Mahindra Bolero: ಬೆಲೆಯೂ ಅಗ್ಗ.. ಹೊಸ ಮಹೀಂದ್ರಾ ಬೊಲೆರೊ ಬಿ8 ಎಸ್‌ಯುವಿ ಬಂದೇ ಬಿಡ್ತು, ವಿಡಿಯೋ ನೋಡಿ

ಭಾರತದ ಮಾರುಕಟ್ಟೆಯಲ್ಲಿಂದು 2025ರ ಹೊಚ್ಚ ಹೊಸ ಮಹೀಂದ್ರಾ ಬೊಲೆರೊ ಫೇಸ್‌ಲಿಫ್ಟ್ (Mahindra Bolero Facelift) ಎಸ್‌ಯುವಿಯನ್ನು ಅದ್ದೂರಿಯಾಗಿ ಮಾರಾಟಕ್ಕೆ ತರಲಾಗಿದೆ. ಇದು ಬಿ4, ಬಿ6, ಬಿ6 (ಒ) ಹಾಗೂ ಬಿ8 ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಿದೆ. ವಿಶೇಷವಾಗಿ ಗರಿಷ್ಠ ಶ್ರೇಣಿ ರೂಪಾಂತರವಾದ 'ಬಿ8' ವಿಶೇಷತೆಗಳ ಕುರಿತಂತೆ ನಮ್ಮ ಡ್ರೈವ್‌ಸ್ಪಾರ್ಕ್ ತಂಡದ ಪ್ರತಿನಿಧಿ ಕಿರು ವಿಡಿಯೋ ಮಾಡಿದ್ದಾರೆ. ಸಂಪೂರ್ಣವಾಗಿ ವೀಕ್ಷಿಸಿರಿ..

ವಿನ್ಯಾಸ (Design):

ನೂತನ ಮಹೀಂದ್ರಾ ಬೊಲೆರೊ ಬಿ8 ಎಸ್‌ಯುವಿಯು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಅದು ನೋಡುಗರ ಕಣ್ಣು ಕುಕ್ಕುವಂತಿದೆ. ಮುಂಭಾಗ (ಫ್ರಂಟ್) ಬ್ಲ್ಯಾಕ್ ಫಿನಿಶಿಂಗ್ ಹೊಂದಿರುವ ಬಂಪರ್, ಹೊಸದಾದ ಗ್ರಿಲ್, ಹಳೆಯ ಬೊಲೆರೊದಂತೆ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಪಡೆದಿದೆ. ನವೀನವಾದ ಫಾಗ್ ಲೈಟ್‌ಗಳನ್ನು ಒಳಗೊಂಡಿದೆ.

New Mahindra Bolero B8 Suv Walkaround Video

ಹಿಂಭಾಗ (ರೇರ್) ವಿನ್ಯಾಸವು ಚೆನ್ನಾಗಿದೆ. ಉತ್ತಮವಾದ ಟೈಲ್ ಲೈಟ್‌ಗಳನ್ನು ಪಡೆದಿದೆ. ಇದರೊಂದಿಗೆ ವೈಪರ್ & ವಾಷರ್‌ನ್ನು ಒಳಗೊಂಡಿದೆ. ರಸ್ತೆಯ ಮೇಲೆ ಬಿಗಿಯಾದ ಹಿಡಿತ ಒದಗಿಸಲು ದೊಡ್ಡ ಗಾತ್ರದ 15 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳನ್ನು ಹೊಂದಿದೆ.

ಕಾರ್ಯಕ್ಷಮತೆ (Performance):

ಇದು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 1.5-ಲೀಟರ್ ಎಂಹಾಕ್ ಡೀಸೆಲ್ ಎಂಜಿನ್‌ನ್ನು ಪಡೆದಿದೆ. 75 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 210 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 16 ಕಿ.ಮೀ ವರೆಗೆ ಮೈಲೇಜ್ ನೀಡಬಲ್ಲದು.

ಆಸನ ಆಯ್ಕೆ (Seating Capacity):

ಹೊಸ ಮಹೀಂದ್ರಾ ಬೊಲೆರೊ ಬಿ8 ಎಸ್‌ಯುವಿಯು ಒಟ್ಟು 7 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ದೂರದ ಊರುಗಳಿಗೆ ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸುಲಭವಾಗಿ ಪ್ರವಾಸಕ್ಕೂ ಹೋಗಬಹುದು. ವಿಶೇಷವಾಗಿ ಈ ಕಾರು, ಎರಡು ತುಂಬು ಕುಟುಂಬಗಳಿಗೆ ಸೂಕ್ತವಾಗಿದೆ ಎಂದು ಹೇಳಬಹುದು.

New Mahindra Bolero B8 Suv Walkaround Video

ವೈಶಿಷ್ಟ್ಯಗಳು (Features):

ನೂತನ 'ಬೊಲೆರೊ ಬಿ8' ಕಾರು ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಬಹುಮುಖ್ಯವಾಗಿ ಬ್ಲೂಟೂತ್‌ ಕನೆಕ್ಟಿವಿಟಿಯೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್‌ಗಳು ಆರ್ಮ್‌ರೆಸ್ಟ್, ಹೆಡ್‌ರೆಸ್ಟ್, ಸೀಟ್ ಪಾಕೆಟ್ ಹೋಲ್ಡರ್ಸ್ ಹಾಗೂ ಪವರ್ ವಿಂಡೋಗಳನ್ನು ಹೊಂದಿದೆ. ಆದರೆ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಯನ್ನು ಪಡೆದಿಲ್ಲ.

ಸುರಕ್ಷತಾ ವೈಶಿಷ್ಟ್ಯಗಳು (Safety Features):

ಇದು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಹಾಗೂ ರೇರ್ - ಪಾರ್ಕಿಂಗ್ ಸೆನ್ಸರ್‌ನಂತಹ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಬೆಲೆ (Price):

ಹೊಸ ಮಹೀಂದ್ರಾ ಬೊಲೆರೊ ಬಿ8 ಎಸ್‌ಯುವಿಯು ರೂ.9.69 (ಎಕ್ಸ್-ಶೋರೂಂ - ನವದೆಹಲಿ) ದರವನ್ನು ಪಡೆದಿದ್ದು, ಎಲ್ಲ ವರ್ಗದ ಗ್ರಾಹಕರು ಸುಲಭವಾಗಿ ಖರೀದಿ ಮಾಡಲು ಸಾಧ್ಯವಾಗಲಿದೆ. ಈ ಕಾರು ದೇಶಾದ್ಯಂತ ಕಂಪನಿಯ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದೆ. ಅತಿ ಶೀಘ್ರದಲ್ಲೇ ವಿತರಣೆಗಳು ಪ್ರಾರಂಭಗೊಳ್ಳುವ ನಿರೀಕ್ಷೆಯಿದೆ.

ಪ್ರತಿ ಸ್ಪರ್ಧಿ ಕಾರುಗಳು (Competitors Cars):

ಇದಕ್ಕೆ ಕಿಯಾ ಕ್ಯಾರೆನ್ಸ್ ಕ್ಲಾವಿಸ್, ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga), ಟಾಟಾ ನೆಕ್ಸಾನ್ (Tata Nexon), ಟೊಯೊಟಾ ರೂಮಿಯನ್‌ (Toyota Rumion) ಹಾಗೂ ರೆನಾಲ್ಟ್ ಟ್ರೈಬರ್ (Renault Triber) ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ. ನೀವು ಬಜೆಟ್ ಬೆಲೆಗೆ ವಿಶ್ವಾಸಾರ್ಹ ಫ್ಯಾಮಿಲಿ ಎಸ್‌ಯುವಿ ಹುಡುಕುತ್ತಿದ್ದರೆ, ಈ 'ಮಹೀಂದ್ರಾ ಬೊಲೆರೊ ಬಿ8' ಅತ್ಯುತ್ತಮವಾದ ಆಯ್ಕೆಯಾಗಲಿದೆ.

More from DriveSpark

Article Published On: Monday, October 6, 2025, 17:00 [IST]
English summary
New mahindra bolero b8 suv launched in india walkaround video
Read more on india mahindra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+