Tesla: ಭಾರತದಲ್ಲಿ ಮೊದಲ ಟೆಸ್ಲಾ ಕಾರು ಬಿಡುಗಡೆ: ಶೋರೂಂ ಎಲ್ಲಿದೆ? ಏನೆಲ್ಲಾ ವಿಶೇಷತೆಗಳಿವೆ?

ಭಾರತದಲ್ಲಿ ಹಲವು ಅಡತಡೆಗಳ ನಂತರ ಕೊನೆಗೂ ಅಂತರಾಷ್ಟ್ರೀಯ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ 'ಟೆಸ್ಲಾ' (Tesla), ದೇಶಕ್ಕೆ ಲಗ್ಗೆಯಿಟ್ಟಿದೆ. ತನ್ನ ಮೊದಲ ಕಾರನ್ನು ಕೂಡ ಬಿಡುಗಡೆ ಮಾಡಿ ಭಾರೀ ಸದ್ದು ಮಾಡುತ್ತಿದೆ. ಮುಂಬೈನಲ್ಲಿ ಟೆಸ್ಲಾದ ಮೊದಲ ಶೋರೂಂ ಅದ್ದೂರಿಯಾಗಿ ಇಂದು ಪ್ರಾರಂಭಿಸಲಾಗಿದ್ದು, ಇದು ದೇಶದ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಗಮನಾರ್ಹ ಪ್ರವೇಶವನ್ನು ಸೂಚಿಸುತ್ತದೆ. ಈ ಶೋರೂಂ ಟೆಸ್ಲಾ ಕಂಪನಿಗೆ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಮತ್ತಷ್ಟು ವಿಸ್ತರಿಸುವ ಕಂಪನಿಯ ಉದ್ದೇಶಗಳನ್ನು ಸೂಚಿಸುತ್ತದೆ.

ಶೋರೂಮ್ ಎಲ್ಲಿದೆ?

ಮುಂಬೈನ ಮೇಕರ್ ಮ್ಯಾಕ್ಸಿಟಿ ಮಾಲ್, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿ ಹೊಸ ಶೋರೂಂ ಅನ್ನು ಪ್ರಾರಂಭಿಸಲಾಗಿದೆ. ಬಿಕೆಸಿ ಮುಂಬೈನ ಪ್ರಮುಖ ವಾಣಿಜ್ಯ ಪ್ರದಾಶವಾಗಿ ಗುರುತಿಸಲ್ಪಟ್ಟಿದೆ, ಇದನ್ನು ಸಾಮಾನ್ಯವಾಗಿ ಭಾರತದ ಅತ್ಯಂತ ದುಬಾರಿ ಕಚೇರಿ ವಲಯವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ನೆಲೆಗೊಂಡಿರುವ ಟೆಸ್ಲಾ ಶೋರೂಂ ಸರಿಸುಮಾರು 4,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ.

mumbai-tesla-showroom-location-and-model-y-details

ಶೋರೂಂ ಟೆಸ್ಲಾದ ಮುಖ್ಯ ಪ್ರದರ್ಶನ ಮತ್ತು ಗ್ರಾಹಕ ಅನುಭವ ಕೇಂದ್ರವಾಗಿ (Experience Center) ಕಾರ್ಯನಿರ್ವಹಿಸುತ್ತದೆ. ಹೊಸದಾಗಿ ಬಿಡುಗಡೆಯಾದ 'ಮಾಡೆಲ್ ವೈ' (Model Y) ಎಸ್‌ಯುವಿ ಸೇರಿದಂತೆ ಟೆಸ್ಲಾ ವಾಹನಗಳನ್ನು ಅನ್ವೇಷಿಸಲು ಸಂದರ್ಶಕರಿಗೆ ಅವಕಾಶವನ್ನು ನೀಡಲಾಗಿದೆ. ಈ ಸ್ಥಳವನ್ನು ಐದು ವರ್ಷಗಳ ಕಾಲ ಗುತ್ತಿಗೆಗೆ ಪಡೆಯಲಾಗಿದೆ.

ವರದಿಯ ಪ್ರಕಾರ, ಭಾರತದ ಯಾವುದೇ ಕಾರು ಶೋರೂಂಗೆ ಈ ಮಟ್ಟದ ಅತ್ಯಧಿಕ ಬಾಡಿಗೆ ನೀಡಲಾಗಿಲ್ಲ ಎಂದು ಹೇಳಲಾಗುತ್ತಿದೆ. ಟೆಸ್ಲಾದ ಮುಂಬೈ ಸೌಲಭ್ಯಗಳು ಶೋರೂಂಗೆ ಹತ್ತಿರದಲ್ಲಿ ಸೇವಾ ಗೋದಾಮು (Service warehouse) ಮತ್ತು ಸಹ - ಕೆಲಸದ ಕಚೇರಿ (Co-working office) ಅನ್ನು ಸಹ ಒಳಗೊಂಡಿವೆ. ಮುಂಬೈ ಶೋರೂಂ ಉದ್ಘಾಟನೆ ನಂತರ ದೆಹಲಿ ಸೇರಿದಂತೆ ಇತರ ಭಾರತೀಯ ನಗರಗಳಲ್ಲಿ ಶೀಘ್ರದಲ್ಲೇ ತೆರೆಯಲಾಗುವುದು.

mumbai-tesla-showroom-location-and-model-y-details

ಮಾಡಲ್ ವೈ ಬಿಡುಗಡೆ: ವಿಶೇಷತೆಗಳೇನು?

ಟೆಸ್ಲಾ ಮುಂಬೈನಲ್ಲಿ ತನ್ನ ಮೊದಲ ಶೋ ರೂಂ ಉದ್ಘಾಟನೆ ಜೊತೆಜೊತೆಗೆ ರೂ. 60 ಲಕ್ಷದಿಂದ (ಎಕ್ಸ್‌ ಶೋರೂಂ) ಪ್ರಾರಂಭವಾಗುವ ಮಾಡೆಲ್ ವೈ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಇದು ಎರಡು ಡ್ರೈವ್‌ಟ್ರೇನ್‌ಗಳಲ್ಲಿ ಲಭ್ಯವಿದ್ದು, ಮಾಡಲ್ ವೈ' ರಿಯರ್-ವೀಲ್ ಡ್ರೈವ್ ರೂ. 60 ಲಕ್ಷವಿದ್ದರೆ, ಮಾಡಲ್ ವೈ ಲಾಂಗ್ ರೇಂಜ್ RWD ರೂ.68 (ಎರಡೂ ಎಕ್ಸ್‌ ಶೊರೂಂ ಬೆಲೆಗಳು) ಲಕ್ಷವಿದೆ.

EPA ರೇಂಜ್ (RWD) ಮಾಡಲ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 574 ಕಿ.ಮೀ ರೇಂಜ್ ನೀಡಲಿದೆ. 100 ಕಿ.ಮೀ ವೇಗವನ್ನು ಕೇವಲ 5.4 ಸೆಕೆಂಡುಗಳಲ್ಲಿ ತಲುಪಬಲ್ಲದು ಹಾಗೂ ಟಾಪ್ ಸ್ಪೀಡ್ 200 ಕಿ.ಮೀ ಇದೆ. ಎರಡೂ ವೇರಿಯೆಂಟ್‌ಗಳು ಸೆಂಟ್ರಲ್ ಟಚ್‌ಸ್ಕ್ರೀನ್, ಪ್ರೀಮಿಯಂ ಸೌಂಡ್, ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಡ್ರೈವರ್ ಅಸಿಸ್ಟ್ ಸಿಸ್ಟಮ್ ಮತ್ತು ಓವರ್-ದಿ-ಏರ್ ನವೀಕರಣಗಳು ಸೇರಿದಂತೆ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿವೆ.

ಆರಂಭಿಕ ಮಾಡಲ್‌ಗಳನ್ನು ಚೀನಾದಲ್ಲಿರುವ ಟೆಸ್ಲಾದ ಶಾಂಘೈ ಗಿಗಾಫ್ಯಾಕ್ಟರಿಯಿಂದ ಕಂಪ್ಲೀಟ್ ಬಿಲ್ಟ್ ಯೂನಿಟ್‌ಗಳಾಗಿ (CBUs) ಆಮದು ಮಾಡಿಕೊಳ್ಳಲಾಗುತ್ತಿದೆ. ಟೆಸ್ಲಾ ಸೂಪರ್‌ಚಾರ್ಜರ್ ಕೇಂದ್ರಗಳನ್ನು ಸಹ ಆಮದು ಮಾಡಿಕೊಂಡಿದೆ, ಇದನ್ನು ಮುಂಬೈ ಸುತ್ತಲೂ ಸ್ಥಾಪಿಸಲಾಗುವುದು. ಸುಧಾರಿತ ಇವಿ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರುವ ಶ್ರೀಮಂತ ಖರೀದಿದಾರರಿಗೆ ಈ ಕಾರು ಬೆಸ್ಟ್ ಆಯ್ಕೆಯಾಗಲಿದೆ.

ಆದರೆ ಈ ಕಾರು ನಿರೀಕ್ಷೆಗಳನ್ನು ಮೀರಿ ಹೆಚ್ಚಿನ ಬೆಲೆಯಲ್ಲಿ ಬಿಡುಗಡೆಯಾಗಿರುವುದು ಒಂದು ಹಿನ್ನಡೆಯಾಗಿದೆ. ಭಾರತದಲ್ಲಿ ಮಾಡೆಲ್ ವೈ'ನ ಆರಂಭಿಕ ಬೆಲೆ ಅಮೆರಿಕಾ, ಚೀನಾ ಹಾಗೂ ಜರ್ಮನಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಮುಖ್ಯವಾಗಿ ಭಾರತದ ಹೆಚ್ಚಿನ ಆಮದು ಸುಂಕಗಳು (70% ವರೆಗೆ) ಮತ್ತು ವಿದೇಶಿ EV ಗಳ ಮೇಲಿನ ತೆರಿಗೆಗಳಿಂದಾಗಿ ಈ ಬೆಲೆ ಹೆಚ್ಚಾಗಿದೆ.

More from DriveSpark

Article Published On: Tuesday, July 15, 2025, 12:34 [IST]
English summary
Mumbai tesla showroom location and model y details
Read more on tesla india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+