ಸ್ಪ್ಲೆಂಡರ್‌ಗೆ ನೇರ ಎದುರಾಳಿ.. ನೂತನ Honda Shine 100 DX ಕುರಿತ ಪ್ರಮುಖಾಂಶಗಳಿವು, ಬೆಲೆ ಅಗ್ಗವೇ.. ಮೈಲೇಜ್ ಎಷ್ಟು?
ಇತ್ತೀಚಿಗಷ್ಟೇ ಹೊಚ್ಚ ಹೊಸ ಹೋಂಡಾ ಶೈನ್ 100 ಡಿಎಕ್ಸ್ (Honda Shine 100 DX) ಮೋಟಾರ್‌ಸೈಕಲ್‌ನ್ನು ಅನಾವರಣಗೊಳಿಸಲಾಯಿತು. ಈ ನೂತನ ಬೈಕ್ ಹೆಚ್ಚು ಅತ್ಯಾಕರ್ಷಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದ್ದು, ಯುವ ಗ್ರಾಹಕರಿಗೆ ಹೇಳಿ ಮಾಡಿಸಿದ ರೀತಿಯಲ್ಲಿದೆ. ಜೊತೆಗೆ ಕೈಗೆಟುಕುವ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ಲಭ್ಯವಿರುವ ನಿರೀಕ್ಷೆಯಿದೆ. ನಾವಿಲ್ಲಿ ಇದೇ 'ಶೈನ್ 100 ಡಿಎಕ್ಸ್' ಮೋಟಾರ್‌ಸೈಕಲ್‌ನ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.
ಬೆಲೆ (Price):
ಸದ್ಯಕ್ಕೆ ಹೋಂಡಾ ಶೈನ್ 100 ಡಿಎಕ್ಸ್ ಬೈಕ್‌ನ ಬೆಲೆಯನ್ನು ಪ್ರಕಟಿಸಲಾಗಿಲ್ಲ. ಆಗಸ್ಟ್ 1ರಿಂದ ಬುಕ್ಕಿಂಗ್ ಶುರುವಾಗಲಿದ್ದು, ಅಂದೇ ದರವನ್ನು ಘೋಷಣೆ ಮಾಡವಾಗುವ ನೀರಿಕ್ಷೆಯಿದೆ. ಈ ಮೋಟಾರ್‌ಸೈಕಲ್ ರೂ.75,000 ದಿಂದ ರೂ.80,000 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ವಿನ್ಯಾಸ & ಬಣ್ಣಗಳು (Design & Colors):
ಈ ಮೋಟಾರ್‌ಸೈಕಲ್ ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದೆ. ಹೊಸದಾಗಿರುವ ಹೆಡ್‌ಲ್ಯಾಂಪ್ & ಹೋಂಡಾ ಬ್ರ್ಯಾಂಡಿಂಗ್ ಪಡೆದುಕೊಂಡಿರುವ ಫ್ಯುಯೆಲ್ ಟ್ಯಾಂಕ್‍ನ್ನು ಒಳಗೊಂಡಿದೆ. ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಇಂಪೀರಿಯಲ್ ರೆಡ್ ಮೆಟಾಲಿಕ್, ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಮತ್ತು ಜೆನಿ ಗ್ರೇ ಮೆಟಾಲಿಕ್ ಎಂಬ 4 ಅತ್ಯಾಧುನಿಕ ಬಣ್ಣಗಳನ್ನು ಪಡೆದಿದೆ.
ಕಾರ್ಯಕ್ಷಮತೆ (Performance):
ಇದು ಶಕ್ತಿಯುತವದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 98.98 ಸಿಸಿ ಒಬಿಡಿ2ಬಿ ಸಿಂಗಲ್-ಸಿಲಿಂಡರ್, ಫ್ಯುಯೆಲ್-ಇಂಜೆಕ್ಟೆಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದ್ದು, 7.28 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 8.04 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಡಿದೆ. 65 ಕಿ.ಮೀವರೆಗೆ ಮೈಲೇಜ್ ಕೊಡಬಹದು ಎಂದು ಹೇಳಲಾಗಿದೆ.
ವೈಶಿಷ್ಟ್ಯಗಳು (Features):
ಹೀರೋ ಸ್ಪ್ಲೆಂಡರ್‌ಗೆ ನೇರ ಎದುರಾಳಿಯಾಗಿರುವ ಹೋಂಡಾ ಹೋಂಡಾ ಶೈನ್ 100 ಡಿಎಕ್ಸ್ ಬೈಕ್ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಹುಮುಖ್ಯವಾಗಿ ಎಲ್‌ಸಿಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್ ಆಫ್‌ನ್ನು ಹೊಂದಿದೆ. ಗ್ರೌಂಡ್ ಕ್ಲಿಯರೆನ್ಸ್ 168 ಎಂಎಂ ಇದ್ದು, 17-ಇಂಚಿರುವ ವೀಲ್‌ಗಳು ಹಾಗೂ ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):
ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫ್ರಂಟ್ ಪೋರ್ಕ್ಸ್ ಮತ್ತು ಹಿಂಭಾಗ (ರೇರ್) 5 - ಸ್ಟೆಪ್ ಅಡ್ಜಸ್ಟೇಬಲ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಒಳಗೊಂಡಿದೆ. ಸಿಬಿಎಸ್ (ಕಂಬೈನ್ಡ್ - ಬ್ರೇಕ್ ಸಿಸ್ಟಮ್) ಮತ್ತು ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ಪ್ರಸ್ತುತ ಖರೀದಿಗೆ ಲಭ್ಯವಿರುವ ಹೋಂಡಾ ಶೈನ್ 100 ಬೈಕ್ ವಿಶೇಷತೆಗಳೇನು:
ಈ ಮೋಟಾರ್‌ಸೈಕಲ್ ರೂ.68,862 (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. 98.98 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 65 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. ಟ್ವಿನ್ ಪಾಡ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸೈಡ್ ಸ್ಟ್ಯಾಂಡ್ ಸೆನ್ಸರ್ ಮತ್ತು ಸಿಂಗಲ್ ಪೀಸ್ ಸೀಟ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.
ಒಟ್ಟಾರೆಯಾಗಿ ನೂತನ 'ಹೋಂಡಾ ಶೈನ್ 100 ಡಿಎಕ್ಸ್' ಬೈಕ್‌ನ್ನು ಪರಿಚಯಿಸಿರುವುದು ದೇಶೀಯವಾಗಿ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ತುಂಬಾ ಅತ್ಯಾಕರ್ಷಕವಾಗಿರಲಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುವ ಸಾಧ್ಯತೆಯಿದೆ. ಈ ಬೈಕ್ ಮಾರಾಟಕ್ಕೆ ಬಂದ ಮೇಲೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications