ಶೀಘ್ರದಲ್ಲೇ ಹೊಸ ಮಾರುತಿ ಸುಜುಕಿ 7-ಸೀಟರ್ ಎಸ್‌ಯುವಿ ಬಿಡುಗಡೆ: ಬೆಲೆಯೆಷ್ಟು?
ಈಗಾಗಲೇ ಮಾರುತಿ ಇ-ವಿಟಾರಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುವುದು ಖಚಿತವಾಗಿದೆ. ಇದರ ಜೊತೆಗೆ ಮಾರುತಿ ಹೊಸ 7-ಸೀಟರ್ ಎಸ್‌ಯುವಿ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಮಾರುತಿ ಸುಜುಕಿಯ ಹೊಸ ಎಸ್‌ಯುವಿಯನ್ನು ಅದರ ಪ್ರೀಮಿಯಂ ನೆಕ್ಸಾ ಮೂಲಕ ಮಾರಾಟ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಹೊಸ ಮಾದರಿಯು ಗ್ರ್ಯಾಂಡ್ ವಿಟಾರಾ ಮತ್ತು ಮಾರುತಿ ಸುಜುಕಿ ಇನ್ವಿಕ್ಟೋ ನಡುವೆ ಇರಲಿದೆ. ಹೊಸ ಕಾರು ಮಾದರಿಯು 5-ಸೀಟರ್ ಗ್ರ್ಯಾಂಡ್ ವಿಟಾರಾ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದೆ. ಇದು ಪವರ್ ಟ್ರೇನ್ ಸೇರಿದಂತೆ ಕಾಂಪ್ಯಾಕ್ಟ್ ಎಸ್‌ಯುವಿಯೊಂದಿಗೆ ಹೆಚ್ಚಿನ ಅಂಶಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ.
ಇವು ಕೇವಲ ನೀರೀಕ್ಷೆಗಳು ಮಾತ್ರವಲ್ಲ, 2025-26ರ ಆರ್ಥಿಕ ವರ್ಷದಲ್ಲಿ ಮಾರುತಿ ಸುಜುಕಿ ಇ-ವಿಟಾರಾ ಹೊರತುಪಡಿಸಿ ಕಂಪನಿಯು ಮತ್ತೊಂದು ಎಸ್ ಯುವಿಯನ್ನು ಬಿಡುಗಡೆ ಮಾಡಲಿದೆ ಎಂದು ಮಾರುತಿ ಸುಜುಕಿ ಇಂಡಿಯಾದ ಅಧ್ಯಕ್ಷ ಆರ್‌ಸಿ ಭಾರ್ಗವ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ. ಹಾಗಾಗಿ ಇದು ಕಳೆದ ಹಲವು ತಿಂಗಳುಗಳಿಂದ ನಿರೀಕ್ಷಿಸಿದ್ದ ಗ್ರ್ಯಾಂಡ್ ವಿಟಾರಾ 7-ಸೀಟರ್ ಎಸ್‌ಯುವಿ ಎಂದು ಹೇಳಲಾಗುತ್ತಿದೆ.

ಏನನ್ನು ನಿರೀಕ್ಷಿಸಬಹುದು?: ಇಂಟೀರಿಯರ್ ಘಟಕಗಳು ಒಂದೇ ಆಗಿದ್ದರೂ, ಹೊಸ ಎಸ್‌ಯುವಿ ಗ್ರ್ಯಾಂಡ್ ವಿಟಾರಾಕ್ಕಿಂತ ಭಿನ್ನವಾದ ವಿನ್ಯಾಸದೊಂದಿಗೆ ಬರಲಿದೆ. ಹೆಚ್ಚುವರಿಯಾಗಿ, ಹೆಚ್ಚಿನ ಕ್ಯಾಬಿನ್ ಸ್ಥಳವನ್ನು ತೆರೆಯಲು ವ್ಹೀಲ್ ಬೇಸ್ ಉದ್ದವಾಗಿರುತ್ತದೆ ಹೊಸ ಎಲ್ಇಡಿ ಟೇಲ್ ಲ್ಯಾಂಪ್ ಗಳು, ಹಿಂಭಾಗದ ಬಂಪರ್ ಮತ್ತು ಹೊಸ ಓವರ್ ಹ್ಯಾಂಗ್ ನೊಂದಿಗೆ ಹೊಸ ರಿಯರ್ ಎಂಡ್ ವಿನ್ಯಾಸವಿರುತ್ತದೆ.
1.5 ಲೀಟರಿನ ನಾಲ್ಕು ಸಿಲಿಂಡರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ 120 ಬಿಹೆಚ್ ಪವರ್ ಹಾಗೂ 137 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

3 ಸಿಲಿಂಡರ್ 1.5 ಲೀಟರಿನ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ 113 ಬಿಹೆಚ್ ಪವರ್ ಹಾಗೂ 122 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಕೇವಲ ಇಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ನೊಂದಿಗೆ ಜೋಡಿಸಲಾಗಿದೆ. ಸದ್ಯಕ್ಕೆ ಆಲ್ ವ್ಹೀಲ್ ಡ್ರೈವ್ ಮತ್ತು ಸಿಎನ್‌ಜಿ ಪವರ್ ಟ್ರೇನ್ ಇರಲಿದೆಯೇ ಎಂಬುದು ತಿಳಿದುಬಂದಿಲ್ಲ.
2022 ರವರೆಗೆ, ಮಾರುತಿ ಸುಜುಕಿ ಪೋರ್ಟ್ ಫೋಲಿಯೊದಲ್ಲಿ ಕೇವಲ ಒಂದು ಎಸ್‌ಯುವಿ ಹೊಂದಿರುವ ಸಣ್ಣ ಕಾರುಗಳು ಹೆಚ್ಚು ಪ್ರಾಬಲ್ಯ ಹೊಂದಿದ್ದವು. ಗ್ರ್ಯಾಂಡ್ ವಿಟಾರಾ ಬಿಡುಗಡೆಯಾದಾಗಿನಿಂದ, ಮಾರುತಿ ಸುಜುಕಿ ಎಸ್‌ಯುವಿಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದೆ. ಕಂಪನಿಯ ಪ್ರಸ್ತುತ ಪೋರ್ಟ್ ಫೋಲಿಯೊ ಒಟ್ಟು ಐದು ಎಸ್‌ಯುವಿಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಇದು ಯಾವ ಎಸ್‌ಯುವಿ ಆಗಿರಲಿದೆ ಎಂದು ಕಂಪನಿ ದೃಢಪಡಿಸದಿದ್ದರೂ, ಹೊಸ ಮಾದರಿಯು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾದ ಏಳು ಆಸನಗಳ ಆವೃತ್ತಿ ಎಂಬುದು ಬಹುತೇಕ ಖಚಿತವಾಗಿದೆ. ಈಗಾಗಲೇ ಮಾರುತಿ ಸುಜುಕಿ ರಸ್ತೆಗಳಲ್ಲಿ ಪರೀಕ್ಷಿಸುವ ವೇಳೆ ಗ್ರ್ಯಾಂಡ್ ವಿಟಾರಾದ ಉದ್ದವಾದ ಆವೃತ್ತಿ ಹಲವು ಬಾರಿ ಕಾಣಿಸಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications