ಮುಂಬೈ ರಸ್ತೆಯಲ್ಲಿ ಕಾಣಿಸಿಕೊಂಡ ಅರಮನೆಯಂಥ ಹ್ಯುಂಡೈ ಸ್ಟಾರಿಯಾ.. 9-ಸೀಟರ್, ವಿಶೇಷತೆಗಳೇನು?

ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ (Hyundai) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ವಿವಿಧ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಇತ್ತೀಚೆಗೆ ಮುಂಬೈನ ರಸ್ತೆಯೊಂದರಲ್ಲಿ ಜಾಗತಿಕವಾಗಿ ಕಂಪನಿಯು ಯಶಸ್ವಿಯಾಗಿ ಮಾರುವ ಸ್ಟಾರಿಯಾ (Staria) ಎಂಪಿವಿ ಕಾಣಿಸಿಕೊಂಡಿದೆ. ಇದು ನೋಡುಗರನ್ನು ಸೆಳೆಯುವಂತಿದೆ. ಬನ್ನಿ.. ಈ ಕಾರು ದೇಶೀಯ ಮಾರಾಟವಾಗುತ್ತದೆಯೇ ಎಂಬಿತ್ಯಾದಿ ವಿವರಗಳನ್ನು ತಿಳಿಯೋಣ.

ಹೊಚ್ಚ ಹೊಸ ಹ್ಯುಂಡೈ ಸ್ಟಾರಿಯಾ (Hyundai Staria) ಪ್ರೀಮಿಯಂ ಎಂಪಿವಿಯಾಗಿ ಹೊರಹೊಮ್ಮಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾತ್ರ ಖರೀದಿ ದೊರೆಯುತ್ತದೆ. ಈ ಕಾರನ್ನು ಕಂಪನಿಯು ಭಾರತದಲ್ಲಿ ಮಾರಾಟ ಮಾಡುವುದಿಲ್ಲ. ಬಹುಶಃ ಯಾರೋ ನೂತನ ಸ್ಟಾರಿಯಾ ಎಂಪಿವಿಯನ್ನು ವಿದೇಶದಿಂದ ಆಮದು ಮಾಡಿಕೊಂಡಿರಬೇಕು ಎಂದು ಅಂದಾಜಿಸಲಾಗಿದೆ.

New Hyundai Staria Mpv Spotted In Mumbai Details

ಮುಂಬೈನಲ್ಲಿ ಕಾಣಿಸಿಕೊಂಡಿರುವ ಹ್ಯುಂಡೈ ಸ್ಟಾರಿಯಾ ಹೊರಭಾಗದಿಂದ ನೋಡುವುದಕ್ಕೆ ರಸ್ತೆ ಮೇಲಿನ ಅರಮನೆಯಂತೆ ಭಾಸವಾಗುತ್ತದೆ. ಇದರೊಂದಿಗೆ ಒಳಭಾಗದಲ್ಲಿ ಕೂಡ ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಜನಪ್ರಿಯ ಎಂಪಿವಿ ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 7 ಅಥವಾ 9 ಆಸನ ಆಯ್ಕೆಯಲ್ಲಿಯೂ ಖರೀದಿಗೆ ದೊರೆಯಲಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಓಡಾಟ ನಡೆಸಬಹುದು.

2024ರಲ್ಲಿ ಈ ಹ್ಯುಂಡೈ ಸ್ಟಾರಿಯಾ ಎಂಪಿವಿಯನ್ನು ನವೀಕರಿಸಲಾಯಿತು. ಈ ಕಾರು 3.5-ಲೀಟರ್ ವಿ6 ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಜೊತೆಗೆ 1.6-ಲೀಟರ್ ಟರ್ಬೊ ಪೆಟ್ರೋಲ್ ಹೈಬ್ರಿಡ್ ಎಂಜಿನ್‌ನ್ನು ಒಳಗೊಂಡಿದ್ದು, 242 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 367 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 13 ಕೆಎಂಪಿಎಲ್‌ವರೆಗೆ ಮೈಲೇಜ್‌ನ್ನು ನೀಡುತ್ತದೆ.

New Hyundai Staria Mpv Spotted In Mumbai Details

ಭಾರತದಲ್ಲಿ ನೂತನ ಹ್ಯುಂಡೈ ಸ್ಟಾರಿಯಾ ಏಕೆ ಖರೀದಿಗೆ ಲಭ್ಯವಿಲ್ಲ: ಕಿಯಾ ಹಾಗೂ ಹ್ಯುಂಡೈ ಕಂಪನಿಗಳು ಪಾಲುದಾರಿಕೆ ಹೊಂದಿದ್ದು, ಕಾರ್ನಿವಲ್ ಮತ್ತು ಸ್ಟಾರಿಯಾ ಎಂಪಿವಿ ಒಂದೇ ರೀತಿಯ 'ಎನ್3' ಪ್ಲಾಟ್‌ಫಾರ್ಮ್ ಆಧರಿಸಿವೆ. ಈ ಹಿನ್ನೆಲೆ, ಸ್ಟಾರಿಯಾ ಕಾರು ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿಲ್ಲ. ಆದರೆ, ಕಾರ್ನಿವಲ್ ಎಂಪಿವಿಯನ್ನು 7-ಆಸನದೊಂದಿಗೆ ಮಾರಾಟ ಮಾಡಲಾಗುತ್ತದೆ.

ಕಿಯಾ ಕಾರ್ನಿವಲ್ (Kia Carnival) ವಿಶೇಷತೆಗಳೇನು: ದೇಶೀಯ ಮಾರುಕಟ್ಟೆಯಲ್ಲಿ ಸಿಗುವ ಈ ಎಂಪಿವಿ, ರೂ.63.90 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. ಹೊರಭಾಗದಲ್ಲಿ ಹೆಚ್ಚು ಅತ್ಯಾಧುನಿಕವಾಗಿರುವ ವಿನ್ಯಾಸವನ್ನು ಪಡೆದಿದೆ. ಲಿಮೋಸಿನ್ & ಲಿಮೋಸಿನ್ ಪ್ಲಸ್ ಎಂಬ ರೂಪಾಂತರಗಳನ್ನು ಒಳಗೊಂಡಿದೆ. ಇದತೊಟ್ಟಿಗೆ ಹಲವು ಬಣ್ಣಗಳೊಂದಿಗೂ ಸಿಗುತ್ತದೆ.

New Hyundai Staria Mpv Spotted In Mumbai Details

ನೂತನ ಕಿಯಾ ಕಾರ್ನಿವಲ್ ಎಂಪಿವಿ 2.2 ಲೀಟರ್ ಡೀಸೆಲ್ ಎಂಜಿನ್‌‌ ಹಾಗೂ 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ ಮತ್ತು 3-ಜೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯಾಗಿ 8-ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source Link: https://www.instagram.com/p/DBbZtlaN7z5/

More from DriveSpark

Article Published On: Wednesday, January 8, 2025, 15:28 [IST]
English summary
New hyundai staria mpv spotted in mumbai details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+