ನಿನ್ನೆಯಷ್ಟೆ ಬಿಡುಗಡೆಯಾದ ಹೊಸ ಮಾರುತಿ ಹೈಬ್ರಿಡ್ ಕಾರಿನ ಮೈಲೇಜ್ ಬಹಿರಂಗ

ನಿನ್ನೆಯಷ್ಟೆ ಅದ್ದೂರಿಯಾಗಿ ಬಿಡುಗಡೆಯಾದ "ವಿಕ್ಟೋರಿಸ್" ಬಗ್ಗೆ ಈಗಾಗಲೇ ಆಟೋ ಉದ್ಯಮದಲ್ಲಿ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಇದು ಹೈಬ್ರಿಡ್ ಕಾರಾಗಿರುವುದರಿಂದ ಮೈಲೇಜ್ ವಿಷಯವಾಗಿ ಪ್ರತಿಸ್ಪರ್ಧಿಗಳಿಗೆ ತೀವ್ರ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಮಾರುತಿ ಸುಜುಕಿ ಹೊಸ ವಿಕ್ಟೋರಿಸ್ ಎಸ್‌ಯುವಿಯ ಇಂಧನ ದಕ್ಷತೆ (ಮೈಲೇಜ್)ಯ ಅಂಕಿಅಂಶಗಳನ್ನು ಬಹಿರಂಗವಾಗಿದೆ ಎಂದು ಪ್ರಮುಖ ಆಟೋ ಸುದ್ದಿಸಂಸ್ಥೆ ಕಾರ್‌ವಾಲೆ ವರದಿ ಮಾಡಿದೆ. ಈ ವರದಿಯಲ್ಲಿ ಏನಿದೆ ಎಂಬುದರ ಬಗ್ಗೆ ವಿವರವಾದ ನೋಟ ಇಲ್ಲಿದೆ.

ಹೊಸ ವಿಕ್ಟೋರಿಸ್' ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಹೈರೈಡರ್‌ನ ಅದೇ ಎಂಜಿನ್ ಹಂಚಿಕೊಳ್ಳುತ್ತದೆ. ಅಲ್ಲದೆ ಈ ಮಾಡಲ್‌ಗಳಿಗಿಂತ ವಿಕ್ಟೋರಿಸ್ ಸ್ವಲ್ಪ ಹಗುರವಾಗಿರುವುದರಿಂದ ಹೆಚ್ಚು - ಕಡಿಮೆ ಅದೇ ಮೈಲೇಜ್ ಅಥವಾ ಅದಕ್ಕಿಂತ ಹೆಚ್ಚಿನ ಮೈಲೇಜ್ ನಿರೀಕ್ಷಿಸಬಹುದು. ಈ ಮೂಲಕ ವಿಕ್ಟೋರಿಸ್ ಭಾರತದಲ್ಲಿ ಅತ್ಯಂತ ಇಂಧನ - ದಕ್ಷತೆಯ ಎಸ್‌ಯುವಿಯಾಗಿದೆ ಎಂದು ವರದಿಯಾಗಿದೆ.

new-maruti-suzuki-victoris-fuel-efficiency-revealed

ಹೊಸ ವಿಕ್ಟೋರಿಸ್ ವಿಶೇಷತೆಗಳು: ಇದು ಮಾರುತಿಯ ಮೊದಲ ಲೆವೆಲ್ - 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಅನ್ನು ಸಹ ಪಡೆದುಕೊಂಡಿದೆ. ಇದರಲ್ಲಿ ಹೆಚ್ಚುವರಿ ಸುರಕ್ಷತಾ ಫೀಚರ್ಸ್ ಆಗಿ 360 - ಡಿಗ್ರಿ ಸರೌಂಡ್ - ವ್ಯೂ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಒಳಗೊಂಡಿದೆ. ಜೊತೆಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟ್ ಮತ್ತು ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ವೈಶಿಷ್ಟ್ಯಗಳಿವೆ.

ಈ ಕಾರು ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಎಟರ್ನಲ್ ಬ್ಲೂ, ಸಿಜ್ಲಿಂಗ್ ರೆಡ್, ಬ್ಲೂಯಿಶ್ ಬ್ಲ್ಯಾಕ್, ಮ್ಯಾಗ್ಮಾ ಗ್ರೇ ಹಾಗೂ ಮಿಸ್ಟಿಕ್ ಗ್ರೀನ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಲಭ್ಯವಿದೆ. ವಿಶಾಲ ಗಾತ್ರದಲ್ಲಿದ್ದು 4,360 ಎಂಎಂ ಉದ್ದ, 1,655 ಎಂಎಂ ಅಗಲ ಹಾಗೂ 1,795 ಎಂಎಂ ಎತ್ತರವು ಇದೆ. 2,600 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

new-maruti-suzuki-victoris-fuel-efficiency-revealed

ಹೊಸ ಮಾರುತಿ ವಿಕ್ಟೋರಿಸ್ ಎಸ್‌ಯುವಿ 3 - ಪವರ್‌ಟ್ರೇನ್‌ನ್ನು ಹೊಂದಿದೆ. ಇದರ 1.5 - ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್, 103 ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 137 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5 - ಸ್ಪೀಡ್ ಮ್ಯಾನುವಲ್ ಹಾಗೂ 6 - ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ.

5-ಸ್ಟಾರ್ ಸೇಫ್ಟಿ: ಹೊಸ ಮಧ್ಯಮ ಗಾತ್ರದ ಕಾಂಪ್ಯಾಕ್ಟ್ ಎಸ್‌ಯುವಿ 'ವಿಕ್ಟೋರಿಸ್' (Maruti Victoris), ಭಾರತದ ಅಧಿಕೃತ ವಾಹನ ಸುರಕ್ಷತಾ ಮೌಲ್ಯಮಾಪನ ಕಾರ್ಯಕ್ರಮವಾದ ಭಾರತ್ NCAP (B - NCAP) ನಿಂದ 5 - ಸ್ಟಾರ್ ರೇಟಿಂಗ್ ಪಡೆಯುವ ಮೂಲಕ ಮಹತ್ವದ ಸುರಕ್ಷತಾ ಮೈಲಿಗಲ್ಲನ್ನು ಸಾಧಿಸಿದೆ. ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 32 ಅಂಕಗಳಲ್ಲಿ ಪ್ರಭಾವಶಾಲಿ 31.66 ಅಂಕಗಳನ್ನು ಗಳಿಸಿದೆ.

new-maruti-suzuki-victoris-fuel-efficiency-revealed

ಮಕ್ಕಳ ರಕ್ಷಣೆಯಲ್ಲಿ, ವಾಹನವು 49 ಅಂಕಗಳಲ್ಲಿ 43 ಅಂಕಗಳನ್ನು ಗಳಿಸಿದೆ. ಇದು ಭಾರತ್ NCAP ಚೌಕಟ್ಟಿನ ಅಡಿಯಲ್ಲಿ ಮಾರುತಿ ಸುಜುಕಿ ವಾಹನವು ದಾಖಲಿಸಿದ ಅತ್ಯಧಿಕ ಮಕ್ಕಳ ಸುರಕ್ಷತಾ ಸ್ಕೋರ್ ಅನ್ನು ಪ್ರತಿನಿಧಿಸುತ್ತದೆ. ಒಟ್ಟಾರೆ ಇದು ತನ್ನ ವಾಹನಗಳಲ್ಲಿ ಪ್ರಯಾಣಿಕರ ರಕ್ಷಣೆಗೆ ಬ್ರ್ಯಾಂಡ್‌ನ ಬೆಳೆಯುತ್ತಿರುವ ಬದ್ಧತೆಯನ್ನು ಒತ್ತಿಹೇಳುತ್ತದೆ.

ಹೊಸ ಮಾರುತಿ ಸುಜುಕಿ ವಿಕ್ಟೋರಿಸ್ ಫೀಚರ್ಸ್ ವಿಷಯಕ್ಕೆ ಬಂದರೆ 10.1 - ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ - ಎಕ್ಸ್ ಟಚ್ ‌ಸ್ಕ್ರೀನ್ ಇನ್ಫೋಟೈನ್ ‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪನೋರಮಿಕ್ ಸನ್‌ ರೂಫ್, 64 - ಕಲರ್ ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್, ಆಟೋ ಎಸಿ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

More from DriveSpark

Article Published On: Thursday, September 4, 2025, 20:18 [IST]
English summary
New maruti suzuki victoris fuel efficiency revealed
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+