ಸದ್ದಿಲ್ಲದೇ ಹೊಸ ಟಾಟಾ ಟಿಯಾಗೊ ಎನ್‌ಆರ್‌ಜಿ ಕಾರು ಬಿಡುಗಡೆ.. 7 ಲಕ್ಷ ಬೆಲೆ, ನಿರೀಕ್ಷೆಗೂ ಮೀರಿದ ವೈಶಿಷ್ಟ್ಯಗಳು!

ಟಾಟಾ ಮೋಟಾರ್ಸ್ (Tata Motors) ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ಇತ್ತೀಚೆಗೆ ನವೀಕರಣಗೊಳಿಸಿದ 2025ರ ಟಿಯಾಗೊ (Tiago) ಹ್ಯಾಚ್‌ಬ್ಯಾಕ್‌ನ್ನು ಬಿಡುಗಡೆಗೊಳಿಸಿತ್ತು. ಆದರೆ, ಇದೇ ಕಾರಿನ 'ಎನ್‌ಆರ್‌ಜಿ ವರ್ಷನ್'ನ್ನು ಮೇಲ್ದರ್ಜೆರಿಸುವ ಕುರಿತಂತೆ ಕಂಪನಿಯು ಯಾವುದೇ ಸುಳಿವನ್ನು ನೀಡಿರಲ್ಲ. ಅಂತಿಮವಾಗಿ ಟಾಟಾ ಕೆಲವೊಂದು ಹೊಸತನಗಳಿಗೆ ಸಾಕ್ಷಿಯಾಗಿರುವ ಟಿಯಾಗೊ ಎನ್‌ಆರ್‌ಜಿ ಕಾರನ್ನು ಮಾರಾಟಕ್ಕೆ ತಂದಿದೆ. ಸಾಮಾನ್ಯ ಟಿಯಾಗೊಗೆ ಹೋಲಿಕೆ ಮಾಡಿದರೆ, ಇದು ಸ್ವಲ್ಪ ಸ್ಪೋರ್ಟಿಯರ್ ಮಾಡೆಲ್ ಆಗಿದ್ದು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ವಿಶೇಷವಾಗಿ ಎಂತಹ ರಸ್ತೆಯಲ್ಲಿ ಬೇಕಾದರೂ ಸುಲಭವಾಗಿ ಚಲಿಸಬಲ್ಲದು.

2025ರ ನೂತನ ಟಾಟಾ ಟಿಯಾಗೊ ಎನ್‌ಆರ್‌ಜಿ (Tata Tiago NRG) ಹ್ಯಾಚ್‌ಬ್ಯಾಕ್‌, ಹೊರಭಾಗದಲ್ಲಿ ಸಾಮಾನ್ಯ ಟಿಯಾಗೊ ಕಾರಿನಂತೆಯೇ ವಿನ್ಯಾಸವನ್ನು ಹೊಂದಿದೆ. ಆದರೂ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ. ಇದು ನವೀನವಾಗಿರುವ ಥಿಕ್ ಸಿಲ್ವರ್ ಸ್ಕಿಡ್ ಪ್ಲೇಟ್‌ನೊಂದಿಗೆ ಮರುವಿನ್ಯಾಸ ಮಾಡಲಾಗಿರುವ ಬಂಪರ್‌ನ್ನು ಒಳಗೊಂಡಿದೆ.

New 2025 Tata Tiago NRG Launched Rs 7 2 Lakh Starting Price Details

ಇದರೊಟ್ಟಿಗೆ ಶಾರ್ಕ್ ಫಿನ್ ಆಂಟೆನಾವನ್ನು ಹೊಂದಿದ್ದು, ಕಾರಿನ ಬಲಭಾಗದಲ್ಲಿ 'ಎನ್‌ಆರ್‌ಜಿ' ಬ್ಯಾಡ್ಜಿಂಗ್‌ನ್ನು ಪಡೆದಿದೆ. ಮುಸ್ಕ್ಯುಲರ್ ಟೈಲ್‌ಗೇಟ್ ಅನ್ನು ತನ್ನದಾಗಿಸಿಕೊಂಡಿದೆ. ಈ ಹ್ಯಾಚ್‌ಬ್ಯಾಕ್‌ ಕ್ಯಾಬಿನ್ ಒಳಭಾಗವು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದ್ದು, ಡ್ಯಾಶ್‌ಬೋರ್ಡ್ ಹಾಗೂ ಸೀಟುಗಳು ಕೂಡ ಪ್ರಯಾಣಿಕ ಸ್ನೇಹಿಯಾಗಿವೆ. ಟೂ-ಸ್ಪೋಕ್ ಸ್ಟೀರಿಂಗ್ ವೀಲ್‌ನಲ್ಲಿ ಟಾಟಾ ಲೋಗೋವನ್ನು ಪಡೆದಿದೆ.

ಈ ಟಾಟಾ ಟಿಯಾಗೊ ಎನ್‌ಆರ್‌ಜಿ ಕಾರು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಹುಮುಖ್ಯವಾಗಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕೀಲೆಸ್ ಎಂಟ್ರಿ, ಪುಶ್ ಸ್ಟಾರ್ಟ್-ಸ್ಟಾಪ್ ಬಟನ್, ಆಟೋ-ಫೋಲ್ಡಿಂಗ್ ಒವಿಆರ್‌ಎಂಗಳು, ಹೈಟ್-ಅಡ್ಜಸ್ಟಬಲ್ ಡ್ರೈವರ್ ಸೀಟ್, ರೇರ್ ಸೆನ್ಸರ್ಸ್ ವೈಪರ್‌ಗಳು ಹಾಗೂ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳನ್ನು ಹೊಂದಿದೆ.

New 2025 Tata Tiago NRG Launched Rs 7 2 Lakh Starting Price Details

ನೂತನ ಟಿಯಾಗೊ ಎನ್‌ಆರ್‌ಜಿ ಹ್ಯಾಚ್‌ಬ್ಯಾಕ್‌ ಸುರಕ್ಷತೆಗೂ ಹೆಸರುವಾಸಿದ್ದು, ಗರಿಷ್ಠ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ. ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆದಿದೆ.

ಹೊಸ ಟಾಟಾ ಟಿಯಾಗೊ ಎನ್‌ಆರ್‌ಜಿ ಕಾರಿನ ಪವರ್‌ಟ್ರೇನ್‌ ಆಯ್ಕೆಯಲ್ಲಿಯೂ ಯಾವುದೇ ಮಾರ್ಪಾಡುಗಳನ್ನು ಮಾಡಲಾಗಿಲ್ಲ. ಇದರ 1.2-ಲೀ. ಪೆಟ್ರೋಲ್ ಎಂಜಿನ್ 86 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 113 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

New 2025 Tata Tiago NRG Launched Rs 7 2 Lakh Starting Price Details

ಮತ್ತೊಂದು 1.2-ಲೀ. ಸಿಎನ್‌ಜಿ ಎಂಜಿನ್, 73 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 95 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 19.43 ರಿಂದ 28.06 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಈ ಟಾಟಾ ಟಿಯಾಗೊ ಎನ್‌ಆರ್‌ಜಿ ಹ್ಯಾಚ್‌ಬ್ಯಾಕ್‌ ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ದೊರೆಯುತ್ತದೆ. ಪೆಟ್ರೋಲ್ ಮ್ಯಾನುವಲ್ ರೂಪಾಂತರ ರೂ. 7.2 ಲಕ್ಷ ಹಾಗೂ ಆಟೋಮೆಟಿಕ್ ರೂಪಾಂತರ ರೂ.7.75 ಲಕ್ಷ ಬೆಲೆಯನ್ನು ಹೊಂದಿದೆ. ಅದೇ ರೀತಿಯಲ್ಲಿ ಸಿಎನ್‌ಜಿ ಮ್ಯಾನುವಲ್ ರೂಪಾಂತರ ರೂ.8.2 ಲಕ್ಷ ಮತ್ತು ಆಟೋಮೆಟಿಕ್ ರೂಪಾಂತರ ರೂ.8.75 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. ಜೊತೆಗೆ 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, March 12, 2025, 13:06 [IST]
English summary
New 2025 tata tiago nrg launched rs 7 2 lakh starting price details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+