27 ಕಿ.ಮೀ ಮೈಲೇಜ್.. 6-ಸೀಟರ್, 5 ಲಕ್ಷ.. ಈ Maruti Van ಕೊಳ್ಳಬೇಕೇ.. ಆನ್-ರೋಡ್ ಬೆಲೆ ಏನು, ಇಎಂಐ ಎಷ್ಟು?

ಮಾರುತಿ ಸುಜುಕಿ ಇಕೋ (Maruti Suzuki Eeco) ಜನಮೆಚ್ಚಿದ ವ್ಯಾನ್ ಆಗಿದ್ದು, ಎರಡು ಕುಟುಂಬ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣ ಮಾಡಬಹುದು. ಇದು ರೂ.5.70 ಲಕ್ಷದಿಂದ ರೂ.6.96 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ನೀವು ಹೊಚ್ಚ ಹೊಸ 'ಇಕೋ' ವ್ಯಾನ್‌ನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ನಾವಿಲ್ಲಿ, ಈ ಕಾರಿನ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಆಯ್ಕೆಯ ಕುರಿತಂತೆ ಒಂದಷ್ಟು ತಿಳಿಸಿಕೊಟ್ಟಿದ್ದೇವೆ.

ಈ ಕಾರು ಹಲವು ವಿಧದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ಇದರ ಪೆಟ್ರೋಲ್ ಚಾಲಿತ 6-ಸೀಟರ್ ಮಾಡೆಲ್, ರೂ.7.17 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಹೊಂದಿದೆ. ರೂ.3 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ತೆಗೆದುಕೊಂಡರೆ, ರೂ.4.17 ಲಕ್ಷವರೆಗೆ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿಯನ್ನು ಹಾಕಿ, 5 ವರ್ಷಗಳಿಗೆ ಮಾಸಿಕ ರೂ.8,500 ವರೆಗೆ ಇಎಂಐ ಕಟ್ಟಬೇಕು.

New Maruti Suzuki Eeco Van On Road Price Mileage Emi And All Details

ನೂತನ ಇಕೋ ಕಾರಿನ ಪೆಟ್ರೋಲ್ ಚಾಲಿತ 5-ಸೀಟರ್ ಎಸಿ ಮಾಡೆಲ್, ರೂ.7.40 ಲಕ್ಷವರೆಗೆ ಆನ್-ರೋಡ್ ದರವನ್ನು ಪಡೆದಿದೆ. ರೂ.3 ಲಕ್ಷ ಡೌನ್-ಪೇಮೆಂಟ್ ಕಟ್ಟಿ ಮನೆಗೆ ತಂದರೆ, ರೂ.4.40 ಲಕ್ಷವರೆಗೆ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ 8,700 ವರೆಗೆ ಇಎಂಐ ಪಾವತಿಸಬೇಕು.

ಮತ್ತೊಂದು ಸಿಎನ್‌ಜಿ ಚಾಲಿತ 5-ಸೀಟರ್ ಎಸಿ ಮಾಡೆಲ್, ರೂ.8.50 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ರೂ.3 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಕೊಂಡುಕೊಂಡರೆ, ರೂ.5.50 ಲಕ್ಷವರೆಗೆ ಸಾಲ ಬಾಕಿಯಿರುತ್ತದೆ. ಅದಕ್ಕೆ ಶೇಕಡ 8% ಬಡ್ಡಿಯನ್ನು ಹಾಕಿ, 5 ವರ್ಷಗಳಿಗೆ ಮಾಸಿಕ ರೂ.11,000 ವರೆಗೆ ಇಎಂಐ ಕಟ್ಟಬೇಕು.

New Maruti Suzuki Eeco Van On Road Price Mileage Emi And All Details

ಮಾರುತಿ ಸುಜುಕಿ ಇಕೋ ವಿಶೇಷತೆಗಳೇನು:

ಈ ಕಾರು ಹೊರಭಾಗದಲ್ಲಿ ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದೆ. ಮೆಟಾಲಿಕ್ ಪ್ಯಾಶನ್ ರೆಡ್, ಸೆರುಲಿಯನ್ ಬ್ಲ್ಯೂ, ಸಾಲಿಡ್ ವೈಟ್ ಹಾಗೂ ಪರ್ಲ್ ಮಿಡ್‌ನೈಟ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 3675 ಎಂಎಂ ಉದ್ದ, 1475 ಎಂಎಂ ಅಗಲ ಮತ್ತು 1825 ಎಂಎಂ ಎತ್ತರವು ಇದೆ. 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2350 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

ಇದು ಬಲಿಷ್ಠವಾದ 2 ಪವರ್‌ಟ್ರೇನ್‌ನ್ನು ಪಡೆದಿದೆ. 1.2-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಸಾಮಾನ್ಯ ಬೈಕ್‌ಗಳಂತೆ 19.71 ರಿಂದ 26.78 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ.

ಹೊಸ ಮಾರುತಿ ಸುಜುಕಿ ಇಕೋ ವ್ಯಾನ್ 5/ 6 ಆಸನಗಳನ್ನು ಒಳಗೊಂಡಿದೆ. ಪ್ರಯಾಣಿಕರು ಸುಲಭವಾಗಿ ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 275 ಲೀಟರ್‌ ಬೂಟ್ ಸ್ಪೇಸ್‌ನ್ನು ಪಡೆದಿದೆ. 40 ಲೀಟರ್‌ನಷ್ಟು ಪೆಟ್ರೋಲ್ ಟ್ಯಾಂಕ್ & 65 ಕೆಜಿಯ ಸಿಎನ್‌ಜಿ ಟ್ಯಾಂಕ್‍ನ್ನು ಒಳಗೊಂಡಿದೆ.

ಈ ಕಾರು ಸೆಮಿ-ಡಿಜಿಟಲ್ ಸ್ಪೀಡೋಮೀಟರ್, ಮ್ಯಾನುವಲ್ ಎಸಿ, 12ವಿ ಚಾರ್ಜಿಂಗ್ ಸಾಕೆಟ್, ಸ್ಲೈಡಿಂಗ್ ಡ್ರೈವರ್ ಸೀಟ್, ಬೇಸಿಕ್ ಆಡಿಯೋ ಸಿಸ್ಟಮ್, ಯುಎಸ್‌‍ಬಿ ಕನೆಕ್ಟಿವಿಟಿ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್‌ಗಳು ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಹಾಗೂ ಫ್ರಂಟ್ ಸೀಟ್‌ಬೆಲ್ಟ್ ರಿಮೈಂಡರ್‌ನ್ನು ಹೊಂದಿದೆ.

ನಿಮ್ಮ ಗಮನಕ್ಕೆ.. ಈ ವ್ಯಾನ್‌ನ ಕೆಲವೇ ಮಾಡೆಲ್‌ಗಳ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಬಗ್ಗೆ ಮಾತ್ರ ವಿವರಿಸಿದ್ದೇವೆ. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

Article Published On: Monday, August 4, 2025, 8:25 [IST]
English summary
New maruti suzuki eeco van on road price mileage emi andall details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+