5-ಸೀಟರ್.. ಟಾಟಾ ಕರ್ವ್‌ಗೆ ಚೆಕ್‌ಮೇಟ್.. ಸಿಟ್ರನ್ ಬಸಾಲ್ಟ್ ಎಕ್ಸ್ ಕಾರಿಗಾಗಿ ಪ್ರಿ-ಬುಕ್ಕಿಂಗ್ ಶುರು, ಬೆಲೆ ಎಷ್ಟು?
ಫ್ರೆಂಚ್ ವಾಹನ ತಯಾರಕ ಕಂಪನಿ ಸಿಟ್ರನ್, ಭಾರತದ ಕಾರು ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ಬೇರೂರಲು ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ 'ಸಿಟ್ರನ್ 2.0 ಸ್ಟ್ರಾಟರ್ಜಿ' ಹೆಸರಿನ ಬ್ಯುಸಿನೆಸ್ ಮಾಡೆಲ್‌ನ್ನು ಘೋಷಣೆ ಮಾಡಿದ್ದು, ಹೊಸ ರೂಪದಲ್ಲಿ 'ಸಿ3ಎಕ್ಸ್' ಹ್ಯಾಚ್‌ಬ್ಯಾಕ್‌ನ್ನು ಬಿಡುಗಡೆಗೊಳಿಸಿದೆ. ಶೀಘ್ರದಲ್ಲೇ ನೂತನ 'ಬಸಾಲ್ಟ್ ಎಕ್ಸ್' ಎಸ್‌ಯುವಿಯನ್ನು ಮಾರಾಟಕ್ಕೆ ತರಲಿದೆ. ಅದಕ್ಕಾಗಿ ಕಂಪನಿಯು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬನ್ನಿ, ಆ ಕುರಿತಂತೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಸದ್ಯ, ಹೊಚ್ಚ ಹೊಸ ಸಿಟ್ರನ್ ಬಸಾಲ್ಟ್ ಎಕ್ಸ್ (Citroen Basalt X) ಎಸ್‌ಯುವಿಗಾಗಿ ಪ್ರಿ-ಬುಕ್ಕಿಂಗ್‌ನ್ನು ತೆರೆಯಲಾಗಿದೆ. ಆಸಕ್ತ ಗ್ರಾಹಕರು, ಸಮೀಪದ ಕಂಪನಿಯ ಡೀಲರ್‌ಶಿಪ್ ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ರೂ.11,000 ಮುಂಗಡ ಮೊತ್ತವನ್ನು ಪಾವತಿಸುವುದರೊಂದಿಗೆ ಆರ್ಡರ್ ಮಾಡಬಹುದು.

ಈ ಕಾರು ಹೊರಭಾಗದಲ್ಲಿ ಹೆಚ್ಚು ಆಕರ್ಷಣಿಯವಾಗಿ ಕಾಣುವಂತೆ ಮಾಡಲು ವಿನ್ಯಾಸದಲ್ಲಿ ಒಂದಷ್ಟು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಇದು ಏಪ್ರಿಲ್‌ನಲ್ಲಿ ಪರಿಚಯಿಸಲಾಗಿದ್ದ ಬಸಾಲ್ಟ್‌ನ 'ಡಾರ್ಕ್ ಎಡಿಷನ್'ನಂತೆಯೇ ಇರಲಿದೆ. ಆಲ್-ಬ್ಲ್ಯಾಕ್ ಪೇಂಟ್ ಸ್ಕೀಮ್‌ನ್ನು ಪಡೆದಿದೆ. ಒಳಭಾಗದಲ್ಲಿ ಪ್ರೀಮಿಯಂ ಲುಕ್ ಒದಗಿಸಲು ಡುಯಲ್-ಟೋನ್ ಬ್ಲ್ಯಾಕ್ & ಟ್ಯಾನ್ ಪೇಂಟ್ ಸ್ಕೀಮ್‌ನ್ನು ಬಳಕೆ ಮಾಡಲಾಗಿದೆ.
ಇದು ಮಾತ್ರವಲ್ಲದೇ ಸ್ಟ್ಯಾಂಡರ್ಡ್ 'ಬಸಾಲ್ಟ್' ಮಾಡೆಲ್‌ನಂತೆಯೇ ಸ್ಪ್ಲಿಟ್ ಹೆಡ್‌ಲೈಟ್ ಸೆಟಪ್, ವಿ-ಆಕಾರಕ್ಕೆ ಹೋಲಿಕೆಯಾಗಬಲ್ಲ ಸ್ಪ್ಲಿಟ್ ಎಲ್ಇಡಿ ಡಿಆರ್‌ಎಲ್‌ಗಳು, ಟೈಲ್‌ಲೈಟ್‌ಗಳು ಹಾಗೂ ಅಲಾಯ್ ವೀಲ್‌ಗಳನ್ನು ಹೊಂದಿರಲಿದೆ. 4,352 ಎಂಎಂ ಉದ್ದ, 1,765 ಎಂಎಂ ಅಗಲ ಹಾಗೂ 1593 ಎಂಎಂ ಎತ್ತರವು ಇರಲಿದೆ. 180 ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,651 ಎಂಎಂ ವೀಲ್‌ಬೇಸ್‌ನ್ನು ಪಡೆದಿರಲಿದೆ.
ನೂತನ ಸಿಟ್ರನ್ ಬಸಾಲ್ಟ್ ಎಕ್ಸ್ 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿರಲಿದ್ದು, ಪ್ರಯಾಣಿಕರು ಸುಲಭವಾಗಿ ದೂರದ ಊರುಗಳಿಗೆ ಸಂಚರಿಸಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 470 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿರಲಿದೆ.
ಹೊಸ ಬಸಾಲ್ಟ್ ಎಕ್ಸ್ ಎಸ್‌ಯುವಿಯ ಪವರ್‌ಟ್ರೇನ್‌ನಲ್ಲೂ ಯಾವುದೇ ಬದಲಾವಣಿಗಳಿರುವುದಿಲ್ಲ. ಪ್ರಸ್ತುತವಿರುವ 'ಬಸಾಲ್ಟ್' ಕಾರಿನಂತೆಯೇ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿರಲಿದೆ. 82 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 115 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕಲಿದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿರಲಿದೆ.
ಮತ್ತೊಂದು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 110 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 190 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸಲಿದೆ. 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿರಲಿದೆ. ಈ ಕಾರು 18 ರಿಂದ 19 ಕಿ.ಮೀವರೆಗೂ ಮೈಲೇಜ್ ಕೊಡಬಲ್ಲದು.
ಇದು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದೆ. ಬಹುಮುಖ್ಯವಾಗಿ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಪುಶ್ ಬಟನ್ ಸ್ಟಾರ್ಟ್, ಪವರ್ ವಿಂಡೋ, ರೇರ್ ಸೆಂಟರ್ ಆರ್ಮ್‌ರೆಸ್ಟ್, ಕಪ್‌ಹೋಲ್ಡರ್‌ಗಳು ಮತ್ತು ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್‌ಗಳನ್ನು ತನ್ನದಾಗಿಸಿಕೊಂಡಿರಲಿದೆ.
ನೂತನ ಸಿಟ್ರನ್ ಬಸಾಲ್ಟ್ ಎಕ್ಸ್ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ಸ್ ಸೇರಿದಂತೆ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ.
ಒಟ್ಟಾರೆಯಾಗಿ ಹೊಸ ಸಿಟ್ರನ್ ಬಸಾಲ್ಟ್ ಎಕ್ಸ್ ಎಸ್‌ಯುವಿಗೆ ಟಾಟಾ ಕರ್ವ್‌ನೊಂದಿಗೆ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರುಗಳು ಪ್ರಬಲವಾದ ಎದುರಾಳಿಯಾಗಲಿವೆ. ಈ ಕಾರು ಸಾಕಷ್ಟು ಆಕರ್ಷಕವಾಗಿಯೂ ಇದ್ದು, ರೂ.14 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಪಡೆದುಕೊಂಡಿರಲಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications








