ಅತ್ಯಂತ ಕೈಗೆಟುಕುವ ಎಸ್‌ಯುವಿಗಳು: 6 ಲಕ್ಷವಿದ್ದರೆ ಸಾಕು ಹೊಚ್ಚ ಹೊಸ ಕಾರು ನಿಮ್ಮದು!

ಭಾರತೀಯ ಕಾರು ಮಾರುಕಟ್ಟೆಯಲ್ಲಿ ಕಡಿಮೆ ಉದ್ದವನ್ನು ಹೊಂದಿರುವ ಕಾರುಗಳು ಅಗ್ಗದ ಬೆಲೆಗೆ ಮಧ್ಯಮ ವರ್ಗದವರ ಆದ್ಯತೆಗಳಿಗೆ ಅನುಗುಣವಾಗಿ ನಿರ್ಮಾಣಗೊಂಡಿರುವ ಬೆಸ್ಟ್‌ ಕಾರುಗಳಾಗಿವೆ. ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ಕೈಗೆಟುಕುವ ಎಸ್‌ಯುವಿಗಳು ಕೂಡ ಇವೆ ಆಗಿವೆ. ಇವು ಕಡಿಮೆ ಬೆಲೆಯಲ್ಲಿ ಆಕರ್ಷಕ ಡಿಸೈನ್ ಹಾಗೂ ಆಧುನಿಕ ಫೀಚರ್ಸ್ ಒಳಗೊಂಡಿರುವ ಬೆಸ್ಟ್ ಹ್ಯಾಚ್‌ಬ್ಯಾಕ್‌ ಕಾರುಗಳಾಗಿವೆ. ನಾವು ಈ ಕೆಳಗೆ ಪಟ್ಟಿ ಮಾಡಿರುವ ಪ್ರತಿಯೊಂದು ಕಾರು 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯನ್ನು ಹೊಂದಿದೆ. 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ವೇರಿಯೆಂಟ್‌ಗಳನ್ನು ಹುಡಿಕಿ ನಿಮ್ಮ ಮುಂದೆ ಇಡುತ್ತಿದ್ದೇವೆ.

ಹುಂಡೈ ಎಕ್ಸ್‌ಟರ್: ಭಾರತದಲ್ಲಿ ಪ್ರಸ್ತುತ ಮಾರಾಟದಲ್ಲಿರುವ ಅತ್ಯಂತ ಕೈಗೆಟುಕುವ ಎಸ್‌ಯುವಿ ಹುಂಡೈ ಎಕ್ಸ್‌ಟರ್, ಇದರ ಬೆಲೆ ಕೇವಲ ರೂ. 6 ಲಕ್ಷದಿಂದ ಪ್ರಾರಂಭವಾಗುತ್ತದೆ. ಹುಂಡೈನ ಚಿಕ್ಕ ಎಸ್‌ಯುವಿ ಡ್ಯುಯಲ್-ಟೋನ್ ಆಯ್ಕೆಗಳನ್ನು ಒಳಗೊಂಡಂತೆ 41 ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ - ಅವುಗಳಲ್ಲಿ ಕೇವಲ 3 ಮಾತ್ರ ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವುದಿಲ್ಲ.

most-affordable-tata-mahindra-maruti-suvs-in-india

ಉಳಿದಂತೆ ಎಲ್ಲವೂ ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿವೆ. ಎಕ್ಸ್‌ಟರ್ ತನ್ನ 1.2 - ಲೀಟರ್ ಪೆಟ್ರೋಲ್ ಎಂಜಿನ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ಜೊತೆಗೆ 69 hp ಪವರ್ ಹೊರಹಾಕುವ ಫ್ಯಾಕ್ಟರಿ - ಫಿಟ್ CNG ಆವೃತ್ತಿಯನ್ನು ಸಹ ಹೊಂದಿದೆ. ಇದು ಸದ್ಯ ಅತ್ಯಂತ ಕೈಗೆಟುಕುವ ಉತ್ತಮ ಫೀಚರ್ಸ್ ಹೊಂದಿರುವ ಹ್ಯಾಚ್‌ಬ್ಯಾಕ್ ಆಗಿದೆ.

ರೆನಾಲ್ಟ್ ಕಿಗರ್: ರೆನಾಲ್ಟ್ ಕಿಗರ್ ಆರಂಭಿಕ ಬೆಲೆಯು 6.15 ಲಕ್ಷ ರೂ. (ಎಕ್ಸ್‌ ಶೋರಂ) ಇದೆ. ರೆನಾಲ್ಟ್ ಕಿಗರ್ ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳನ್ನು ಒಳಗೊಂಡಂತೆ ಒಟ್ಟು 15 ವೇರಿಯೆಂಟ್‌ಗಳನ್ನು ಹೊಂದಿದ್ದು, ಅವುಗಳಲ್ಲಿ 11 ವೇರಿಯೆಂಟ್‌ಗಳು ರೂ. 10 ಲಕ್ಷ ಬಜೆಟ್‌ನೊಳಗೆ ಸಿಗುತ್ತವೆ. 1.0 - ಲೀಟರ್ ಪೆಟ್ರೋಲ್ ಎಂಜಿನ್ ಮ್ಯಾನುವಲ್ ಮತ್ತು AMT ಆಯ್ಕೆಗಳನ್ನು ಹೊಂದಿದ್ದರೆ, 1.0 - ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮ್ಯಾನುವಲ್ ಮತ್ತು CVT ಆಯ್ಕೆಗಳನ್ನು ಹೊಂದಿದೆ.

most-affordable-tata-mahindra-maruti-suvs-in-india

ನಿಸ್ಸಾನ್ ಮ್ಯಾಗ್ನೈಟ್: ನಿಸ್ಸಾನ್ ಮ್ಯಾಗ್ನೈಟ್ ಬೆಲೆಯು 6.14 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ರೆನಾಲ್ಟ್ ಕಿಗರ್ ಆವೃತ್ತಿಯಾದ ನಿಸ್ಸಾನ್ ಮ್ಯಾಗ್ನೈಟ್, ಯಾಂತ್ರಿಕವಾಗಿ ರೆನಾಲ್ಟ್‌ಗೆ ಹೋಲುತ್ತದೆ. ಒಟ್ಟು 18 ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಇವುಗಳಲ್ಲಿ 13 ವೇರಿಯೆಂಟ್‌ಗಳು ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿವೆ. ಮ್ಯಾಗ್ನೈಟ್‌ನ CNG - ಚಾಲಿತ ಆವೃತ್ತಿಯು ಶೀಘ್ರದಲ್ಲೇ ಸಾಲಿಗೆ ಸೇರುವ ನಿರೀಕ್ಷೆಯಿದೆ.

ಟಾಟಾ ಪಂಚ್: ಟಾಟಾ ಪಂಚ್ ಬೆಲೆಯು 6.20 ಲಕ್ಷ ರೂ.ಗಳಿಂದ (ಎಕ್ಸ್‌ ಶೋರಂ) ಪ್ರಾರಂಭವಾಗುತ್ತದೆ. ಟಾಟಾದ ಚಿಕ್ಕ ಎಸ್‌ಯುವಿಯ ಎಲ್ಲಾ 12 ಮ್ಯಾನುವಲ್ ಗೇರ್‌ಬಾಕ್ಸ್ ವೇರಿಯೆಂಟ್‌ಗಳು ರೂ. 10 ಲಕ್ಷದೊಳಗೆ ಲಭ್ಯವಿದೆ. ಜೊತೆಗೆ 9 ಸಿಎನ್‌ಜಿ ವೇರಿಯೆಂಟ್‌ಗಳಲ್ಲಿ 8 ಮತ್ತು 12 ಎಎಮ್‌ಟಿ ವೇರಿಯೆಂಟ್‌ಗಳಲ್ಲಿ 10 ಲಭ್ಯವಿದೆ. 1.2 - ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.2 -ಲೀಟರ್ ಸಿಎನ್‌ಜಿ ಆಯ್ಕೆಯೊಂದಿಗೆ ಬರುತ್ತದೆ.

most-affordable-tata-mahindra-maruti-suvs-in-india

ಇವು ಭಾರತದಲ್ಲಿ ಸದ್ಯ ಅತ್ಯಂತ ಅಗ್ಗದ ಬೆಲೆಗೆ ಸಿಗುವ ಅತ್ಯುತ್ತಮ ಪುಟ್ಟ ಎಸ್‌ಯುವಿಗಳಾಗಿವೆ. ಬೆಲೆಗೆ ತಕ್ಕಂತೆ ಆರಾಮವಾದ ಇಂಟೀರಿಯರ್, ಆಕರ್ಷಕ ಫೀಚರ್ಸ್, ಉತ್ತಮ ಡಿಸೈನ್‌ನೊಂದಿಗೆ ದೇಶದಲ್ಲಿ ಉತ್ತಮ ಮಾರಾಟ ಕಾಣುತ್ತಿವೆ. ನಿಮ್ಮ ಕಡಿಮೆ ಬಜೆಟ್‌ನಲ್ಲಿ ನೀವು ಕೂಡ ಕಾರುಗಳನ್ನು ಹುಡುಕುತ್ತಿದ್ದರೆ ಈ ಕಾರುಗಳು ನಿಮ್ಮ ಆದ್ಯತೆಗಳನ್ನು ಪೂರೈಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, May 23, 2025, 9:26 [IST]
English summary
Most affordable tata mahindra maruti suvs in india
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+