7-ಆಸನಗಳು.. ನಾಳೆ ಹೊಸ ಅವತಾರದಲ್ಲಿ ರೆನಾಲ್ಟ್ ಎಂಪಿವಿ ಬಿಡುಗಡೆ, ಏನಿರಲಿವೆ ಫೀಚರ್ಸ್.. 6.50 ಲಕ್ಷಕ್ಕೆ ಮಾರಾಟಕ್ಕೆ?

ರೆನಾಲ್ಟ್ ಟ್ರೈಬರ್ (Renault Triber) ಜನಪ್ರಿಯ ಎಂಪಿವಿಯಾಗಿದೆ. ಈ ಕಾರನ್ನು 2019ರಲ್ಲಿ ಮೊದಲ ಭಾರಿಗೆ ಪರಿಚಯಿಸಲಾಯಿತು. ನಾಳೆ (ಜುಲೈ 23) ದೇಶೀಯ ಮಾರುಕಟ್ಟೆಗೆ ಒಂದಷ್ಟು ನವೀಕರಣಕ್ಕೆ ಒಳಪಟ್ಟ ಇದೇ 'ಟ್ರೈಬರ್' ಎಂಪಿವಿಯ 2025ರ ಹೊಚ್ಚ ಹೊಸ ಫೇಸ್‌ಲಿಫ್ಟ್ ಮಾಡೆಲ್‌ನ್ನು ಮಾರಾಟಕ್ಕೆ ತರಲಾಗುತ್ತದೆ. ಇದಕ್ಕಾಗಿ ಮುಂಬೈನಲ್ಲಿ ಅದ್ದೂರಿ ಸಮಾರಂಭವನ್ನು ಏರ್ಪಡಿಸಲಾಗಿದೆ. ಬನ್ನಿ, ನೂತನ ಕಾರಿನ ನಿರೀಕ್ಷಿತ ದರವೆಷ್ಟು.. ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂಬುದರ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

ಬೆಲೆ (Price):

2025ರ ರೆನಾಲ್ಟ್ ಟ್ರೈಬರ್ ಫೇಸ್‌ಲಿಫ್ಟ್ (Renault Triber Facelift) ಎಂಪಿವಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ. ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ ರೂ.6.50 ಲಕ್ಷದಿಂದ ರೂ.9 ಲಕ್ಷ ದರವನ್ನು ಪಡೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಖರೀದಿಗೆ ದೊರೆಯುವ ಟ್ರೈಬರ್, ಕನಿಷ್ಠ ರೂ.6.15 ಲಕ್ಷ ಮತ್ತು ಗರಿಷ್ಠ ರೂ.8.75 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

New 2025 Renault Triber Facelift Mpv Launch Tomorrow Expected Price Mileage And Features Details

ವಿನ್ಯಾಸ (Design):

ಸದ್ಯ, ಟ್ರೈಬರ್ ಫೇಸ್‌ಲಿಫ್ಟ್ ವಿನ್ಯಾಸದ ಬಗ್ಗೆ ಸ್ವಲ್ಪ ಮಟ್ಟಿಗೆ ಬೆಳಕನ್ನು ಚೆಲ್ಲಲು ಕಂಪನಿಯು ಟೀಸರ್‌ನ್ನು ಬಿಡುಗಡೆಗೊಳಿಸಿದೆ. ಇದು ಈ ಕಾರು ಹೆಚ್ಚು ಅತ್ಯಾಧುನಿಕವಾಗಿರಲಿದೆ ಎಂಬುನ್ನು ಬಹುತೇಕ ಖಚಿತಪಡಿಸುತ್ತದೆ. ನೂತನ ಎಂಪಿವಿಯು ಮರು ವಿನ್ಯಾಸಕ್ಕೆ ಒಳಪಡಿಸಲಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಬಂಪರ್‌ಗಳನ್ನು ಪಡೆದಿರಲಿದೆ. ವಿನೂತನವಾಗಿರುವ ಅಲಾಯ್ ವೀಲ್‌ಗಳು, ಟೈಲ್ ಲ್ಯಾಂಪ್‌ಗಳು, ರೇರ್ ವೈಪರ್‌ & ವಾಷರ್‌ನ್ನು ಒಳಗೊಂಡಿರುವ ಸಾಧ್ಯತೆಯೂ ದಟ್ಟವಾಗಿದೆ.

ಕಾರ್ಯಕ್ಷಮತೆ (Performance):

ನೂತನ ರೆನಾಲ್ಟ್ ಟ್ರೈಬರ್ ಫೇಸ್‌ಲಿಫ್ಟ್ ಎಂಪಿವಿಯ ಪವರ್‌ಟ್ರೇನ್‌ನಲ್ಲೂ ಯಾವುದೇ ಮಾರ್ಪಾಡುಗಳಿರವುದಿಲ್ಲ ಎನ್ನಲಾಗಿದೆ. ಇದು ಈಗಿರುವ 'ಟ್ರೈಬರ್‌ನಂತೆ 1-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿರಲಿದೆ. 5-ಸ್ಪೀಡ್ ಮ್ಯಾನುವಲ್/ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿರಲಿದೆ. ಗರಿಷ್ಠ 20 ಕಿ.ಮೀವರೆಗೂ ಮೈಲೇಜ್ ನೀಡುವ ನಿರೀಕ್ಷೆಯಿದೆ.

New 2025 Renault Triber Facelift Mpv Launch Tomorrow Expected Price Mileage And Features Details

ಆಸನ ಆಯ್ಕೆ & ಬೂಟ್ ಸ್ಪೇಸ್ (Seating Capacity & Boot Space):

ಹೊಸ ಟ್ರೈಬರ್ ಕಾರಿನ ಸುತ್ತಳತೆಯಲ್ಲಿಯೂ ಬದಲಾವಣೆಗಳಿರುವುದಿಲ್ಲ ಎಂದು ಹೇಳಲಾಗಿದೆ. ಇದರಲ್ಲಿಯೂ 7 ಆಸನ ಆಯ್ಕೆ ವ್ಯವಸ್ಥೆಯಿರಲಿದ್ದು, ಪ್ರಯಾಣಿಕರು ಸುಲಭವಾಗಿ ಸಂಚಾರ ನಡೆಸಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ ಚಿಕ್ಕದಾದ 84 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿರಬಹುದು ಎನ್ನಲಾಗಿದೆ.

ವೈಶಿಷ್ಟ್ಯಗಳು (Features):

ನೂತನ ಎಂಪಿವಿ ಕ್ಯಾಬಿನ್‌ನ್ನು ಮತ್ತಷ್ಟು ಆಧುನೀಕರಣಗೊಳಿಸಿರುವ ನಿರೀಕ್ಷೆಯಿದೆ. 8-ಇಂಚಿರುವ ಬೃಹದಾಕಾರದ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿರುವ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ರೇರ್ ಎಸಿ ವೆಂಟ್‌ಗಳು, ಪುಶ್ ಬಟನ್ ಸ್ಟಾರ್ಟ್‌, ಕೀಲೆಸ್ ಎಂಟ್ರಿ, ಸ್ಟೀರಿಂಗ್ ಮೌಂಟೆಡ್ ಆಡಿಯೋ, ಆಟೋ ಎಸಿ ಮತ್ತು ಕನೆಕ್ಟ್ಡ್ ಕಾರ್ ಟೆಕ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಸಾಧ್ಯತೆಯೂ ಇದೆ.

ಸುರಕ್ಷತಾ ವೈಶಿಷ್ಟ್ಯಗಳು (Safety Features)

ರೆನಾಲ್ಟ್ ಟ್ರೈಬರ್ ಫೇಸ್‌ಲಿಫ್ಟ್ ಸುರಕ್ಷತೆಗೂ ಹೆಸರುವಾಸಿಯಾಗಿರಲಿದ್ದು, ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಬಹುದು ಎಂದು ಹೇಳಲಾಗಿದೆ. 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೆಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ - ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್-ಸ್ಟಾರ್ಟ್ ಅಸಿಸ್ಟ್ & ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿರುವ ನಿರೀಕ್ಷೆಯಿದೆ.

ಇನ್ನು, 'ರೆನಾಲ್ಟ್ ಟ್ರೈಬರ್ ಫೇಸ್‌ಲಿಫ್ಟ್' ಎಂಪಿವಿ ಮಾರಾಟಕ್ಕೆ ಬರಲಿದೆ ಎಂಬುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಸಂತಸವನ್ನು ತರಿಸಿದೆ. ಈ ಕಾರು ತುಂಬಾ ಚೆನ್ನಾಗಿರುವ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಕೂಡ ಪಡೆದುಕೊಂಡಿರಲಿದೆ ಎಂದು ಅಂದಾಜಿಸಲಾಗಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಖರೀದಿದಾರರಿಗೆ ಲಭ್ಯವಾಗಬಹುದು ಎಂದು ಹೇಳಲಾಗಿದೆ.

More from DriveSpark

Article Published On: Tuesday, July 22, 2025, 15:29 [IST]
English summary
New 2025 renault triber facelift mpv launch tomorrow expected price mileage and features details
Read more on renault india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+