಚಿಸುತ್ತದೆ ಎಂದು ಮೋಂಟ್ರಾ ಎಲೆಕ್ಟ್ರಿಕ್ ಹೇಳಿಕೊಂಡಿದೆ.
ಕರ್ನಾಟಕ ನಮಗೆ ಪ್ರಮುಖ ಮಾರುಕಟ್ಟೆಯಾಗಿದೆ, ಯಶವಂತಪುರದಲ್ಲಿ ನಮ್ಮ ಮೊದಲ ಡೀಲರ್‌ಶಿಪ್ ಅನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ಟಿವಿಎಸ್ ವೆಹಿಕಲ್ ಮೊಬಿಲಿಟಿ ಸೊಲ್ಯೂಷನ್ಸ್‌ನೊಂದಿಗಿನ ನಮ್ಮ ಪಾಲುದಾರಿಕೆಯ ಮೂಲಕ, ನಾವು ಸೂಕ್ತವಾದ ಪರಿಹಾರಗಳು ಮತ್ತು ಅಸಾಧಾರಣ ಸೇವೆಯನ್ನು ನೀಡುವ ಗುರಿಯನ್ನು ಹೊಂದಿದ್ದೇವೆ, ನಮ್ಮ ಗ್ರಾಹಕರ ವಿಕಸಿತ ಅಗತ್ಯಗಳನ್ನು ಪೂರೈಸುತ್ತೇವೆ ಎಂದು ಕಂಪನಿ ಹೇಳಿದೆ.
ಈ ಪಾಲುದಾರಿಕೆಯು ಈ ಪ್ರದೇಶದಲ್ಲಿ ಪ್ರಮುಖ EV ಆಟಗಾರನಾಗಿ ಮೊಂಟ್ರಾ ಎಲೆಕ್ಟ್ರಿಕ್‌ನ ಉಪಸ್ಥಿತಿಯನ್ನು ಬಲಪಡಿಸುವುದಲ್ಲದೆ, ವಿಶ್ವಾಸಾರ್ಹ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ e-SCV ಗಳ ಖರೀದಿಯನ್ನು ಹೆಚ್ಚಿಸುತ್ತದೆ. ಒಟ್ಟಾಗಿ, ನಮ್ಮ ಗ್ರಾಹಕರ ವೈವಿಧ್ಯಮಯ ಸಾರಿಗೆ ಅಗತ್ಯಗಳನ್ನು ಪೂರೈಸಲು ಹಾಗೂ ನಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ನಾವು ಗುರಿ ಹೊಂದಿದ್ದೇವೆ ಎಂದು ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








