Mahindra: 7-ಸೀಟರ್.. 7.99 ಲಕ್ಷ, ಹೊಸ ಮಹೀಂದ್ರಾ ಬೊಲೆರೊ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆ.. ವಿಶೇಷತೆಗಳೇನು?
ದೇಶೀಯ ಮಾರುಕಟ್ಟೆಯಲ್ಲಿಂದು 2025ರ ನೂತನ ಮಹೀಂದ್ರಾ ಬೊಲೆರೊ ಫೇಸ್‌ಲಿಫ್ಟ್ (Mahindra Bolero Facelift) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿದೆ. ಇದು ಹಳೆಯ ಬೊಲೆರೊಗೆ ಹೋಲಿಕೆ ಮಾಡಿದರೆ, ವಿನ್ಯಾಸ ಹಾಗೂ ವೈಶಿಷ್ಟ್ಯಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದೆ. ಅತಿ ಕಡಿಮೆ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ಲಭ್ಯವಿದೆ. ಬನ್ನಿ, ಈ ಹೊಚ್ಚ ಹೊಸ ಕಾರಿನ ದರವೆಷ್ಟು ಹಾಗೂ ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಈ ಮಹೀಂದ್ರಾ ಬೊಲೆರೊ ಫೇಸ್‌ಲಿಫ್ಟ್ ಎಸ್‌ಯುವಿ ಕನಿಷ್ಠ ರೂ.7.99 ಲಕ್ಷ ಮತ್ತು ಗರಿಷ್ಠ ರೂ.9.69 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದ್ದು, ನಗರ ಮತ್ತು ಗ್ರಾಮೀಣ ಭಾಗದ ಜನರಿಗೆ ಸುಲಭವಾಗಿ ಕೈಗೆಟುಕುವಂತಿದೆ. ಬಿ4, ಬಿ6, ಬಿ6 (ಒ) ಹಾಗೂ ಬಿ8 ಎಂಬ ಆಕರ್ಷಕವಾದ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ನೂತನ ಬೊಲೆರೊ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದೆ. ಮುಂಭಾಗ (ಫ್ರಂಟ್) ಬ್ಲ್ಯಾಕ್ ಫಿನಿಶಿಂಗ್ ಹೊಂದಿರುವ ಬಂಪರ್, ನವೀನವಾದ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಫಾಗ್ ಲೈಟ್‌ಗಳು, ವೈಪರ್ & ವಾಷರ್ ಮತ್ತು 15 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಸ್ಟೆಲ್ತ್ ಬ್ಲ್ಯಾಕ್, ಡೈಮಂಡ್ ವೈಟ್, ಡಿಸ್ಯಾಟ್ ಸಿಲ್ವರ್ ಹಾಗೂ ರಾಕಿ ಬೀಜ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.
ಇದು ಹೆಚ್ಚು ವಿಶಾಲ ಗಾತ್ರದಲ್ಲಿದೆ. 4,221 ಎಂಎಂ ಉದ್ದ, 1,745 ಎಂಎಂ ಅಗಲ ಮತ್ತು 1910 ಎಂಎಂ ಎತ್ತರವಿದೆ. ಜೊತೆಗಿದು 183 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,794 ವೀಲ್‌ಬೇಸ್‌ನ್ನು ಪಡೆದಿದೆ. 7 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ವಾರಾಂತ್ಯ & ರಜಾ ದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 370 ಬೂಟ್ ಸ್ಪೇನ್‌ನ್ನು ತನ್ನದಾಸಿಕೊಂಡಿದೆ.

ಹೊಸ ಮಹೀಂದ್ರಾ ಬೊಲೆರೊ ಫೇಸ್‌ಲಿಫ್ಟ್ ಎಸ್‌ಯುವಿಯು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಪಡೆದಿದೆ. 1.5-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿದೆ. 75 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 210 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 16 ಕಿ.ಮೀ ವರೆಗೆ ಮೈಲೇಜ್ ಕೊಡಬಲ್ಲದು. 50 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.
ಈ ಕಾರಿನ ಕ್ಯಾಬಿನ್ ವಿನ್ಯಾಸವು ಆಕರ್ಷಕವಾಗಿದೆ. ಅದಕ್ಕೆ ತಕ್ಕಂತೆ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್‌ಗಳು, ಆರ್ಮ್‌ರೆಸ್ಟ್, ಹೆಡ್‌ರೆಸ್ಟ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ರಿಮೋಟ್ ಕೀ ಮತ್ತು ಮ್ಯಾನುಯಲ್ ಎಸಿ, ಸೀಟ್ ಪಾಕೆಟ್ ಹೋಲ್ಡರ್ಸ್ ಹಾಗೂ ಪವರ್ ವಿಂಡೋಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ನೂತನ ಬೊಲೆರೊ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಹುಮುಖ್ಯವಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಐಎಸ್‌ಒಎಫ್‌ಐಎಕ್ಸ್ (ISOFIX) ಚೈಲ್ಡ್ ಸೀಟ್ ಆಂಕಾರೇಜ್‌ಗಳು ಮತ್ತು ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿದೆ.
ಮಹೀಂದ್ರಾ ಬೊಲೆರೊ ನಿಯೋ ಫೇಸ್‌ಲಿಫ್ಟ್ (Mahindra Bolero Neo facelift) ಕೂಡ ಮಾರಾಟಕ್ಕೆ ಬಂದಿದೆ:
ಇದು ರೂ.8.49 ಲಕ್ಷದಿಂದ ರೂ.9.99 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದ್ದು, ಕಾಂಕ್ರೀಟ್ ಗ್ರೇ ಮತ್ತು ಜೀನ್ಸ್ ಬ್ಲೂ ಎಂಬ 2 ನವೀನ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. 1.5-ಲೀಟರ್ ಡೀಸೆಲ್ ಎಂಜಿನ್ & 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಹಾಗೂ ರೇರ್ ಪಾರ್ಕಿಂಗ್ ಕ್ಯಾಮೆರಾ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.


Click it and Unblock the Notifications