473 ಕಿ.ಮೀ ರೇಂಜ್, ಬೆಸ್ಟ 5-ಸೀಟರ್ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಬಿಡುಗಡೆಗೆ ಸಜ್ಜು
ಹ್ಯುಂಡೈ ಕ್ರೆಟಾ (Hyundai Creta) ಹ್ಯುಂಡೈ ಕಂಪನಿಯ ಭಾರೀ ಜನಪ್ರಿಯ ಮಾಡೆಲ್ ಆಗಿದೆ. ಹ್ಯುಂಡೈ ತನ್ನ ಈ ಬ್ರಹ್ಮಸ್ತ್ರವನ್ನು ಎಲೆಕ್ಟ್ರಿಕ್ ಅವತಾರದಲ್ಲಿ ತರಲು ಸಜ್ಜಾಗಿದೆ. ಎಲೆಕ್ತ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದಕ್ಕೆ ಹ್ಯುಂಡೈ ಕಂಪನಿಯು ತನ್ನ ಪ್ರಮುಖ ಮಾಡೆಲ್ ಕ್ರೆಟಾ ಎಸ್‍ಯುವಿಯನ್ನು ಎಲೆಕ್ಟ್ರಿಕ್ ಅವತಾರದಲ್ಲಿ ಬಿಡುಗಡೆಗೊಳಿಸಲು ರೆಡಿಯಾಗಿದೆ. ಜನವರಿ 17 ರಂದು ದೆಹಲಿಯಲ್ಲಿ ನಡೆಯಲ್ಲಿರುವ ಭಾರತ್ ಎಕ್ಸ್‌ಪೋದಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾ ಕಂಪನಿಯು ತನ್ನ ಈ ಹೊಸ ಕ್ರೆಟಾ ಎಲೆಕ್ಟ್ರಿಕ್ ಎಸ್‍ಯುವಿ ಬಿಡುಗಡೆಗೊಳಿಸಲಿದೆ.
ಪ್ರಸ್ತುತ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಗೆ ಸೆಡ್ಡು ಹೊಡೆಯಲು ಹ್ಯುಂಡೈ ಕಂಪನಿಯು ಸಜ್ಜಾಗಿದೆ. ಹ್ಯುಂಡೈ ಕಂಪನಿಯ ಕೋನಾ ಎಲೆಕ್ಟ್ರಿಕ್ ಸ್ಥಗಿತಗೊಂಡ ನಂತರ ಪ್ರಸ್ತುತ Ioniq 5 ಅನ್ನು ತನ್ನ ಏಕೈಕ ಎಲೆಕ್ಟ್ರಿಕ್ ವಾಹನವಾಗಿ ಮಾರಾಟ ಮಾಡುತ್ತಿದೆ. ಬಿಡುಗಡೆಗೆ ಸಜ್ಜಾದ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‍ಯುವಿ ಪೀಚರ್ಸ್ ಹೆಚ್ಚಿನ ಮಾಹಿತಿ ಇಲ್ಲಿದೆ.

ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ (Hyundai Creta Electric) ಎಸ್‍ಯುವಿಯ ಒಳಭಾಗದಲ್ಲಿ ಇನ್ಫೋಟೈನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟೇಶನ್ ಎರಡಕ್ಕೂ ಟ್ವಿನ್ 10.25-ಇಂಚಿನ ಸ್ಕ್ರೀನ್‌ಗಳೊಂದಿಗೆ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ. ಪ್ರಮುಖ ವೈಶಿಷ್ಟ್ಯಗಳಲ್ಲಿ ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಆಟೋ ಡಿಮ್ಮಿಂಗ್ ರಿಯರ್‌ವ್ಯೂ ಮಿರರ್, 8-ಸ್ಪೀಕರ್ ಬೋಸ್ ಆಡಿಯೋ ಸಿಸ್ಟಮ್ ಮತ್ತು ಲೆವೆಲ್ 2 ಎಡಿಎಎಸ್ ಸೂಟ್ ಅನ್ನು ಹೊಂದಿದೆ.
ಸ್ಟ್ಯಾಂಡರ್ಡ್ ಕ್ರೆಟಾದೊಂದಿಗೆ ಹಲವು ವೈಶಿಷ್ಟ್ಯಗಳನ್ನು ಹಂಚಿಕೊಂಡಿದ್ದರೂ, ಎಲೆಕ್ಟ್ರಿಕ್ ಆವೃತ್ತಿಯು ಹೊಸ ಸ್ಟೀರಿಂಗ್ ವೀಲ್ ಮತ್ತು ಸೆಂಟರ್ ಕನ್ಸೋಲ್ ಅನ್ನು ಪರಿಚಯಿಸುತ್ತದೆ. ಶಿಫ್ಟ್-ಬೈ-ವೈರ್ ಸಿಸ್ಟಮ್ ಅನ್ನು ಸ್ಟೀರಿಂಗ್ ಕಂಟ್ರೋಲ್ ಮೂಲಕ ನಿರ್ವಹಿಸಲಾಗುತ್ತದೆ. ಸೆಂಟರ್ ಕನ್ಸೋಲ್ ಈಗ ಕಪ್ ಹೋಲ್ಡರ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಆಟೋ-ಹೋಲ್ಡ್ ಕಾರ್ಯಕ್ಕಾಗಿ ಬಟನ್‌ಗಳು ಮತ್ತು ಡ್ರೈವ್ ಮೋಡ್‌ಗಳನ್ನು ಒಳಗೊಂಡಿದೆ.

ಕ್ರೆಟಾ ಎಲೆಕ್ಟ್ರಿಕ್‌ನ ಟಾಪ್-ಸ್ಪೆಕ್ ಎಕ್ಸಲೆನ್ಸ್ ರೂಪಾಂತರವು ಹಲವಾರು ಸುಧಾರಿತ ವೈಶಿಷ್ಟ್ಯಗಳನ್ನು ನೀಡುತ್ತದೆ.ಸ್ಮಾರ್ಟ್‌ಫೋನ್ ಮೂಲಕ ಪ್ರವೇಶಿಸಬಹುದಾದ ಡಿಜಿಟಲ್ ಕೀ, ಸಿಂಗಲ್-ಪೆಡಲ್ ಡ್ರೈವಿಂಗ್ ಸಾಮರ್ಥ್ಯ, ಹಿಂಬದಿಯ ಬೆಂಚ್ ಕೆಳಗೆ ಮೀಸಲಾದ ಪ್ಲಗ್‌ನೊಂದಿಗೆ ವೆಹಿಕಲ್-ಟು-ಲೋಡ್ (V2L) ಚಾರ್ಜಿಂಗ್ ಸಾಮರ್ಥ್ಯಗಳು, ಇನ್ಫೋಟೈನ್‌ಮೆಂಟ್‌ಗಾಗಿ ವಾಯ್ಸ್ ಕಮಾಂಡ್ ಕಾರ್ಯನಿರ್ವಹಣೆ ಮತ್ತು ಹ್ಯುಂಡೈನ ಬ್ಲೂಲಿಂಕ್ ಹೊಂದಿದೆ.
ಈ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‍ಯುವಿಯು ಎಕ್ಸಿಕ್ಯುಟಿವ್, ಸ್ಮಾರ್ಟ್, ಪ್ರೀಮಿಯಂ ಮತ್ತು ಎಕ್ಸಲೆನ್ಸ್ ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಹೊಸ ಕ್ರೆಟಾ ಇವಿಯು ಎಂಟು ಮೊನೊಟೋನ್ ಮತ್ತು 3 ಮ್ಯಾಟ್ ಬಣ್ಣಗಳನ್ನು ಒಳಗೊಂಡಂತೆ ಎರಡು ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳೊಂದಿಗೆ ಬರುತ್ತದೆ. ಒಟ್ಟಿನಲ್ಲಿ ಎಲೆಕ್ಟ್ರಿಕ್ ಕ್ರೆಟಾ ಕಲರ್ ಫುಲ್ ಆಗಿರುವುದು ಪಕ್ಕಾ. ಕ್ರೆಟಾ ಎಲೆಕ್ಟ್ರಿಕ್ ಎಸ್‍ಯುವಿ ಮಾದರಿಯು ಬಹುತೇಕ ಸ್ಟ್ಯಾಂಡರ್ಡ್ ಹ್ಯುಂಡೈ ಕ್ರೆಟಾದಂತೆಯೇ ಅದೇ ವಿನ್ಯಾಸವನ್ನು ಹೊಂದಿದೆ.

ಆದರೆ ಕೆಲವು ಸಣ್ಣ ಬದಲಾವಣೆಗಳೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯು ಮುಂಭಾಗದಲ್ಲಿ, ಕ್ರೆಟಾ ಎಲೆಕ್ಟ್ರಿಕ್ ಕವರ್ ಫ್ರಂಟ್ ಫೇಸ್ ಮತ್ತು ಸೆಂಟರ್ ಮೌಂಟೆಡ್ ಚಾರ್ಜಿಂಗ್ ಪೋರ್ಟ್‌ನೊಂದಿಗೆ ಬರುತ್ತದೆ. ಇನ್ನು ಈ ಎಲೆಕ್ಟ್ರಿಕ್ ಎಸ್‍ಯುವಿಯು ಪರಿಷ್ಕೃತ ಮುಂಭಾಗದ ಬಂಪರ್ ಅನ್ನು ಸಹ ಪಡೆಯುತ್ತದೆ. ಇನ್ನು ಈ ಎಲೆಕ್ಟ್ರಿಕ್ ಎಸ್‍ಯುವಿಯು 17 ಇಂಚಿನ ಏರೋ ಅಲಾಯ್ ವ್ಹೀಲ್ ಗಳ ಹೊಸ ಸೆಟ್ ಅನ್ನು ಪಡೆಯುತ್ತದೆ.
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‍ಯುವಿಯು 51.4 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಈ ಮಾದರಿಯು 473 ಕಿ.ಮೀ ರೇಂಜ್ ಅನ್ನು ನೀಡುತ್ತದೆ ಎಂದು ಹುಂಡೈ ಬಹಿರಂಗಪಡಿಸಿದೆ. ಈ ಇವಿ ಮಾದರಿಯು ಪೂರ್ಣ ಚಾರ್ಜ್‌ನಲ್ಲಿ ಕ್ರೆಟಾ ಎಲೆಕ್ಟ್ರಿಕ್ ಸಾಮಾನ್ಯ ಮೋಡ್‌ನಲ್ಲಿ 392 ಕಿಮೀಗಳನ್ನು ಕ್ರಮಿಸಬಲ್ಲದು ಎಂದು ಟೀಸರ್ ತೋರಿಸುತ್ತದೆ. 42 kWh ಬ್ಯಾಟರಿ ಪ್ಯಾಕ್ ರೂಪಾಂತರವು ARAI ಪ್ರಮಾಣೀಕೃತ ರೇಂಜ್ ಒಂದೇ ಚಾರ್ಜ್‌ನಲ್ಲಿ 390 ಕಿ.ಮೀ ನೀಡುತ್ತದೆ.
ಕ್ರೆಟಾ ಎಲೆಕ್ಟ್ರಿಕ್ ಡಿಸಿ ಚಾರ್ಜಿಂಗ್ ಬಳಸಿಕೊಂಡು 58 ನಿಮಿಷಗಳಲ್ಲಿ ಶೇಕಡಾ 10 ರಿಂದ 80 ರಷ್ಟು ಚಾರ್ಜ್ ಮಾಡಬಹುದು ಎಂದು ಹ್ಯುಂಡೈ ಹೇಳಿಕೊಂಡಿದೆ. 11kW ಸ್ಮಾರ್ಟ್ ಕನೆಕ್ಟೆಡ್ ವಾಲ್ ಬಾಕ್ಸ್ ಚಾರ್ಜರ್ ಎಸಿ ಹೋಮ್ ಚಾರ್ಜಿಂಗ್ ಬಳಸಿ 4 ಗಂಟೆಗಳಲ್ಲಿ 10 ರಿಂದ ಶೇ.100 ಚಾರ್ಜ್ ಮಾಡಬಹುದಾಗಿದೆ. ಈ ಎಸ್‍ಯುವಿ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ಸ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿದೆ


Click it and Unblock the Notifications








