ಡಿ.15 ರಂದು ಬಲಿಷ್ಠ ಎಸ್‌ಯುವಿ ಅನಾವರಣಕ್ಕೆ ಸರ್ವಸಿದ್ಧ: ಭಾರತದಲ್ಲಿ ಚೀನಾ ಬ್ರಾಂಡ್ ಜೋರು!
JSW MG ಮೋಟಾರ್ ಇಂಡಿಯಾ ಮುಂಬರುವ ಹೊಸ MG ಹೆಕ್ಟರ್‌ನ ಮೊದಲ ಅಧಿಕೃತ ಟೀಸರ್ ಅನ್ನು ಹೊರಬಿಟ್ಟಿದ್ದು, ವಿಡಿಯೋದಲ್ಲಿ SUV ಯ ವಿಕಸಿತ ಮತ್ತು ಹೆಚ್ಚು ಕ್ರಿಯಾತ್ಮಕ ಶೈಲಿಯ ಬಗ್ಗೆ ಒಂದು ರೋಮಾಂಚಕಾರಿ ನೋಟವನ್ನು ನೀಡಿದೆ. ಹೆಚ್ಚು ದೃಢವಾದ ಮತ್ತು ಅಥ್ಲೆಟಿಕ್ ಬಾಹ್ಯ ವಿನ್ಯಾಸವನ್ನು ತೋರಿಸಲಾಗಿದೆ. ತೀಕ್ಷ್ಣವಾದ ಲೈನ್‌ಗಳು, ದೃಢವಾದ ನಿಲುವು ಮತ್ತು ಕಮಾಂಡಿಂಗ್ ರಸ್ತೆ ಉಪಸ್ಥಿತಿಯನ್ನು ಪ್ರದರ್ಶಿಸಲಾಗಿದೆ. ನಿಖರತೆ ಮತ್ತು ಅತ್ಯಾಧುನಿಕತೆಯನ್ನು ಸಂಕೇತಿಸುವ ಹೊಸ ಗ್ರಿಲ್ SUV ಯ ಪ್ರಬಲ ದೃಶ್ಯ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ.
MG ಹೆಕ್ಟರ್‌ನ ಇತ್ತೀಚಿನ ನವೀಕರಣಗಳೊಂದಿಗೆ, ಕಂಪನಿಯು ಹೊಸ ಎಸ್‌ಯುವಿಯನ್ನು ಶೀಘ್ರದಲ್ಲೆ ಬಿಡುಗಡೆ ಮಾಡಲು ಸಜ್ಜಾಗಿದೆ. ವಿಶಿಷ್ಟ ವಿನ್ಯಾಸ ಮತ್ತು ನಾವೀನ್ಯತೆಯ ಪರಿಪೂರ್ಣ ಮಿಶ್ರಣವನ್ನು ನೀಡಲು ರೆಡಿಯಾಗುತ್ತಿದೆ. ಟೀಸರ್‌ನಲ್ಲಿ ಹೇಳಿದಂತೆ ಡಿಸೆಂಬರ್ 15 ರಂದು ಈ ಕಾರನ್ನು ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಿದೆ. ಮುಂಬರಲಿರುವ ಹೊಸ MG ಹೆಕ್ಟರ್‌ನ ನಿರೀಕ್ಷಿತ ವಿಶೇಷತೆಗಳನ್ನು ಇಲ್ಲಿ ನೋಡೋಣ.
MG ಹೆಕ್ಟರ್ ವಿಶೇಷತೆಗಳು: ಬಾಹ್ಯ ವಿನ್ಯಾಸ, ಪ್ಲಶ್ ಒಳಾಂಗಣಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನ - ಸೌಕರ್ಯ ಮತ್ತು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ MG ಹೆಕ್ಟರ್ ಎಂಟ್ರಿ ಕೊಡಲಿದೆ. 2019 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಎಂಜಿ ಹೆಕ್ಟರ್, ಮೊದಲ ಭಾರತದ ಪ್ರವರ್ತಕ ಇಂಟರ್ನೆಟ್ ಕಾರು ಎಂಬ ಖ್ಯಾತಿಯನ್ನು ಗಳಿಸಿತ್ತು. ತನ್ನ ಬಲವಾದ ಪರಂಪರೆಯನ್ನು ಬಲಪಡಿಸಲು ಈಗ ಫೇಸ್‌ಲಿಫ್ಟ್ ಪಡೆದು ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ.
ಸದ್ಯ ಮಾರಾಟದಲ್ಲಿರುವ MG ಹೆಕ್ಟರ್ AI ವಾಯಿಸ್ ಅಸಿಸ್ಟ್, ದೊಡ್ಡ ಟಚ್ ಸ್ಕ್ರೀನ್, ರಿಮೋಟ್ ಕಾರ್ ಕಂಟ್ರೋಲ್‌ಗಳು, ಪನೋರಮಿಕ್ ಸನ್ ರೂಫ್, iSMART ಸಂಪರ್ಕ, ಎಂಬೆಡೆಡ್ eSIM, OTA ಅಪ್‌ಡೇಟ್‌ಗಳು, 25 ಕ್ಕೂ ಹೆಚ್ಚು ಸೇಫ್ಟಿ ಫೀಚರ್ಸ್, ಲೆವೆಲ್ - 2 ADAS ಮತ್ತು ದಕ್ಷ ಪವರ್ - ಟ್ರೇನ್ ಆಯ್ಕೆಗಳಂತಹ ಪ್ರವರ್ತಕ ವೈಶಿಷ್ಟ್ಯಗಳೊಂದಿಗೆ ಮಾರಾಟವಾಗುತ್ತಿದೆ.

ಇಷ್ಟು ಅತ್ಯಾಧುನಿಕ ಫೀಚರ್ಸ್ ಇದ್ದರೂ, ಇನ್ನೂ ಆಧುನಿಕ ಫೀಚರ್ಸ್ ಜೊತೆಗೆ ಮುಂಬರುವ ಕಾರು ಎಂಟ್ರಿ ಕೊಡಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಹೊಸ MG ಹೆಕ್ಟರ್ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿಸಲು ಮತ್ತು ಮಧ್ಯಮ ಗಾತ್ರದ SUV ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಮುಂಬರಲಿರುವ ಹೊಸ MG ಹೆಕ್ಟರ್ ಅನ್ನು ಅದ್ದೂರಿಯಾಗಿ ಮಾರುಕಟ್ಟೆಗೆ ಪರಿಚಯಿಸಲು ಕಂಪನಿ ಸಜ್ಜಾಗಿದೆ.
ಕೆಲ ಮೂಲಗಳ ಪ್ರಕಾರ, ಹೊಸ MG ಹೆಕ್ಟರ್ ಫೇಸ್‌ಲಿಫ್ಟ್ ಮುಂದಿನ ಪೀಳಿಗೆಯ ಇನ್ - ಕಾರ್ ತಂತ್ರಜ್ಞಾನವನ್ನು ಪರಿಚಯಿಸುವ ನಿರೀಕ್ಷೆಯಿದೆ. 10GB RAM ವರೆಗಿನ ಶಕ್ತಿಶಾಲಿ ಹೊಸ ಇನ್ಫೋಟೈನ್ಮೆಂಟ್ ಸಿಸ್ಟಮ್, ಮಲ್ಟಿ-ಟಚ್ ಗೆಸ್ಚರ್ ಕಂಟ್ರೋಲ್‌ಗಳಂತಹ ನವೀಕರಣಗಳು ಹೆಕ್ಟರ್ ಅನ್ನು ಮಧ್ಯಮ ಗಾತ್ರದ SUV ವಿಭಾಗದಲ್ಲಿ ಸ್ಮಾರ್ಟ್ ಕ್ಯಾಬಿನ್ ಹಾಗೂ ಅತ್ಯಂತ ಶಕ್ತಿಶಾಲಿ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿರುವ ಕಾರನ್ನಾಗಿಸಬಹುದು.
ಕಾರಿನ ವಿವರಗಳನ್ನು ಸದ್ಯಕ್ಕೆ ಮುಚ್ಚಿಡಲಾಗಿದೆಯಾದರೂ, ಹೊಸ MG ಹೆಕ್ಟರ್ ಅನ್ನು ಬಹಳ ಆಕ್ರಮಣಕಾರಿಯಾಗಿ ಮೌಲ್ಯೀಕರಿಸಿ, ಅದರ ವಿಭಾಗದಲ್ಲಿ ಅತ್ಯಂತ ಬಲವಾದ ಮೌಲ್ಯದ ಕಾರನ್ನಾಗಿಸುವುದು ಹಾಗೂ ಕಾರು ಖರೀದಿಸಿದ ಬಳಿಕ ಮಾಲೀಕರಿಗೆ ಅತ್ಯುತ್ತಮ ಮರು - ಮಾರಾಟ ಮೌಲ್ಯ ಮತ್ತು ಕಡಿಮೆ ನಿರ್ವಹಣಾ ವೆಚ್ಚಗಳನ್ನು ಹೊಂದಿರುವಂತೆ ಮಾಡುವುದು ಕಂಪನಿಯ ಗುರಿಯಾಗಿದೆ. ಇದಕ್ಕಾಗಿ ಕಂಪನಿಯು ಹೆಚ್ಚಿನ ಪರೀಕ್ಷೆಗಳನ್ನು ಸಹ ನಡೆಸಿತ್ತು.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಎಲ್ಲವು ಅಂದುಕೊಂಡಂತಾದರೆ ಎಸ್‌ಯುವಿ ಶೀಘ್ರದಲ್ಲೇ ಭಾರತದಾದ್ಯಂತ ಖರೀದಿದಾರರಿಗೆ ಹೆಚ್ಚು ರೋಮಾಂಚನಕಾರಿಯಾಗಬಹುದು. ಬಲವಾದ ಅಡಿಪಾಯದೊಂದಿಗೆ, ಹೊಸ ಎಂಜಿ ಹೆಕ್ಟರ್ ಪ್ರತಿಸ್ಪರ್ಧಿಗಳನ್ನು ಮೀರಿಸುವ ಮತ್ತು ಮಧ್ಯಮ ಗಾತ್ರದ ಎಸ್‌ಯುವಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಲಿದೆ. ಈ ಮುಂಬರಲಿರುವ ಹೊಸ ಎಸ್‌ಯುವಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








