6.90 ಲಕ್ಷ, 30+ Km ಮೈಲೇಜ್.. 6 ಏರ್‌ಬ್ಯಾಗ್‌ನ ಈ ಜನಪ್ರಿಯ Toyota ಕಾರನ್ನು ಕೊಳ್ಳಬೇಕೇ.. ಮುಖ್ಯಾಂಶಗಳಿವು!

ಇತ್ತೀಚೆಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಎಂದೇ ಹೆಸರುವಾಸಿಯಾಗಿರುವ ಟೊಯೊಟಾ ಗ್ಲಾನ್ಜಾ (Toyota Glanza) ಕಾರನ್ನು ನವೀಕರಿಸಿ, ಮಾರಾಟಕ್ಕೆ ತರಲಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಈ ಹ್ಯಾಚ್‌ಬ್ಯಾಕ್‌ನ ಎಲ್ಲ ರೂಪಾಂತರಗಳನ್ನು (ವೇರಿಯೆಂಟ್) 6 ಏರ್‌ಬ್ಯಾಗ್‌ಗಳೊಂದಿಗೆ ಮೇಲ್ದರ್ಜೆರಿಸಲಾಗಿದೆ. ಅದರ ಹೊರತಾಗಿಯೂ ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ನಾವಿಲ್ಲಿ ಇದೇ ಗ್ಲಾನ್ಜಾ ಕಾರಿನ ದರ ಹಾಗೂ ವಿಶೇಷತೆಗಳ ಕುರಿತ ಮುಖ್ಯಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

ಬೆಲೆ & ರೂಪಾಂತರಗಳು (Price & Variants):

ನೂತನ ಟೊಯೊಟಾ ಗ್ಲಾನ್ಜಾ ಹ್ಯಾಚ್‌ಬ್ಯಾಕ್‌ ಅತಿ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಮಧ್ಯಮ ಹಾಗೂ ಶ್ರೀಮಂತ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಬಹುದಾಗಿದೆ. ಇದು ರೂ.6.90 ಲಕ್ಷದಿಂದ ರೂ.10 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. ಇ, ಎಸ್, ಜಿ ಹಾಗೂ ವಿ ಎಂಬ ರೂಪಾಂತರಗಳೊಂದಿಗೂ ಲಭ್ಯವಿದೆ.

New 6 Airbag Toyota Glanza Price Mileage And Features Highlights

ವಿನ್ಯಾಸ & ಬಣ್ಣಗಳು (Design & Colors):

ಈ ಕಾರು ಹೊರಭಾಗದಲ್ಲಿ ಹೆಚ್ಚು ಆತ್ಯಾಧುನಿಕವಾದ ವಿನ್ಯಾಸ ಹೊಂದಿದ್ದು, ನೋಡುಗರನ್ನು ಸೆಳೆಯುವಂತಿದೆ. ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗ‌ಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು 16-ಇಂಚಿನ ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಪಡೆದಿದೆ. ಎಂಟೈಸಿಂಗ್ ಸಿಲ್ವರ್, ಗೇಮಿಂಗ್ ಗ್ರೇ, ಕೆಫೆ ವೈಟ್ ಹಾಗೂ ಸ್ಪೋರ್ಟಿನ್ ರೆಡ್ ಎಂಬ ಬಣ್ಣಗಳನ್ನು ಪಡೆದಿದೆ.

ಸುತ್ತಳತೆ (Dimensions):

ಹೊಸ ಟೊಯೊಟಾ ಗ್ಲಾನ್ಜಾ ಕಾರು ಮಾರುತಿ ಸುಜುಕಿ ಬಲೆನೊ ಹ್ಯಾಚ್‌ಬ್ಯಾಕ್‌ನ ರೀ-ಬ್ಯಾಡ್ಜ್ ಮಾಡೆಲ್ ಆಗಿದೆ. 3990 ಎಂಎಂ ಉದ್ದ, 1745 ಎಂಎಂ ಅಗಲ ಹಾಗೂ 1500 ಎಂಎಂ ಎತ್ತರವು ಇದೆ. ಜೊತೆಗೆ 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2520 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

New 6 Airbag Toyota Glanza Price Mileage And Features Highlights

ಆಸನ ಆಯ್ಕೆ & ಬೂಟ್ ಸ್ಪೇಸ್ (Seating Capacity & Boot Space):

ಇದರಲ್ಲಿ 5 ಆಸನ ಆಯ್ಕೆ ವ್ಯವಸ್ಥೆಯಿದೆ. ಹೀಗಾಗಿ ಪ್ರಯಾಣಿಕರು ಆರಾಮದಾಯಕವಾಗಿ ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 318 ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೇಸ್‌ ಆಯ್ಕೆಯನ್ನು ಹೊಂದಿದೆ.

ಕಾರ್ಯಕ್ಷಮತೆ (Performance):

ನೂತನ ಕಾರು ಬಲಿಷ್ಠವಾದ 2 ಪವರ್‌ಟ್ರೇನ್‌ನ್ನು ಒಳಗೊಂಡಿದೆ. 1.2-ಲೀಟರ್ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಯಾವ ಬೈಕ್‌ಗೂ ಕಮ್ಮಿಯಿಲ್ಲದ ರೀತಿಯಲ್ಲಿ 22 ರಿಂದ 30.61 ಕಿ.ಮೀವರೆಗೂ ಮೈಲೇಜ್ ಕೊಡುತ್ತದೆ. 37 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ತನ್ನದಾಗಿಸಿಕೊಂಡಿದೆ.

New 6 Airbag Toyota Glanza Price Mileage And Features Highlights

ವೈಶಿಷ್ಟ್ಯಗಳು (Features):

ಈ ಕಾರಿನ ಕ್ಯಾಬಿನ್ ವಿನ್ಯಾಸವು ತುಂಬಾ ಅಚ್ಚುಕಟ್ಟಾಗಿದ್ದು, ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್, ಹೈಟ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಹೆಡ್ಸ್-ಅಪ್ ಡಿಸ್‌ಪ್ಲೇ, ಟೊಯೋಟಾ ಐ-ಕನೆಕ್ಟ್ ಕನೆಕ್ಟೆಡ್ ಕಾರ್ ಟೆಕ್ ಹಾಗೂ ಕೀಲೆಸ್ ಎಂಟ್ರಿಯನ್ನು ಒಳಗೊಂಡಿದೆ.

ಸುರಕ್ಷತಾ ವೈಶಿಷ್ಟ್ಯಗಳು (Safety Features):

ಹೊಸ ಟೊಯೊಟಾ ಗ್ಲಾನ್ಜಾ ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 6 ಏರ್‌ಬ್ಯಾಗ್‌ಗಳು ಮಾತ್ರವಲ್ಲದೆ, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ವಿಎಸ್‍ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಹೋಲ್ಡ್ ಅಸಿಸ್ಟ್, ರೇರ್ ಪಾರ್ಕಿಂಗ್ ಸೆನ್ಸರ್ಸ್ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

More from DriveSpark

Article Published On: Friday, July 18, 2025, 15:23 [IST]
English summary
New 6 airbag toyota glanza price mileage and features highlights
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+